Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮೀನ ರಾಶಿಗೆ ಸೂರ್ಯ ಸಂಚಾರ: ಈ ಮೂರು ರಾಶಿಯವರಲ್ಲಿ ಸಾಲ ಹೆಚ್ಚಳ..ಆರ್ಥಿಕ ಸಮಸ್ಯೆ!!
ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನನ್ನು ಎಲ್ಲಾ ಗ್ರಹಗಳ ಕೇಂದ್ರಬಿಂದು ಎಂದು ಪರಿಗಣಿಸಲಾಗಿದೆ. ಸೂರ್ಯನ ಚಲನೆಯು ಪ್ರತಿಯೊಂದು ರಾಶಿಯ ಮೇಲೂ ಪರಿಣಾಮ ಬೀರಲಿದೆ. ಸೂರ್ಯನ ಚಲನೆ ಯಾವ ರಾಶಿಯಲ್ಲಿ ಇರಲಿದ್ಯೋ ಅವರಿಗೆ ಹಲವು ರೀತಿಯ ಲಾಭವಾಗುವುದು ಹಾಗೆ ಉಳಿದೆಲ್ಲಾ ರಾಶಿಗಳಿಗೂ ಲಾಭವಾಗುವುದು ನೋಡಬಹುದು. ಸದ್ಯ ಈಗ ಸೂರ್ಯನು ಮೀನ ರಾಶಿಗೆ ಚಲಿಸುತ್ತಿರುವುದು ಕೂಡ ಶುಭ ಹಾಗೂ ಅಶುಭ ಲಾಭಗಳಿಗೆ ಕಾರಣವಾಗಿದೆ.
ಮಾರ್ಚ್ 14 ರಂದು ಸೂರ್ಯನು ಮೀನ ರಾಶಿಗೆ ಸಾಗುತ್ತಾನೆ. ಮೀನ ರಾಶಿಯಲ್ಲಿ ಸೂರ್ಯನ ಸಂಚಾರವು ಹಲವು ರಾಶಿಗಳ ಮೇಲೆ ಪರಿಣಾಮ ಬೀರುವುದು ನೋಡಬಹುದು. ಹಾಗೆ ಸೂರ್ಯನ ಚಲನೆಯಿಂದ ಹಲವು ರಾಶಿಗಳಿಗೆ ಅಶುಭ ಯೋಗವು ಇದೆ. ಮೀನ ರಾಶಿಯಲ್ಲಿ ಹಲವು ಗ್ರಹಗಳು ಸಂಯೋಗವಾಗುತ್ತಿರುವುದು ಈ ಹಲವು ರೀತಿಯಲ್ಲಿ ಅಶುಭಕ್ಕೂ ಕಾರಣವಾಗುತ್ತಿದೆ.

ಸೂರ್ಯನೆಂದರೆ ಅಗ್ನಿಯ ಸಂಕೇತ ಹಾಗೆ ಮೀನ ರಾಶಿಯು ಜಲದ ಸಂಕೇತವಾಗಿದೆ, ಹೀಗಾಗಿ ಈ ರೀತಿ ಪರಸ್ಪರ ವಿರೋಧ ಗ್ರಹಗಳ ಸಂಚಾರವು ಹಲವು ರಾಶಿಗಳಲ್ಲಿ ಅಶುಭ ತರಲಿದೆ. ನಕಾರಾತ್ಮಕ ಬೆಳವಣಿಗೆಯ ಕಾರಣದಿಂದಾಗಿ ಹಲವರಿಗೆ ಸಮಸ್ಯೆಗಳ ಎದುರಿಸಬೇಕಾಗಬಹುದು. ಹಾಗಾದ್ರೆ ಮೀನ ರಾಶಿಗೆ ಸೂರ್ಯನ ಸಂಚಾರವು ಯಾವೆಲ್ಲಾ ರಾಶಿಯವರಿಗೆ ಅಶುಭಕಾರಕ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಿಂಹ ರಾಶಿ
ಸಿಂಹ ರಾಶಿಯವರ ಮೊದಲ ಮನೆಯ ಅಧಿಪತಿ ಸೂರ್ಯ 9ನೇ ಮನೆಗೆ ಚಲಿಸಲಿದ್ದಾನೆ. ಹೀಗಾಗಿ ಸಿಂಹ ರಾಶಿಯ ಮಂದಿ ಹಲವು ರೀತಿಯ ಹೊಸ ಸವಾಲುಗಳ ಎದುರಿಸಬೇಕಾಗಬಹುದು. ನೀವೆಂದು ಎದುರಿಸದಂತಹ ಅಡೆತಡೆಗಳು, ಕಠಿಣ ಸವಾಲು ನಿಮ್ಮ ಎದುರಾಗಲಿವೆ. ಅದರಲ್ಲೂ ಉದ್ಯೋಗಸ್ಥರಲ್ಲಿ ಹೆಚ್ಚಿನ ಶ್ರಮ ಹಾಗೂ ಒತ್ತಡಕ್ಕೆ ಎದುರಾಗಬೇಕಾಗುತ್ತದೆ. ವಿಪರೀತ ಖರ್ಚು, ಆರ್ಥಿಕ ಸಮಸ್ಯೆಗಳಿಗೂ ನೀವು ತಯಾರಿ ನಡೆಸಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಕುಟುಂಬಸ್ಥರಿಂದ ಕಟು ಮಾತುಗಳ ಕೇಳಬೇಕಾಗುತ್ತದೆ. ದೈಹಕ ಅನಾರೋಗ್ಯ ಹೆಚ್ಚಾಗಬಹುದು. ತೀವ್ರ ಒತ್ತಡವು ನಿಮ್ಮ ಮಾನಸಿಕ ಸ್ಥಿತಿಯನ್ನು ಕೂಡ ಹದಗೆಡಿಸಬಹುದು. ಬಹಳ ಕಾಲದಿಂದ ಉಳಿಸಿಕೊಂಡಿರುವ ಕೆಲಸಗಳು ಕೂಡ ಅಲ್ಲಿಯೇ ನಿಂತುಹೋಗಬಹುದು. ವ್ಯವಹಾರದಲ್ಲಿ ನಿಮ್ಮ ಲಾಭದ ಪ್ರಮಾಣ ಹಾಗೂ ಆದಾಯದ ಮೂಲಗಳು ನಿಮ್ಮಿಂದ ದೂರಾಗಬಹುದು. ಉದ್ಯೋಗದಲ್ಲಿ ನಿಮಗೆ ಅನಿರೀಕ್ಷಿತ ಹಿನ್ನಡೆ ಎದುರಾಗಬಹುದು, ಅಲ್ಲದೆ ಕೆಲಸ ಬದಲಿಸುವ ನಿಮ್ಮ ಆಲೋಚನೆಯಲ್ಲಿಯೂ ತೃಪ್ತಿದಾಯಕ ಫಲಿತಾಂಶ ಸಿಗುವುದು ಕಷ್ಟವಾಗಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಹನ್ನೆರಡನೇ ಮನೆಯ ಅಧಿಪತಿಯಾದ ಸೂರ್ಯ 7ನೇ ಮನೆಯ ಮೂಲಕ ಚಲಿಸಲಿದ್ದಾನೆ. ಇದು ಕನ್ಯಾ ರಾಶಿಯವರಲ್ಲಿ ಬಹುದೊಡ್ಡ ಸಮಸ್ಯೆಗಳ ತರಬಹುದು. ನಿಮ್ಮ ಕುಟುಂಬದಲ್ಲಿ ಅಶಾಂತಿ, ಆಸ್ತಿ ಸಂಬಂಧ ಅಥವಾ ಹಣಕಾಸು ವಿಚಾರದಲ್ಲಿ ಸಮಸ್ಯೆ ಕಾಡಬಹುದು. ನಿಮ್ಮಲ್ಲಿ ಹಣಕಾಸು ವಿಚಾರವಾಗಿ ಹಲವು ರೀತಿ ಸಮಸ್ಯೆ ಕಾಡಬಹುದು. ಹಳೆಯ ಬಾಕಿ, ಸಾಲಗಳು ಹೆಚ್ಚಾಗಬಹುದು. ಪ್ರವಾಸ, ಅನಗತ್ಯ ವಿಚಾರಕ್ಕೆ ಹಣದ ಖರ್ಚು ಹೆಚ್ಚಾಗಬಹುದು. ಮೂಲ ಸಮಸ್ಯೆಗಳಿಂದ ಪಾರಾಗಲು ನೀವು ಹಲವು ಸಮಸ್ಯೆಗಳ ಎದುರಿಸಬೇಕಾಗಬಹುದು. ದಾಂಪತ್ಯ ಜೀವನದಲ್ಲೂ ನಿಮಗೆ ಸಮಸ್ಯೆಗಳು ಎದುರಾಗಬಹುದು. ಮನಸ್ತಾಪ, ಗಲಾಟೆ ಹೆಚ್ಚಾಗಬಹುದು.
ಮಕರ ರಾಶಿ
ಮಕರ ರಾಶಿಯ 9ನೇ ಮನೆಯ ಅಧಿಪತಿಯಾದ ಸೂರ್ಯ 3ನೇ ಮನೆಯಲ್ಲಿ ಚಲಿಸಲಿದ್ದಾನೆ. ಇದು ನಿಮ್ಮ ವೈಯಕ್ತಿಕ ಬೆಳವಣಿಗೆಗೆ ಅಡ್ಡಿಯಾಗಬಹುದು. ನೀವು ಬಯಸಿದ್ದ ಕೆಲಸಗಳು ನಿಮ್ಮ ಕೈ ತಪ್ಪಬಹುದು. ಸಾಲ ಮಾಡುವ ಸಾಧ್ಯತೆ ಇರಲಿದೆ. ಹಲವರಲ್ಲಿ ಈ ಸಮಯವು ಆರ್ಥಿಕ ಸಂಕಷ್ಟಗಳಿಗೆ ಕಾರಣವಾಗಬಹುದು. ಉಳಿತಾಯ, ಹೂಡಿಕೆ, ಬ್ಯಾಂಕಿಂಗ್ ವಹಿವಾಟಿನಲ್ಲಿ ನೀವು ಸಮಸ್ಯೆಗಳ ಎದುರಿಸಬೇಕಾಗಬಹುದು. ವೃತ್ತಿ ಜೀವನದಲ್ಲಿ ಒತ್ತಡ ಹೆಚ್ಚಾಗಲಿದೆ. ಭವಿಷ್ಯದ ದೃಷ್ಟಿಯಿಂದ ನೀವು ತೆಗೆದುಕೊಳ್ಳುವ ನಿರ್ಧಾರಗಳನ್ನು ಮತ್ತೊಮ್ಮೆ ಆಲೋಚಿಸುವುದು ಒಳಿತು. ವಾಹನ ಮಾಲೀಕರಲ್ಲಿ ನಷ್ಟದ ಸಂಭವವಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡದ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











