Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಜ್ಯೋತಿಷ್ಯ ಶಾಸ್ತ್ರ ಹೇಳುತ್ತೆ ಈ ರಾಶಿಯವರು ತುಂಬಾನೇ ರೊಮ್ಯಾಂಟಿಕ್ ಅಂತೆ
ಗಂಡ-ಹೆಂಡತಿ ಬಳಿ ನಿಮ್ಮಿಬ್ಬರಲ್ಲಿ ಯಾರು ರೊಮ್ಯಾಂಟಿಕ್ ಎಂದು ಕೇಳಿದರೆ ಯಾರಾದರು ಒಬ್ಬರತ್ತ ಕೈ ತೋರಿಸುತ್ತಾರೆ. ಇಬ್ಬರೂ ರೊಮ್ಯಾಂಟಿಕ್ ಆಗಿದ್ದರೆ ಇನ್ನೂ ಸೂಪರ್, ಆದರೆ ಬಹುತೇಕ ಸಂಬಂಧದಲ್ಲಿ ಒಬ್ಬರು ತುಂಬಾನೇ ರೊಮ್ಯಾಂಟಿಕ್ ಮತ್ತೊಬ್ಬರು ಸ್ವಲ್ಪ ಗಂಭೀರವಾಗಿರುತ್ತಾರೆ. ಹಾಗಂತ ಅವರಿಗೆ ಪ್ರೀತಿಯಿಲ್ಲ ಎಂದಲ್ಲ, ಅವರಿಗೂ ಪ್ರೀತಿ ಇರುತ್ತದೆ,ಭಾವನೆಗಳಿರುತ್ತದೆ ಆದರೆ ಭಾವನೆಗಳನ್ನು ವ್ಯಕ್ತಪಡಿಸುವುದು ಕಡಿಮೆ ಅಷ್ಟೇ...
ಆದರೆ ರೊಮ್ಯಾಂಟಿಕ್ ಸಂಗಾತಿ ಆ ರೀತಿಯಲ್ಲ ಏನಾದರೂ ಗಿಫ್ಟ್ಸ್ ನೀಡುವುದು, ಔಟಿಂಗ್ ಪ್ಲ್ಯಾನ್ ಮಾಡುವುದು, ಟ್ರಿಪ್ ಪ್ಲ್ಯಾನ್ ಮಾಡುವುದು ಅಂತ ಮಾಡುತ್ತಿರುತ್ತಾರೆ. ಅವರು ನಿಮ್ಮೊಂದಿಗಿನ ಜೀವನವನ್ನು ಸೆಲೆಬ್ರೇಟ್ ಮಾಡಲು ಬಯಸುತ್ತಾರೆ. ಕೆಲವೊಮ್ಮೆ ಇವರ ಸ್ವಭಾವ ವಿಚಿತ್ರ ಅನಿಸಬಹುದು, ಅದಕ್ಕೆ ಅವರನ್ನು ದೂರಿ ಪ್ರಯೋಜನವಿಲ್ಲ, ಅವರ ರಾಶಿಯೂ ಕಾರಣವಾಗಿರುತ್ತದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.
ಜ್ಯೋತಿಷ್ಯ ಪ್ರಕಾರ ಈ ರಾಶಿಯವರು ಸ್ವಲ್ಪ ಹೆಚ್ಚು ರೊಮ್ಯಾಂಟಿಕ್ ಅಂತೆ,ಹೌದೇ?

ಮೀನ ರಾಶಿ
ಮೀನ ರಾಶಿಯವರು ತುಂಬಾನೇ ರೊಮ್ಯಾಂಟಿಕ್ ಸ್ವಭಾವದವರು. ಈ ರಾಶಿಯವರು ಸಂಗಾತಿಯಾಗಿ ದೊರೆತರೆ ಅವರು ಸಂಗಾತಿಯ ಕಡೆಗೆ ತುಂಬಾನೇ ಗಮನಹರಿಸುತ್ತಾರೆ, ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇವರು ರೊಮ್ಯಾಂಟಿಕ್ ಮಾತುಗಳಲ್ಲಿ ತೇಲಿಸಿ ಬಿಡುತ್ತಾರೆ. ಸಂಗಾತಿ ಜೊತೆ ಟ್ರಿಪ್ ಹೋಗಲು ಇಷ್ಟಪಡುತ್ತಾರೆ. ಇನ್ನು ಹೇಳಬೇಕೆಂದರೆ ಭ್ರಮಾ ಲೋಕದಲ್ಲಿ ಇರ್ತಾರೆ.
ತುಲಾ ರಾಶಿ
ತುಲಾ ರಾಶಿಯವರ ಅಧಿಪತಿ ಶುಕ್ರ, ಇವರು ಕೂಡ ತುಂಬಾನೇ ರೊಮ್ಯಾಂಟಿಕ್ ಸ್ವಭಾವದರು ಎಂದು ಹೇಳಲಾಗುವುದು, ಇವರು ಸಂಬಂಧಕ್ಕೆ ತುಂಬಾನೇ ಗಮನ ನೀಡುತ್ತಾರೆ. ರೊಮ್ಯಾಂಟಿಕ್ ಡೇಟ್, ರೊಮ್ಯಾಂಟಿಕ್ ಟ್ರಿಪ್ ಅಂತ ಪ್ಲ್ಯಾನ್ ಮಾಡುತ್ತಾರೆ. ಇವರು ತಮ್ಮ ಸಂಗಾತಿ ಕೂಡ ಅಷ್ಟೇ ರೊಮ್ಯಾಂಟಿಕ್ ಆಗಿರಬೇಕೆಂದು ಬಯಸುತ್ತಾರೆ. ಸಂಗಾತಿ ಸರ್‌ಪ್ರೈಸ್ ಕೊಡುವುದೆಂದರೆ ತುಂಬಾನೇ ಇಷ್ಟ.
