Latest Updates
-
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ!
Dina Bhavishya: ಆಗಸ್ಟ್ 18ರ ಸೋಮವಾರ ಯಾರಿಗೆಲ್ಲಾ ಅದೃಷ್ಟಕರ?
ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 18ರಂದು ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಈ ದಿನವು ಸಮಸ್ಯೆಗಳಿಂದ ತುಂಬಿರಬಹುದು. ನಿಮ್ಮಲ್ಲಿ ಉದ್ಯೋಗ, ಕೆಲಸ, ಹಣಕಾಸು ವಿಚಾರವಾಗಿ ಒತ್ತಡ ಎದುರಾಗಬಹುದು. ಕುಟುಂಬದಲ್ಲಿ ಸಾಮಾನ್ಯ ವಿಚಾರದಲ್ಲಿ ಸಮಸ್ಯೆಗಳು ಎದುರಾಗಬಹುದು. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ವಿಚಾರವಾಗಿ ನೋವು ಕಾಡಬಹುದು.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಈ ದಿನ ಮಿಶ್ರಫಲ ಆಗಿರಲಿದೆ. ನಿಮ್ಮ ಹಲವು ವಿಚಾರಗಳಲ್ಲಿ ಧನಾತ್ಮಕ ಬದಲಾವಣೆಗಳಿರಲಿವೆ. ಆಪ್ತರ ಸಹಕಾರರಿಂದ ಹಣಕಾಸು ಕುರಿತ ವಿಚಾರದಲ್ಲಿ ಲಾಭವಿದೆ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಈ ದಿನ ಬಹಳ ಉತ್ತಮವಾಗಿರಲಿದೆ. ಹಲವು ಸಮಯದ ಬಳಿಕ ನಿಮ್ಮ ಹಣಕಾಸು ಪರಿಸ್ಥಿತಿ ಸುಧಾರಿಸಲಿದೆ. ಆಪ್ತರೊಬ್ಬರ ಜೊತೆ ಪ್ರಯಾಣ ಮಾಡಬಹುದು. ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದು ಉತ್ತಮ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಮಿಶ್ರ ಫಲದ ದಿನ. ನಿಮ್ಮ ಹಲವು ಕೆಲಸಗಳಲ್ಲಿ ದೊಡ್ಡ ಲಾಭವಿದೆ. ಅದ್ರಲ್ಲೂ ಆರ್ಥಿಕ ಸಮಸ್ಯೆಗಳಿಂದ ಪಾರಾಗಲು ಅವಕಾಶ ಸಿಗಲಿದೆ. ಪ್ರಯಾಣಗಳು ಸುಖಕರವಾಗಿರಲಿದೆ.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಈ ದಿನ ಅದ್ಭುತವಾಗಿರಲಿದೆ. ನಿಮ್ಮ ಹಲವು ಕೆಲಸಗಳು ನೀವು ಅಂದುಕೊಂಡ ರೀತಿಯಲ್ಲಿ ನಡೆಯಲಿದೆ. ಹಣಕಾಸು ವಿಚಾರವಾಗಿ ಯಾವುದೇ ಸಮಸ್ಯೆ ಇರುವುದಿಲ್ಲ. ಹೊಸ ವಸ್ತು ಖರೀದಿಸಬಹುದು. ವಾಹನ ಸಂಬಂಧವಾಗಿ ಖರ್ಚು ಇದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಲ್ಲಿ ಈ ದಿನ ಮಿಶ್ರ ಫಲ. ನಿಮ್ಮ ಕೆಲ ಆರ್ಥಿಕ ಸವಾಲುಗಳನ್ನು ಧೈರ್ಯವಾಗಿ ಎದುರಿಸಿ. ಆಂತರಿಕವಾಗಿ ನಿಮ್ಮಲ್ಲಿದ್ದ ಒತ್ತಡ ಹಾಗೂ ಗೊಂದಲ ನಿವಾರಣೆಯಾಗಬಹುದು. ಆಪ್ತರಿಂದ ಶುಭ ಸುದ್ದಿ ಕೇಳಬಹುದು. ಆರೋಗದ ವಿಚಾರವಾಗಿ ಖರ್ಚು ಮಾಡಬಹುದು.
