Latest Updates
-
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್ -
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ -
ಭಾಲಚಂದ್ರ ಸಂಕಷ್ಟ ಚತುರ್ಥಿ 2026: ಈ 6 ರಾಶಿಗಳಿಗೆ ಗಜಕೇಸರಿ ಯೋಗ! ಹಣದ ಮಳೆ ಸುರಿಸಲಿದ್ದಾರೆ ಗಣಪ
Dina Bhavishya: ಆಗಸ್ಟ್ 19ರ ಮಂಗಳವಾರ ಈ ರಾಶಿಯವರಲ್ಲಿ ಸಮಸ್ಯೆ..!
ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 19ರಂದು ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಈ ದಿನ ಅನುಕೂಲಕರ. ನಿಮ್ಮ ಹಣಕಾಸು ಕುರಿತಾದ ವಿಚಾರದಲ್ಲಿ ಬೇರೆಯವರಿಂದ ಸಹಕಾರ ಸಿಗಲಿದೆ. ಆರೋಗ್ಯದ ವಿಚಾರವಾಗಿ ನೀವು ನಿರ್ಲಕ್ಷ್ಯ ತೋರಿಸಬೇಡಿ. ಅಪಾಯಕಾರಿ ಕೆಲಸ ಮಾಡುವವರು ಎಚ್ಚರಿಕೆಯಿಂದ ಇರಬೇಕಿದೆ. ಪ್ರಯಾಣದಲ್ಲಿ ಸುಖಕರ ದಿನ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಮಿಶ್ರ ಫಲ. ನಿಮ್ಮ ಆದಾಯದಷ್ಟೇ ಖರ್ಚು ಇದೆ. ಹಳೆಯ ವಿಚಾರದಲ್ಲಿ ಪ್ರಯಾಣ ಮಾಡುವಿರಿ. ನಿಮ್ಮ ಅನೇಕ ಕೆಲಸಗಳಲ್ಲಿ ಹಣಕಾಸಿನ ಅಡ್ಡಿ ನೋಡಬಹುದು. ಕೆಲಸದ ವಿಚಾರವಾಗಿ ಪ್ರಯಾಣ ಮಾಡಬೇಕಾಗಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮ ದೈನಂದಿನ ಕೆಲಸದಲ್ಲಿ ತಾಳ್ಮೆ ಇಂದಿರಿ. ದೇವಾಲಯ ಭೇಟಿ ಮಾಡಬಹುದು. ಹಾಗೆ ಚಿಕ್ಕ ಪ್ರವಾಸಗಳ ಕೈಗೊಳ್ಳಲು ತಯಾರಿ ನಡೆಸಬಹುದು. ಸರ್ಕಾರಿ ನೌಕರರಲ್ಲಿ ಇಂದು ಧನಾತ್ಮಕ ವಿಚಾರಗಳು ನಡೆಯಲಿವೆ. ಆರೋಗ್ಯದಲ್ಲಿ ಚೇತರಿಕೆ ನೋಡುವಿರಿ.
ಕರ್ಕ ರಾಶಿ
ಕರ್ಕ ರಾಶಿಯ ಜನರಲ್ಲಿ ಸಮಸ್ಯೆಗಳ ದಿನ. ನಿಮ್ಮ ಅತ್ಯಂತ ಸುದೀರ್ಘ ಸಮಸ್ಯೆಯು ಮತ್ತೆ ಕಾಡಬಹುದು. ಆಪ್ತರೊಬ್ಬರಿಂದ ಹಣಕಾಸಿಗೆ ಬೇಡಿಕೆ ಬರಬಹುದು. ದಾಂಪತ್ಯದಲ್ಲಿ ಸಮಸ್ಯೆಗಳು ಬರಬಹುದು. ವಾಹನ ಸಂಬಂಧಿ ಖರ್ಚು ಇರಲಿದೆ.
ಸಿಂಹ ರಾಶಿ
ಸಿಂಹ ರಾಶಿಯ ಜನರಲ್ಲಿ ಈ ದಿನ ಉತ್ತಮವಾಗಿರಲಿದೆ. ಬಹಳ ದಿನಗಳಿಂದ ಮಾಡಬೇಕೆಂದು ಬಯಸಿರುವ ಕೆಲಸವನ್ನು ಮಾಡಿ ಮುಗಿಸಲಿದ್ದೀರಿ. ಹಣಕಾಸು ವಿಚಾರವಾಗಿದ್ದ ಒತ್ತಡ ಕಡಿಮೆಯಾಗಲಿದೆ. ಉದ್ಯೋಗ ಹುಡುಕುತ್ತಿದ್ದ ಮಂದಿಗೆ ಈ ದಿನ ಬಹಳ ಉತ್ತಮ ಅವಕಾಶ ಬರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರು ಈ ದಿನ ಓಡಾಟದಲ್ಲಿ ಕಳೆಯಬಹುದು. ಮಕ್ಕಳ ಆರೋಗ್ಯ ಕುರಿತಾದ ಚಿಂತೆಯೊಂದು ನಿಮಗೆ ಕಾಡಬಹುದು. ಅವರ ವಿದ್ಯಾಭ್ಯಾಸ ಇಲ್ಲವೆ ಉದ್ಯೋಗ ಸಂಬಂಧವಾಗಿ ಸಮಸ್ಯೆಗಳು ಬರಬಹುದು. ಯಾರೊಂದಿಗೂ ಹಣಕಾಸಿನ ವ್ಯವಹಾರಕ್ಕೆ ಇಂದು ಮುಂದಾಗದೆ ಇರುವುದು ಉತ್ತಮ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಉತ್ತಮ ಅವಕಾಶಗಳ ದಿನ. ನೀವು ಅವಿವಾಹಿತರಾಗಿದ್ದರೆ ನಿಮ್ಮ ದುಂದು ವೆಚ್ಚದಲ್ಲಿ ಕಡಿವಾಣ ಹಾಕಬೇಕಿದೆ. ದೊಡ್ಡ ಕೆಲಸಗಳ ಸಂಬಂಧ ನೀವು ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು. ಗೃಹಿಣಿಯರಲ್ಲಿ ಇಂದು ಖರ್ಚಿನ ದಿನ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಸಮಸ್ಯೆಗಳಿಂದ ತುಂಬಿದ ದಿನ. ನಿಮ್ಮ ಆರೋಗ್ಯದಲ್ಲಿ ಏರುಪೇರು ಸಂಭವಿಸಲಿದೆ. ನಿಮ್ಮ ಹಣಕಾಸಿನ ವ್ಯವಹಾರದಲ್ಲಿ ಏಳುಬೀಳು ಸಂಭವಿಸುವ ಆತಂಕವಿದೆ. ನಿಮ್ಮನ್ನು ಸುಲಭವಾಗಿ ಮೋಸಗೊಳಿಸುವ ಕಾರ್ಯ ನಡೆಯಬಹುದು. ಎಚ್ಚರಿಕೆಯಿಂದ ಇಂದು ಎಲ್ಲಾ ಕೆಲಸ ಮುಗಿಸುವುದು ಉತ್ತಮ.
ಧನು ರಾಶಿ
ಧನು ರಾಶಿಯ ಜನರಿಗೆ ಇಂದು ಮಿಶ್ರ ಫಲದ ದಿನ. ನಿಮ್ಮ ಹಲವು ಕೆಲಸಗಳಲ್ಲಿ ನಿಮಗೆ ಲಾಭವಿದೆ. ಇತರರ ಆರ್ಥಿಕ ಸಮಸ್ಯೆಗಳಿಂದ ನೀವು ದೂರವೇ ಉಳಿಯುವುದು ಉತ್ತಮ.
ಮಕರ ರಾಶಿ
ಮಕರ ರಾಶಿಯ ಜನರಿಗೆ ಮಿಶ್ರ ಫಲವಿದೆ. ದಿನದ ಆರಂಭದಲ್ಲಿ ಹಣಕಾಸು ಕುರಿತ ಒತ್ತಡ ಇರಬಹುದು, ಆದ್ರೆ ಸಂಜೆಯ ವೇಳೆ ಈ ಸಮಸ್ಯೆಗಳು ನಿವಾರಣಯಾಗಬಹುದು. ಬ್ಯಾಂಕಿಂಗ್ ವಿಚಾರದಲ್ಲಿ ಮತ್ತಷ್ಟು ಓಡಾಟ ಇರಬಹುದು. ಮನೆಯಲ್ಲಿ ಶಾಂತಿ ಇರಲಿದೆ.
ಕುಂಭ ರಾಶಿ
ಕುಂಭ ರಾಶಿಯ ಗೃಹಿಣಿಯರಿಗೆ ಈ ದಿನ ಸವಾಲುಗಳ ದಿನ. ನಿಮ್ಮ ಹಲವು ವಿಚಾರಗಳಲ್ಲಿ ಹಣಕಾಸಿನ ಕೊರತೆ ಎದುರಾಗಬಹುದು. ನಿಮ್ಮ ಪ್ರಯಾಣಗಳಿಂದ ನಿಮಗೆ ಅನುಕೂಲಕರ ಫಲಿತಾಂಶ ಸಿಗದೆ ಇರಬಹುದು.
ಮೀನ ರಾಶಿ
ಮೀನ ರಾಶಿಯ ಜನರಿಗೆ ಮಿಶ್ರ ಫಲದ ದಿನ. ನಿಮ್ಮ ಅನೇಕ ಕೆಲಸಗಳಲ್ಲಿ ಉತ್ತಮ ಪ್ರತಿಫಲವಿದ್ದರೂ ನಿಮಗೆ ತೃಪ್ತಿ ಇಲ್ಲದೆ ಇರಬಹುದು. ವಾಹನ ಸಂಬಂಧವಾಗಿ ಎಚ್ಚರಿಕೆ ಅಗತ್ಯ. ಮನೆಗಾಗಿ ಖರ್ಚು ಮಾಡಬೇಕಾಗುತ್ತದೆ.



Click it and Unblock the Notifications











