Dina Bhavishya: ಆಗಸ್ಟ್ 16ರ ಶನಿವಾರ ಯಾರಿಗೆಲ್ಲಾ ಅದೃಷ್ಟಕರ?

ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 16ರಂದು ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯವರು ಈ ದಿನ ದೊಡ್ಡ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ನಿಮ್ಮ ಹಲವು ದಿನದಿಂದ ಬಾಕಿ ಉಳಿಸಿಕೊಂಡಿದ್ದ ಕೆಲಸವನ್ನು ಪೂರ್ಣ ಮಾಡುವಿರಿ. ಯಾವುದಾದರು ಕೌಟುಂಬಿಕ ಸಮಸ್ಯೆಗೆ ತುತ್ತಾಗಿದ್ದರೆ ಮಾತಿನ ಮೂಲಕ ಬಗೆಹರಿಸಿಕೊಳ್ಳುವುದು ಮುಖ್ಯ. ಮಕ್ಕಳ ಆರೋಗ್ಯದ ಕಡೆ ಗಮನವಿಡಿ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಈ ದಿನ ಏರಿಳಿತಗಳಿಂದ ಕೂಡಿರಲಿದೆ. ದಿನದ ಆರಂಭದಲ್ಲಿ ಖರ್ಚು ಹೆಚ್ಚಾಗಿರಬಹುದು. ಹಾಗೆ ಯಾರಿಗೂ ಈ ದಿನ ಸಾಲ ನೀಡಲು ಮುಂದಾಗಬೇಡಿ. ನಿಮ್ಮ ಬಹಳ ಸಮಯದ ನಿಮ್ಮ ಕೆಲಸಗಳು ಮುಗಿಯಲಿವೆ. ಆರ್ಥಿಕ ವಿಚಾರವಾಗಿ ನಿಮಗೆ ಉತ್ತಮ ದಿನ.

August-16-2025-daily-horoscope

ಮಿಥುನ ರಾಶಿ

ಇಂದು ನಿಮಗೆ ಬಹಳ ಉತ್ತಮ ದಿನ. ಗೃಹಿಣಿಯರು ಈ ದಿನ ಹೆಚ್ಚು ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗುತ್ತೀರಿ. ನಿಮ್ಮ ಅನೇಕ ಕೆಲಸಗಳಿಗೆ ಹಣಕಾಸಿನ ನೆರವು ಬರಬಹುದು. ಆಪ್ತರೊಂದಿಗೆ ನೀವು ಪ್ರವಾಸಕ್ಕೆ ತೆರಳಬಹುದು. ಆರ್ಥಿಕ ಕೆಲಸಗಳು ನೀವು ಅಂದುಕೊಂಡಂತೆ ನಡೆಯಲಿದೆ.

ಕರ್ಕ ರಾಶಿ

ಕರ್ಕ ರಾಶಿಯ ಜನರಿಗೆ ಇಂದು ಅನಾನುಕೂಲ ಇರಬಹುದು. ನಿಮ್ಮ ಹಣಕಾಸು ಹಾಗೆ ವೆಚ್ಚಗಳ ಕುರಿತು ಗಮನವಿಡಿ. ಅನಗತ್ಯ ವಿಚಾರಗಳಿಂದ ದೂರವಿರಿ. ಸಭೆ ಸಮಾರಂಭದಲ್ಲಿ ಭಾಗಿಯಾಗಬಹುದು. ಮನೆಯ ಸದಸ್ಯರೊಬ್ಬರಿಗೆ ಅನಾರೋಗ್ಯ ಕಾಡಬಹುದು.

ಸಿಂಹ ರಾಶಿ

ಸಿಂಹ ರಾಶಿಯ ಜನರಿಗೆ ದುರ್ಜನರು ಎಂಬ ಹಣೆಪಟ್ಟಿ ಬರುವ ಅಪಾಯವಿದೆ. ನಿಮ್ಮಿಂದಾಗಿ ಬೇರೆಯವರು ನೋವಿಗೆ ಒಳಗಾಗಬಹುದು. ಮನೆಯ ವಾತಾವರಣದಲ್ಲಿ ಅಶಾಂತಿ ಇರಬಹುದು. ಆಪ್ತರೊಬ್ಬರಿಂದ ಅಶುಭ ಸುದ್ದಿ ಬರಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಲ್ಲಿ ಈ ದಿನ ದೊಡ್ಡ ಸವಾಲು ಎದುರಾಗಬಹುದು. ನಿಮ್ಮ ಹಲವು ಕೆಲಸಗಳು ಹಣಕಾಸಿನ ವಿಚಾರವಾಗಿ ಅಡ್ಡಿ ಅಥವಾ ತಡೆ ಬರಬಹುದು. ನಿಮ್ಮ ಕೆಲಸಗಳಲ್ಲಿ ಶ್ರಮ ಹಾಕುವುದು ಉತ್ತಮ. ಉದ್ಯೋಗಸ್ಥರಿಗೆ ಒತ್ತಡದ ದಿನ ಎನ್ನಬಹುದು. ಆರೋಗ್ಯದಲ್ಲಿ ಏರುಪೇರು ಇರಬಹುದು.

ತುಲಾ ರಾಶಿ

ತುಲಾ ರಾಶಿಯವರಿಗೆ ಇಂದು ಬಹಳ ಉತ್ತಮ ದಿನ. ನಿಮ್ಮ ಕೆಲಸಗಳು ಬಹಳ ವೇಗವಾಗಿ ನಡೆಯಲಿದೆ. ಹಳೆಯ ಅನಾರೋಗ್ಯ ಸಂಬಂಧವಾಗಿ ನೀವು ಚಿಕಿತ್ಸೆ ಪಡೆಯಬಹುದು. ಪ್ರಯಾಣಗಳು ಸುಖಕರವಾಗಿರಲಿದೆ. ಗೃಹಿಣಿಯರಲ್ಲಿ ಆದಾಯ ಹೆಚ್ಚಳವಾಗಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವುದು ಸೂಕ್ತ. ಭವಿಷ್ಯದ ಕುರಿತ ಚಿಂತೆಯೊಂದು ಕಾಡಬಹುದು. ಆಪ್ತರೊಬ್ಬರಿಂದ ಹಣಕಾಸಿನ ನೆರವು ಪಡೆಯಬಹುದು. ಕುಟುಂಬಸ್ಥರಿಂದ ನಿಮಗೆ ಶುಭ ಸುದ್ದಿ ಕಾದಿದೆ.

ಧನು ರಾಶಿ

ಧನು ರಾಶಿಯ ಮಂದಿಗೆ ಈ ದಿನ ಅಚ್ಚರಿ ಫಲಿತಾಂಶಗಳ ತರಬಹುದು. ಅನೇಕ ಕೆಲಸಗಳಲ್ಲಿ ಧನಾತ್ಮಕ ಸ್ಥಿತಿ ಇರಲಿದೆ. ವ್ಯಾಪಾರಿಗಳಿಗೆ ಇಂದು ಉತ್ತಮ ದಿನ ಆಗಿರಲಿದೆ. ಯಾರನ್ನು ನಂಬಿ ಹಣ ನೀಡಲು ಮುಂದಾಗಬೇಡಿ. ಹಳೆಯ ವಿಚಾರಗಳಿಂದ ಮತ್ತೆ ಮನಸ್ಸಿಗೆ ನೋವು ಉಂಟಾಗಬಹುದು.

ಮಕರ ರಾಶಿ

ಮಕರ ರಾಶಿ ಜನರಿಗೆ ಮಿಶ್ರ ಫಲದ ದಿನ. ಆರ್ಥಿಕವಾಗಿ ನಿಮಗೆ ಸವಾಲುಗಳಿದ್ದರು ಬಗೆಹರಿಯಲಿದೆ. ಅನೇಕ ಕೆಲಗಳಲ್ಲಿ ಆಪ್ತರ ಸಹಕಾರ ಇರಲಿದೆ. ಪ್ರೀತಿ ಪ್ರೇಮದ ವಿಚಾರದಲ್ಲಿ ಕಷ್ಟದ ದಿನ. ಪಂಚೇಂದ್ರಿಯ ಸಂಬಂಧಿ ಸಮಸ್ಯೆಗಳಿಗೆ ತುತ್ತಾಗಬಹುದು. ಯಾರಿಂದಾದರು ಹಣಕ್ಕೆ ಬೇಡಿಕೆ ಇಟ್ಟಿದ್ದರೆ ಈ ದಿನ ಪಡೆಯಬಹುದು.

ಕುಂಭ ರಾಶಿ

ಕುಂಭ ರಾಶಿಯ ಜನರಿಗೆ ಆದಾಯದ ಮೂಲ ಹೆಚ್ಚಿಸಿಕೊಳ್ಳುವ ದಿನವಿದು. ನಿಮ್ಮ ಹಲವು ಕೆಲಸಗಳಿಗೆ ಹಣಕಾಸಿನ ಅಡಚಣೆ ಇದೆ. ದಾಂಪತ್ಯ ಸಮಸ್ಯೆ ಕುರಿತಾಗಿ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ.

ಮೀನ ರಾಶಿ

ಮೀನ ರಾಶಿಯ ಮಂದಿಗೆ ಇಂದು ಮಿಶ್ರ ಫಲದ ದಿನ. ವಿದ್ಯಾರ್ಥಿಗಳಿಗೆ ಸಮಸ್ಯೆಗಳು ಬರಬಹುದು. ಅನಗತ್ಯ ಖರ್ಚುಗಳಿಂದ ಇಂದು ದೂರವಿರಿ. ಗೃಹಿಣಿಯರಿಗೆ ಅನೇಕ ರೀತಿಯಲ್ಲಿ ಸಮಸ್ಯೆಯ ದಿನವಾಗಬಹುದು. ಕೆಲಸದಲ್ಲಿ ಎಚ್ಚರಿಕೆ ಇಡಿ.

English summary

August-16-2025-daily-horoscope-prediction-for-12-zodiac-signs-in-kannada

Here is August 16 daily horoscope prediction for 12 zodiac signs read on...
Story first published: Saturday, August 16, 2025, 5:01 [IST]
X
Desktop Bottom Promotion