30 ವರ್ಷದ ಬಳಿಕ ಶನಿ-ರಾಹು ಸಂಯೋಗ: ಈ ರಾಶಿಯವರಲ್ಲಿ ದೋಷ ನಿವಾರಣೆ

2025ನೇ ವರ್ಷದಲ್ಲಿ ಹಲವು ರೀತಿಯ ಯೋಗಗಳು ರೂಪುಗೊಳ್ಳುವುದು ನಾವು ನೋಡಬಹುದು. ಅದೇ ರೀತಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಟ್ಟ ಅಥವಾ ಸಂಕಷ್ಟಕರ ಗ್ರಹಗಳೆಂದು ಹೇಳಲಾಗಿರುವ ರಾಹು ಹಾಗೂ ಶನಿ ಸಂಯೋಗ 2025ರಲ್ಲಿ ಉಂಟಾಗುತ್ತಿರುವುದು ಬಹುದೊಡ್ಡ ಪ್ರಕ್ರಿಯೆಯಾಗುತ್ತಿದೆ. ಹೀಗಾಗಿ 2025ರಲ್ಲಿ ಹಲವರಿಗೆ ಲಾಭದಾಯಕ ಹಾಗೂ ಮತ್ತೆ ಕೆಲವರಿಗೆ ಸಂಕಷ್ಟದಾಯಕವಾಗಿಯೂ ಬದಲಾಗುತ್ತಿದೆ.

ಈ ವರ್ಷ ಅನೇಕ ಗ್ರಹಗಳು ರಾಶಿ ಬದಲಾವಣೆಗಳಿಗೆ ಒಳಗಾಗುತ್ತವೆ ಮತ್ತು ಗ್ರಹಗಳ ಸಂಯೋಗ ಸಂಭವಿಸುತ್ತದೆ. ಅದೂ ಈ ವರ್ಷ ಶನಿ, ರಾಹು, ಕೇತು ಮತ್ತು ಗುರು ಗ್ರಹಗಳು ತಮ್ಮ ಚಲನೆಯ ರಾಶಿಯನ್ನು ಬದಲಾಯಿಸುತ್ತಿವೆ. ಇದರಿಂದ ಒಂದಿಷ್ಟು ಗ್ರಹಗತಿಗಳ ಬದಲಾವಣೆ ಹಾಗೆ ಯೋಗಗಳು ರೂಪುಗೊಳ್ಳುತ್ತಿವೆ. ಈ ಪ್ರಮುಖ ಗ್ರಹಗಳ ಸ್ಥಾನಗಳ ಬದಲಾವಣೆಯ ಪರಿಣಾಮವು ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ.

Astrological Shift Saturn-Rahu Conjunction Brings Relief to Certain Zodiac Signs

ಶನಿಯು ಮಾರ್ಚ್ 2025 ರಲ್ಲಿ ಕುಂಭ ರಾಶಿಯಿಂದ ಮೀನ ರಾಶಿಗೆ ಸಂಚರಿಸುತ್ತಿದೆ. ಆದ್ರೆ ಇದೇ ಮೀನ ರಾಶಿಯಲ್ಲಿ ಈಗಾಗಲೇ ರಾಹು ತನ್ನ ಚಲನೆ ಆರಂಭಿಸಿದೆ. ಈ ಎರಡು ಗ್ರಹಗಳ ಸಂಯೋಗವು ಬಹಳ ಅಪರೂಪ ಎನಿಸುತ್ತಿದೆ. 30 ವರ್ಷಗಳ ಬಳಿಕ ಮೀನ ರಾಶಿಯಲ್ಲಿ ಶನಿ ಹಾಗೂ ರಾಹು ಸಂಯೋಗವಾಗುತ್ತಿದೆ. ಈ ರೀತಿಯ ಸಂಯೋಗವು ಹಲವು ರೀತಿ ಲಾಭಕ್ಕೆ ಕಾರಣವಾಗುತ್ತಿದೆ.