ತುಲಾ ರಾಶಿ
ತುಲಾ ರಾಶಿಯ ಜನರಲ್ಲಿ ಈ ದಿನ ಸವಾಲುಗಳು ಎದುರಾಗುವ ಸಾಧ್ಯತೆ ಇದೆ. ನಿಮ್ಮ ಪ್ರಯಾಣಗಳು ಸುಖಕರ ವಾಗಿರಲಿದೆ. ಆಪ್ತರೊಬ್ಬರಿಂದ ಉತ್ತಮ ಸಲಹೆ ಪಡೆಯುತ್ತೀರಿ. ನಿಮ್ಮ ಅನೇಕ ಕೆಲಸಗಳು ಪೂರ್ಣವಾಗಲಿದೆ. ಆರ್ಥಿಕ ವಿಚಾರವಾಗಿಯೂ ನಿಮಗೆ ಉತ್ತಮ ದಿನ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಇಂದು ಮಿಶ್ರ ಫಲದ ದಿನವಾಗಿರಲಿದೆ. ಆದಾಯ ಹಾಗೂ ಖರ್ಚುಗಳ ನಡುವೆ ಹೊಂದಾಣಿಕೆ ಮಾಡಿಕೊಳ್ಳಿ. ಸಮಯಕ್ಕೆ ಸರಿಯಾಗಿ ಪೂರ್ವ ನಿಯೋಜಿತ ಕೆಲಸಗಳ ಮುಗಿಸಲು ಮುಂದಾಗಿ. ಗೃಹಿಣಿಯರ ಆರೋಗ್ಯದಲ್ಲಿ ಏರುಪೇರು ಸಂಭವವಿದೆ. \
ಧನು ರಾಶಿ
ಧನು ರಾಶಿಯವರಲ್ಲಿ ಉತ್ತಮ ದಿನ. ನಿಮ್ಮ ಕೆಲಸ ಕಾರ್ಯಗಳಿಗೆ ಹಣಕಾಸಿನ ಬೆಂಬಲ ಸಿಗಲಿದೆ. ಆಪ್ತರ ಬಳಗದಿಂದ ನಿಮ್ಮ ಕೆಲಸಕ್ಕೆ ಸಹಕಾರ ಸಿಗಲಿದೆ. ಅನೇಕರಲ್ಲಿ ಕೌಟುಂಬಿಕ ಸಮಸ್ಯೆಗಳು ನಿವಾರಣೆಯಾಗುವ ಅವಕಾಶ ಸಿಗಲಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಇಂದು ಒತ್ತಡ ದಿನ. ನಿಮ್ಮ ಕೆಲಸದ ಸ್ಥಳದಲ್ಲಿ ಇಲ್ಲವೆ ಹಣಕಾಸಿನ ಕುರಿತಾಗಿ ಒತ್ತಡ ಇರಲಿದೆ. ಇಡೀ ದಿನ ನೀವು ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗುತ್ತೀರಿ. ಬೇರೆ ಅವರಿಂದ ಸಾಲವಾಗಿ ಹಣ ಪಡೆಯುವುದನ್ನು ತಪ್ಪಿಸುವುದು ಉತ್ತಮ. ವಾಹನ ಚಲಾವಣೆ ಸಮಯದಲ್ಲಿ ಎಚ್ಚರಿಕೆ ಅಗತ್ಯ.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಇಂದು ಉತ್ತಮ ದಿನ. ದೈನಂದಿನ ಕೆಲಸಗಳು ಸರಾಗವಾಗಿ ನಡೆಯಲಿದೆ. ದಿನದ ಅಂತ್ಯದಲ್ಲಿ ಗೊಂದಲ ಇರಬಹುದು. ವ್ಯಾಪಾರಿ ವರ್ಗಕ್ಕೆ ಉತ್ತಮ ದಿನ. ಕೆಲಸ ಸಂಬಂಧ ಪ್ರಯಾಣಿಸುತ್ತೀರಿ. ಖರ್ಚು ಹೆಚ್ಚಾಗಬಹುದು. ಆದ್ರೆ ಇದರಿಂದ ನೆಮ್ಮದಿ ಇರಲಿದೆ.
ಮೀನ ರಾಶಿ
ಮೀನ ರಾಶಿಯ ಜನರಿಗೆ ಮಿಶ್ರ ಫಲದ ದಿನ. ನಿಮ್ಮ ಅನೇಕ ಕೆಲಸಗಳಲ್ಲಿ ಯಶಸ್ಸು ಇದೆ. ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಬೇಕಿದೆ. ಮನೆಗಾಗಿ ನೀವು ಖರೀದಿಸುವ ವಸ್ತುವಿನಿಂದ ಮಿಶ್ರ ತೃಪ್ತಿ ಇರಲಿದೆ. ಮೂಳೆಗೆ ಸಂಬಂಧಿಸಿದ ಅನಾರೋಗ್ಯ ಇದ್ದರೆ ಎಚ್ಚರಿಕೆ ವಹಿಸಿ.



Click it and Unblock the Notifications