Latest Updates
-
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ!
Daily Horoscope: ಆಗಸ್ಟ್ 10ರ ಭಾನುವಾರವು ಯಾರಿಗೆ ಶುಭಕರ
ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 10ರಂದು ನಿಮ್ಮ ರಾಶಿಯಲ್ಲಿ ಯಾವ ರೀತಿ ಫಲವಿದೆ ನೋಡಿ!
ಮೇಷ ರಾಶಿ
ಮೇಷ ರಾಶಿಯ ಮಂದಿಗೆ ಈ ದಿನ ಬಹಳ ಮಿಶ್ರ ಫಲವಾಗಿರಲಿದೆ. ನಿಮ್ಮ ದೈನಂದಿನ ಕೆಲಸಗಳಲ್ಲಿ ಬಹಳ ಅಡ್ಡಿ ಎದುರಾಗಬಹುದು. ಯಾವುದಾದರು ವಿಚಾರವಾಗಿ ನಿಮಗೆ ನೋವು ಕಾಡಬಹುದು. ಬೇರೊಬ್ಬರ ಸಂತೋಷವು ನಿಮಗೆ ನೋವು ತರಿಸಬಹುದು.
ವೃಷಭ ರಾಶಿ
ವೃಷಭ ರಾಶಿಯ ಮಂದಿ ಈ ದಿನ ದೊಡ್ಡ ಸವಾಲು ಎದುರಿಸಬಹುದು. ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯುವ ದಿನವೂ ಇದಾಗಿರಲಿದೆ. ಹಣಕಾಸು ಸಂಬಂಧವಾಗಿ ನೀವು ಹೆಚ್ಚು ಚಿಂತೆ ಮಾಡಬಹುದು. ಯಾರಿಂದಾದರು ಹಣ ಪಡೆದರೆ ವಾಪಾಸು ಕೊಡುವುದು ಉತ್ತಮ.

ಮಿಥುನ ರಾಶಿ
ಮಿಥುನ ರಾಶಿಯವರು ಈ ದಿನ ಓಡಾಟದಲ್ಲಿ ಕಳೆಯಬಹುದು. ನಿಮ್ಮ ಹಲವು ರೀತಿಯ ಸಮಸ್ಯೆಗಳ ಪರಿಹಾರಕ್ಕಾಗಿ ತಾಳ್ಮೆಯಿಂದಿರಿ. ಕೆಲಸದ ಕಾರಣಕ್ಕೆ ನೀವು ಪ್ರಯಾಣ ಮಾಡಬೇಕಾಗಿ ಬರಬಹುದು. ನಿಮ್ಮ ವ್ಯಾಪಾರ ವಹಿವಾಟು ಸಂಬಂಧ ಸಲಹೆ ಪಡೆಯಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಈ ದಿನ ಬಹಳ ಸಂತೋಷದ ದಿನ, ದಾಂಪತ್ಯ ವಿಚಾರವಾಗಿ ನಿಮ್ಮಲ್ಲಿ ಸಂತಸ ಇರಲಿದೆ. ಪ್ರಯಾಣಗಳು ಸುಖಕರವಾಗಿರಲಿದೆ. ಹಣಕಾಸು ಸಂಬಂಧ ಖರ್ಚು ಕಡಿಮೆ ಮಾಡಿ. ಉಳಿತಾಯ ಹೆಚ್ಚಿಸುವುದು ಬಹಳ ಉತ್ತಮ.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಈ ದಿನ ಮಿಶ್ರ ಫಲವಾಗಿರಲಿದೆ. ನಿಮ್ಮ ಹಲವು ಕನಸುಗಳ ಈಡೇರಿಸಿಕೊಳ್ಳಲು ಇಂದು ಉತ್ತಮ ದಿನ. ನಿಮ್ಮ ವಾಹನ ಸಂಬಂಧಿ ಸಮಸ್ಯೆ ಬಗೆಹರಿಯಲಿದೆ. ಔದ್ಯೋಗಿಕ ವಿಚಾರವಾಗಿ ಇಂದು ಬಹಳ ಉತ್ತಮ ದಿನ
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಈ ದಿನ ಅಚ್ಚರಿ ಫಲಿತಾಂಶ ತರಬಹುದು. ನಿಮ್ಮ ಅನೇಕ ಕೆಲಸಗಳಲ್ಲಿ ಯಶಸ್ಸು ಇರಲಿದೆ. ಸಹೋದರರೊಂದಿಗೆ ನಿಮ್ಮ ಸಂಬಂಧ ಹಾಳಾಗುವ ಸಂಭವವಿದೆ. ಆರೋಗ್ಯದ ಕಡೆಗೂ ನೀವು ಗಮನ ಹರಿಸಬೇಕಿದೆ.
