Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಧನ ತ್ರಯೋದಶಿ ಬಳಿಕ ಈ ರಾಶಿಯವರು ಆರ್ಥಿಕವಾಗಿ ಬೆಳೆಯುವಿರಿ, ವೃತ್ತಿ ಜೀವನದಲ್ಲಿಯೂ ಪ್ರಗತಿ ಇರಲಿದೆ
ದೀಪಾವಳಿಗೆ ಮುನ್ನ ದಿನ ಧನ ತ್ರಯೋದಶಿ ಅಥವಾ ಧನ್ತೇರಸ್ ಬರುತ್ತದೆ. ಮನೆಗೆ ಗಾಡಿ, ಚಿನ್ನ-ಬೆಳ್ಳಿ ಈ ಬಗೆಯ ವಸ್ತುಗಳನ್ನು ಖರೀದಿಸಲು ಅತ್ಯಂತ ಶುಭ ದಿನವಾಗಿದೆ. ಈ ವರ್ಷ ಧನ್ತೇರಸ್ ಡಿಸೆಂಬರ್ 29ಕ್ಕೆ ಆಚರಿಸಲಾಗುವುದು. ಈ ದಿನದಂದು ಯಾವುದೇ ಸಮಯದಲ್ಲಿ ಬೇಕಾದರೆ ನೀವು ವಸ್ತುಗಳನ್ನು ಖರೀದಿಸಬಹುದು. ಧನ್ತೇರಸ್ ಶುಭ ಸಮಯ ಅಕ್ಟೋಬರ್ 29 ಬೆಳಗ್ಗೆ 10:31ರಿಂದ ಅಕ್ಟೋಬರ್ 30 ಮಧ್ಯಾಹ್ನ 1:11ರವರೆಗೆ ಅದೃಷ್ಟದ ಸಮಯವಾಗಿದೆ.
ಧನ್ತೇರಸ್ ದಿನದಂದು ಎಲ್ಲಾ ಸಮಯ ಶುಭವಾಗಿದೆ ಆದರೆ ಈ ಸಮಯ ತುಂಬಾ ಶುಭವಾಗಿದೆ ನೋಡಿ:
ಡಿಸೆಂಬರ್ 29ರಂದು ಬೆಳಗ್ಗೆ 09:18ರಿಂದ 10:14ರವರೆಗೆ ಇದೆ
ಈ ದಿನ ಲಾಭ ಘಳಿಗೆ ಬೆಳಗ್ಗೆ 10:41ರಿಂದ 12:05ರವರೆಗೆ ಇದೆ
ಅಮೃತಘಳಿಗೆ: ಮಧ್ಯಾಹ್ನ 12:05ರಿಂದ 1:28ರವರೆಗೆ ಇದೆ
ಸಂಜೆ ಶುಭ ಸಮಯ: ಸಂಜೆ 07: 15ರಿಂದ 08:15ರವರೆಗೆ ಇದೆ.

ಈ ದಿನ ಗಾಡಿ ಖರೀದಿಗೆ ಶುಭವಲ್ಲ
ಮಂಗಳವಾರ, ಶನಿವಾರ ಗಾಡಿ ಖರೀದಿ ಒಳ್ಳೆಯದಲ್ಲ ಎಂಬ ನಂಬಿಕೆಯಿದೆ, ಹಾಗಾಗಿ ಈ ಬಾರಿ ಧನ್ತೇರಸ್ ಮಂಗಳವಾರ ಬಂದಿರುವುದರಿಂದ ಈ ದಿನ ಗಾಡಿ ಖರೀದಿಸಲ್ಲ, ಬದಲಿಗೆ ಬುಧವಾರ ಕೂಡ ಒಳ್ಳೆಯ ಸಮಯವಿದೆ. ಹಾಗಾಗಿ ಮಂಗಳವಾರ ಬೇಡ, ಬುಧವಾರ ನೀವು ಗಾಡಿ ಖರೀದಿಸಬಹುದು.