ಕರ್ಕ ರಾಶಿ
ಕರ್ಕ ರಾಶಿಯವರು ತಮ್ಮ ಪ್ರೀತಿಯಲ್ಲಿ ನಿಯತ್ತಿನಿಂದ ಇರ್ತಾರೆ, ಇವರು ತಮ್ಮ ಸಂಗಾತಿಯನ್ನು ತುಂಬಾನೇ ಕೇರ್ ಮಾಡುತ್ತಾರೆ. ಹೀಗಾಗಿ ಇವರನ್ನು ರೊಮ್ಯಾಂಟಿಕ್ ಪಾರ್ಟನರ್ ಎಂದು ಕರೆಯಲಾಗುವುದು. ಇವರು ತಮ್ಮ ಪ್ರೀತಿಯನ್ನು ಹೊರ ಜಗತ್ತಿಗೆ ತೋರ್ಪಡಿಸುವುದು ಕೂಡ ಹೆಚ್ಚು. ಗ್ರ್ಯಾಂಡ್ ಆಗಿ ಆನಿವರ್ಸರಿ ಪಾರ್ಟಿ ಮಾಡುವುದು ಅಥವಾ ಸೋಷಿಯಲ್ ಮೀಡಿಯಾದಲ್ಲಿ ಸಂಗಾತಿಯೊಂದಿಗಿನ ಫೋಟೋ ಹಂಚಿಕೊಳ್ಳುವ ಮೂಲಕ ತೋರ್ಪಡಿಕೆಯ ಪ್ರೀತಿ ಕೂಡ ಮಾಡುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯವರು ನೋಡಲು ತುಂಬಾನೇ ಗಂಭೀರ ಸ್ವಭಾವದವರಂತೆ ಕಾಣುತ್ತಾರೆ, ಆದರೆ ಅವರು ಕೂಡ ತುಂಬಾನೇ ರೊಮ್ಯಾಂಟಿಕ್ ಸ್ವಭಾವದವರು. ರೊಮ್ಯಾಂಟಿಕ್ ಡೇಟಿಂಗ್ ಪ್ಲ್ಯಾನ್ ಮಾಡುವುದು, ಗಿಫ್ಸ್ಟ್ ನೀಡುವುದು ಇದರಲ್ಲಿ ಇವರು ಎತ್ತಿದ ಕೈ. ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ ಹಾಗೂ ನಿಯತ್ತಿನಿಂದ ಇರ್ತಾರೆ.
ವೃಷಭ ರಾಶಿ
ವೃಷಭ ರಾಶಿಯವರು ಕೂಡ ತಮ್ಮ ಸಂಗಾತಿಯನ್ನು ತುಂಬಾನೇ ಪ್ರೀತಿ ಮಾಡುತ್ತಾರೆ. ಇವರು ಕಮಿಟ್ ಆದರೆ ಆ ಸಂಬಂಧದಲ್ಲಿ ತುಂಬಾನೇ ಸೀರಿಯಸ್ ಆಗುತ್ತಾತರೆ, ತುಂಬಾನೇ ನಿಯತ್ತಿನಿಂದ ಇರ್ತಾರೆ. ಆದರೆ ಇವರು ಲಕ್ಷುರಿ ಜೀವನ ಬಯಸುವುದು ಹೆಚ್ಚು. ತಮ್ಮ ಸಂಗಾತೊಇಗೆ ಕೂಡ ಲಕ್ಷುರಿ ವಸ್ತುಗಳನ್ನೇ ಗಿಫ್ಟ್ಸ್ ನೀಡುತ್ತಾರೆ.
ಇತರ ರಾಶಿಯವರು ರೊಮ್ಯಾಂಟಿಕ್ ಅಲ್ವೇ ಅಲ್ಲ ಅಂತ ಹೇಳುತ್ತಿಲ್ಲ, ಆದರೆ ಈ ರಾಶಿಯವರು ಸ್ವಲ್ಪ ಹೆಚ್ಚು ರೊಮ್ಯಾಂಟಿಕ್ ಸ್ವಭಾವದವರು ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಈ ರಾಶಿಯವರು ನಿಮ್ಮ ಸಂಗಾತಿಯಾಗಿದ್ದು ಅವರೇನು ರೊಮ್ಯಾಂಟಿಕ್ ಆಗಿಲ್ಲ ಎಂದಾದರೆ ಅದು ತಪ್ಪು ಕಲ್ಪನೆ, ಇವರು ನಿಜವಾಗಲೂ ಇಷ್ಟಪಟ್ಟರೆ ತುಂಬಾನೇ ರೊಮ್ಯಾಂಟಿಕ್ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
