Daily Horoscope: ಆಗಸ್ಟ್ 11ರ ಸೋಮವಾರ ಯಾರಿಗೆಲ್ಲಾ ಅಚ್ಚರಿಯ ದಿನ?

ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 11ರಂದು ನಿಮ್ಮ ರಾಶಿಯಲ್ಲಿ ಯಾವ ರೀತಿ ಫಲವಿದೆ ನೋಡಿ!

ಮೇಷ ರಾಶಿ

ಮೇಷ ರಾಶಿಯ ಮಂದಿಗೆ ಈ ದಿನ ಬಹಳ ಅನುಕೂಲಕರ. ನಿಮ್ಮ ಹಣಕಾಸಿನ ವಿಚಾರಗಳು ನೀವು ಅಂದುಕೊಂಡಂತೆ ಇರಲಿದೆ. ನಿಮ್ಮ ಹಲವು ಸಮಸ್ಯೆಗಳನ್ನು ಆಪ್ತರ ಮೂಲಕ ಪರಿಹರಿಸಿಕೊಳ್ಳಬಹುದು. ಯಾರಿಂದಾದರು ಹಣ ಬಯಸಿದ್ದರೆ ಒಲಿಯಬಹುದು. ದಾಂಪತ್ಯದಲ್ಲಿ ಸಣ್ಣ ಪುಟ್ಟ ಮನಸ್ತಾಪವಿದೆ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಮಿಶ್ರ ಫಲದ ದಿನ. ನಿಮ್ಮ ಬಹಳಷ್ಟು ಕೆಲಸಗಳು ನೀವು ಅಂದುಕೊಂಡ ರೀತಿ ನಡೆಯದೆ ಇರಬಹುದು. ಆಪ್ತರಿಂದ ನಿಮಗೆ ನೋವುಂಟಾಗಬಹುದು. ಬಹಳ ಸಮಯ ಮನೆಯಿಂದ ಹೊರಗೆ ಕಳೆಯಬಹುದು.

August-11-2025-Daily-Horoscope-Prediction-For-12-Zodiac-Signs-In-Kannada

ಮಿಥುನ ರಾಶಿ

ಮಿಥುನ ರಾಶಿಯ ಜನರು ಓಡಾಟದಲ್ಲಿ ಇಂದು ಕಳೆಯುತ್ತೀರಿ. ಮನೆಯ ವಾತಾವರಣದಲ್ಲಿ ಸಂತಸ ಇರಲಿದೆ. ಬಹಳ ಸಮಯದ ನಿಮ್ಮ ಖುಷಿಗೆ ಕಾರಣವಾಗುವ ವಿಷಯಗಳು ನಡೆಯಲಿವೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ವ್ಯಾಪಾರಿಗಳಿಗೆ ಬಹಳ ಉತ್ತಮ ದಿನ.

ಕರ್ಕ ರಾಶಿ

ಕರ್ಕ ರಾಶಿಯ ಮಂದಿಗೆ ಈ ದಿನ ಬಹಳ ಅನುಕೂಲಕ. ನಿಮ್ಮ ಆರೋಗ್ಯ ಸಂಬಂಧಿ ವಿಚಾರದಲ್ಲಿ ನಿಮಗೆ ಧನಾತ್ಮಕ ದಿನ. ಮನೆಯಲ್ಲಿದ್ದ ಸಮಸ್ಯೆಯೊಂದು ಬಗೆಹರಿಯಲಿದೆ. ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗುವ ಮಂದಿಗೆ ಉತ್ತಮ ದಿನ.

ಸಿಂಹ ರಾಶಿ

ಸಿಂಹ ರಾಶಿಯ ಜನರಿಗೆ ಇಂದು ಉತ್ತಮ ದಿನವಲ್ಲ. ನಿಮ್ಮ ಕೆಲಸ ಕಾರ್ಯದಲ್ಲಿ ನಿಮಗೆ ಒಳ್ಳೆಯ ಫಲಿತಾಂಶ ಇಲ್ಲಿದೆ ಇರಬಹುದು. ಹಣಕಾಸಿನ ವಿಚಾರದಲ್ಲಿ ತಾತ್ಕಾಲಿಕ ನೆಮ್ಮದಿ ಇದ್ದರೂ ಅದರ ಭವಿಷ್ಯದಲ್ಲಿನ ಸಮಸ್ಯೆಗಳು ದೊಡ್ಡದಾಗಬಹುದು. ಮನೆಯಲ್ಲಿ ಅಶಾಂತಿ ಇರಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯವರು ಈ ದಿನ ಬಹಳ ಓಡಾಡುತ್ತೀರಿ. ಕೆಲಸದ ವಿಚಾರದಲ್ಲಿ ಪ್ರಯಾಣಿಸುತ್ತೀರಿ. ಉದ್ಯೋಗ ಹುಡುಕುತ್ತಿದ್ದವರಿಗೆ ಉತ್ತಮ ದಿನ. ಗೃಹಿಣಿಯರಲ್ಲಿ ಶ್ರಮದಾಯಕ ದಿನ. ಬಹಳ ಕೆಲಸಗಳ ಮಾಡಬೇಕಾದ ದಿನ ಆಗಿರುವುದರಿಂದ ದಣಿವು ಹೆಚ್ಚಾಗಬಹುದು.

