Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವೈದಿಕ ಶಾಸ್ತ್ರ ಹೇಳುತ್ತದೆ ಈ ರಾಶಿಯವರು ಮದುವೆಯಾದರೆ ಅವರ ಹೊಂದಾಣಿಕೆ ಚೆನ್ನಾಗಿರುತ್ತಂತೆ
ಅತ್ಯುತ್ತಮವಾದ ಜೋಡಿಯಾಗಲು ಇಬ್ಬರ ನಡುವೆ ಒಳ್ಳೆಯ ಹೊಂದಾಣಿಕೆ ಇರಬೇಕಾಗುತ್ತದೆ, ಜ್ಯೋತಿಷ್ಯವು ಈ ರೀತಿ ಹೊಂದಾಣಿಕೆಗೆ ಅವರ ರಾಶಿಯೂ ಮುಖ್ಯವಾಗಿರುತ್ತದೆ ಎಂದು ಹೇಳುತ್ತದೆ. ಯಾವ ರಾಶಿಯವರು ಯಾವ ರಾಶಿಯವರನ್ನು ಮದುವೆಯಾದರೆ ಅವರ ನಡುವೆ ಒಳ್ಳೆಯ ಹೊಂದಾಣಿಕೆ ಇರುತ್ತದೆ ಎಂದು ವೈದಿಕ ಸಾಸ್ತ್ರ ಹೇಳಿದೆ ಎಂದು ನೋಡೋಣ ಬನ್ನಿ:

ವೃಷಭ ಮತ್ತು ಕನ್ಯಾ ರಾಶಿ
ಈ ಎರಡು ರಾಶಿಯವರು ಮದುವೆಯಾದರೆ ಇವರ ನಡುವೆ ಒಳ್ಳೆಯ ಹೊಂದಾಣಿಕೆ ಇರುತ್ತದೆ ಎಂದು ಹೇಳುತ್ತದೆ. ಇವರು ಸಂಬಂಧದಲ್ಲಿ ತುಂಬಾ ನಿಯತ್ತಿನಿಂದಿರುತ್ತಾರೆ. ಇವರು ಕೂಡ ಸಮಸ್ಯೆ ಬಗೆಹರಿಸುವುದರಲ್ಲಿ ನಿಸ್ಸೀಮರು ಹೀಗಾಗಿ ಈ ಎರಡು ರಾಶಿಯವರು ಒಂದಾದರೆ ಅವರ ಬಾಂಧವ್ಯ ಚೆನ್ನಾಗಿರುತ್ತದೆ ಎಂದು ವೈದಿಕ ಶಾಸ್ತ್ರ ಹೇಳುತ್ತದೆ.
ಮಿಥುನ ರಾಶಿ ಹಾಗೂ ತುಲಾ ರಾಶಿ
ಮಿಥುನ ರಾಶಿಯವರು ಮಾತಿನಲ್ಲಿ ಚುರುಕು ಇರುತ್ತಾರೆ, ತುಲಾ ರಾಶಿಯವರು ಕೂಡ ತುಂಬಾನೇ ಡಿಪ್ಲೋಮೇಟಿಕ್ ಆಗಿರುತ್ತಾರೆ, ಹೀಗಾಗಿ ಇವರ ನಡುವಿನ ಸಂಬಂಧ ಚೆನ್ನಾಗಿರುತ್ತದೆ.
ಸಿಂಹ ಹಾಗೂ ಧನು ರಾಶಿ
ಸಿಂಹ ರಾಶಿಯವರು ಧೈರ್ಯಶಾಲಿಗಳು, ಧನು ರಾಶಿಯವರು ಕೂಡ ಸ್ವಾತಂತ್ರ್ಯ ಬಯಸುತ್ತಾರೆ, ಸಾಹಸಿಗಳು ಈ ಸ್ವಭಾವ ಇವರಿಬ್ಬರ ನಡುವೆ ಬಾಂಧವ್ಯ ಉತ್ತಮವಾಗಿರಿಸಲಿದೆ.
ವೃಶ್ಚಿಕ ಮತ್ತು ಕರ್ಕ ರಾಶಿ
ಇವರಿಬ್ಬರು ಎಮೋಷನಲ್ ಕನೆಕ್ಷನ್ ತುಂಬಾ ಚೆನ್ನಾಗಿರುತ್ತದೆ, ಅಲ್ಲದೆ ಇವರಿಬ್ಬರು ಒಂದಾದರೆ ಸಂಬಂಧದಲ್ಲಿ ನಿಯತ್ತಿನಿಂದ ಇರುತ್ತಾರೆ, ಇದು ಇವರಿಬ್ಬರ ನಡುವೆ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿಸುತ್ತದೆ.
