Daily Horoscope: ಆಗಸ್ಟ್ 07 ಗುರುವಾರ ಯಾರ ಮೇಲಿದೆ ರಾಯರ ಆಶೀರ್ವಾದ

ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 07ರಂದು ನಿಮ್ಮ ರಾಶಿಯಲ್ಲಿ ಯಾವ ರೀತಿ ಫಲವಿದೆ ನೋಡಿ!

ಮೇಷ ರಾಶಿ

ಇಂದು ನಿಮಗೆ ಒತ್ತಡ ಮತ್ತು ತೊಂದರೆಗಳಿಂದ ತುಂಬಿದ ದಿನವಾಗಿರುತ್ತದೆ. ನಿಮ್ಮ ಮಕ್ಕಳ ಕೆಲಸದ ಬಗ್ಗೆ ನೀವು ಸ್ವಲ್ಪ ಚಿಂತೆಗೆ ಒಳಗಾಗಬಹುದು. ನಿಮ್ಮ ಕೆಲವು ದೈಹಿಕ ಸಮಸ್ಯೆಗಳನ್ನು ನೀವು ನಿರ್ಲಕ್ಷಿಸುವುದನ್ನು ತಪ್ಪಿಸಿ. ಅಪಾಯಕಾರಿ ಕೆಲಸಗಳಲ್ಲಿ ತೊಡಗುವವರು ಎಚ್ಚರ ವಹಿಸಬೇಕು.

ವೃಷಭ ರಾಶಿ

ಇಂದು ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಲಿದೆ. ವಾಹನ ಚಲಾಯಿಸುವವರು ಬಹಳ ಎಚ್ಚರಿಕೆಯಿಂದ ಚಲಾಯಿಸಬೇಕಿದೆ. ನಿಮ್ಮ ಆಪ್ತರಿಂದ ಹಣಕಾಸಿನ ನೆರವು ಪಡೆಯುತ್ತೀರಿ. ಕಚೇರಿ ವಿಚಾರವಾಗಿ ನಿಮಗೆ ಉತ್ತಮ ದಿನ. ಗೃಹಿಣಿಯರಲ್ಲಿ ಸಂತಸದ ದಿನವಾಗಿರಲಿದೆ. ನಿಮ್ಮ ವ್ಯವಹಾರದಲ್ಲಿ ಕೆಲ ಬದಲಾವಣೆ ಮಾಡಬೇಕಾಗುತ್ತದೆ.

August-07-2025-Daily-Horoscope-Prediction-For-12-Zodiac-Signs-In-Kannada

ಮಿಥುನ ರಾಶಿ

ಇಂದು ನೀವು ಪ್ರಗತಿಯ ಹಾದಿ. ವ್ಯವಹಾರಗಳಿಗೆ ಸಂಬಂಧಿಸಿದ ವಿಷಯಗಳಿಗೆ ನೀವು ಸಂಪೂರ್ಣ ಗಮನ ಹರಿಸಬೇಕಾಗುತ್ತದೆ. ಯಾವುದೇ ಕಾನೂನು ವಿಷಯಕ್ಕೆ ಸಂಬಂಧಿಸಿದಂತೆ ನೀವು ಇತರರಿಂದ ಸಲಹೆ ಪಡೆಯಬಹುದು. ಹಣ ಖರ್ಚಾಗುವ ದಿನ ಸಾಲ ತೀರಲಿಸಲು ನೀವು ಮುಂದಾಗಬಹುದು.

ಕರ್ಕ ರಾಶಿ

ಇಂದು ನೀವು ಚಿಂತನಶೀಲವಾಗಿ ಕೆಲಸಗಳ ಮಾಡುವ ದಿನ. ನಿಮ್ಮ ವ್ಯವಹಾರದ ಬಗ್ಗೆ ನೀವು ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತೀರಿ. ಸ್ವಲ್ಪ ಯೋಚಿಸಿ ಪಾಲುದಾರಿಕೆ ಮಾಡಿಕೊಳ್ಳಿ. ಕುಟುಂಬಸ್ಥರಿಂದ ಯಾವುದಾದರು ವಿಚಾರವಾಗಿ ನೀವು ಒತ್ತಡ ಎದುರಿಸಬಹುದು. ಪ್ರಯಾಣ ಮಾಡಬಹುದು.

ಸಿಂಹ ರಾಶಿ

ಇಂದು ನಿಮಗೆ ಸಂತೋಷದ ದಿನವಾಗಿರುತ್ತದೆ. ನಿಮ್ಮ ಬಾಕಿ ಇರುವ ಯಾವುದೇ ಒಪ್ಪಂದ, ಕೆಲಸ ಪೂರ್ಣ ಆಗಲಿದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಉತ್ತಮ ದಿನ. ಸ್ವಂತ ಉದ್ಯೋಗ ಮಾಡುತ್ತಿರುವವರು ಹಾಗೆ ಮಾಡಲು ಆಲೋಚಿಸಿದ್ದವರಿಗೆ ಉತ್ತಮ ದಿನ.

ಕನ್ಯಾ ರಾಶಿ

ನಿಮಗಿಂದು ಮಿಶ್ರ ಫಲದ ದಿನವಾಗಿರಲಿದೆ. ನಿಮಗೆ ಮೂರನೆ ವ್ಯಕ್ತಿಯಿಂದ ಸಮಸ್ಯೆ ಬರಬಹುದು. ವ್ಯಾಪಾರಿಗಳಿಗೆ ಹೊಸ ರೀತಿ ಉತ್ಸಾಹ ತುಂಬುವ ದಿನ. ಗೃಹಿಣಿಯರ ಆದಾಯ ಹೆಚ್ಚಳ ಆಗುವ ನಿರೀಕ್ಷೆ ಇದೆ. ಮನೆಗಾಗಿ ಹಲವು ವಸ್ತು ನೀವು ಖರೀದಿಸಬಹುದು.

