Latest Updates
-
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್
Daily Horoscope: ಆಗಸ್ಟ್ 09ರ ಹುಣ್ಣಿಮೆಯ ದಿನ ಯಾರ ದಿನ ಉತ್ತಮವಾಗಿರಲಿದೆ!
ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 09ರಂದು ನಿಮ್ಮ ರಾಶಿಯಲ್ಲಿ ಯಾವ ರೀತಿ ಫಲವಿದೆ ನೋಡಿ!
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನವು ಮಿಶ್ರ ಫಲವಾಗಿರಲಿದೆ. ನಿಮ್ಮ ಅನೇಕ ಕೆಲಸಗಳು ನೀವು ಅಂದುಕೊಂಡಂತೆ ನೆರವೇರಲಿದೆ. ಯಾವುದೇ ತರಾತುರಿಯ ನಿರ್ಧಾರ ತೆಗೆದುಕೊಳ್ಳಬೇಡಿ. ದೊಡ್ಡ ಕೆಲಸಗಳಲ್ಲಿ ನಿಮಗೆ ಶುಭದಾಯಕ ದಿನ.

ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಇಂದು ಉತ್ತಮ ದಿನ. ಮನೆಯಲ್ಲಿ ಶಾಂತತೆ ಇರಲಿದೆ. ವ್ಯಾಪಾರಿ ವರ್ಗಕ್ಕೆ ಲಾಭದಾಯಕ ದಿನ. ಆಪ್ತರೊಬ್ಬರ ಭೇಟಿಯಾಗುತ್ತೀರಿ, ಅವರಿಂದ ಗೌರವುತ ಮಾತುಗಳ ಕೇಳುವಿರಿ. ಆರೋಗ್ಯದ ಕಡೆ ಗಮನವಿಡಿ.
ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಈ ದಿನ ದೊಡ್ಡ ಲಾಭವಿದೆ. ನಿಮ್ಮ ಹಣಕಾಸು ಕುರಿತ ವಿಚಾರವಾಗಿ ಲಾಭದಾಯಕ ದಿನ. ಹಳೆಯ ಬಾಕಿ ಸಾಲ ಮರುಪಾವತಿಯಾಗಲಿದೆ. ದಾಂಪತ್ಯ ಕುರಿತಾದ ಸಮಸ್ಯೆ ದೂರಾಗಲಿದೆ. ಹಿಂದೆ ಮಾಡಿದ್ದ ವ್ಯವಹಾರಾತ್ಮಕ ತಪ್ಪು ಮತ್ತೆ ಮಾಡಬೇಡಿ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಈ ದಿನವು ಅಚ್ಚರಿ ಫಲಿತಾಂಶ ತರುವಂತಹ ದಿನವಾಗಿರಲಿದೆ. ನೀವು ಅಂದುಕೊಂಡಿದ್ದಕ್ಕಿಂತ ಉತ್ತಮ ದಿನವಾಗಬಹುದು. ನಿಮ್ಮ ವ್ಯವಹಾರಗಳು ನಿಮಗೆ ತೃಪ್ತಿದಾಯಕ ಆಗಿರಲಿದೆ. ನಿಮ್ಮ ಕುಟುಂಬದಲ್ಲಿದ್ದ ಹಣಕಾಸಿನ ಸಮಸ್ಯೆಗೆ ಪರಿಹಾರ ಸಿಗಬಹುದು.
ಸಿಂಹ ರಾಶಿ
ಸಿಂಹ ರಾಶಿ ಜನರಲ್ಲಿ ಇಂದು ಸಂತೋಷದ ದಿನವಾಗಿರಲಿದೆ. ನಿಮ್ಮ ಕೆಲಸದ ಒತ್ತಡ ಕಡಿಮೆಯಾಗಲಿದೆ. ಪ್ರೀತಿ, ಪ್ರೇಮದ ವಿಚಾರದಲ್ಲಿ ಬಹಳ ಉತ್ತಮ ದಿನವಿದು. ನಿಮ್ಮ ಹಣಕಾಸಿನ ವಿಚಾರದಲ್ಲಿ ನಿಮಗೆ ಯಶಸ್ಸಿನ ದಿನ. ವ್ಯಾಪಾರಿಗಳಿಗೂ ಲಾಭದ ದಿನ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಈ ದಿನ ಮಿಶ್ರ ಫಲದ ದಿನ. ನಿಮ್ಮಲ್ಲಿ ಇಂದು ಶ್ರಮದಾಯಕ ದಿನವಾಗಿರುತ್ತದೆ. ನಿಮ್ಮ ಆಲೋಚನೆಗಳನ್ನು ಬದಲಾಯಿಸಬೇಕಾದ ಅನಿವಾರ್ಯತೆ ಇದೆ. ಆಪ್ತರೊಬ್ಬರಿಗೆ ನೀವು ಉದ್ಯೋಗದ ವಿಚಾರದಲ್ಲಿ ನೆರವಾಗುತ್ತೀರಿ. ಹೊಸ ವಸ್ತು ಖರೀದಿಸಬಹುದು.