ಹಾಗಾದ್ರೆ 2025ರಲ್ಲಿ ಶನಿ ಹಾಗೂ ರಾಹುವಿನ ಸಂಯೋಗವು ಯಾವೆಲ್ಲಾ ರಾಶಿಯವರಲ್ಲಿ ಲಾಭದಾಯಕವಾಗಿ ಪರಿಣಮಿಸಲಿದೆ, ಯಾರಿಗೆಲ್ಲಾ ಲಾಭದಾಯಕ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮೇಷ ರಾಶಿ

ಮೇಷ ರಾಶಿಯ 12ನೇ ಮನೆಯಲ್ಲಿ ರಾಹು ಶನಿಯ ಸಂಯೋಗ ಆಗುತ್ತಿದೆ. ಇದರಿಂದ ಮೇಷ ರಾಶಿಯವರಲ್ಲಿ ಅಚ್ಚರಿಯ ಬೆಳವಣಿಗೆ ನೋಡಬಹುದು. ಅದರಲ್ಲೂ ನಿಮ್ಮ ಜಾತಕದ ಬಹುದೊಡ್ಡ ದೋಷ ನಿವಾರಣೆ ಆಗುವ ಸಾಧ್ಯತೆ ಇದೆ. ಅಲ್ಲದೆ ಮಕ್ಕಳಲ್ಲಿ ಯಶಸ್ಸು ಕಾಣಬಹುದು. ಹಾಗೆ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಲಾಭ ಗಳಿಸಬಹುದು. ಸಮಾಜದಲ್ಲಿ ನಿಮ್ಮ ಮೌಲ್ಯ ಹೆಚ್ಚಾಗಲಿದೆ, ಮನೆಯಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ನಿಮ್ಮ ಕೆಲಸದಲ್ಲಿ ಯಶಸ್ಸು ಗಳಿಸಲು ಈ ಕಾಲ ಸುಗಮವಾಗಲಿದೆ. ನಾಯಕತ್ವ ಗುಣದಿಂದ ನಿಮಗೆ ಬೇಕಾದ ವಸ್ತುಗಳ ಪಡೆಯುತ್ತೀರಿ. ವಾಹನ ಖರೀದಿಗೆ ಒಳ್ಳೆಯ ಕಾಲವಿದು.

ವೃಷಭ ರಾಶಿ

ವೃಷಭ ರಾಶಿಯ 11ನೇ ಮನೆಯಲ್ಲಿ ರಾಹು ಶನಿ ಸಂಯೋಗವಾಗುತ್ತಿದೆ. ಹೀಗಾಗಿ ಈ ರಾಶಿಯರಿಗೆ ಅಧಿಕ ಲಾಭದ ನಿರೀಕ್ಷೆ ಇದೆ. ಬಹುಕಾಲದ ನಿಮ್ಮ ಆಸೆಗಳು ಈಡೇರಲಿದೆ. ಕೆಲಸದ ಸ್ಥಳದಲ್ಲಿ ಪ್ರತಿ ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ನಿಮ್ಮ ಗುರಿಗಳನ್ನು ನೀವು ಸುಲಭವಾಗಿ ಸಾಧಿಸುವಿರಿ. ಹಣವು ಅನೇಕ ರೀತಿಯಲ್ಲಿ ಬರುತ್ತದೆ. ಕೈಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಅವಿವಾಹಿತರಿಗೆ ಒಳ್ಳೆಯ ಕಾಲವಿದು. ದೂರ ಪ್ರಯಾಣದ ಸಾಧ್ಯತೆ ಇದೆ, ಇದು ನಿಮ್ಮ ಲಾಭಕ್ಕೆ ಕಾರಣವಾಗುತ್ತದೆ.

ತುಲಾ ರಾಶಿ

ತುಲಾ ರಾಶಿಯ 6ನೇ ಮನೆಯಲ್ಲಿ ಶನಿ ರಾಹು ಸಂಯೋಗ ಉಂಟಾಗುತ್ತಿದೆ. ಆರನೇ ಮನೆಯಲ್ಲಿ ರಾಹು ಮತ್ತು ಶನಿ ಸಂಯೋಗವಾಗಿರುವುದರಿಂದ ಇಲ್ಲಿಯವರೆಗೆ ಎದುರಿಸಿದ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ. ನಿಮ್ಮ ಸಾಲದ ಸಮಸ್ಯೆ, ಆಸ್ತಿ ಸಮಸ್ಯೆ, ಹಣಕಾಸು ಸಮಸ್ಯೆಗಳು ನಿವಾರಣೆಯಾಗಬಹುದು. ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತೀರಿ. ಕುಟುಂಬದವರೊಂದಿಗೆ ಸಂತಸದ ದಿನಗಳ ಕಳೆಯುತ್ತೀರಿ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Astrological Shift: Saturn-Rahu Conjunction Brings Relief to Certain Zodiac Signs

Saturn will be transiting from Aquarius to Pisces in March 2025. However, Rahu has already started its movement in the same Pisces. The conjunction of these two planets seems to be very rare.
X
Desktop Bottom Promotion