ಜ್ಯೋಷ್ಯ ಪ್ರಕಾರ ನಿಮ್ಮ ನಕ್ಷತ್ರಕ್ಕೆ ಯಾವ ಗಣ ನಿಮ್ಮದು, ಆ ಗಣದ ವಿಶೇಷತೆಯೇನು?

ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂದೊಂದು ನಕ್ಷತ್ರದಲ್ಲಿ ಹುಟ್ಟಿದವರಿಗೆ ಇಂಥದ್ದೇ ಗಣ ಎಂಬುವುದು ಇದೇ. ಒಟ್ಟು 27 ನಕ್ಷತ್ರಗಳು, ಯಾವ ನಕ್ಷತ್ರಕ್ಕೆ ಯಾವ ಗಣ ಎಂದು ಹೇಳಲಾಗುವುದು. ಹಾಗಾಗಿ ನಕ್ಷತ್ರ ಮಾತ್ರವಲ್ಲ , ಗಣ ನೋಡಿ ಆ ವ್ಯಕ್ತಿಯ ಸ್ವಭಾವ ಹೇಗೆ ಎಂದು ಹೇಳಲಾಗುವುದು. ಈ ಪ್ರಪಂಚದಲ್ಲಿಯೇ ಎಲ್ಲರೂ ಒಬ್ಬರಿಗಿಂತ ಒಬ್ರು ಭಿನ್ನವಾಗಿರುತ್ತದೆ. ಕೆಲವರು ಒಂದೇ ರೂಪದಂತೆ ಕಂಡರೂ ಅವರ ಸ್ವಭಾವ ಒಂದೇ ರೀತಿ ಇರಲ್ಲ.

Nakshtra In Kundali

ಆದರೆ ವೈದಿಕ ಶಾಸ್ತ್ರವು ನಕ್ಷತ್ರ, ರಾಶಿ, ಗಣಗಳ ಪ್ರಕಾರ ಅವರ ರಾಶಿಯಲ್ಲಿ ಕೆಲವೊಂದು ಹೊಂದಾಣಿಕೆ ಇರುತ್ತದೆ ಎಂದು ಹೇಳುತ್ತದೆ. ಯಾವ ನಕ್ಷತ್ರದವರಿಗೆ ಯಾವ ಗಣ, ಹಾಗೂ ದೇವಗಣ, ಮನುಷ್ಯ ಗಣ, ರಾಕ್ಷಸ ಗಣದ ಸ್ವಭಾವವೇನು ಎಂದು ನೋಡೋಣ ಬನ್ನಿ:

ಈ ನಕ್ಷತ್ರ, ಗಣ ಹೇಗೆ ನೋಡಲಾಗುವುದು?

ಹುಟ್ಟಿದ ಸಮಯ, ದಿನಾಂಕ ನೋಡಿ ಇದನ್ನು ಹೇಳಲಾಗುವುದು. ಯಾವ ದಿನ, ಯಾವ ಸಮಯ, ಯಾವ ದಿನಾಂಕ, ಯಾವ ನಿಮಿಷದಲ್ಲಿ ಜನಿಸಿದರು ಎಂದೆಲ್ಲಾ ನೋಡಿ ಈ ನಕ್ಷತ್ರ ಹಾಗೂ ಗಣವನ್ನು ಹೇಳಲಾಗುವುದು.

27 ನಕ್ಷತ್ರಗಳು ಮತ್ತು ಅವುಗಳ ಗಣ
ಅಶ್ವಿನಿ (ದೇವಗಣ)
ಭರಣಿ (ಮನುಷ್ಯ ಗಣ)
ಕೃತಿಕಾ (ರಾಕ್ಷಸ ಗಣ)
ರೋಹಿಣಿ (ಮನುಷ್ಯ ಗಣ)
ಮೃಗಶಿರಾ (ದೇವಗಣ)
ಆರ್ದ್ರ (ನಕ್ಷತ್ರ)
ಪುನರ್ವಸು (ದೇವಗಣ)
ಪುಷ್ಯ (ದೇವಗಣ)
ಅಶ್ಲೇಷ (ರಾಕ್ಷಸ ಗಣ)
ಮಾಘ (ರಾಕ್ಷಸ)
ಪೂರ್ವ ಫಾಲ್ಗುಣಿ (ಮನುಷ್ಯ ಗಣ)
ಉತ್ತರ ಪಾಲ್ಗುಣಿ (ಮನುಷ್ಯ ಗಣ)
ಹಸ್ತಾ (ದೇವ ಗಣ)
ಚೈತ್ರ (ರಾಕ್ಷಸ ಗಣ)
ಸ್ವಾತಿ (ದೇವಗಣ)
ವಿಶಾಖ (ರಾಕ್ಷಸ ಗಣ)
ಅನುರಾಧ (ದೇವ ಗಣ)
ಜ್ಯೇಷ್ಠ (ರಾಕ್ಷಸ ಗಣ)
ಮೂಲ (ರಾಕ್ಷಸ ಗಣ)
ಪೂರ್ವಾಷಾಢ (ಮನುಷ್ಯ ಗಣ)
ಉತ್ತರಾಷಾಢ (ಮನುಷ್ಯ ಗಣ)
ಶ್ರವಣ (ದೇವಗಣ)
ಧನಿಷ್ಠ (ರಾಕ್ಷಸ ಗಣ)
ಶತಾಭಿಷ (ರಾಕ್ಷಸ ಗಣ)
ಪೂರ್ವ ಭದ್ರ (ಮನುಷ್ಯ ಗಣ)
ಉತ್ತರ ಭದ್ರ (ಮನುಷ್ಯ ಗಣ)
ರೇವತಿ (ದೇವಗಣ)

ಈ ಗಣಗಳ ಸ್ವಭಾವ ಹೇಗಿರುತ್ತದೆ?

