Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಲೇ ಡೇಂಜರ್! ಈ 4 ರಾಶಿಯವರು ಕಾಲಿಗೆ ಕಪ್ಪು ದಾರ ಕಟ್ಟಬಾರದು! ಯಾಕೆ ಗೊತ್ತಾ?
ಭಲೇ ಡೇಂಜರ್! ಈ 4 ರಾಶಿಯವರು ಅಪ್ಪಿ-ತಪ್ಪಿಯೂ ತಮ್ಮ ಕಾಲುಗಳಿಗೆ ಕಪ್ಪು ದಾರ ಕಟ್ಟಬಾರದು. ಇಷ್ಟು ಹೇಳಿದರೂ ಕಟ್ಟಿಕೊಂಡರೆ ತಪ್ಪಿದ್ದಲ್ಲ ಕಷ್ಟ. ಹೌದು, ಸಾಮಾನ್ಯವಾಗಿ ಕೈ ಮತ್ತು ಕಾಲುಗಳಿಗೆ ಕೆಂಪು, ಕಪ್ಪು, ಹಳದಿ ದಾರವನ್ನು ಕಟ್ಟುತ್ತಾರೆ. ಆದರೆ, ಕಪ್ಪು ದಾರವನ್ನು (Black Thread) ಈ ರಾಶಿಯವರು ಕಟ್ಟಬಾರದು. ಪೂರ್ವಜರು ಅನೇಕ ಪೂಜಾ ಪದ್ಧತಿ ಮತ್ತು ನಂಬಿಕೆ ಪಾಲಿಸುತ್ತಿದ್ದರು. ಅವುಗಳಲ್ಲಿ ಕಾಲಿಗೆ ಕಪ್ಪು ದಾರ ಕಟ್ಟುವುದೂ ಒಂದಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರು ಬಳಸುತ್ತಾರೆ. ಹಾಗಿದ್ರೆ, ಯಾವ ರಾಶಿಯವರು ಕಪ್ಪು ದಾರವನ್ನು ಕಟ್ಟಬಾರದು ಎಂಬುದನ್ನು ತಿಳಿಯೋಣ ಬನ್ನಿ.
ಕಾಲುಗಳಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವುದು ಒಂದು ಸಾಮಾನ್ಯ ಆಚರಣೆ. ಮಕ್ಕಳು, ದೊಡ್ಡವರು, ಮಹಿಳೆಯರು ಮತ್ತು ಪುರುಷರು ಎನ್ನದೆ ಅನೇಕರು ಇದನ್ನು ಮಾಡುತ್ತಾರೆ. ಕೆಲವರು ಫ್ಯಾಶನ್ಗಾಗಿ ಅಭ್ಯಾಸ ಮಾಡಿಕೊಳ್ತಾರೆ. ಮುಖ್ಯವಾಗಿ ಮಕ್ಕಳಿಗೆ ದೃಷ್ಟಿ ತಾಗದಂತೆ ತಡೆಯಲು ಕಪ್ಪು ದಾರ ಅಥವಾ ಕೂದಲಿನಿಂದ ಹೆಣೆದ ದಾರವನ್ನು ಕಟ್ಟುತ್ತಾರೆ. ಶಾಸ್ತ್ರಗಳ ಪ್ರಕಾರ, ಈ ರೀತಿ ಕಾಲಿಗೆ ಕಪ್ಪು ದಾರವನ್ನು ಕಟ್ಟುವುದರಿಂದ ಒಳ್ಳೆಯ ಪ್ರಯೋಜನಗಳಿವೆ. ಆದರೆ, ರಾಶಿ ಮತ್ತು ಜಾತಕಗಳ ಆಧಾರದ ಮೇಲೆ ಕೆಲವರು ಈ ಕಪ್ಪು ದಾರವನ್ನು ಧರಿಸಬಾರದು. ಇನ್ನು ಕೆಲವರು ಕಪ್ಪು ದಾರದ ಬದಲು ಕೆಂಪು ದಾರವನ್ನು (Wearing Black Thread) ಕಟ್ಟಿಕೊಳ್ಳುತ್ತಾರೆ. ಯಾವ ರಾಶಿಯವರು ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಯಾವ ರಾಶಿಯವರು ಕಾಲಿಗೆ ಕಪ್ಪು ದಾರ ಕಟ್ಟಬಾರದು?