ತುಲಾ ರಾಶಿ
ಕೆಲಸದ ನಿಮಿತ್ತ ನೀವು ಹೊರಗೆ ಉಳಿಯಬಹುದು. ಮನೆಯಲ್ಲಿ ಶಾಂತಿಯ ವಾತಾವರಣ ಇದ್ದರೂ ನಿಮ್ಮಲ್ಲಿ ಗೊಂದಲಗಳು ಇರಬಹುದು. ಹಳೆಯ ಹಣಕಾಸು ಮನಸ್ತಾಪವೊಂದು ಮತ್ತೆ ಮುನ್ನಲೆಗೆ ಬರುವುದು. ಅನಗತ್ಯ ವಿಚಾರವಾಗಿ ಅಥವಾ ಇತರರ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಮುಂದಾಗಬೇಡಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಿಗೆ ಇಂದು ಬಹಳ ಅನುಕೂಲಕರ ದಿನ. ನೀವು ಬಹಳ ಸಮಯದಿಂದ ಅರ್ಧಕ್ಕೆ ನಿಲ್ಲಿಸಿದ್ದ ಕೆಲಸ ಪೂರ್ಣ ಮಾಡುವಿರಿ. ಸಾಲ ತೀರಿಸಬಹುದು. ಸ್ವಂತ ಉದ್ಯೋಗ ಮಾಡುವವರಿಗೆ ಇಂದು ಬಹಳ ಉತ್ತಮ ಲಾಭವಿದೆ. ಸಣ್ಣ ವ್ಯಾಪಾರಿಗಳು ಹೆಚ್ಚು ಲಾಭ ನೋಡುವ ದಿನ.
ಧನು ರಾಶಿ
ಧನು ರಾಶಿಯ ಜನರಿಗೆ ಇಂದು ಸವಾಲುಗಳಿವೆ. ನಿಮ್ಮ ಹಣಕಾಸಿಗೆ ಸಂಬಂಧಿಸಿದಂತೆ ಸಮಸ್ಯೆಯಿಂದ ದೂರ ಓಡುವ ಬದಲು ಅದನ್ನು ಎದುರಿಸುವುದು ಉತ್ತಮ. ವ್ಯಾಪಾರಿ ವಲಯದಲ್ಲಿ ಯಥಾಸ್ಥಿತಿ ಇರಲಿದೆ. ದೂರ ಪ್ರಯಾಣಗಳ ಮಾಡಬೇಕಾಗಬಹುದು. ದಾಂಪತ್ಯ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಿ.
ಮಕರ ರಾಶಿ
ಮಕರ ರಾಶಿಯ ಮಂದಿಯು ಈ ದಿನ ದೊಡ್ಡ ಲಾಭ ನೋಡಬಹುದು. ದಿನದ ಬಹುತೇಕ ಸಮಯ ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗಬಹುದು. ಆಪ್ತರೊಬ್ಬರಿಂದ ಹಣಕಾಸಿನ ನೆರವಿಗಾಗಿ ಮನವಿ ಬರಬಹುದು. ಗೃಹಿಣಿಯರಿಗೆ ಸಂಬಂಧಿಕರಿಂದ ನೋವಾಗಬಹುದು.
ಕುಂಭ ರಾಶಿ
ಕುಂಭ ರಾಶಿಯ ಜನರು ಪ್ರಯಾಣದಲ್ಲಿ ಭಾಗಿಯಾಗಬಹುದು. ರಾಜಕೀಯದಲ್ಲಿ ಗುರುತಿಸಿಕೊಂಡ ವ್ಯಕ್ತಿಗಳಿಗೆ ಉತ್ತಮ ದಿನ, ದೊಡ್ಡ ನಿರ್ಧಾರ ಕೈಗೊಳ್ಳುವ ದಿನ. ಕುಟುಂಬಸ್ಥರಿಂದ ಹಣಕಾಸು ಸಂಬಂಧವಾಗಿ ಒತ್ತಡ ಇರಬಹುದು. ನಿಮಗೆ ಬರಬೇಕಿದ್ದ ಬಾಕಿ ಹಣ ಮತ್ತೆ ವಿಳಂಬವಾಗಬಹುದು.
ಮೀನ ರಾಶಿ
ನಿಮಗೆ ಇಂದು ಸವಾಲುಗಳು ಎದುರಾಗುವ ದಿನ. ದಿನದ ಆರಂಭದಲ್ಲೆ ಹಣಕಾಸಿನ ಒತ್ತಡ ಇರಬಹುದು. ನೀವು ಅಂದುಕೊಂಡಿದ್ದ ಕೆಲಸದಲ್ಲಿ ಅಡ್ಡಿಗಳು ಎದುರಾಗಬಹುದು. ವ್ಯಾಪಾರಿಗಳಿಗೆ ಹೇಳಿಕೊಳ್ಳುವ ದಿನವಲ್ಲ ಆರೋಗ್ಯದಲ್ಲಿನ ಏರುಪೇರು ಚಿಂತೆಗೆ ತಳ್ಳಬಹುದು.



Click it and Unblock the Notifications











