Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Daily Horoscope: ಆಗಸ್ಟ್ 02ರ ಶನಿವಾರ ಯಾರಿಗೆಲ್ಲಾ ಅದೃಷ್ಟದ ದಿನ?
ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 02ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಇಂದು ನಿಮಗೆ ಅನುಕೂಲಕರ ದಿನವಾಗಿರಲಿದೆ. ನಿಮ್ಮ ಆಸೆಯಂತೆ ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಹಲವರು ನಿಮ್ಮ ಗುಣಗಳನ್ನು ಇಂದು ಮೆಚ್ಚಿಕೊಳ್ಳಬಹುದು. ನಿಮ್ಮ ಆತಂಕ ದೂರ ಮಾಡುವ ವಿಚಾರಗಳು ನಡೆಯಲಿವೆ.
ವೃಷಭ ರಾಶಿ
ನಿಮಗಿಂದು ಅಚ್ಚರಿಯ ದಿನ ಎನ್ನಬಹುದು. ಸಮಸ್ಯೆಗಳು ದೂರಾಗುವಂತಹ ಎಲ್ಲಾ ಸಾಧ್ಯತೆಗಳಿವೆ. ಪ್ರಯಾಣಗಳಲ್ಲಿ ನಿಮಗೆ ಶುಭವಾಗಲಿದೆ. ನಿಮ್ಮ ಅನೇಕ ಕೆಲಸಗಳಲ್ಲಿ ಹಣಕಾಸಿನ ಕೊರತೆ ನಿವಾರಣೆಯಾಗಲಿದೆ. ವ್ಯಾಪಾರದಲ್ಲಿ ಪ್ರಗತಿಯ ದಿನ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಮಿಶ್ರ ಹಾಗೂ ಸಾಮಾನ್ಯ ದಿನ. ನಿಮ್ಮ ವಾಹನ ಸಂಬಂಧಿ ವಿಚಾರದಲ್ಲಿ ಮಿಶ್ರ ಫಲವಿದೆ. ಹೂಡಿಕೆಯಲ್ಲಿ ಹೆಚ್ಚಳವಾಗುತ್ತದೆ. ನಿಮ್ಮ ಕೆಲಸಗಳು ಅಂದುಕೊಂಡಿದ್ದ ಸಮಯದಲ್ಲಿ ಮುಗಿಯಲಿದೆ. ನಿಮಗೆ ಬರಬೇಕಿದ್ದ ಹಣ ಬರಬೇಕಾದರೆ ಶ್ರಮ ಹಾಕಬೇಕಿದೆ.
ಕರ್ಕ ರಾಶಿ
ಕರ್ಕ ರಾಶಿಯಲ್ಲಿ ಮಹಿಳೆಯರಿಗೆ ಇಂದು ಸಮಸ್ಯೆಯ ದಿನ. ಆರೋಗ್ಯದಲ್ಲಿ ಏರುಪೇರು ಸಂಭವ. ಹಾಗೆ ಹಣಕಾಸಿನ ವಿಚಾರವಾಗಿ ನಿಮಗೆ ಉತ್ತಮ ಸಮಯ. ದೊಡ್ಡ ಕೆಲಸಗಳನ್ನು ಮಾಡುವಾಗ ನಿಮ್ಮ ನಿರ್ಧಾರಗಳ ಕಡೆಗೆ ಗಮನವಿಡಿ. ಕೌಟುಂಬಿಕ ನೆಮ್ಮದಿ ಇರಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದು ಬಹಳ ಅನುಕೂಲಕರ ದಿನ. ಹಣಕಾಸು ವಿಚಾರವಾಗಿ ನೀವು ಬಯಸಿದಂತಹ ಸಮಯ ಆಗಿರಲಿದೆ, ಎಲ್ಲಾ ಕೆಲಸಗಳು ನೀವು ಅಂದುಕೊಂಡಂತೆ ನೆರವೇರಬಹುದು. ಯಾರೊಂದಿಗಾದರು ಮನಸ್ತಾಪಗಳಿದ್ದರೆ ಪರಿಹಾರವಾಗಲಿದೆ. ವಾಹನ ಚಾಲಕರು ಎಚ್ಚರಿಕೆ ವಹಿಸಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಸಾಮಾನ್ಯ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಇಂದು ಮಿಶ್ರ ಫಲವಿದೆ. ಯಾವುದಾದರು ವಸ್ತು ಖರೀದಿಗೆ ನೀವು ಹಣ ಒಟ್ಟು ಮಾಡುತ್ತಿದ್ದರೆ ಈ ದಿನ ನಿಮಗೆ ಹಣ ಉಳಿತಾಯವಾಗಬಹುದು. ಮನೆಯ ಹಿರಿಯರೊಬ್ಬರ ಆರೋಗ್ಯದಲ್ಲಿನ ಏರುಪೇರು ಚಿಂತಿಸುವಂತೆ ಮಾಡಬಹುದು.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಈ ದಿನದಂದು ಒತ್ತಡ ಕಡಿಮೆಯಾಗಲಿದೆ. ಪ್ರಯಾಣಗಳಲ್ಲಿ ಲಾಭವಿದೆ. ನೀವು ಅಂದುಕೊಂಡವರಿಂದ ಉತ್ತಮ ಸುದ್ದಿ ಕೇಳುತ್ತೀರಿ. ಆಸ್ತಿ ಕುರಿತ ವಿಚಾರದಲ್ಲಿ ಶುಭವಿದೆ. ಗೃಹಿಣಿಯರಿಗೆ ಖರ್ಚು ಮಾಡುವ ದಿನವಾಗಿರಲಿದೆ.