ತುಲಾ ರಾಶಿ

ತುಲಾ ರಾಶಿಯವರಿಗೆ ಮಿಶ್ರ ಫಲದ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಈ ದಿನ ಮಿಶ್ರ ಫಲವಿದೆ. ವ್ಯಾಪಾರಿಗಳಿಗೆ ಆದಾಯದಷ್ಟೇ ಖರ್ಚು ಕೂಡ ಇರಲಿದೆ. ನಿಮ್ಮ ಹಲವು ಕೆಲಸಗಳಲ್ಲಿನ ಶ್ರಮವು ನೀವು ಬಯಸಿದ ಫಲಿತಾಂಶ ನೀಡದೆ ಇರಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಈ ದಿನ ಯಾರಿಗೂ ಸಾಲ ನೀಡಲು ಮುಂದಾಗಬೇಡಿ. ಗೃಹಿಣಿಯರಲ್ಲಿ ಸಣ್ಣ ಪುಟ್ಟ ಅನಾರೋಗ್ಯ ಇರಬಹುದು. ಮಕ್ಕಳ ಕುರಿತು ವಿಶೇಷ ಗಮನವಿಡಿ. ವ್ಯಾಪಾರಿಗಳು ಮಿಶ್ರ ಫಲ ನೋಡಲಿದ್ದಾರೆ. ನಿಮ್ಮ ಮನೆಗಾಗಿ ಖರ್ಚು ಮಾಡಬಹುದು.

ಧನು ರಾಶಿ

ಧನು ರಾಶಿಯ ಮಂದಿಗೆ ಈ ದಿನ ಉತ್ತಮವಾಗಿರಲಿದೆ. ನಿಮ್ಮ ಇಚ್ಛೆಯಂತೆ ಹಣಕಾಸಿನ ಕೆಲಸಗಳು ಮುಗಿಯಲಿದೆ. ಸ್ವಂತ ಉದ್ಯೋಗ ಮಾಡುವವರು ಈ ದಿನ ತಮ್ಮ ಇಚ್ಛೆಯಂತೆ ಲಾಭ ನೋಡಬಹುದು. ನವವಿವಾಹಿತರು ಅಂದುಕೊಂಡ ಕೆಲಸ ಮಾಡಬಹುದು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಯ ದಿನ.

ಮಕರ ರಾಶಿ

ಮಕರ ರಾಶಿಯ ಮಂದಿಗೆ ಈ ದಿನ ಅನುಕೂಲಕರ. ಸಾಲ ತೀರಿಸಿ ನಿರಾಳರಾಗುವ ದಿನ. ವಾಹನ ಸಂಬಂಧಿ ವಹಿವಾಟು ಮಾಡುವವರಿಗೆ ತುಂಬಾ ಉತ್ತಮ ದಿನ. ನಿಮ್ಮ ಪ್ರಯತ್ನಗಳು ನಿಮಗೆ ಉತ್ತಮ ಪ್ರತಿಫಲ ನೀಡಲಿವೆ.

ಕುಂಭ ರಾಶಿ

ಕುಂಭ ರಾಶಿಯ ಜನರಿಗೆ ಈ ದಿನವು ಅಚ್ಚರಿಯ ಫಲಿತಾಂಶ ತರಬಹುದು. ಆರ್ಥಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಮಾರ್ಗ ಸಿಗಬಹುದು. ಯಾರಿಗಾದರು ಹಣ ನೀಡಿದ್ದರೆ ಮರಳಿ ಪಡೆಯುವ ಪ್ರಯತ್ನ ಬಿಡಬೇಡಿ.

ಮೀನ ರಾಶಿ

ಮೀನ ರಾಶಿಯವರಿಗೆ ಇಂದು ಅತ್ಯುತ್ತಮ ದಿನ ಎನ್ನಬಹುದು. ನಿಮ್ಮ ಹಲವು ಸಮಸ್ಯೆಗಳನ್ನು ಇತರರೊಂದಿಗೆ ಹೇಳಿಕೊಳ್ಳುವುದು ಪರಿಹಾರಕ್ಕೆ ದಾರಿಯಾಗಬಹುದು. ಸರ್ಕಾರಿ ಉದ್ಯೋಗಿಗಳಿಗೆ ಇದು ಬಹಳ ಉತ್ತಮ ದಿನ. ನಿಮ್ಮ ವೇತನ ಸಂಬಂಧಿ ಸಮಸ್ಯೆ ಬಗೆಹರಿಯಬಹುದು.

English summary

August-11-2025-Daily-Horoscope-Prediction-For-12-Zodiac-Signs-In-Kannada

Here is August 11 daily horoscope prediction for 12 zodiac signs read on..
Story first published: Monday, August 11, 2025, 5:00 [IST]
X
Desktop Bottom Promotion