Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Daily Horoscope: ಆಗಸ್ಟ್ 03ರ ಭಾನುವಾರ ನಿಮ್ಮ ರಾಶಿಫಲದಲ್ಲಿ ಏನಿದೆ?
ಮೇಷ ರಾಶಿ
ಇಂದು ನಿಮಗೆ ಅನುಕೂಲಕ್ಕಿಂತ ಅನಾನುಕೂಲ ಇರಬಹುದು. ದೊಡ್ಡ ಸಮಸ್ಯೆಗಳನ್ನು ನೀವು ನಿರ್ಲಕ್ಷ್ಯ ಮಾಡುವುದು ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದು. ಜಾಗ, ಮನೆ ನವೀಕರಣ ಸಂಬಂಧವಾಗಿ ಖರ್ಚು ಮಾಡಬೇಕಾಗುತ್ತದೆ. ಪ್ರಯಾಣ ಮಾಡಬೇಕಾಗಿ ಬರಬಹುದು.
ವೃಷಭ ರಾಶಿ
ವೃಷಭ ರಾಶಿ ಮಂದಿ ಈ ದಿನ ಬಹಳ ಅನುಕೂಲ. ನಿಮ್ಮ ಹಲವು ಕೆಲಸಗಳಲ್ಲಿ ಇಂದು ಧನಾತ್ಮಕ ಪರಿಣಾಮ ನೋಡುವಿರಿ. ಪ್ರಯಾಣಗಳ ಮಾಡುವಿರಿ. ಸಂಜೆ ಸಮಯದಲ್ಲಿ ಖರ್ಚು ಇರಲಿದೆ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಬಹಳಷ್ಟು ಒತ್ತಡ ಇರಲಿದೆ. ಕೆಲಸದ ವಿಚಾರದಲ್ಲಿ ನಿಮಗೆ ಒತ್ತಡಗಳ ಎದುರಿಸಬಹುದು. ಕೆಲವರು ಈ ದಿನ ಅನಗತ್ಯ ವಿಚಾರವಾಗಿ ಕಲಹಗಳ ಎದುರಿಸಬಹುದು. ಆರೋಗ್ಯದ ಕಡೆ ಗಮನವಿಡಿ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಇಂದು ಮಿಶ್ರ ಫಲದ ದಿನ. ಗೃಹಿಣಿಯರಿಗೆ ಈ ದಿನವು ಬಹಳ ಖರ್ಚಾಗುವ ದಿನ. ಮಕ್ಕಳ ಕುರಿತ ಚಿಂತೆಯು ದೊಡ್ಡದಾಗಬಹುದು. ವಾಹನ ಸಂಬಂಧವಾಗಿ ಖರ್ಚು ಇರಲಿದೆ. ವ್ಯಾಪಾರಿಗಳು ಈ ಸಮಯದಲ್ಲಿ ದೊಡ್ಡ ಲಾಭ ನೋಡಬಹುದು. ಪಾಲುದಾರಿಕೆ ವ್ಯಾಪಾರದಲ್ಲಿ ಲಾಭ ನೋಡಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಲ್ಲಿ ದೊಡ್ಡ ಸವಾಲು ಇರಬಹುದು. ನೀವು ಅಂದುಕೊಂಡಂತೆ ಹಣಕಾಸಿನ ವಿಚಾರದಲ್ಲಿ ಶುಭವಾಗಲಿದೆ. ಆದ್ರೆ ಯಾರಿಗೂ ಸಾಲ ನೀಡಲು ಮುಂದಾಗಬೇಡಿ. ಪ್ರಯಾಣಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುವಿರಿ. ಆಪ್ತರ ಜೊತೆಗೆ ನಿಮ್ಮ ಸಂಬಂಧ ಸುಂದರವಾಗಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಆರ್ಥಿಕ ವಿಚಾರದಲ್ಲಿ ಇಂದು ವಿರಾಮದ ದಿನ. ಬಹಳ ದಿನದಿಂದ ನೀವು ಬಯಸಿದ್ದಂತಹ ವಸ್ತುವೊಂದನ್ನು ಖರೀದಿಸಬಹುದು. ಮನೆಯವರ ಜೊತೆ ಪ್ರಯಾಣ ಮಾಡಬಹಹುದು. ಖರ್ಚುಗಳ ಮೇಲೆ ನಿಗಾ ಇಡಿ.