ಗುರು ವೃಷಭ ರಾಶಿಯಲ್ಲಿದೆ, ಶುಕ್ರನು ಕನ್ಯಾರಾಶಿಯ್ಲಿದೆ, ಶನಿಯು ಕುಂಭ ರಾಶಿಯಲ್ಲಿದೆ, ತುಲಾ ರಾಶಿಯಲ್ಲಿ ಸೂರ್ಯವಿದೆ, ಈ ಎಲ್ಲಾ ಗ್ರಹಗಳು ಧನ ತ್ರಯೋದಶಿಯಂದು ವಿಶೇಷ ಯೋಗ ಉಂಟು ಮಾಡಿದೆ. ಈ ಯೋಗ ಈ ರಾಶಿಗಳಿಗೆ ಹೆಚ್ಚು ಅದೃಷ್ಟ ತರಲಿದೆ:
ಸಿಂಹ ರಾಶಿ
ಧನ ತ್ರಯೋದಶಿಯಂದು ಉಂಟು ಮಾಡುವ ಶುಭ ಯೋಗ ಸಿಂಹ ರಾಶಿಯವರಿಗೆ ಮಂಗಳಕರವಾಗಿದೆ. ನಿಮ್ಮ ಯೋಜನೆಯಂತೆಯೇ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ.ಈ ಧನ ತ್ರಯೋದಶಿಯಂದು ನೀವು ಏನಾದರು ಹೊಸ ಕಾರ್ಯಕ್ಕೆ ಕೈ ಹಾಕಿದರೆ ಖಂಡಿತ ಯಶಸ್ವಿ ಪಡೆಯುತ್ತೀರಿ. ಇನ್ನು ಅವಾಹಿತರು ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಈ ಧನ ತ್ರಯೋದಶಿ ಬಳಿಕ ಮದುವೆ ಸಂಬಂಧ ಕೂಡಿ ಬರಲಿದೆ, ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿದೆ.
ಮಿಥುನ ರಾಶಿ
ಧನ ತ್ರಯೋದಶಿಯ ಬಳಿಕ ಮಿಥುನ ರಾಶಿಯವರು ಉತ್ತಮ ಪ್ರಯೋಜನ ಪಡೆಯುತ್ತೀರಿ. ವೃತ್ತಿ ಬದುಕಿನಲ್ಲಿ ಪ್ರಗತಿ ಸಾಧಿಸುತ್ತೀರಿ. ಆರೋಗ್ಯ ಸಮಸ್ಯೆಯಿದ್ದರೆ ಸುಧಾರಣೆ ಕಂಡು ಬರಲಿದೆ. ವ್ಯಾಪಾರಿಗಳು ಪ್ರಗತಿಯತ್ತ ಸಾಗುತ್ತೀರಿ, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ. ಕುಟುಂಬದಲ್ಲಿ ಏನಾದರು ಸಮಸ್ಯೆಯಿದ್ದರೆ ಅದು ಬಗೆಹರಿಯಲಿದೆ.
ಮಕರ ರಾಶಿ
ಈ ಧನ ತ್ರಯೋದಶಿ ಬಳಿಕ ಮಕರ ರಾಶಿಯವರು ವೃತ್ತಿ ಬದುಕಿನಲ್ಲಿ ಬಡ್ತಿ ಕಾಣಬಹುದು. ವ್ಯಾಪಾರಿಗಳು ಉತ್ತಮ ಪ್ರಗತಿ ಕಾಣುತ್ತೀರಿ, ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗಲಿದೆ, ಹೀಗಾಗಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ.
ಕುಂಭ ರಾಶಿ
ಧನ ತ್ರಯೋದಶಿ ಬಳಿಕ ಕುಂಭ ರಾಶಿಯ ವ್ಯಾಪಾರಿಗಳು ಉತ್ತಮ ಪ್ರಯೋಜನ ಪಡೆಯುತ್ತೀರಿ. ವೃತ್ತಿ ಬದುಕಿನಲ್ಲಿ ಎದುರುತ್ತಿರುವ ಸವಾಲುಗಳು ದೂರಾಗುವುದು. ಆರ್ಥಿಕ ಸವಾಲುಗಳು ಕಡಿಮೆಯಾಗುವ ಸೂಚನೆಯಿದೆ. ಆದಾಯ ಹೆಚ್ಚಿಸಲು ನೀವು ಮಾಡುವ ಪ್ರಯತ್ನಗಳಿಗೆ ಉತ್ತಮ ಫಲ ಸಿಗಲಿದೆ.
ಮೇಷ ರಾಶಿ
ಧನ ತ್ರಯೋದಶಿ ಬಳಿಕ ಮೇಷ ರಾಶಿಯವರು ಉತ್ತಮ ಪ್ರಯೋಜನ ಪಡೆಯುತ್ತೀರಿ. ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣುತ್ತೀರಿ. ವ್ಯಾಪಾರಿಗಳು ಉತ್ತಮ ಆರ್ಥಿಕ ಪ್ರಯೋಜನ ಪಡೆಯುತ್ತೀರಿ. ಹೊಸ ಕಡೆ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದರೆ ಆ ಕೆಲಸ ಸಿಗಲಿದೆ. ಧನ ತ್ರಯೋದಶಿ ಬಳಿಕ ಜೀವನದಲ್ಲಿ ಪ್ರಗತಿ ಕಾಣುವಿರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications