Daily Horoscope: ಆಗಸ್ಟ್ 08ರ ಶುಭ ಶುಕ್ರವಾರ ಯಾರಿಗೆಲ್ಲಾ ಶುಭದಿನ

ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 08ರಂದು ನಿಮ್ಮ ರಾಶಿಯಲ್ಲಿ ಯಾವ ರೀತಿ ಫಲವಿದೆ ನೋಡಿ!

ಮೇಷ ರಾಶಿ

ಮೇಷ ರಾಶಿಯವರಿಗೆ ಈ ದಿನವು ಬಹಳ ಅನುಕೂಲಕರವಾಗಿರಲಿದೆ. ನಿಮ್ಮ ಸವಾಲುಗಳು ಕಡಿಮೆಯಾಗಲಿದೆ. ಹಾಗೆ ಸಾಲದ ಸಮಸ್ಯೆಗಳು ದೂರಾಗಲಿದೆ. ನಿಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ನಿಮಗೆ ದೊಡ್ಡ ಅನುಕೂಲಕವಿದೆ. ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಗಳ ಮುಗಿಸುವಿರಿ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಈ ಸಮಯವು ಮಿಶ್ರಫಲವಾಗಿಲಿದೆ. ನಿಮ್ಮ ಹಣಕಾಸು ವಿಚಾರದಲ್ಲಿ ಆತಂಕಗಳು ಎದುರಾಗಬಹುದು. ಯಾರೊಂದಿಗೂ ಸಾಲದ ವ್ಯವಹಾರ ಮಾಡಬೇಡಿ. ವಿಪರೀತ ಶ್ರಮದಿಂದಾಗಿ ಆಯಾಸಕ್ಕೆ ತುತ್ತಾಗಬಹುದು.

August-08-2025-Daily-Horoscope-Prediction-For-12-Zodiac-Signs-In-Kannada

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ದಿನ ಬಹಳ ಅನುಕೂಲ. ನೀವು ಅಂದುಕೊಂಡ ಕೆಲಸ ನೆರವೇರಲಿದೆ. ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಧನಾತ್ಮಕ ಬದಲಾವಣೆ ನೋಡಬಹುದು. ಆಪ್ತರೊಬ್ಬರಿಂದ ಮಾನಸಿಕ ನೆಮ್ಮದಿ ಹಾಳಾಗುವಂತಹ ವಿಚಾರ ಕೇಳಬಹುದು.

ಕರ್ಕ ರಾಶಿ

ಕರ್ಕ ರಾಶಿಯ ಮಂದಿಗೆ ಈ ದಿನವು ಉತ್ತಮವಾಗಿರಲಿದೆ. ಲಕ್ಷ್ಮಿ ದೇವಿಯ ಆಶೀರ್ವಾದದ ಕಾರಣ ನಿಮಗೆ ಉತ್ತಮ ಲಾಭವಿದೆ. ವ್ಯಾಪಾರ ವರ್ಗವು ಈ ಸಮಯದಲ್ಲಿ ಬಹಳ ದೊಡ್ಡ ಕೆಲಸಗಳಿಗೆ ಮುಂದಾಗುತ್ತೀರಿ. ಸಂಬಂಧಿಕರ ಭೇಟಿ ಮಾಡಬಹುದು.

ಸಿಂಹ ರಾಶಿ

ಸಿಂಹ ರಾಶಿಯ ಜನರಿಗೆ ಬಹಳ ಅನುಕೂಲಕರ ದಿನ. ನಿಮ್ಮ ಆಸೆಗಳಂತೆ ಈ ದಿನ ಹೊಸ ವಸ್ತು ಖರೀದಿಗೆ ಉತ್ತಮ ಸಮಯ. ಹಣಕಾಸಿನ ವಿಚಾರದಲ್ಲಿ ನಿಮಗೆ ಬಹಳ ಲಾಭವಿದೆ. ನಿಮ್ಮ ವ್ಯವಹಾರ ಪ್ರಗತಿಗೆ ಉತ್ತಮ ಸಮಯವಿದು. ಹೊಸದಾಗಿ ಉದ್ಯೋಗ ಹುಡುಕುತ್ತಿದ್ದವರಿಗೆ, ಸ್ವಂತ ಉದ್ಯೋಗ ಮಾಡುತ್ತಿದ್ದ ಮಂದಿಗೆ ಉತ್ತಮ ಫಲಿತಾಂಶ ನೀಡುವ ದಿನವಾಗಿರಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಿಗೆ ಬಹಳ ಆರಾಮದಾಯಕ ದಿನ. ಮನೆಯ ವಾತಾವರಣದಲ್ಲಿ ಶಾಂತಿ ಇರಲಿದೆ. ನಿಮ್ಮ ಭವಿಷ್ಯದ ವ್ಯವಹಾರಕ್ಕೆ ನೀವು ಇಂದು ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತೀರಿ. ಹಣಕಾಸಿನ ಸವಾಲು ಅಂತ್ಯದತ್ತ ಬರಲಿದೆ. ದಾಂಪತ್ಯದಲ್ಲಿ ಸಂತಸ ದಿನವಾಗಿರಲಿದೆ.