ಮೇಷ ರಾಶಿ
ಮೇಷ ರಾಶಿಯ ಅಧಿಪತಿ ಮಂಗಳ (ಕುಜ). ಮಗಳನು ಶಕ್ತಿ ಮತ್ತು ಧೈರ್ಯದ ಸಂಕೇತ. ಅವನು ಕೆಂಪು ಬಣ್ಣಕ್ಕೆ ಪ್ರತೀಕ. ಆದರೆ, ನಾವು ಧರಿಸುವುದು ಕಪ್ಪು ಬಣ್ಣದ ದಾರ. ಈ ಕಪ್ಪು ಬಣ್ಣವು ಶನಿ ಗ್ರಹಕ್ಕೆ ಸಂಬಂಧಿಸಿದ್ದು. ಮಂಗಳ ಮತ್ತು ಶನಿಗೆ ವೈರತ್ವವಿದೆ ಎಂದು ಹೇಳಲಾಗುತ್ತದೆ. ಹೀಗಾಗಿ, ಮೇಷ ರಾಶಿಯವರು ಕಪ್ಪು ದಾರವನ್ನು ಕಟ್ಟಿಕೊಂಡರೆ, ಮಂಗಳ ಗ್ರಹದ ಶುಭ ಫಲಿತಾಂಶ ಸಿಗುವುದಿಲ್ಲ. ಪ್ರತಿಕೂಲ ಫಲಿತಾಂಶಗಳು ಹೆಚ್ಚಾಗುವ ಸಾಧ್ಯತೆಯಿದೆ. ಇದು ನಿಮ್ಮ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಅಧಿಪತಿಯೂ ಮಂಗಳವೇ ಆಗಿದೆ. ಮೇಷ ರಾಶಿಯವರಂತೆ, ವೃಶ್ಚಿಕ ರಾಶಿಯವರೂ ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು. ಇದರಿಂದ ಮಂಗಳನ ಸಕಾರಾತ್ಮಕ ಪರಿಣಾಮ ಕಡಿಮೆಯಾಗಿ, ನಕಾರಾತ್ಮಕ ಪರಿಣಾಮ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಶನಿಯ ಪ್ರಭಾವ ಹೆಚ್ಚಾದರೆ, ಸಣ್ಣಪುಟ್ಟ ಅಡೆತಡೆಗಳು ಮತ್ತು ಕಿರಿಕಿರಿ ಉಂಟಾಗಬಹುದು.
ಧನಸ್ಸು ರಾಶಿ
ಧನಸ್ಸು ರಾಶಿಯ ಅಧಿಪತಿ ಬೃಹಸ್ಪತಿ (ಗುರು). ಗುರುವು ಜ್ಞಾನ, ಸಂಪತ್ತು ಮತ್ತು ಅದೃಷ್ಟದ ಸಂಕೇತ. ಆದರೆ, ಈ ಗುರು ಗ್ರಹಕ್ಕೆ ಕಪ್ಪು ಬಣ್ಣ ಶುಭಕರವಲ್ಲ. ಕಪ್ಪು ದಾರವನ್ನು ಧರಿಸುವುದರಿಂದ ಗುರುಗ್ರಹದ ಅನುಕೂಲಕರ ಪರಿಣಾಮ ಕಡಿಮೆಯಾಗಲಿದೆ. ಇಲ್ಲದೆ ಆರ್ಥಿಕವಾಗಿ, ಔದ್ಯೋಗಿಕವಾಗಿ ಮತ್ತು ವ್ಯಾಪಾರದಲ್ಲಿ ಅಡೆತಡೆಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ.
ಮೀನ ರಾಶಿ
ಮೀನ ರಾಶಿಯ ಅಧಿಪತಿಯೂ ಗುರು ಆಗಿದೆ. ಇದರಿಂದ ಧನಸ್ಸು ರಾಶಿಗೆ ಅನ್ವಯಿಸುವಂತೆಯೇ, ಈ ಮೀನ ರಾಶಿಯವರು ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಂಡರೆ ಗುರುಗ್ರಹದ ಸಕಾರಾತ್ಮಕ ಪರಿಣಾಮಗಳು ಕಡಿಮೆಯಾಗುತ್ತವೆ. ಸಣ್ಣಪುಟ್ಟ ಸಮಸ್ಯೆಗಳು, ದುರದೃಷ್ಟ, ಅನಗತ್ಯ ಖರ್ಚುಗಳು ಅಥವಾ ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆಯಿದೆ.
ಕಪ್ಪು ದಾರ ಕಟ್ಟಿಕೊಳ್ಳುವುದರ ಹಿಂದಿನ ನಂಬಿಕೆಗಳಿವು
ಕಪ್ಪು ಬಣ್ಣ ಕೆಟ್ಟ ದೃಷ್ಟಿಯನ್ನು ಹೀರಿಕೊಳ್ಳುತ್ತದೆ. ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸುತ್ತದೆ. ಹಾಗೆಯೇ, ಕಪ್ಪು ಬಣ್ಣವು ಶನಿ ಗ್ರಹಕ್ಕೆ ಪ್ರಿಯ. ಕಪ್ಪು ದಾರವನ್ನು ಕೈಗೆ ಅಥವಾ ಕಾಲಿಗೆ ಕಟ್ಟಿಕೊಳ್ಳುವುದರಿಂದ ಶನಿ ಗ್ರಹದ ದೋಷಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆಯಿದೆ. ಕೆಲವು ಪ್ರದೇಶಗಳಲ್ಲಿ ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ ಆರ್ಥಿಕ ಲಾಭ ಉಂಟಾಗುತ್ತವೆ. ಹಣವು ಕೈಯಲ್ಲಿ ಉಳಿಯುತ್ತದೆ ಎಂಬ ನಂಬಿಕೆ. ಇನ್ನೂ ಕೆಲವರು ನರಗಳ ದೌರ್ಬಲ್ಯ, ಕಾಲು ನೋವುಗಳು ಇದ್ದಾಗ ಕಪ್ಪು ದಾರ ಕಟ್ಟಿಕೊಂಡರೆ, ಪರಿಹಾರ ಸಿಗುತ್ತದೆ ಎಂಬ ಪ್ರತೀತಿಯಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