ತುಲಾ ರಾಶಿ

ಇಂದು ನಿಮಗೆ ಏರಿಳಿತಗಳಿಂದ ತುಂಬಿದ ದಿನವಾಗಿರುತ್ತದೆ. ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಯಾವುದಾದರು ಹಳೆಯ ಸಮಸ್ಯೆ ಮತ್ತೆ ಉದ್ಭವವಾಗಬಹುದು. ವೈದ್ಯರನ್ನು ಸಂಪರ್ಕಿಸಬೇಕಾದ ಅನಾರೋಗ್ಯ ಬರಬಹುದು. ಖರ್ಚುಗಳ ಮೇಲೆ ನಿಗಾ ಇಡಿ.

ವೃಶ್ಚಿಕ ರಾಶಿ

ಇಂದು ನೀವು ಹೆಚ್ಚುತ್ತಿರುವ ಖರ್ಚುಗಳ ಬಗ್ಗೆ ಗಮನ ಹರಿಸಬೇಕಾದ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಆಪ್ತರ ಸಹಕಾರ ಇರಲಿದೆ. ಭವಿಷ್ಯದ ಕುರಿತಾದ ನಿಮ್ಮ ಚಿಂತೆ ದೊಡ್ಡದಾಗಬಹುದು. ಮನೆಯಲ್ಲಿ ಅಶಾಂತಿಗೆ ಕಾರಣವಾಗುವ ಒಂದು ಒತ್ತಡದ ವಾತಾವರಣ ಇರಬಹುದು.

ಧನು ರಾಶಿ

ಇಂದು ನೀವು ನಿಮ್ಮ ಆದಾಯದ ಮೇಲೆ ಗಮನಹರಿಸಬೇಕಾದ ದಿನ. ಸರ್ಕಾರಿ ಕಾಗದ ಪತ್ರ, ದಾಖಲೆಗಳ ವಿಚಾರದಲ್ಲಿ ಶುಭವಿದೆ. ಕೌಟುಂಬಿಕ ಹಾಗೂ ದಾಂಪತ್ಯದಲ್ಲಿನ ಒತ್ತಡದ ವಿಚಾರವೊಂದು ತಿಳಿಯಾಗಲಿದೆ. ಗೃಹಿಣಿಯರಲ್ಲಿ ಸಣ್ಣ ಪುಟ್ಟ ಅನಾರೋಗ್ಯ ಕಾಡಬಹುದು. ವಿವಾಹಿತರ ಜೀವನದಲ್ಲಿ ಹೊಸ ಅತಿಥಿ ಬರಬಹುದು.

ಮಕರ ರಾಶಿ

ಇಂದು ನಿಮಗೆ ಸಾಮಾನ್ಯ ದಿನವಾಗಿರುತ್ತದೆ. ಯಾವುದೇ ವ್ಯವಹಾರ, ಒಪ್ಪಂದ ಮಾಡಿಕೊಳ್ಳುವ ಮುನ್ನ ಬಹಳ ಎಚ್ಚರಿಕೆ ವಹಿಸಿ. ವಾಹನ ಸಂಬಂಧಿ ಖರ್ಚ ಕಾಡಬಹುದು. ಸಾಲ ತೀರಿಸಲು ಪ್ರಯತ್ನಿಸಿ. ಯಾರೊಂದಿಗೂ ಅನಗತ್ಯ ವಿಚಾರದಲ್ಲಿ ಚರ್ಚೆ ಮಾಡಬೇಡಿ. ವಿವಾಹಿತರಲ್ಲಿ ಅನಾರೋಗ್ಯ ಕಾಡಬಹುದು.

ಕುಂಭ ರಾಶಿ

ಇಂದು ನೀವು ಸಂತಸದಿಂದ ಕಳೆಯುವ ದಿನ ಎನ್ನಬಹುದು. ಪೂರ್ವ ನಿಯೋಜಿತ ಕೆಲಸದಲ್ಲಿ ನೀವು ಭಾಗಿಯಾಗುತ್ತೀರಿ. ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ಪಡೆಯಬಹುದು. ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಹುಡುಕಿ ಬರಬಹುದು.

ಮೀನ ರಾಶಿ

ಮೀನ ರಾಶಿಯವರಿಗೆ ಅಧಿಕ ಖರ್ಚಿನ ದಿನ ಎನ್ನಬಹುದು. ನಿಮ್ಮ ಅನೇಕ ಕೆಲಸಗಳಲ್ಲಿ ಖರ್ಚು ಹೆಚ್ಚಾಗುತ್ತದೆ. ಮನೆ ಸಂಬಂಧ ಹೊಸ ವಸ್ತ ಖರೀದಿಗೆ ಸೂಕ್ತ ದಿನ. ಉಳಿತಾಯದ ಹಣವನ್ನು ಬೇರೆ ಕೆಲಸಕ್ಕೆ ಬಳಸದೆ ಇರುವುದು ಉತ್ತಮ.

English summary

August-07-2025-Daily-Horoscope-Prediction-For-12-Zodiac-Signs-In-Kannada

Here is August 07 daily horoscope prediction for 12 zodiac signs read on..
Story first published: Thursday, August 7, 2025, 5:00 [IST]
X
Desktop Bottom Promotion