ತುಲಾ ರಾಶಿ
ತುಲಾ ರಾಶಿಯವರು ಈ ದಿನ ಬಹಳ ಅನುಕೂಲಕರ ದಿನ. ನಿಮ್ಮ ಎಲ್ಲಾ ಕೆಲಸಗಳಲ್ಲಿ ಶುಭ ನೋಡಬಹುದು. ಗೃಹಿಣಿಯರು ಇಂದು ಸಂಬಂಧಿಕರ ಮನೆಗೆ ತೆರಳಬಹುದು. ಔದ್ಯೋಗಿಕ ಒತ್ತಡ ಕಡಿಮೆಯಾಗಲಿದೆ. ಕೆಲಸದ ಸ್ಥಳದಲ್ಲಿ ಎಚ್ಚರಿಕೆ ಇರಲಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಸಮಸ್ಯೆಗಳ ತರುವ ದಿನ. ನಿಮ್ಮ ಹಣಕಾಸಿನ ವಿಚಾರವಾಗಿ ಒತ್ತಡ ಬರಬಹುದು. ಸಾಲ ಹೆಚ್ಚಳ ಆಗುವ ನಿರೀಕ್ಷೆ ಇದೆ. ಆಪ್ತರೊಬ್ಬರಿಗೆ ನಿಮ್ಮಿಂದ ಸಹಾಯ ಆಗಬಹುದು. ಮನೆಯಲ್ಲಿ ಸದಸ್ಯರೊಬ್ಬರು ನಿಮಗೆ ಹಣಕಾಸಿನ ನೆರವು ನೀಡಬಹುದು.
ಧನು ರಾಶಿ
ಧನು ರಾಶಿಯವರಿಗೆ ಮಿಶ್ರ ಫಲದ ದಿನ. ನಿಮ್ಮ ಕೆಲಸಗಳು ಅಪೂರ್ಣ ಆಗಬಹುದು. ಕೆಲವು ಶ್ರಮದಾಯಕ ಕೆಲಸದಲ್ಲೂ ನೀವು ಭಾಗಿಯಾಗಬಹುದು. ನಿಮ್ಮ ಹಳೆಯ ಕೆಲಸಗಳಿಗೆ ಹಣ ಖರ್ಚು ಮಾಡಬಹುದು. ನಿದ್ರೆಗೆ ಸಂಬಂಧಿಸಿದ ಸಮಸ್ಯೆಗೆ ನೀವು ತುತ್ತಾಗಬಹುದು. ಪಂಚೇಂದ್ರಿಯ ಸಂಬಂಧಿ ವಿಚಾರದಲ್ಲೂ ಸಮಸ್ಯೆ ಎದುರಿಸಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಈ ದಿನವು ದೊಡ್ಡ ಸವಾಲುಗಳ ನೋಡಬಹುದು. ನಿಮ್ಮ ಕೆಲವು ವಿಚಾರಗಳಲ್ಲಿ ನಿಮಗೆ ಅಶಾಂತಿ ಇರಬಹುದು. ಹಲವು ಘಟನೆಗಳಿಗೆ ನಿಮ್ಮ ಹಣಕಾಸು ಸ್ಥಿತಿ ಕಾರಣವಾಗಬಹುದು. ಮನೆಯಲ್ಲಿ ನಿಮ್ಮ ಕುರಿತ ಭಾವನೆ ಬದಲಾಗುವ ದಿನ ಎನ್ನಬಹುದು.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಈ ದಿನವು ಅಚ್ಚರಿ ಫಲಿತಾಂಶ ತರಬಹುದು. ಮನೆಯಲ್ಲಿದ್ದ ಸಮಸ್ಯೆಯೊಂದು ನಿವಾರಣೆಯಾಗಬಹುದು. ಅನೇಕ ಕೆಲಸಗಳಲ್ಲಿ ಲಾಭ ಇರಲಿದೆ. ವ್ಯಾಪಾರಿಗಳು ಅಂದುಕೊಂಡ ಫಲಿತಾಂಶ ಪಡೆಯಬಹುದು. ಸ್ನೇಹಿತರೊಂದಿಗೆ ಮನಸ್ತಾಪ ಮೂಡಬಹುದು.
ಮೀನ ರಾಶಿ
ಮೀನ ರಾಶಿಯ ಮಂದಿಗೆ ಈ ದಿನವು ಬಹಳ ಅನುಕೂಲ. ನೀವು ಪ್ರವಾಸದದಲ್ಲಿ ತೊಡಗಬಹುದು. ಆರ್ಥಿಕವಾಗಿ ಸಂತಸದ ದಿನವಾಗಿರಲಿದೆ. ಸ್ವಂತ ಉದ್ಯೋಗ ಮಾಡುವವರಿಗೆ ಈ ದಿನ ಶುಭಕರ. ನಿಮ್ಮ ಆಪ್ತರಿಂದ ಶುಭ ಸುದ್ದಿ ಕೇಳುವಿರಿ.



Click it and Unblock the Notifications