ತುಲಾ ರಾಶಿ
ತುಲಾ ರಾಶಿಯ ಮಂದಿಗೆ ಈ ದಿನವು ಉತ್ತಮವಾಗಿರಲಿದೆ. ಬಹಳ ದಿನಗಳ ಬಳಿಕ ನಿಮ್ಮಲ್ಲಿ ಹಣಕಾಸು ಕುರಿತಾದ ವಿಚಾರದಲ್ಲಿ ನೆಮ್ಮದಿ ಇರಲಿದೆ. ವ್ಯಾಪಾರಗಳು ಸಾಲ ನೀಡುವುದನ್ನು ತಪ್ಪಿಸುವುದು ಉತ್ತಮ. ವಾಹನ ಸವಾರರು ಎಚ್ಚರಿಕೆ ವಹಿಸಿ.
ವೃಶ್ಚಿಕ ರಾಶಿ
ನಿಮಗಿಂದು ಬಹಳ ಪ್ರಯಾಣ ಅಥವಾ ಶ್ರಮದಾಯಕ ದಿನ ಎನ್ನಬಹುದು. ಪ್ರತಿ ದಿನದ ಕಾರ್ಯದಲ್ಲಿ ಹಲವು ರೀತಿಯ ಬದಲಾವಣೆಗಳ ಎದುರಿಸುತ್ತೀರಿ. ನಿಮ್ಮ ಹಲವು ಕೆಲಸಗಳ ಅರ್ಧಕ್ಕೆ ನಿಲ್ಲಿಸಬಹುದು. ವ್ಯಾಪಾರಿಗಳು ಹೆಚ್ಚು ಬುದ್ದಿವಂತಿಕೆಯಿಂದ ಕೆಲಸ ಮಾಡಿ.
ಧನು ರಾಶಿ
ಧನು ರಾಶಿಯವರಿಗೆ ಅನುಕೂಲಕರ ದಿನ. ಗೃಹಿಣಿಯರು ಪ್ರಯಾಣದ ಜೊತೆಗೆ ಲಾಭ ನೋಡುವ ದಿನವಾಗಿರಲಿದೆ. ನಿಮ್ಮ ಹಣವನ್ನು ಖರ್ಚು ಮಾಡುವ ಮುನ್ನ ಒಮ್ಮೆ ಆಲೋಚಿಸಿ. ಸಾಲ ನೀಡುವ ಕಾರ್ಯಕ್ಕೆ ಮುಂದಾಗಬೇಡಿ. ಸವಾಲುಗಳಿಂದ ಒತ್ತಡ ಕೂಡ ಇರಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಬಹಳ ಅನುಕೂಲ. ಆಸ್ತಿ ವಿಚಾರವಾಗಿ ನೀವು ಅಂದುಕೊಂಡ ದಿನ. ನಿಮ್ಮ ನೇರ ನುಡಿಗಳಿಂದ ಬೇರೆಯವರಿಗೆ ನೋವಾಗಬಹುದು. ದಾಂಪತ್ಯ ವಿಚಾರವಾಗಿ ಸಂತಸ ಇರಲಿದೆ. ಪ್ರಯಾಣ ಮಾಡಬೇಕಾಗಬಹುದು.
ಕುಂಭ ರಾಶಿ
ಕುಂಭ ರಾಶಿಯವರಿಗೆ ಮಿಶ್ರ ಫಲದ ದಿನ, ದಿನದ ಆರಂಭದಲ್ಲೇ ಖರ್ಚು ನೋಡಬಹದು. ಹಣಕಾಸು ವಿಚಾರಗಳು ನಿಧಾನವಾಗಲಿವೆ. ನಿರುದ್ಯೋಗಿಗಳು ಈ ದಿನ ಉತ್ತಮ ಅವಕಾಶ ಪಡೆಯುವ ಸಾಧ್ಯತೆ ಇದೆ. ನಿಮ್ಮ ಹಳೆಯ ಸಾಲ ಮರುಪಾವತಿ ಮಾಡಬಹುದು.
ಮೀನ ರಾಶಿ
ಮೀನ ರಾಶಿಯ ಜನರಿಗೆ ಈ ದಿನ ಸವಾಲುಗಳಿಂದ ತುಂಬಿರಲಿದೆ. ಪ್ರಯಾಣಗಳಲ್ಲಿ ನೀವು ಅಂದುಕೊಡ ಫಲವಿಲ್ಲ. ವ್ಯಾಪಾರಿಗಳು ಅಧಿಕ ಶ್ರಮ ಹಾಕುತ್ತೀರಿ. ಗೃಹಿಣಿಯರಿಗೆ ಪ್ರಯಾಣ ಸಂಬಂಧಿ ಖರ್ಚು ಇರಲಿದೆ. ಯಾವುದೇ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳಬೇಡಿ.



Click it and Unblock the Notifications











