Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
Dina Bhavishya: ಆಗಸ್ಟ್ 17ರ ಭಾನುವಾರ ಯಾರಿಗೆಲ್ಲಾ ಅದೃಷ್ಟಕರ?
ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 17ರಂದು ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರು ಈ ದಿನ ಪ್ರಯಾಣಗದಲ್ಲಿ ತೊಡಗಬಹುದು. ಆಪ್ತರೊಬ್ಬರ ಶುಭ ಕಾರ್ಯದಲ್ಲಿ ನೀವು ಭಾಗಿಯಾಗುವ ಸಾಧ್ಯತೆ ಇದೆ. ಹಣಕಾಸಿನ ವಿಚಾರವಾಗಿ ನಿಮಗೆ ಉತ್ತಮ ದಿನ. ವ್ಯಾಪಾರಿಗಳಿಗೆ ಉತ್ತಮ ದಿನ. ಆರೋಗ್ಯದ ಕಡೆಗೂ ಸಹ ನೀವು ಗಮನ ಹರಿಸಬೇಕಿದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಸಾಮಾನ್ಯ ದಿನವಾಗಲಿದೆ. ನಿಮ್ಮ ದೈನಂದಿನ ಕೆಲಸಗಳಲ್ಲಿ ಯಾವುದಾದರು ಅಡ್ಡಿ ಆತಂಕಗಳು ಎದುರಾಗಬಹುದು. ಆರ್ಥಿಕ ವಿಚಾರಗಳಲ್ಲಿ ಲಾಭದಾಯಕವಲ್ಲ. ದಾಂಪತ್ಯ ವಿಚಾರದಲ್ಲಿ ಉತ್ತಮ ದಿನವಾಗಿರಲಿದೆ. ಗೃಹಿಣಿಯರು ಎಚ್ಚರಿಕೆಯಿಂದ ಇರುವುದು ಉತ್ತಮ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಇಂದು ಬಹಳ ಅನುಕೂಲಕರ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಉದ್ಯೋಗ ಸಂಬಂಧಿ ಒತ್ತಡ ಕಡಿಮೆಯಾಗಲಿದೆ. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ನೆರವು ಸಿಗಬಹುದು. ಆರೋಗ್ಯದಲ್ಲಿ ಚೇತರಿಕೆ ಕಾಣುವಿರಿ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಇಂದು ಮಿಶ್ರ ಫಲದ ದಿನವಾಗಿರಲಿದೆ. ನಿಮ್ಮಲ್ಲಿ ಆದಾಯದಷ್ಟೇ ಖರ್ಚು ಕೂಡ ಬರಲಿದೆ. ನಿಮ್ಮ ಹಲವು ಕೆಲಸಗಳಲ್ಲಿ ಯಶಸ್ಸು ಬರಬಹುದು. ದೇವಾಲಯ ಭೇಟಿ, ಚಿಕ್ಕ ಪ್ರವಾಸಗಳಿಗೆ ನೀವು ಮುಂದಾಗಬಹುದು. ಉಳಿತಾಯದ ಕಡೆ ಗಮನ ಹರಿಸುವಿರಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ದಿನ ಅನುಕೂಲಕರ. ನಿಮ್ಮ ದೊಡ್ಡ ಸಮಸ್ಯೆಗಳಿಗೆ ಪರಿಹಾರ ಪಡೆಯುವ ದಿನವಾಗಿರಲಿದೆ. ಸಂಬಂಧಿಕರ ಭೇಟಿಯಾಗಬಹುದು. ಹಣಕಾಸಿನ ವಿಚಾರದಲ್ಲಿ ನಿಮಗೆ ಬಹಳ ಉತ್ತಮ ದಿನ. ನಿಮಗೆ ಬರಬೇಕಿದ್ದ ಹಣ ವಾಪಾಸು ಪಡೆಯು ಪ್ರಯತ್ನ ಮುಂದುವರೆಸಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಇಂದು ಪ್ರಯಾಣದ ದಿನ. ನಿಮ್ಮ ಹಲವು ಪ್ರಯತ್ನಗಳು ಫಲ ನೀಡಲಿವೆ. ನಿಮ್ಮ ಅನೇಕ ಕೆಲಸಗಳಲ್ಲಿ ಶುಭವಾಗುತ್ತಿದೆ. ದಾಂಪತ್ಯ ಸಂಬಂಧದಲ್ಲಿ ಇದ್ದ ಮನಸ್ತಾಪ ದೂರಾಗಲಿದೆ. ಕಲಸದ ಸ್ಥಳದಲ್ಲಿನ ಒತ್ತಡ ಕಡಿಮೆಯಾಗಲಿದೆ. ಹಣಕಾಸು ಖರ್ಚು ಹೆಚ್ಚಾಗಬಹುದು.
ತುಲಾ ರಾಶಿ
ತುಲಾ ರಾಶಿಯ ಜನರಲ್ಲಿ ಈ ದಿನ ಸಮಸ್ಯೆಗಳ ಎದುರಿಸುವ ದಿನ. ವಾಹನ ಸಂಬಂಧವಾಗಿ ಖರ್ಚು ಹೆಚ್ಚಾಗುವ ದಿನ. ನಿಮ್ಮ ಬಹಳ ದಿನದ ಬಯಕೆಯೊಂದನ್ನು ಈಡೇರಿಸಿಕೊಳ್ಳಬಹುದು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಉತ್ತಮ ದಿನ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಿಗೆ ಈ ದಿನ ಉತ್ತಮ ಫಲಿತಾಂಶಗಳ ತರಲಿದೆ. ನಿಮ್ಮ ಹಲವು ವಿಚಾರಗಳಿಗೆ ಹಲವರ ಸಹಕಾರ ಸಿಗಲಿದೆ. ನಿರುದ್ಯೋಗಿಗಳಿಗೆ ಬಯಸಿದಂತಹ ಕೆಲಸ ಸಿಗಬಹುದು. ಆರ್ಥಿಕ ವಿಚಾರವಾಗಿ ನಿಮ್ಮಲ್ಲಿ ಗೊಂದಲಗಳು ಇರಬಹುದು. ಆಪ್ತರೊಬ್ಬರ ಅನಾರೋಗ್ಯ ಸಂಬಂಧ ಓಡಾಟ ಇರಲಿದೆ.
ಧನು ರಾಶಿ
ಧನು ರಾಶಿಯ ಮಂದಿಗೆ ಈ ದಿನ ಸವಾಲುಗಳು ಎದುರಾಗಬಹುದು. ನಿಮ್ಮ ಅನೇಕ ಕೆಲಸಗಳಲ್ಲಿ ಅಡೆತಡೆ ನೋಡಬಹುದು. ನಿಮ್ಮ ವೈವಾಹಿಕ ಜೀವನದಲ್ಲಿನ ಸಮಸ್ಯೆಯೊಂದು ಬಗೆಹರಿಯಲಿದೆ. ಯಾರಿಂದಾದರು ಹಣ ಪಡೆದಿದ್ದರೆ ವಾಪಾಸು ನೀಡುವುದು ಬಹಳ ಉತ್ತಮ.
ಮಕರ ರಾಶಿ
ಮಕರ ರಾಶಿಯ ಜನರಿಗೆ ಈ ದಿನ ಉತ್ತಮವಾಗಿರಲಿದೆ. ನಿಮ್ಮ ಹಣಕಾಸು ಸಮಸ್ಯೆ ಕುರಿತಾದ ದೊಡ್ಡ ಸವಾಲುಗಳಿದ್ದರು, ಕೆಲಸ ಕಾರ್ಯಗಳಲ್ಲಿ ಅಡ್ಡಿ ಉಂಟು ಮಾಡುವುದಿಲ್ಲ. ಹೂಡಿಕೆ ಮಾಡುವಾಗ ಸೂಕ್ತ ಸಲಹೆ ಪಡೆದು ಮುನ್ನಡೆಯುವುದು ಉತ್ತಮ.
ಕುಂಭ ರಾಶಿ
ಕುಂಭ ರಾಶಿಯ ಜನರಲ್ಲಿ ಈ ದಿನವು ಉತ್ತಮವಾಗಿರಲಿದೆ. ವ್ಯಾಪಾರಿಗಳು ತಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಪಡೆಯುತ್ತಾರೆ. ದೀರ್ಘಕಾಲದ ಅನಾರೋಗ್ಯ ಸಮಸ್ಯೆಯೊಂದು ಬಗೆಹರಿಯಲಿದೆ. ದೂರ ಪ್ರಯಾಣಗಳ ಕೈಗೊಳ್ಳಬೇಕಾಗಬಹುದು.
ಮೀನ ರಾಶಿ
ಮೀನ ರಾಶಿಯವರಿಗೆ ಮಿಶ್ರ ಫಲ. ನಿಮ್ಮ ಅದಾಯದಷ್ಟೇ ಖರ್ಚು ಕೂಡ ಇರಲಿದೆ. ದಾಂಪತ್ಯದಲ್ಲಿ ಸಂತಸ ಇರಲಿದೆ. ಕುಟುಂಬದ ವಾತಾವರಣ ಕೂಡ ಶಾಂತಿಯಿಂದ ಕೂಡಿರಲಿದೆ. ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಲಾಭದಾಯಕ ದಿನ. ಆಪ್ತರಿಂದ ಶುಭ ಸುದ್ದಿ ಕೇಳಬಹುದು. ಅವಿವಾಹಿತರಿಗೆ ಈ ದಿನ ಉತ್ತಮವಾಗಿರಲಿದೆ.



Click it and Unblock the Notifications