ಈ ಗಣಗಳ ಗುಣಗಳು ಭಿನ್ನವಂತೆ. ಒಂದು ಗಣದವರ ಸ್ವಭಾವ ಮತ್ತೊಂದು ಗಣದವರಂತೆ ಇರಲ್ಲ, ಹಾಗಾಗಿ ಮದುವೆ ಮಾಡುವಾಗ ಈ ಗಣವೆಲ್ಲಾ ನೋಡಿ ಮಾಡುತ್ತಾರೆ. ಗಣದ ಹೊಂದಾಣಿಕೆ ಇದ್ದರೆ ಒಳ್ಳೆಯದು, ಇಲ್ಲದಿದ್ದರೆ ಜಗಳವಾಗುತ್ತೆ, ಹಾಗಾಗಿ ಗಣದ ಹೊಂದಾಣಿಕೆ ಮಾಡುತ್ತಾರೆ.

ದೇವ ಗಣದ ಗುಣ

ದೇವಗುಣದವರು ಆಕರ್ಷಣೆಯ ವ್ಯಕ್ತಿತ್ವದವರು. ಇವರು ತುಂಬಾನೇ ಬುದ್ಧಿವಂತರಾಗಿರುತ್ತಾರೆ, ಸರಳ ಹಾಗೂ ನೇರ ಸ್ವಭಾವದವರು, ಬೇರೆಯವರ ಬಗ್ಗೆ ಇವರಿಗೆ ಕರುಣೆ ಇರುತ್ತದೆ. ಇವರಲ್ಲಿನ ಒಳ್ಳೆಯ ಗುಣದಿಂದಾಗಿ ಸದಾ ಗುರುತಿಸಿಕೊಳ್ಳುತ್ತಾರೆ.

ಮನುಷ್ಯ ಗಣದ ಸ್ವಭಾವ

ಮನುಷ್ಯ ಗಣದವರು ಶ್ರೀಮಂತರಾಗಿರುತ್ತಾರೆ, ಇವರಲ್ಲಿ ಅತ್ಯಧಿಕ ಜ್ಞಾನವಿರುತ್ತದೆ, ಅಲ್ಲದೆ ಇವರು ಮನುಷ್ಯ ಹಾಗೂ ದೇವಗಣದ ಜೊತೆಗೆ ಹೊಂದಿಕೊಂಡು ಹೋಗುತ್ತಾರೆ. ಅಲ್ಲದೆ ಸಮಸ್ಯೆ ಬಂದರೂ ಅದರ ಜೊತೆ ಹೊಂದಿಕೊಳ್ಳುವ ಗುಣ ಇವರಿಗೆ ಇರುತ್ತದೆ. ಇವರು ಎಲ್ಲಾ ಸಮಯದಲ್ಲಿ ಒಳ್ಳೆಯವರು ಎಂದು ಹೇಳಲು ಸಾಧ್ಯವಿಲ್ಲ, ಅವರು ಸಮಯಕ್ಕೆ ತಕ್ಕಂತೆ ಬದಲಾಗುತ್ತಾರೆ. ಅವರು ಅವರಿಗಾಗಿ, ಅವರ ಮಕ್ಕಳಿಗಾಗಿ ಆಸ್ತಿ, ಅಂತಸ್ತು ಮಾಡಬೇಕು ಎಂದು ಆಸೆ ತೋರಿಸುತ್ತಾರೆ, ಅವರು ಅವರಿಗೆ ಮೊದಲು ಪ್ರಾಮುಖ್ಯತೆ ನೀಡುತ್ತಾರೆ.

ರಾಕ್ಷಸ ಗಣದ ಸ್ವಭಾವ

ಇವರು ಸ್ವಲ್ಪ ಹಠಮಾರಿಗಳು ಹಾಗೂ ಕಠಿಣ ಸ್ವಭಾವದವರು ಆಗಿರುತ್ತಾರೆ. ಆದರೆ ಇವರಲ್ಲಿ ಒಳ್ಳೆಯ ಗುಣಗಳೂ ಇರುತ್ತದೆ, ಅವರು ತಮ್ಮ ಸುತ್ತ ಇರುವ ಅಪಾಯವನ್ನು ಬೇಗನೆ ಗ್ರಹಿಸಿ ಅದರಿಂದ ದೂರ ಸರಿಯುತ್ತಾರೆ. ಅಲ್ಲದೆ ಇವರ ಸಿಕ್ಸ್ತ್‌ ಸೆನ್ಸ್‌ ಇದೆಯೆಲ್ಲಾ ಅದಂತೂ ಸೂಪರ್ ಆಗಿರುತ್ತದೆ, ಅವರು ಎಂಥದ್ದೇ ಪರಿಸ್ಥಿತಿಯಾದರೂ ಅದನ್ನು ಧೈರ್ಯದಿಂದ ಎದುರಿಸುತ್ತಾರೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

As per Astrology Which Nakshtra People Belong To Which Gana And Their Nature

as per astrology which Nakshtra people belong to which gana
X
Desktop Bottom Promotion