ತುಲಾ ರಾಶಿ

ತುಲಾ ರಾಶಿಯ ಜನರಿಗೆ ಬಹಳ ಅನುಕೂಲವಿದೆ. ನಿಮ್ಮ ಹಲವು ಕೆಲಸಗಳಿಗೆ ಬೆಂಬಲವಾಗಿ ಹಲವರು ನಿಲ್ಲಬಹುದು. ನಿಮ್ಮ ವ್ಯವಹಾರ ಸಂಬಂಧವಾಗಿ ಇದ್ದಂತಹ ದೊಡ್ಡ ವಿಚಾರಗಳು ಲಾಭದಾಯಕವಾಗಲಿವೆ. ವಾಹನ ಸವಾರರು ಎಚ್ಚರಿಕೆ ವಹಿಸಬೇಕಿದೆ.

ವೃಶ್ಚಿಕ ರಾಶಿ

ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸಿ. ನಿಮ್ಮ ಅನೇಕ ವಿಚಾರಗಳಲ್ಲಿ ಮತ್ತೊಬ್ಬರ ಹಸ್ತಕ್ಷೇಪ ಬರಬಹುದು. ಅನೇಕ ಬಗೆಯ ಕೆಲಸಗಳನ್ನು ನೀವೊಬ್ಬರೆ ಮಾಡಬೇಕಾಗಬಹುದು. ಪ್ರಯಾಣಗಳಿಗೆ ತಯಾರಿ ಮಾಡಿಕೊಳ್ಳಬಹುದು.

ಧನು ರಾಶಿ

ಧನು ರಾಶಿಯ ಜನರಿಗೆ ದೊಡ್ಡ ಸವಾಲು ಇರಬಹುದು. ಆದ್ರೆ ನಿಮ್ಮ ಬುದ್ದಿವಂತಿಕೆಯಿಂದ ಅದನ್ನು ನಿಭಾಯಿಸುವಿರಿ. ಯಾರಿಂದಾದರು ಹಣಕ್ಕಾಗಿ ಮನವಿ ಮಾಡಿದ್ದರೆ ಅದರಿಂದ ಶುಭಕರ ಲಾಭವಿದೆ. ಅನಗತ್ಯ ಮಾತುಕತೆಯು ನಿಮಗೆ ಸಮಸ್ಯೆ ತರಬಹುದು.

ಮಕರ ರಾಶಿ

ಮಕರ ರಾಶಿಯವರಿಗೆ ಈ ದಿನವು ಸಾಮಾನ್ಯವಾಗಿರಲಿದೆ, ನಿಮ್ಮ ಆದಾಯಕ್ಕಿಂತಲೂ ಈ ದಿನ ಖರ್ಚು ಹೆಚ್ಚಾಗಬಹುದು. ಗೃಹಿಣಿಯರಿಗೆ ಈ ದಿನವು ಬಹಳ ಉತ್ತಮವಾಗುತ್ತದೆ. ನೀವು ಈ ದಿನ ಕೆಲಸದ ಕಾರಣಕ್ಕೆ ಪ್ರಯಾಣಿಸಬೇಕಾಗಬಹುದು.

ಕುಂಭ ರಾಶಿ

ಕುಂಭ ರಾಶಿಯ ಜನರಿಗೆ ಈ ದಿನ ಹೆಚ್ಚು ಶ್ರಮದಾಯಕ. ಕೆಲಸದ ಒತ್ತಡದ ನಡುವೆ ನೀವು ವೈಯಕ್ತಿಕ ಕೆಲಸಗಳ ಮಾಡಬೇಕಾಗಬಹುದು. ಸಭೆ, ಸಮಾರಂಭಗಳಲ್ಲಿ ನೀವು ಭಾಗಿಯಾಗಬಹುದು. ನೀವು ಇತರರಿಗೆ ಇಂದು ಹಣಕಾಸಿನ ಸಹಾಯ ಮಾಡಬಹುದು.

ಮೀನ ರಾಶಿ

ಮೀನ ರಾಶಿಯ ಜನರಿಗೆ ಈ ದಿನವು ಅಚ್ಚರಿಯ ಫಲಿತಾಂಶಗಳ ತರಬಹುದು. ಬಹಳ ಸಮಯದಿಂದ ಕಾಡುತ್ತಿದ್ದ ಹಣಕಾಸಿನ ಸಮಸ್ಯೆಯೊಂದು ನಿವಾರಣೆಯಾಗಬಹುದು. ಆರೋಗ್ಯದಲ್ಲಿ ದಿಢೀರ್ ಚೇತರಿಕೆ ಕಾಣುವಿರಿ. ಪ್ರಯಾಣದಲ್ಲಿ ಉತ್ತಮ ಫಲಿತಾಂಶ ನಿಮ್ಮದಾಗಬಹುದು.

English summary

August-08-2025-Daily-Horoscope-Prediction-For-12-Zodiac-Signs-In-Kannada

Here is August 08 daily horoscope prediction for 12 zodiac signs read on..
Story first published: Friday, August 8, 2025, 5:00 [IST]
X
Desktop Bottom Promotion