Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2025ರ ಮೇಷ ರಾಶಿಫಲ: ಹೊಸ ವರ್ಷ ಮೇಷ ರಾಶಿಯವರಿಗೆ ಈ ರೀತಿ ಇರಲಿದೆ ಎನ್ನುತಿದೆ ವೈದಿಕ ಶಾಸ್ತ್ರ
2024 ಎಷ್ಟು ಬೇಗ ಮುಗೀತಾ ಬಂತಲ್ಲ ಎಂದನಿಸುತ್ತಿರಬಹುದು ಅಲ್ವಾ? ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಕ್ಯಾಲೆಂಡರ್, ಹೊಸ ನಿರೀಕ್ಷೆ , ಹೊಸ ಭರವಸ, ಅದರಂತೆ ಹೊಸ ಭವಿಷ್ಯ... ನಾವಿಲ್ಲಿ ಮೇಷ ರಾಶಿಯವರಿಗೆ 2025ನೇ ವರ್ಷ ಹೇಗಿರಲಿದೆ, ಗ್ರಹಗತಿಗಳ ಸ್ಥಾನವು ಅವರ ರಾಶಿಯಲ್ಲಿ ಹೇಗಿರಲಿದೆ ಎಂಬೆಲ್ಲಾ ಮಾಹಿತಿ ನೋಡೋಣ ಬನ್ನಿ:

ವೃತ್ತಿ ಜೀವನ
ಈ ವರ್ಷದ ಆರಂಭ ತುಂಬಾ ಚೆನ್ನಾಗಿರಲಿದೆ. ವರ್ಷದ ಆರಂಭದ ಮೂರು ತಿಂಗಳು ಅಂದರೆ ಮಾರ್ಚ್‌ವರೆಗೆ ವೃತ್ತಿ ಜೀವನದ ದೃಷ್ಟಿಯಿಂದ ತುಂಬಾನೇ ಚೆನ್ನಾಗಿರಲಿದೆ, ಮತ್ತೆ ಸ್ವಲ್ಪ ಏರಳಿತ ಉಂಟಾಗುವುದು, ಆದರೆ ಚಿಂತೆ ಮಾಡಬೇಕಾಗಿಲ್ಲ, ರಾಹು ಸಂಚಾರದ ಬಳಿಕ ನೀವು ಮತ್ತೆ ನಿಮ್ಮ ವೃತ್ತಿ ಬದುಕಿನಲ್ಲಿ ಉತ್ತಮ ಫಲಿತಾಂಶ ಪಡೆಯುತ್ತೀರಿ.
ಕೆಲಸದ ದೃಷ್ಟಿಯಿಂದ ಮಾಡುವ ಪ್ರಯಾಣ ತುಂಬಾ ಚೆನ್ನಾಗಿರಲಿದೆ. ಮೇ ನಂತರ ನೀವು ಹೆಚ್ಚಿನ ಕಠಿಣ ಶ್ರಮ ಹಾಕಬೇಕಾಗುತ್ತದೆ, ಆದರೆ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ವ್ಯಾಪಾರಿಗಳಿಗೆ ವರ್ಷದ ಆರಂಭ ತುಂಬಾ ಚೆನ್ನಾಗಿರಲಿದೆ, ಮಾರ್ಚ್‌ನಲ್ಲಿ ಶನಿಯ ರಾಶಿ ಬದಲಾವಣೆಯಾಗಲಿದೆ, ಇದರಿಂದಾಗಿ ಸ್ವಲ್ಪ ಏರಳಿತ ಉಂಟಾಗುವುದು, ಆದರೆ ಮೇ ನಂತರ ನಿಮ್ಮ ವ್ಯವಹಾರದಲ್ಲಿ ಪ್ರಗತಿ ಕಾಣುತ್ತೀರಿ, ವೃತ್ತಿ ಬದುಕಿನಲ್ಲಿ ತೃಪ್ತಿದಾಯಕ ಫಲಿತಾಂಶ ಪಡೆಯುತ್ತೀರಿ.
