Dina Bhavishya: ಆಗಸ್ಟ್ 12ರ ಮಂಗಳವಾರ ಲಾಭದಾಯಕ ರಾಶಿಗಳಿವು?

ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 12ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಇಂದು ಮೇಷ ರಾಶಿಯವರಿಗೆ ಬಹಳ ಸಮಸ್ಯಾತ್ಮಕ ದಿನ ಆಗಿರಬಹುದು. ನಿಮ್ಮ ಆರ್ಥಿಕ ವಿಚಾರದಲ್ಲಿ ಇಂದು ಬಹಳ ಕಷ್ಟದ ದಿನ. ನಿಮ್ಮ ಹಣಕಾಸು ಕುರಿತ ವಿಚಾರವಾಗಿ ದೊಡ್ಡ ಸಮಸ್ಯೆ ಎದುರಿಸಬೇಕಾಗಬಹುದು. ನಿಮ್ಮ ಹಳೆಯ ಕೌಟುಂಬಿಕ ಸಮಸ್ಯೆಯೊಂದು ಮತ್ತೆ ತಲೆನೋವಿಗೆ ಕಾರಣವಾಗಬಹುದು.

ವೃಷಭ ರಾಶಿ

ನಿಮಗಿಂದು ಮಿಶ್ರಫಲದ ದಿನ. ನಿಮ್ಮ ದೊಡ್ಡ ಕೆಲಸವೊಂದು ನಿಮಗೆ ಕಾಡಬಹುದು. ಹಾಗೆ ಮಕ್ಕಳ ಕುರಿತಾದ ವಿಚಾರದಲ್ಲಿ ನೀವು ನಿರ್ಧಾರ ತೆಗೆದುಕೊಳ್ಳಬಹುದು. ಗೃಹಿಣಿಯರಲ್ಲಿ ಆರ್ಥಿಕ ಸಮಸ್ಯೆ ಕಾಡಬಹುದು. ನಿಮ್ಮ ಹಣಕಾಸು ಸ್ಥಿತಿ ಸುಧಾರಿಸಲಿದೆ.

August-12-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯವರಲ್ಲಿ ಅಧಿಕ ಖರ್ಚಿನ ದಿನ. ಬಹುತೇಕರು ಇಂದು ಪ್ರಯಾಣ ಮಾಡಬಹುದು. ಕೆಲವು ಪ್ರಯಾಣಗಳು ನಿಮ್ಮಲ್ಲಿ ಲಾಭಕ್ಕೆ ಕಾರಣವಾಗಬಹುದು. ಅಪೂರ್ಣವಾಗಿರುವ ಕೆಲಸಗಳನ್ನು ಪೂರ್ಣ ಮಾಡುವಿರಿ. ಆರೋಗ್ಯದಲ್ಲಿ ಏರುಪೇರು ಸಂಭವ.

ಕರ್ಕ ರಾಶಿ

ಕರ್ಕ ರಾಶಿಯ ಜನರಿಗೆ ಸವಾಲಿನ ದಿನ. ದಾಂಪತ್ಯ, ಕೌಟುಂಬಿಕ ವಿಚಾರದಲ್ಲಿ ನೀವು ಅಂದುಕೊಂಡ ಕೆಲಸ ಅಥವಾ ವಿಚಾರ ನಡೆಯದೆ ಇರಬಹುದು. ಮನೆಯ ನವೀಕರಣ ಸಂಬಂಧ, ಅಲಂಕಾರಿಕ ವಸ್ತು ಖರೀದಿ ವಿಚಾರದಲ್ಲಿ ಖರ್ಚು ಇರಬಹುದು.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಈ ದಿನ ಮಿಶ್ರ ಫಲ ನೀಡಲಿದೆ. ನಿಮ್ಮ ಹೊಸ ಉದ್ಯೋಗಗಳು ಹೆಚ್ಚು ಫಲ ನೀಡಲು ಮತ್ತಷ್ಟು ಶ್ರಮ ಹಾಕಿ. ತರಾತುರಿಯಲ್ಲಿ ಯಾವುದೇ ಕೆಲಸ ಮಾಡಲು ಮುಂದಾಗಬೇಡಿ. ಹಣಕಾಸಿನ ವಿಚಾರವಾಗಿ ಸುಲಭವಾಗಿ ಯಾರನ್ನು ನಂಬಬೇಡಿ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ದಿನ ಸಕಲ ಪ್ರಯತ್ನಗಳು ಲಾಭ ಅಥವಾ ಶುಭ ತರಬಹುದು. ನವವಿವಾಹಿತರಿಗೆ ಈ ದಿನ ಅನುಕೂಲಕರವಾಗಿರಲಿದೆ. ಸೂಕ್ತ ಕೆಲಸಕ್ಕೆ ಹುಡುಕುತ್ತಿದ್ದವರಿಗೆ ಶುಭಫಲವಿದೆ. ವಿವಾಹಿತರು ಮನೆಗಾಗಿ ಖರ್ಚು ಮಾಡಬೇಕಾಗಿ ಬರಬಹುದು. ಮಹಿಳೆಯರು ವಾಹನ ವಿಚಾರವಾಗಿ ಎಚ್ಚರಿಕೆ ವಹಿಸಬೇಕಿದೆ.

ತುಲಾ ರಾಶಿ

ತುಲಾ ರಾಶಿಯ ಜನರಲ್ಲಿ ಸಾಮಾನ್ಯ ದಿನವಾಗಿರಲಿದೆ, ನಿಮ್ಮ ಆದಾಯದಷ್ಟೇ ಖರ್ಚು ಕೂಡ ಇರಲಿದೆ. ನಿಮ್ಮ ಆಪ್ತರಿಂದ ಉಂಟಾಗಿರುವ ಸಮಸ್ಯೆಯೊಂದು ಬಗೆಹರಿಯಬಹುದು. ಪ್ರಯಾಣ ಮಾಡಬೇಕಾಗಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಜನರಿಗೆ ಈ ದಿನ ಬಹಳ ಉತ್ತಮವಾಗಿರಲಿದೆ. ಹಣಕಾಸಿನ ವಿಚಾರವಾಗಿ ಇಂದು ಬಹಳ ಉತ್ತಮ ದಿನ. ನಿಮ್ಮ ಬಹಳ ದಿನಗಳ ನಂತರ ನಿಮ್ಮ ಪ್ರಯಾಣಗಳಲ್ಲಿ ಶುಭವಾಗಲಿದೆ. ದಾಂಪತ್ಯ, ಹಾಗೂ ಕೌಟುಂಬಿಕ ಜೀವನ ಸಂತಸದಿಂದ ಕೂಡಿರಲಿದೆ.

ಧನು ರಾಶಿ

ಧನು ರಾಶಿಯವರು ಇಂದು ಸುಲಭವಾಗಿ ತಮ್ಮ ಕೆಲಸಗಳ ಮಾಡಿ ಮುಗಿಸುವ ದಿನ. ಅನಿರೀಕ್ಷಿತ ಮೂಲದಿಂದ ಧನಲಾಭವಿದೆ. ವ್ಯಾಪಾರಿಗಳಿಗೆ ಇಂದು ಉತ್ತಮ ಲಾಭದ ದಿನ. ಮನೆಯ ಹಿರಿಯರ ಆರೋಗ್ಯದ ವಿಚಾರವಾಗಿ ನಿರ್ಲಕ್ಷ್ಯ ಮಾಡಬೇಡಿ.

ಮಕರ ರಾಶಿ

ಮಕರ ರಾಶಿಯವರಿಗೆ ಅನುಕೂಲಕರ ದಿನ. ಗೃಹಿಣಿಯರಲ್ಲಿ ಈ ದಿನ ಸಂತಸದ ದಿನ ಆಗಿರಲಿದೆ. ಮಕ್ಕಳ ಭವಿಷ್ಯದ ಕುರಿತ ಚಿಂತೆ ದೂರಾಗಬಹುದು. ವ್ಯವಹಾರಗಳಲ್ಲಿ ಮುಂದುವರೆಯುವಾಗ ಎಚ್ಚರಿಕೆ ಇಡಿ. ಬಹಳ ಖರ್ಚು ಮಾಡಬೇಕಾದ ದಿನವಾಗಬಹುದು.

ಕುಂಭ ರಾಶಿ

ಇಂದು ನೀವು ಶ್ರಮದಾಯಕ ಕೆಲಸಗಳಲ್ಲಿ ಭಾಗಿಯಾಗಬಹುದು. ಕೆಲಸದ ಸ್ಥಳದಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಿ. ಸರ್ಕಾರಿ ಕೆಲಸಗಳಲ್ಲಿ ಒತ್ತಡ ಇರಲಿದೆ. ಅವಿವಾಹಿತ ಮಹಿಳೆಯರಲ್ಲಿ ಖರ್ಚು ಹೆಚ್ಚಾಗಲಿದೆ. ಸಭೆ ಸಮಾರಂಭದಲ್ಲಿ ನೀವು ಭಾಗಿಯಾಗಬಹುದು.

ಮೀನ ರಾಶಿ

ಮೀನ ರಾಶಿಯವರಿಗೆ ಮಿಶ್ರ ಫಲದ ದಿನ. ನಿಮ್ಮ ಹಣಕಾಸು ಪರಿಸ್ಥಿತಿಯು ಸುಧಾರಿಸಲಿದೆ. ಬಹಳ ದೀರ್ಘಕಾಲದಿಂದ ನಿಮಗೆ ಬರಬೇಕಿದ್ದ ಹಣಕಾಸು ವಿಚಾರದಲ್ಲಿ ಶುಭ ಫಲಿತಾಂಶ ನೋಡಬಹುದು. ಆಸ್ತಿ ವಿಚಾರಗಳಲ್ಲಿ ಲಾಭವಿದೆ.

English summary

August-12-2025-daily-horoscope-prediction-for-12-zodiac-signs-in-kannada

Here is August 12 daily horoscope prediction for 12 zodiac signs read on...
Story first published: Tuesday, August 12, 2025, 5:00 [IST]
X
Desktop Bottom Promotion