ವೃಶ್ಚಿಕ ರಾಶಿ
ಇಂದು ನಿಮಗೆ ಬಹಳ ಪ್ರಯಾಣ ಮಾಡಬೇಕಾದ ದಿನ ಆಗಿರಬಹುದು. ಇಲ್ಲವೆ ಪ್ರಯಾಣಕ್ಕೆ ಸಿದ್ದತೆಯೂ ಇರಬಹುದು. ಆಪ್ತರೊಂದಿಗ ಉತ್ತಮ ಸಮಯ ಕಳೆಯಲಿದ್ದೀರಿ. ಯಾರಿಗೂ ಸಾಲ ನೀಡಲು ಮುಂದಾಗಬೇಡಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಬಟ್ಟೆ ವ್ಯಾಪಾರಿಗಳಾಗಿದ್ದರೆ ಲಾಭ ಮಾಡಬಹುದು.
ಧನು ರಾಶಿ
ಧನು ರಾಶಿಯವರಿಗೆ ಈ ದಿನ ಒಂದಿಷ್ಟು ಸಮಯ ಚಿಂತೆಯಲ್ಲಿ ಮುಳುಗುವಂತೆ ಮಾಡಬಹುದು. ಕಳೆದು ಹೋದ ವಿಚಾರಗಳು ಮತ್ತೆ ನಿಮಗೆ ನೋವು ತರಬಹುದು. ನೀವು ಮಾಡಬೇಕಾದ ಕೆಲಸ ಅರ್ಧಕ್ಕೆ ಉಳಿಯಬಹುದು. ವಾಹನ ವಿಚಾರವಾಗಿ ಶುಭವಲ್ಲ. ಉದ್ಯಮಿಗಳಿಗೆ ಈ ದಿನ ಸಮಸ್ಯೆ ಎದುರಾಗಬಹುದು.
ಮಕರ ರಾಶಿ
ಮಕರ ರಾಶಿ ಅವರು ಈ ದಿನ ಒತ್ತಡದಲ್ಲಿ ಕಳೆಯಲಿದ್ದೀರಿ. ನಿಮ್ಮ ಆಸೆಯಂತೆ ಉಳಿತಾಯ ಮಾಡಿದ್ದ ಹಣದಿಂದ ವಸ್ತು ಖರೀದಿ ಕಷ್ಟವಾಗಬಹುದು. ಇಂದು ಮನೆಗಾಗಿ ಹಲವು ವಸ್ತು ಖರೀದಿಸಬಹುದು. ಸಹೋದರರೊಂದಿಗೆ ಮಾತುಗಳು ಬೆಳೆಯಬಹುದು. ದಾಂಪತ್ಯ ವಿಚಾರದಲ್ಲೂ ಮನಸ್ತಾಪ ಮೂಡಬಹುದು. ಹಣಕಾಸಿನ ವಿಚಾರದಲ್ಲಿ ಉತ್ತಮ ಅಂಶಗಳಿವೆ.
ಕುಂಭ ರಾಶಿ
ನಿಮಗಿಂದು ಶ್ರಮದಾಯಕ ದಿನ. ಗೃಹಿಣಿಯರು ಓಡಾಟ ಮಾಡಬೇಕಾಗಬಹುದು, ಇದು ಖರ್ಚು ಹೆಚ್ಚಲು ಕಾರಣ. ದೊಡ್ಡ ಸವಾಲುಗಳ ಎದುರಿಸುತ್ತೀರಿ. ಮಕ್ಕಳ ಕುರಿತ ಚಿಂತೆ ನಿಮಗೆ ಕಾಡಬಹುದು. ಪ್ರೇಮಿಗಳಿಗೆ ಈ ದಿನ ಉತ್ತಮವಾಗಿರಲಿದೆ. ನಿರುದ್ಯೋಗಿಗಳಿಗೆ ಆಪ್ತರೊಬ್ಬರ ಸಹಕಾರವು ಕೆಲಸ ಪಡೆಯಲು ಸಹಕಾರಿ ಆಗಬಹುದು.
ಮೀನ ರಾಶಿ
ಮೀನ ರಾಶಿಯ ಮಂದಿಗೆ ಈ ದಿನವು ಅಚ್ಚರಿಯಂತಹ ಫಲಿತಾಂಶ ತರಬಹುದು. ನಿಮ್ಮ ಬಹುಕಾಲದ ಅನಾರೋಗ್ಯವೊಂದು ನಿವಾರಣೆ ಸಂಭವವಿದೆ. ಯಾರಿಗೂ ನೀವು ಹಣ ನೀಡಲು ಮುಂದಾಗಬೇಡಿ. ಬೇರೆಯವರ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡದೆ ಇರುವುದು ಉತ್ತಮ.



Click it and Unblock the Notifications