ಮೀನ ಮತ್ತು ವೃಶ್ಚಿಕ ರಾಶಿ
ಮೀನ ರಾಶಿಯವರು ತುಂಬಾನೇ ಎಮೋಷನಲ್ ಜೀವಿಗಳು, ವೃಶ್ಚಿಕ ರಾಶಿಯವರು ಅಷ್ಟೊಂದು ಎಮೋಷನಲ್ ಅಲ್ಲದಿದ್ದರೂ ಮೀನ ರಾಶಿಯವರ ಭಾವನೆಗಳಿಗೆ ಸ್ಪಂದಿಸುತ್ತಾರೆ, ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ, ಇದರಿಂದಾಗಿ ಈ ಎರಡು ರಾಶಿಯವರು ಮದುವೆಯಾದರೆ ಇವರ ಬಾಂಧವ್ಯ ಚೆನ್ನಾಗಿರುತ್ತದೆ ಎಂದು ವೈದಿಕ ಶಾಸ್ತ್ರ ಹೇಳುತ್ತದೆ.
ವೃಷಭ ಮತ್ತು ಮಕರ ರಾಶಿ
ಜ್ಯೋತಿಷ್ಯಸಾಸ್ತ್ರವು ಮದುವೆಗೆ ಈ ಎರಡು ರಾಶಿಯವರು ಕೂಡ ಒಳ್ಳೆಯ ಜೋಡಿಯಾಗುತ್ತಾರೆ ಎಂದು ಹೇಳಿದೆ. ವೃಷಭ ರಾಶಿಯವರು ಸಂಗಾತಿಯ ಭಾವನೆಯನ್ನು ಸ್ಪಂದಿಸುತ್ತಾರೆ. ಮಕರ ರಾಶಿಯವರು ಸಂಬಂಧದಲ್ಲಿ ನಿಯತ್ತಿನಿಂದ ಇರುತ್ತಾರೆ, ಹೀಗಾಗಿ ಇವರಿಬ್ಬರು ಒಳ್ಳೆಯ ಜೋಡಿಯಾಗುತ್ತಾರೆ.
ಮೇಷ ಮತ್ತು ಸಿಂಹ ರಾಶಿಯವರು:ಮೇಷ ಹಾಗೂ ಸಿಂಹ ರಾಶಿಯವರು ಮದುವೆಯಾದರೆ ಇವರ ನಡುವೆ ಉತ್ತಮ ಹೊಂದಾಣಿಕೆ ಇರುತ್ತದೆ, ಇದರಿಂದ ಇವರ ಬಾಂಧವ್ಯ ಚೆನ್ನಾಗಿರುತ್ತದೆ.
ಕನ್ಯಾ ಮತ್ತು ವೃಶ್ಚಿಕ ರಾಶಿ: ಇಬ್ಬರು ಜೀವನ ಹೇಗಿರಬೇಕು ಎಂದು ಪ್ಲ್ಯಾನ್ ಮಾಡಿ ಅದರಂತೆ ಜೀವಿಸಲು ಬಯಸುವವರು, ಹಾಗಾಗಿ ಇವರಿಬ್ಬರು ಜೋಡಿಯಾದರೆ ಇಬ್ಬರ ನಡುವೆ ಬಾಂಧವ್ಯ ಚೆನ್ನಾಗಿರುತ್ತದೆ.
ತುಲಾ ಮತ್ತು ಮಿಥುನ ರಾಶಿ
ತುಲಾ ರಾಶಿಯವರು ಮಾತಿನಲ್ಲಿ ಪ್ರವೀಣರು, ಮಿಥುನ ರಾಶಿಯವರಿಗೂ ಹೇಗೆ ಮಾತನಾಡಬೇಕು ಎಂಬ ಕಲೆ ಗೊತ್ತಿರುತ್ತದೆ, ಹೀಗಾಗಿ ಇವರಿಬ್ಬರ ಜೋಡಿ ತುಂಬಾ ಚೆನ್ನಾಗಿರುತ್ತದೆ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಪಂಡಿತರ ಸಲಹೆ ಪಡೆಯಿರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications