Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
Daily Horoscope: ಆಗಸ್ಟ್ 06 ಬುಧವಾರ ಕಾದಿದೆ ಲಾಭದಾಯಕ
ವೃದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 06ರಂದು ನಿಮ್ಮ ರಾಶಿಯಲ್ಲಿ ಯಾವ ರೀತಿ ಫಲವಿದೆ ನೋಡಿ!
ಮೇಷ ರಾಶಿ
ಮೇಷ ರಾಶಿಯವರು ಈ ದಿನ ಬಹಳ ಓಡಾಟದಲ್ಲಿ ಕಳೆಯಬಹುದು. ನಿಮ್ಮ ಹಲವು ಕೆಲಸಗಳಲ್ಲಿ ಅಡ್ಡಿಗಳು ಎದುರಾಗಲಿದೆ. ಅದರಲ್ಲೂ ಹಣಕಾಸಿನ ವಿಚಾರದಲ್ಲಿ ನಿಮಗೆ ಬಹಳ ದೊಡ್ಡ ಅಡ್ಡಿ ಇದೆ. ನೀವು ಅಂದುಕೊಂಡಂತೆ ನಡೆಯದೆ ಇರಬಹುದು.
ವೃಷಭ ರಾಶಿ
ವೃಷಭ ರಾಶಿಯ ಜನರು ಕೌಟುಂಬಿಕ ಸಮಸ್ಯೆಗಳ ಕಾರಣ ಒತ್ತಡದಲ್ಲಿ ಕಳೆಯಬಹುದು. ಆಪ್ತರೊಬ್ಬರ ದೂರವಾಣಿ ಕರೆಯಿಂದ ನಿಮ್ಮಲ್ಲಿ ಚಂಚಲ ಮನಸ್ಥಿತಿ ಉಂಟಾಗಬಹುದು. ಆರೋಗ್ಯದಲ್ಲಿ ಏರುಪೇರಾಗುವ ಸಂಭವವೂ ಇರಲಿದೆ. ಪ್ರಯಾಣ ಮಾಡಬೇಕಾಗಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ದಿನವು ಬಹಳ ಅನುಕೂಲ ತರಲಿದೆ, ನಿಮ್ಮ ಹಲವು ಕೆಲಸಗಳು ಅಂದುಕೊಂಡಂತೆ ನಡೆಯಲಿದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಹುಡುಕಿ ಬರಬಹುದು. ವಿದ್ಯಾರ್ಥಿಗಳು ಹಣಕಾಸು ಕುರಿತಾದ ಚಿಂತೆಗೆ ಒಳಗಾಗಬಹುದು. ವಾಹನ ಸವಾರರು ಎಚ್ಚರಿಕೆ ವಹಿಸಬೇಕಿದೆ.
ಕರ್ಕ ರಾಶಿ
ಈ ರಾಶಿಯವರಿಗೆ ಈ ದಿನವು ದೊಡ್ಡ ಅಡ್ಡಿಗಳ ಉಂಟು ಮಾಡುವ ದಿನ. ನಿಮ್ಮ ವ್ಯಾಪಾರ, ವ್ಯವಹಾರ, ಕೆಲಸ, ವೃತ್ತಿ, ದಾಂಪತ್ಯ ಜೀವನ ಹೀಗೆ ಯಾವುದಾದರು ವಿಚಾರದಲ್ಲಿಂದು ಅಡಚಣೆ ನೋಡಬಹುದು. ಸವಾಲುಗಳನ್ನು ನೀವು ಎದುರಿಸಬೇಕಾಗಬಹುದು. ಬಹಳ ಶ್ರಮ ಹಾಕಿ ಕೆಲಸ ಮಾಡಬೇಕಾದ ದಿನವಿದು.
ಸಿಂಹ ರಾಶಿ
ಸಿಂಹ ರಾಶಿಯವರಲ್ಲಿ ಹಣಕಾಸು ಕುರಿತ ಚಿಂತೆ ಕಾಡಲಿದೆ. ಲೆಕ್ಕ ಪತ್ರ, ಹಿಂದೆ ನೀಡಿದ್ದ ಹಣದ ವಿಚಾರವಾಗಿ ನಿಮ್ಮ ಬಳಿ ಗೊಂದಲಗಳು, ಚರ್ಚೆಗಳು ಉಂಟಾಗಬಹುದು. ಸ್ವಂತ ಉದ್ಯೋಗ ಮಾಡುವವರಿಗೆ ಸಮಸ್ಯಾತ್ಮಕ ದಿನವಿದು. ಪ್ರೀತಿಯಲ್ಲಿ ನಿಮ್ಮ ದಿನ ಸಂತೋಷವಾಗಿ ಕಳೆಯಲಿದ್ದೀರಿ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಈ ದಿನವು ಅನುಕೂಲಕರ. ಗೃಹಿಣಿಯರಲ್ಲಿದ್ದ ಅನಾರೋಗ್ಯ ಸಮಸ್ಯೆಯೊಂದು ಬಗೆಹರಿಯಲಿದೆ. ಹಲವು ರೀತಿಯಲ್ಲಿ ಆದಾಯ ಹೆಚ್ಚಾಗಬಹುದು. ಮಕ್ಕಳ ಕುರಿತ ಚಿಂತೆಯೊಂದು ದೂರಾಗಬಹುದು. ಹೊಸ ಕೆಲಸಗಳಿಗೆ ನೀವು ತಯಾರಿ ಮಾಡಿಕೊಳ್ಳುವಿರಿ.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ದಿನ ಅದ್ಭುತ ಫಲಿತಾಂಶಗಳ ತರಬಹುದು. ಬಹಳ ದಿನಗಳ ನಿಮ್ಮ ಶ್ರಮವು ಈ ದಿನ ಫಲಿತಾಂಶ ತರಲಿದೆ. ನಿಮ್ಮ ಬ್ಯಾಂಕಿಂಗ್, ವ್ಯವಹಾರ ಸಂಬಂಧವಾಗಿ ಮುಂದುವರೆಯಲು ಬಹಳ ಉತ್ತಮ ದಿನ. ತಂದೆ-ತಾಯಿ ಅಥವಾ ಮನೆ ಹಿರಿಯರ ಆರೋಗ್ಯದ ಕುರಿತು ಕಾಳಜಿ ಇಡಿ.
