Latest Updates
-
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು!
ಈ 4 ರಾಶಿಯವರು ಚಿನ್ನ ಧರಿಸಬಾರದಂತೆ, ಪತ್ನಿ ಈ ರಾಶಿಯವರಾಗಿದ್ದರೆ ನೀವು ಅದೃಷ್ಟವಂತರೇ ಬಿಡಿ!
ನೀವು ಚಿನ್ನ ಧರಿಸುವುದು ತುಂಬಾನೇ ಇಷ್ಟಪಡುತ್ತೀರಾ? ಹಾಗಾದರೆ ನಿಮ್ಮ ರಾಶಿಗೆ ಚಿನ್ನದ ಆಭರಣ ಆಗಿ ಬರುತ್ತಿದೆಯೇ ಎಂದು ನೋಡುವುದು ಒಳ್ಳೆಯದು. ಚಿನ್ನ ಕಷ್ಟ ಕಾಲದಲ್ಲಿ ಎಲ್ಲರ ಕೈ ಹಿಡಿಯುತ್ತೆ ನಿಜ, ಆದರೆ ಕೆಲ ರಾಶಿಯವರಿಗೆ ಚಿನ್ನ ಧರಿಸುವುದರಿಂದ ಸಮಸ್ಯೆಗಳು ಉಂಟಾಗುತ್ತೆ.
ಜ್ಯೋತಿಷ್ಯ ಪ್ರಕಾರ ನಾವು ಆಭರಣಗಳನ್ನು ಧರಿಸುವಾಗ ನಮ್ಮ ರಾಶಿಗೆ ಒಂದುವ ಆಭರಣರಣ ಧರಿಸಬೇಕೆಂದು ಹೇಳುತ್ತದೆ. ಹರಳುಗಳನ್ನು ಧರಿಸುವಾಗ ಈ ಬಗ್ಗೆ ಗಮನಿಸುವುದುಂಟು, ಆದರೆ ಚಿನ್ನ ಧರಿಸುವಾಗ ಯಾರೂ ಚಿನ್ನ ನಮ್ಮ ರಾಶಿಗೆ ಹೊಂದಿಕೊಂಡು ಹೋಗುತ್ತದೆಯೇ ಎಂದು ಯೋಚಿಸುವುದಿಲ್ಲ.

ಆದರೆ ವೈದಿಕ ಶಾಸ್ತ್ರವು ಚಿನ್ನವನ್ನು ಕೆಲ ರಾಶಿಗು ಧರಿಸಬಾರದೆಂದು ಹೇಳುತ್ತದೆ, ಶಾಸ್ತ್ರ ಪ್ರಕಾರ ಯಾವ ರಾಶಿಯವರು ಚಿನ್ನ ಧರಿಸಬಾರದು ಎಂದು ನೋಡೋಣ:
ವೃಷಭ ರಾಶಿ
ವೃಷಭ ರಾಶಿಯವರಿಗೆ ಚಿನ್ನ ಅದೃಷ್ಟದ ಆಭರಣ ಅಲ್ವೇ ಅಲ್ಲ ಅನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಈ ರಾಶಿಯವರು ಚಿನ್ನ ಧರಿಸುವುದರಿಂದ ಕೆಲ ಸಮಸ್ಯೆಗಳನ್ನು ಎದುರಿಸಬಹುದು. ವ್ಯಾಪಾರದಲ್ಲಿ ನಷ್ಟ, ಉದ್ಯೋಗದಲ್ಲಿ ತೊಂದರೆ ಈ ಬಗೆಯ ಸಮಸ್ಯೆಗಳು ಉಂಟಾಗುವುದು. ಇನ್ನು ಚಿನ್ನ ಧರಿಸುವುದರಿಂದ ನಿಮ್ಮ ಸಂಬಂಧದ ಮೇಲೂ ಪರಿಣಾಮ ಬೀರುತ್ತದೆ. ನೀವು ಆಭರಣ ಪ್ರಿಯರಾಗಿದ್ದರೆ ಚಿನ್ನದ ಬದಲಿಗೆ ವಜ್ರ, ಬೆಳ್ಳಿ, ಹವಳ ಈ ಬಗೆಯ ಆಭರಣ ಧರಿಸಬಹುದು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಕೂಡ ಚಿನ್ನದ ಆಭರಣ ಶುಭ ಫಲಿತಾಂಶ ನೀಡುವುದಿಲ್ಲ ಎಂದು ವೈದಿಕ ಶಾಸ್ತ್ರ ಹೇಳುತ್ತದೆ. ಮಿಥುನ ರಾಶಿಯವರು ಚಿನ್ನದ ಆಭರಣ ಧರಿಸಿದಾಗ ಇದರಿಂದ ಆರ್ಥಿಕ ನಷ್ಟ ಸಂಭವಿಸಲಿದೆ ಎಂದು ವೈದಿಕ ಶಾಸ್ತ್ರ ಹೇಳುತ್ತದೆ. ನೀವು ಮಿಥುನ ರಾಶಿಯವರಾಗಿದ್ದು ಆರ್ಥಕ ಸಂಕಷ್ಟ ಎದುರಾಗಿದ್ದರೆ ಚಿನ್ನದ ಆಭರಣದ ಬದಲಿಗೆ ಬೇರೆ ಆಭರಣ ಧರಿಸಿ ನೋಡಿ ಲಕ್ ಬದಲಾಗಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೂ ಚಿನ್ನ ಆಗಿ ಬರಲ್ಲ. ಚಿನ್ನಕ್ಕೂ ವೃಶ್ಚಿಕ ರಾಶಿಯವರಿಗೂ ಶತ್ರುತ್ವ. ನೀವು ಚಿನ್ನವನ್ನು ಧರಿಸಿದಂತೆ ಸಮಸ್ಯೆ ಹೆಚ್ಚಾಗುವುದಾಗಿ ಶಾಸ್ತ್ರವು ಹೇಳುತ್ತದೆ. ಹೆಚ್ಚು ಆಭರಣ ಧರಿಸಿದಷ್ಟೂ ಹೆಚ್ಚಿನ ಸಮಸ್ಯೆ ಎದುರಾಗುವುದು. ಹಾಗಾಗಿ ವೃಶ್ಚಿಕ ರಾಶಿಯವರು ಚಿನ್ನದ ಆಭರಣ ಧರಿಸುವುದು ಸೂಕ್ತವಲ್ಲ ಎಂದು ವೈದಿಕಸಾಸ್ತ್ರ ಹೇಳುತ್ತದೆ.
ಕುಂಭ ರಾಶಿ
ಕುಂಭ ರಾಶಿಯವರು ಕೂಡ ಚಿನ್ನದ ಆಭರಣ ಧರಿಸದಿದ್ದರೆ ಒಳ್ಳೆಯದು ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಚಿನ್ನ ಸೂರ್ಯ ಗ್ರಹದೊಂದಿಗೆ ಸಂಬಂಧ ಹೊಂದಿದೆ, ಅದೇ ಕುಂಭ ರಾಶಿಯ ಆಡಳಿತ ಗ್ರಹ ಶನಿ, ಇವೆರಡೂ ಪರಸ್ಪರ ಶತ್ರು ಗ್ರಹಗಳಾದ ಕಾರಣ ಚಿನ್ನ ಧರಿಸುವುದರಿಂದ ಸಮಸ್ಯೆಗಳು ಹೆಚ್ಚಾಗುವುದು.
ಸಲಹೆ
ಇಲ್ಲಿ ನೀಡಿರುವ ಮಾಹಿತಿಯು ನಂಬಿಕೆಗಳಾಗಿದೆ, ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಶಾಸ್ತ್ರವೇ ಹಾಗೆ ಗ್ರಹಗಳ ಚಲನೆ, ರಾಶಿ, ನಮ್ಮ ರಾಶಿಗೆ ಯಾವುದು ಆಡಳಿತ ಗ್ರಹ ಇವುಗಳ ಆಧಾರದ ಮೇಲೆ ಭವಿಷ್ಯ ಹೇಳಲಾಗುವುದು. ಜ್ಯೋತಿಷ್ಯವನ್ನು ಕೆಲವರು ನಂಬಿದರೆ ಇನ್ನು ಕೆಲವರು ನಂಬುವುದಿಲ್ಲ. ಜ್ಯೋತಿಷ್ಯ ಮಾಹಿತಿ ನಂಬಬೇಕೆ,ಬೇಡ್ವೆ ಎಂಬುವುದು ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದು, ಇಲ್ಲಿ ಯಾವುದೇ ಮಾಹಿತಿಯನ್ನು ನಿಮ್ಮ ಪ್ರಭಾವ ಬೀರಲು ಬಳಸಿಕೊಂಡಿಲ್ಲ, ನೀವು ನಿಮ್ಮ ರಾಶಿಯ ಕುರಿತು ಹೆಚ್ಚು ತಿಳಿಯಲು ಬಯಸಿದರೆ ಪಂಡಿತರನ್ನು ಭೇಟಿಯಾದರೆ ಒಳ್ಳೆಯದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











