Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
Dina Bhavishya: ಆಗಸ್ಟ್ 15ರಂದು ಯಾರಿಗೆಲ್ಲಾ ಶುಭ ಶುಕ್ರವಾರ!
ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 15ರಂದು ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರು ಈ ದಿನ ದೊಡ್ಡ ಮಟ್ಟದ ಸವಾಲು ಎದುರಿಸಬಹುದು. ಹಣಕಾಸಿನ ಕುರಿತಾಗಿ ನಿಮ್ಮಲ್ಲಿ ಸಮಸ್ಯೆಗಳು ಬರಬಹುದು. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ಕುರಿತಾದ ಸಮಸ್ಯೆ ಬರುವ ಸಾಧ್ಯತೆ ಹೆಚ್ಚಾಗಿದೆ. ವ್ಯಾಪಾರಿಗಳಿಗೆ, ಉದ್ಯೋಗಸ್ಥರಿಗೆ ಸಾಮಾನ್ಯ ದಿನವಾಗಿರಲಿದೆ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಈ ದಿನ ದೊಡ್ಡ ಮಟ್ಟದ ಯಶಸ್ಸಿನ ದಿನ. ನಿಮ್ಮ ಪ್ರಯಾಣಗಳು ಸುಖಕರವಾಗಿರಲಿದೆ. ವ್ಯವಹಾರಿಕವಾಗಿ ಮೂರನೇ ವ್ಯಕ್ತಿಯಿಂದ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಆರೋಗ್ಯದಲ್ಲೂ ಏರುಪೇರು ಸಂಭವ.

ಮಿಥುನ ರಾಶಿ
ಮಿಥುನ ರಾಶಿಯ ಮಂದಿಗೆ ಈ ದಿನ ಅನುಕೂಲಕರ. ಗೃಹಿಣಿಯರು ಹಣಕಾಸಿನ ವಿಚಾರದಲ್ಲಿ ಬುದ್ದಿವಂತಿಕೆಯಿಂದ ವ್ಯವಹರಿಸಬೇಕು. ಸ್ವಂತ ಉದ್ಯೋಗ ಮಾಡುವವರಿಗೆ ಈ ದಿನವು ಅಚ್ಚರಿಯ ಪ್ರತಿಫಲ ತರಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಈ ದಿನ ಸವಾಲಿನ ದಿನ. ನಿಮ್ಮ ಉದ್ಯೋಗದ ಸ್ಥಳದಲ್ಲಿ ಒತ್ತಡದ ಜೊತೆಗೆ ಹಲವು ರೀತಿಯ ಸಮಸ್ಯೆ ಎದುರಿಸಬಹುದು. ಈ ದಿನ ಯಾರಿಗೂ ಸಾಲ ನೀಡುವುದು, ಭಾಷೆ ನೀಡುವುದು ಅನಗತ್ಯವಾಗಿ ದುಂದು ವೆಚ್ಚಕ್ಕೆ ಮುಂದಾಗುವುದು ಮಾಡಬೇಡಿ.
ಸಿಂಹ ರಾಶಿ
ಸಿಂಹ ರಾಶಿಯರಿಗೆ ಬಹಳ ಅನುಕೂಲಕರ ದಿನ. ನಿಮ್ಮ ನಿರ್ಧಾರಗಳನ್ನು ಬೇರೆಯವರು ಕೂಡ ಸರಿ ಎನ್ನಬಹುದು, ಪ್ರೀತಿ ಪ್ರೇಮದ ವಿಚಾರದಲ್ಲಿ ಮಧುರತೆ ಇರಲಿದೆ. ಹಣಕಾಸು ಖರ್ಚಾದರು ಕೂಡ ಮುಂದಿನ ದಿನದಲ್ಲಿ ಮರಳಿ ಬರಬಹುದು. ಆಪ್ತರ ಭೇಟಿಯಾಗುವಿರಿ. ಮನಸ್ಸಿನಲ್ಲಿದ್ದ ಗೊಂದಲಗಳು ಬಗೆಹರಿಯಲಿವೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಈ ದಿನವು ಅಚ್ಚರಿ. ನಿಮ್ಮ ಹಲವು ದಿನದ ಸಮಸ್ಯೆಯೊಂದು ಬಗೆಹರಿಯಲಿದೆ. ವಿವಾಹ ಸಂಬಂಧವಾಗಿ ಇದ್ದ ಮನಸ್ತಾಪ ದೂರಾಗಲಿದೆ. ಪ್ರಯಾಣದಲ್ಲಿ ತೊಡಗುವಿರಿ. ಸಹೋದರರಿಂದ ನಿಮಗೆ ಸಹಾಯ ವಾಗಲಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಮಿಶ್ರ ಫಲದ ದಿನ. ಮನೆಯ ಬೇರೆ ಸದಸ್ಯರ ಕುರಿಯಾಗಿ ನೀವಿಂದು ಚಿಂತಿಸುವ ಹಾಗೆ ಖರ್ಚು ಮಾಡುವ ದಿನವಾಗಿರಲಿದೆ. ಆಪ್ತರೊಬ್ಬರಿಗೆ ಹಣಕಾಸಿನ ಸಹಾಯಕ್ಕೆ ಬೇಡಿಕೆ ಇಟ್ಟಿದ್ದರೆ ಉತ್ತಮ ಫಲಿತಾಂಶ ಬರಬಹುದು. ಉದ್ಯೋಗಿಗಳಿಗೆ ಉತ್ತಮ ದಿನ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಲ್ಲಿ ಈ ದಿನ ಸಾಮಾನ್ಯ ಫಲಿತಾಂಶಗಳ ತರುವ ದಿನ. ಗೃಹಿಣಿಯರು ಹೆಚ್ಚು ಓಡಾಟ ಮಾಡಬಹುದು. ಹಣಕಾಸಿನ ವಿಚಾರದಲ್ಲಿ ಜಾಗೃತೆ ಇರಲಿ. ವಾಹನ ಸಂಬಂಧ ಪ್ರಯಾಣಿಸುವಾಗ ಎಚ್ಚರಿಕೆ ತೆಗೆದುಕೊಳ್ಳಿ. ಆರೋಗ್ಯ ಸುಧಾರಣೆಯಾಗಲಿದೆ.
ಧನು ರಾಶಿ
ಧನು ರಾಶಿಯವರು ಈ ದಿನ ವಿಶ್ರಾಂತಿ ಪಡೆಯುವ ದಿನ, ನಿಮ್ಮ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ನಡೆಯಲಿದೆ. ನಿಮಗೆ ಬರಬೇಕಿದ್ದ ಹಣಕಾಸು ಮತ್ತಷ್ಟು ವಿಳಂಭವಾಗಬಹುದು. ಮನೆಯಲ್ಲಿ ಹಣಕಾಸಿನ ವಿಚಾರವಾಗಿ ಒತ್ತಡ ಬರಬಹುದು, ಆದ್ರೆ ನೀವು ನಿಭಾಯಿಸುತ್ತೀರಿ.
ಮಕರ ರಾಶಿ
ಮಕರ ರಾಶಿಯ ಜನರಿಗೆ ಇಂದು ಮಿಶ್ರ ಫಲ ನಿಮ್ಮ ಹಲವು ವಿಚಾರಗಳಲ್ಲಿ ಇಂದು ಯಶಸ್ಸಿನ ಜೊತೆಗೆ ಅತೃಪ್ತಿಯೂ ಇರಬಹುದು. ದೇವಾಲಯ ಭೇಟಿಯ ಸಾಧ್ಯತೆ ಇದೆ. ಇಂದು ತಾಳ್ಮೆಯಿಂದ ಇರುವುದು ಉತ್ತಮ. ತರಾತುರಿಯಲ್ಲಿ ಯಾವುದೇ ಕೆಲಸಕ್ಕೆ ಮುಂದಾಗಬೇಡಿ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಅನುಕೂಲಕರ ದಿನವಾಗಿರಲಿದೆ. ನಿಮ್ಮ ದೈನಂದಿನ ಕೆಲಸಗಳು ಅಡ್ಡಿ ಆತಂಕವಿಲ್ಲದೆ ನೆರವೇರಲಿದೆ. ಗೃಹಿಣಿಯರಿಗೆ ಉತ್ತಮ ದಿನವಾಗಿದೆ. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ. ವಾಹನ ಸಂಬಂಧವಾಗಿ ಎಚ್ಚರಿಕೆಯಿಂದ ಇರಿ.
ಮೀನ ರಾಶಿ
ಮೀನ ರಾಶಿಯವರಿಗೆ ಉತ್ತಮ ದಿನವಾಗುವ ನಿರೀಕ್ಷೆ ಇದೆ. ಯಾರಿಗಾದರು ಹಣ ನೀಡಿದ್ದರೆ ಮರಳಿ ಪಡೆಯಬಹುದು. ವ್ಯಾಪಾರಿಗಳಿಗೆ ದಿನದ ಅಂತ್ಯದಲ್ಲಿ ಖರ್ಚು ಹೆಚ್ಚಾಗಬಹುದು. ಇಂದು ಹೊರಗಿನ ಊಟ, ತಿಂಡಿಯನ್ನು ತಪ್ಪಿಸುವುದು ಉತ್ತಮ.



Click it and Unblock the Notifications