Latest Updates
-
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ
Daily Horoscope: ಆಗಸ್ಟ್ 05ರ ಮಂಗಳವಾರ ನಿಮ್ಮ ರಾಶಿಯಲ್ಲಿ ಏನಿದೆ?
ವೃದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 05ರಂದು ನಿಮ್ಮ ರಾಶಿಯಲ್ಲಿ ಯಾವ ರೀತಿ ಫಲವಿದೆ ನೋಡಿ!
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನ ಮಿಶ್ರ ಆಗಿರಲಿದೆ. ನೀವು ಅಂದುಕೊಂಡಂತೆ ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸ ಮುಗಿಯದೆ ಇರಬಹುದು. ನಿಮ್ಮ ಹಣಕಾಸು ವಿಚಾರವಗಿ ಬಹಳ ಎಚ್ಚರಿಕೆ ವಹಿಸಿ. ಖರ್ಚು ಮಾಡುವ ಮುನ್ನ ಮತ್ತೊಮ್ಮೆ ಆಲೋಚಿಸಿ. ವ್ಯಾಪಾರಿಗಳಿಗೆ ಮಿಶ್ರ ದಿನವಾಗಿರಲಿದೆ.
ವೃಷಭ ರಾಶಿ
ಇಂದು ನಿಮ್ಮ ರಾಶಿಯಲ್ಲಿ ಹೆಚ್ಚು ಖರ್ಚು ಇರುವ ದಿನ. ಸರ್ಕಾರಿ ನೌಕರರು ಇಂದು ಬಹಳ ಖರ್ಚು ಮಾಡುತ್ತಾರೆ. ನಿಮ್ಮ ದಾಂಪತ್ಯ ವಿಚಾರವಾಗಿ ಮೂರನೇ ವ್ಯಕ್ತಿಯಿಂದ ಸಮಸ್ಯೆ ಬರಬಹುದು. ದೇವಾಲಯ ಭೇಟಿಗೆ ಮುಂದಾಗಬಹುದು. ಮಕ್ಕಳ ವಿಚಾರವಾಗಿ ನೀವು ಪ್ರಯಾಣಿಸಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಮಂದಿಗೆ ಈ ದಿನ ಬಹಳ ಅನುಕೂಲಕರ ದಿನ. ನಿಮ್ಮ ಹಣಕಾಸು ಪರಿಸ್ಥಿತಿಯಲ್ಲಿ ಧನಾತ್ಮಕ ಬದಲಾವಣೆಗೆ ಈ ದಿನ ಕಾರಣವಾಗುತ್ತಿದೆ. ನಿಮ್ಮ ವ್ಯಾಪಾರದಲ್ಲಿ ಲಾಭವಿದೆ. ಪ್ರಯಾಣ ಮಾಡಬೇಕಾಗಿ ಬರಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಈ ದಿನ ಮಿಶ್ರ ಫಲದ ದಿನ. ನಿಮ್ಮ ಹಲವು ಕಾರ್ಯಗಳಲ್ಲಿ ಧನಾತ್ಮಕ ಸ್ಥಿತಿ ಇರಲಿದೆ. ಆಪ್ತರೊಬ್ಬರು ನಿಮ್ಮನ್ನು ಭೇಟಿಯಾಗಲಿದ್ದಾರೆ. ಇದರಿಂದ ನಿಮ್ಮ ದಿನ ಸಂತಸದಲ್ಲಿ ಕಳೆಯಲಿದ್ದೀರಿ.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಉತ್ತಮ ದಿನ. ನಿಮ್ಮಲ್ಲಿದ್ದ ಬಹುದೊಡ್ಡ ಗೊಂದಲವೊಂದು ನಿವಾರಣೆಯಾಗಲಿದೆ. ಔದ್ಯೋಗಿಕ ವಿಚಾರವಾಗಿ ಲಾಭದಾಯಕ ದಿನ. ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಬಹುದು. ಸ್ನೇಹಿತರ ಜೊತೆ ಪ್ರಯಾಣ ಮಾಡಬೇಕಾಗಿ ಬರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಲ್ಲಿ ಇಂದು ಸವಾಲು ಎದುರಾಗಬಹುದು. ನಿಮ್ಮ ಖರ್ಚುಗಳ ಕಾರಣದಿಂದ ಒತ್ತಡದಲ್ಲಿ ಕಳೆಯುವಿರಿ. ಮಕ್ಕಳ ಕುರಿತ ಖರ್ಚು ಹೆಚ್ಚಾಗಬಹುದು. ಗೃಹಿಣಿಯರಲ್ಲಿ ಅನಾರೋಗ್ಯ ಸಂಭವಿಸಬಹುದು.
