Daily Horoscope: ಆಗಸ್ಟ್ 01ರ ಶುಕ್ರವಾರ ಯಾರಿಗೆಲ್ಲಾ ಅದೃಷ್ಟದ ದಿನ?

ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 01ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಇಂದು ನೀವು ಜವಾಬ್ದಾರಿಯುತವಾಗಿ ಕೆಲಸ ಮಾಡುವ ದಿನವಾಗಿರುತ್ತದೆ. ದಿನದ ಆರಂಭದಲ್ಲಿ ಸಣ್ಣಪುಟ್ಟ ಅಡೆತಡೆ ಇದ್ದರೂ ಇಡೀ ದಿನ ನಿಮಗೆ ಶುಭವಾಗಲಿದೆ. ಯಾವುದೇ ಸಮಯದಲ್ಲೂ ನೀವು ತಾಳ್ಮೆ ಕಳೆದುಕೊಳ್ಳಬೇಡಿ. ಮನೆಗಾಗಿ ನೀವು ಯಾವುದಾದರು ವಸ್ತು ಖರೀದಿಸಬಹುದು. ದಾಂಪತ್ಯದಲ್ಲಿ ಮಧುರತೆ ಇರಲಿದೆ.

ವೃಷಭ ರಾಶಿ

ಇಂದು ನೀವು ಕಷ್ಟಪಟ್ಟು ಕೆಲಸ ಮಾಡುವ ದಿನವಾಗಿರುತ್ತದೆ. ನಿಮ್ಮ ಹಲವು ಕೆಲಸಗಳಲ್ಲಿ ಈ ದಿನ ಯಶಸ್ಸು ಸಿಗಲಿದೆ. ನೀವು ನೀಡುವ ಸಲಹೆಗಳು ಇತರರಿಗೆ ಸಹಕಾರಿಯಾಗಲಿದೆ. ನೀವು ಪಾಲುದಾರಿಗೆ ವ್ಯವಹಾರದಲ್ಲಿದ್ದರೆ ನಿಮಗೆ ಉತ್ತಮ ಸಮಯ. ಆರೋಗ್ಯದ ಕಡೆ ಗಮನವಿಡಿ.

August-01-2025-Daily-Horoscope-Prediction-For-12-Zodiac-Signs-In-Kannada

ಮಿಥುನ ರಾಶಿ

ದಿನದ ಆರಂಭದಲ್ಲಿ ಖುಷಿ ತರುವ ಘಟನೆಗಳು ನಡೆಯಬಹುದು. ನಿಮ್ಮ ಆರ್ಥಿಕ ಸಂಕಷ್ಟಗಳು ನಿವಾರಣೆಯಾಗುವ ದಿನ. ಆಪ್ತರೊಂದಿಗೆ ಸಂತಸದ ಕ್ಷಣ ಕಳೆಯುತ್ತೀರಿ. ನಿಮ್ಮ ಬಾಕಿ ಇರುವ ಯಾವುದೇ ಕೆಲಸವನ್ನು ಪೂರ್ಣಗೊಳಿಸಬಹುದು. ಗೃಹಿಣಿಯರಿಗೆ ಈ ದಿನ ಬಹಳ ಉತ್ತಮ.

ಕರ್ಕ ರಾಶಿ

ಇಂದು ನಿಮಗೆ ಸಕಾರಾತ್ಮಕ ಫಲಿತಾಂಶಗಳನ್ನು ತರಲಿದೆ. ಕುಟುಂಬ ವಿಷಯಗಳಲ್ಲಿ ಯಾವುದೇ ಮನಸ್ತಾಪಗಳ ಮಾಡಿಕೊಳ್ಳಲು ಮುಂದಾಗಬೇಡಿ. ಹಣಕಾಸು ವ್ಯವಹಾರವಾಗಿ ಎಚ್ಚರಿಕೆ ವಹಿಸಿ. ಮಕ್ಕಳ ಕುರಿತ ಚಿಂತೆ ಹೆಚ್ಚಾಗಬಹುದು. ಖರ್ಚು ಕೂಡ ಹೆಚ್ಚಾಗುವ ಸಾಧ್ಯತೆ ಇದೆ.

ಸಿಂಹ ರಾಶಿ

ಇಂದು ನಿಮಗೆ ಕೆಲವು ಹೊಸ ಸಂಪರ್ಕಗಳಿಂದ ಪ್ರಯೋಜನ ಸಿಗುತ್ತದೆ. ನಿಮ್ಮ ಆದಾಯ ಹೆಚ್ಚಾಗಲಿದೆ. ಬ್ಯಾಂಕಿಂಗ್, ಪೈನಾನ್ಸ್ ವಿಚಾರದಲ್ಲಿ ನಿಮಗೆ ಉತ್ತಮ ದಿನ, ನೀವು ಅಂದುಕೊಂಡ ಕೆಲಸ ನೆರವೇರಲಿದೆ. ವಾಹನ ಸಂಬಂಧಿ ಖರ್ಚು ಇರಲಿದೆ, ಆದ್ರೆ ಅದರ ಫಲಿತಾಂಶ ನಿಮಗೆ ನೆಮ್ಮದಿ ತರಲಿದೆ.

ಕನ್ಯಾ ರಾಶಿ

ಇಂದು ವ್ಯಾಪಾರ ಮಾಡುವ ಜನರು ಸ್ವಲ್ಪ ಜಾಗರೂಕರಾಗಿರಬೇಕು. ನಿಮ್ಮ ದೈನಂದಿನ ಕೆಲಸಗಳು ನಿಧಾನವಾಗಬಹುದು. ಆಸ್ಪತ್ರೆ ಕುರಿತಾಗಿ ಅಥವಾ ನಿಮ್ಮದಲ್ಲದ ಕೆಲಸಗಳಿಗೆ ನೀವು ಪ್ರಯಾಣಿಸಬೇಕಾಗಬಹುದು. ಗೃಹಿಣಿಯರಿಗೆ ಇಂದು ಖರ್ಚು ಹೆಚ್ಚು. ಯಾರಿಗೂ ಸಾಲ ನೀಡಲು ಮುಂದಾಗಬೇಡಿ.

ತುಲಾ ರಾಶಿ

ಇಂದು ನೀವು ವ್ಯವಹಾರದಲ್ಲಿ ಕೆಲವು ಬದಲಾವಣೆಗಳನ್ನು ತರುವ ದಿನ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಬರುವ ಸಾಧ್ಯತೆ ಇದೆ. ಕುಟುಂಬದಲ್ಲಿ ಶಾಂತಿ ಇರಲಿದೆ. ಆಪ್ತರ ಭೇಟಿ ಮಾಡಬಹುದು. ಶುಭ ಕಾರ್ಯದಲ್ಲಿ ನೀವು ಭಾಗಿಯಾಗಬಹುದು.

ವೃಶ್ಚಿಕ ರಾಶಿ

ಇಂದು ನಿಮಗೆ ಸವಾಲಿನ ದಿನವಾಗಿರುತ್ತದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಿ. ಯಾರಿಗೂ ಈ ಸಮಯದಲ್ಲಿ ಮಾತು ನೀಡಲು ಮುಂದಾಗಬೇಡಿ. ಹೊಸ ವಸ್ತುಗಳ ಖರೀದಿಗೆ ನೀವು ಮುಂದಾಗಬಹುದು. ವಾಹನ ಲಾಭದ ದಿನವಿದು.

ಧನು ರಾಶಿ

ಇಂದು ನೀವು ತುಂಬಾ ಬುದ್ಧಿವಂತಿಕೆಯಿಂದ ಕೆಲಸಗಳ ಮಾಡುವ ದಿನವಾಗಿರುತ್ತದೆ. ಸಹೋದರರಿಂದ ಅಥವಾ ಸಂಬಂಧಿಕರಿಂದ ಯಾವುದಾದರು ಸಮಸ್ಯೆ ಎದುರಾಗಬಹುದು. ವ್ಯಾಪಾರಿಗಳಿಗೆ ಉತ್ತಮ ದಿನವಿದು, ನೀವು ದೇವಾಲಯ ಭೇಟಿ ಮಾಡಬಹುದು. ಆಹಾರ ಸಂಬಂಧಿ ಖರ್ಚು ಮಾಡಬಹುದು.

ಮಕರ ರಾಶಿ

ಇಂದು ಮಕರ ರಾಶಿಯವರಿಗೆ ಬಹಳ ಅನುಕೂಲಕರ ದಿನ. ಬಹಳ ದಿನಗಳಿಂದ ನಿಮ್ಮ ಮನದಲ್ಲಿ ಕಾಡುತ್ತಿದ್ದ ಸಮಸ್ಯೆಯೊಂದಕ್ಕೆ ಪರಿಹಾರ ಪಡೆಯಲಿದ್ದೀರಿ. ಔದ್ಯೋಗಿಕ ಸಂಬಂಧಿ ಒತ್ತಡ ಕಡಿಮೆಯಾಗಲಿದೆ. ಪ್ರವಾಸ ಸಂಬಂಧಿ ತಯಾರಿ ಇರಲಿದೆ. ಮಕ್ಕಳ ಆರೋಗ್ಯದ ಕಡೆ ಗಮನವಿಡಿ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಇದು ಮಿಶ್ರಫಲದ ದಿನವಾಗಿರಲಿದೆ. ನಿಮ್ಮ ಹಲವು ರೀತಿಯ ಸಮಸ್ಯೆಗಳು ಎದುರಾಗಬಹುದು. ನೀವು ಅಂದುಕೊಂಡಿದ್ದ ಕೆಲಸದಲ್ಲಿ ಸಮಸ್ಯೆಗಳು ಎದುರಾಗಿ ಅರ್ಧಕ್ಕೆ ಅಡ್ಡಿ ಬರಬಹುದು. ಅನಗತ್ಯ ಚರ್ಚೆ, ಕಲಹಗಳು ಉಂಟಾಗಬಹುದು.

ಮೀನ ರಾಶಿ

ಮೀನ ರಾಶಿಯ ಮಂದಿಗೆ ಈ ದಿನವು ಬಹಳಷ್ಟು ಶುಭ ತರುವ ದಿನ. ನಿಮ್ಮ ಆದಾಯದಲ್ಲಿ ಏರಿಳಿತವಿದ್ದರೂ ನೆಮ್ಮದಿ ಇರಲಿದೆ. ನಿಮ್ಮ ಸಮಸ್ಯೆಗಳನ್ನು ದೊಡ್ಡದಾಗಿಸಿಕೊಳ್ಳಬಹುದು. ಆಸ್ಪತ್ರೆ ಕುರಿತಾದ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ.

English summary

August-01-2025-Daily-Horoscope-Prediction-For-12-Zodiac-Signs-In-Kannada

Here is August 01 daily horoscope prediction for 12 zodiac signs read on...
Story first published: Friday, August 1, 2025, 5:00 [IST]
X
Desktop Bottom Promotion