ವೃಶ್ಚಿಕ ರಾಶಿ
ವಶ್ಚಿಕ ರಾಶಿಯವರಲ್ಲಿ ಈ ದಿನವು ಮಿಶ್ರ ಫಲ ನೋಡಬಹುದು. ನಿಮ್ಮ ಅನೇಕ ಕೆಲಸದಲ್ಲಿ ಮೇಲುಗೈ ಸಾಧಿಸುತ್ತೀರಿ. ಆದರೆ ಕೆಲವು ಫಲಿತಾಂಶಗಳು ತೃಪ್ತಿ ತರುವುದಿಲ್ಲ. ಅಗತ್ಯ ವಸ್ತುಗಳಿಗಾಗಿ ಖರ್ಚು ಮಾಡುವಿರಿ. ಗೃಹಿಣಿಯರು ಖರ್ಚುಗಳ ಮೇಲೆ ನಿಗಾ ಇಡಿ.
ಧನು ರಾಶಿ
ಧನು ರಾಶಿಯ ಅವಿವಾಹಿತರಿಗೆ ಇಂದು ಉತ್ತಮ ದಿನ. ಯಾವುದಾದರು ಶುಭ ಕಾರ್ಯದ ಸಂಬಂಧ ನೀವು ಪ್ರಯಾಣಿಸಬಹುದು. ಆಪ್ತರೊಬ್ಬರಿಂದ ನಿಮಗೆ ಯಾವುದಾದರು ವಿಚಾರವಾಗಿ ಸಹಕಾರ ಇರಲಿದೆ.
ಮಕರ ರಾಶಿ
ಮಕರ ರಾಶಿಯವರು ಈ ದಿನದಂದು ಸವಾಲುಗಳು ಎದುರಿಸುವಿರಿ. ವಾಹನ ಸಂಬಂಧಿ ಖರ್ಚು ಅಥವಾ ಎಚ್ಚರಿಕೆ ವಹಿಸಬೇಕಿದೆ. ವ್ಯಾಪಾರಿ ವರ್ಗಕ್ಕೆ ಉತ್ತಮ ದಿನವಾಗಿರಲಿದೆ. ದಾಂಪತ್ಯದಲ್ಲಿ ಸುಖ ಇರಲಿದೆ. ಚಿಕ್ಕ ಪುಟ್ಟ ಅನಾರೋಗ್ಯ ಸಮಸ್ಯೆಯ ನಿರ್ಲಕ್ಷ್ಯ ಮಾಡಬೇಡಿ.
ಕುಂಭ ರಾಶಿ
ಕುಂಭ ರಾಶಿಯವರಲ್ಲಿ ಮಿಶ್ರ ದಿನ. ನೀವು ನವವಿವಾಹಿರಾಗಿದ್ದರೆ ಈ ದಿನ ಖರ್ಚು ಹೆಚ್ಚಾಗಲಿದೆ. ದಾಂಪತ್ಯ ವಿಚಾರವಾಗಿ ಸಣ್ಣ ಪುಟ್ಟ ಮನಸ್ತಾಪ ಎದುರಿಸುವಿರಿ. ಗೃಹಿಣಿಯರಿಗೆ ಇಂದು ವೆಚ್ಚದಾಯಕ ದಿನ.
ಮೀನ ರಾಶಿ
ಮೀನ ರಾಶಿಯವರಲ್ಲಿ ಈ ದಿನವು ದೊಡ್ಡ ಅನುಕೂಲ ತರುವ ದಿನ. ನೀವು ಅಂದುಕೊಂಡಂತೆ ನಿಮ್ಮ ಹಣಕಾಸು ಸ್ಥಿತಿಯಲ್ಲಿನ ಬದಲಾವಣೆ ಬರಬಹುದು. ಸಾಲ ಕಡಿಮೆಯಾಗಲಿದೆ. ವಾಹನ ಲಾಭ ದಿನವಿದು. ಮನೆಗಾಗಿ ಹೊಸ ವಸ್ತು ತರಬಹುದು. ಯಾರೊಂದಿಗಾದರು ಮನಸ್ತಾಪ ಉಂಟಾಗಬಹುದು.



Click it and Unblock the Notifications