ತುಲಾ ರಾಶಿ
ತುಲಾ ರಾಶಿಯವರು ಈ ದಿನದಂದು ಸವಾಲುಗಳಿದ್ದರೂ ಅದನ್ನು ಎದುರಿಸುವರು. ಬಹಳ ದಿನದಿಂದ ನೀವು ಬಯಸಿದ್ದ ವಸ್ತು ಖರೀದಿಗೆ ಹಣ ಒಟ್ಟು ಮಾಡಬಹುದು. ಹೂಡಿಕೆಯಲ್ಲಿ ಲಾಭವಿದೆ. ಮನೆಯಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆ ಇರಲಿದೆ. ವಾಹನ ಸಂಬಂಧವಾಗಿ ಎಚ್ಚರಿಕೆ ಇಂದ ಇರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಿಗೆ ಈ ದಿನ ಬಹಳಷ್ಟು ದೊಡ್ಡ ಕೆಲಸಗಳ ಮಾಡುವ ದಿನ. ಮನೆ ಬದಲಾಯಿಸುವುದು, ನಿರ್ಮಾಣ ಕಾರ್ಯದಲ್ಲಿರುವವರಿಗೆ ಶುಭ ದಿನ. ಭವಿಷ್ಯದ ದಿನಗಳ ಕುರಿತಾಗಿ ಬಹಳ ಆಲೋಚಿಸುತ್ತೀರಿ. ಬೇರೆಯವರ ವಾಹನ ಬಳಸುವಾಗ ಎಚ್ಚರ ಇಡಿ.
ಧನು ರಾಶಿ
ಧನು ರಾಶಿಯವರಿಗೆ ಕೆಲಸದ ಒತ್ತಡ ಇರುವ ದಿನ. ಗೃಹಿಣಿಯರಲ್ಲಿ ಕುಟುಂಬ ವಿಚಾರವಾಗಿ ಬಹಳ ಒತ್ತಡ ಕಾಡಬಹುದು. ವಿದ್ಯಾರ್ಥಿಗಳು ಹೊಸ ರೀತಿಯ ಸಮಸ್ಯೆಗೆ ತುತ್ತಾಗಬಹುದು. ಅನಗತ್ಯ ಖರ್ಚುಗಳಿಂದ ದೂರ ಇದ್ದಷ್ಟು ನಿಮಗೆ ಒಳಿತಾಗಲಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಸವಾಲುಗಳಿವೆ. ನಿಮ್ಮ ದೈನಂದಿನ ಕೆಲಸಗಳಲ್ಲಿ ಅಡ್ಡಿ ಎದುರಾಗಬಹುದು. ನಿಮ್ಮ ಹೊಸ ವ್ಯಾಪಾರಗಳ ಕುರಿತಾದ ಮಹತ್ವದ ನಿರ್ಧಾರ ತೆಗೆದುಕೊಳ್ಳಬಹುದು. ಯಾರಿಂದಾದರು ಹಣ ಬರಬೇಕಿದ್ದರೆ ಇಂದು ಪ್ರಯತ್ನಿಸಿ.
ಕುಂಭ ರಾಶಿ
ಕುಂಭ ರಾಶಿಯವರು ಈ ದಿನ ಓಡಾಟದಲ್ಲಿ ಕಳೆಯಬಹುದು. ಕೆಲಸದ ವಿಚಾರವಾಗಿ, ಬೇರೆಯವರ ವಿಚಾರದಲ್ಲಿ ನೀವು ಪ್ರಯಾಣ ಮಾಡಬೇಕಾಗಿ ಬರಬಹುದು. ಕೌಟುಂಬಿಕ ವಿಚಾರವಾಗಿ ಬೇಸರದ ದಿನ. ಮಕ್ಕಳ ಆರೋಗ್ಯದ ಕುರಿತು ಎಚ್ಚರಿಕೆ ಇಡಿ.
ಮೀನ ರಾಶಿ
ಮೀನ ರಾಶಿಯವರಿಗೆ ಈ ದಿನ ಅನುಕೂಲಕರವಾಗಿರಲಿದೆ. ವ್ಯಾಪಾರಿಗಳಿಗೆ ಲಾಭದಾಯಕ ದಿನ. ಯಾವುದೇ ಹಣಕಾಸು ವ್ಯವಹಾರ ಮಾಡುವಾಗ ಎಚ್ಚರಿಕೆ ವಹಿಸಿ. ಗೃಹಿಣಿಯರಲ್ಲಿ ಆದಾಯ ಹೆಚ್ಚಾಗುವ ಸಂಭವವಿದೆ. ಸಮಯದೊಳಗೆ ನಿಮ್ಮೆಲ್ಲಾ ಕಲಸ ಮುಗಿಸುವಿರಿ.



Click it and Unblock the Notifications