ಹಣಕಾಸು
2025ರ ರಾಶಿ ಫಲ ಪ್ರಕಾರ ಹೊಸ ವರ್ಷವು ಹಣಕಾಸಿನ ದೃಷ್ಟಿಯಿಂದ ನಿಮಗೆ ತುಂಬಾನೇ ಚೆನ್ನಾಗಿರಲಿದೆ, ಮಧ್ಯದಲ್ಲಿ ಸ್ವಲ್ಪ ಏರಳಿತ ಉಂಟಾದರೂ ನಂತರ ಹಣಕಾಸಿನ ಪರಿಸ್ಥಿತಿಯಲ್ಲಿ ಸುಧರಣೆಕ ಕಂಡು ಬರಲಿದೆ. ಉದ್ಯೋಗಿಗಳಿಗೆ ಕೆಲಸದಲ್ಲಿ ಬಡ್ತಿ ಸಿಗಬಹುದು, ವ್ಯಾಪರಾಸ್ಥರು ಲಾಭ ಗಳಿಸುತ್ತೀರಿ. ಆರ್ಥಿಕವಾಗಿ ಉತ್ತಮವಾಗಿರುವುದರಿಂದ ಮನೆ ಮಟ್ಟಬೇಕು ಅಥವಾ ಗಾಡಿ ಖರೀದಿಸಬೇಕೆಂಬ ಆಸೆ ಈಡೇರಲಿದೆ.
ನೀವು ಆಸ್ತಿಯನ್ನು ಖರೀದಿ ಮಾಡಿದ್ದರೆ ಮನೆ ಖರೀದಿಸಲು ಸಾಧ್ಯವಾಗುವುದು. ಮನೆಗೆ ಸಂಬಂಧಿಸಿದ ನಿಮ್ಮ ಕನಸು ನನಸಾಗಬಹುದು. ನಿಮ್ಮ ಬಳಿ ಗಾಡಿಯಿದ್ದರೆ ಹೊಸ ಗಾಡಿ ಖರೀದಿ ಮಾಡುವುದು ಸೂಕ್ತವಲ್ಲ, ಆ ಹಣವನ್ನು ಬೇರೆ ಕಡೆಗೆ ಹೂಡಿಕೆ ಮಾಡಿದರೆ ಒಳ್ಳೆಯದು ಎಂದು ಶಾಸ್ತ್ರ ಹೇಳುತ್ತದೆ.
ಕುಟುಂಬ ಜೀವನ
ಕುಟುಂಬ ಜೀವನದ ದೃಷ್ಟಿಯಿಂದ 2025ರ ವರ್ಷ ಉತ್ತಮವಾಗಿದೆ. ಮಗುವಿನ ಅಪೇಕ್ಷಿತ ದಂಪತಿ ಈ ವರ್ಷ ಸಿಹಿ ಸುದ್ದಿಯನ್ನು ಪಡೆಯುತ್ತೀರಿ, ನಿಮ್ಮ ಹಾಗೂ ಸಂಗಾತಿ ನಡುವಿನ ವೈವಾಹಿಕ ಬದುಕು ತುಂಬಾ ಚೆನ್ನಾಗಿರಲಿದೆ. ಅವಾಹಿತರಿಗೆ ಮದುವೆ ಸಂಬಂಧ ಹುಡುಕುತ್ತಿದ್ದರೆ 2025ರ ವರ್ಷವು ನಿಮಗೆ ಉತ್ತಮವಾಗಿದೆ, ಗುರು ಬಲ ನಿಮಗೆ ಚೆನ್ನಾಗಿದೆ. ಕುಟುಂಬದಲ್ಲಿ ಸಂತೋಷ ಇರಲಿದೆ.
ನಿಮಗೆ ಕುಟುಂಬದವರ ಜೊತೆಗೆ ವಿಷಯಕ್ಕೆ ಭಿನ್ನಾಭಿಪ್ರಾಯ ಉಂಟಾಗಬಹುದು, ಆದರೆ ಏನೇ ಸಮಸ್ಯೆವಿದ್ದರೂ ನೀವು ವಿಷಯವ್ನು ದೊಡ್ಡದು ಮಾಡದೆ ಬಗೆಹರಿಸಲು ಪ್ರಯತ್ನಿಸಬೇಕು.
ಆರೋಗ್ಯ
2025ರಲ್ಲಿ ಆರೋಗ್ಯದ ಕಡೆಗೆ ನೀವು ಹೆಚ್ಚು ಗಮನಹರಿಸಬೇಕು, ಈ ವರ್ಷನೀವು ಆರೋಗ್ಯದ ಕಡೆಗೆ ಗಮನಹರಿಸಿ. ಮಾರ್ಚ್ವರೆಗೆ ದೊಡ್ಡ ಸಮಸ್ಯೆಯಿಲ್ಲ, ಆದರೆ ನಂತರ ನೀವು ಆರೋಗ್ಯದ ಕಡೆಗೆ ಗಮನಹರಿಸಬೇಕು, ನೀವು ನಿಮ್ಮ ಜೀವನಶೈಲಿ ಕಡೆಗೆ ಗಮನಹರಿಸಿ, ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಧ್ಯಾನ, ಯೋಗ ನಿಮ್ಮ ಜೀವನಶೈಲಿ ಜೊತೆ ಸೇರಿಸಿ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications