Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2026ರ ಮೇಷ ರಾಶಿಫಲ: ಮೇಷ ರಾಶಿ ವಾರ್ಷಿಕ ಭವಿಷ್ಯ!
2025ನೇ ವರ್ಷ ಮುಗಿಯುತ್ತಾ ಬಂದಿದೆ. 2026ನೇ ವರ್ಷದಲ್ಲಿ ಹಲವು ರಾಶಿಗಳ ಭವಿಷ್ಯವನ್ನು ತಿಳಿದುಕೊಳ್ಳಲು ಎಲ್ಲರು ಬಯಸಿರುತ್ತಾರೆ. 2026ರ ಗ್ರಹಗತಿಗಳ ಆಧಾರ ಮೇಲೆ ವರ್ಷದ ಆರಂಭದಿಂದ ಹಿಡಿದು ಅಂತ್ಯ ವರೆಗೆ ನಿಮ್ಮ ರಾಶಿಫಲದಲ್ಲಿ ಏನೆಲ್ಲಾ ಶುಭ ಹಾಗೂ ಅಶುಭ ಕಾರಕಗಳಿವೆ ಎಂಬುದನ್ನು ಹೇಳಬಹುದು.
ಇನ್ನು ಈ ಮೇಷ ರಾಶಿಯವರಿಗೆ 2026ನೇ ವರ್ಷ ಬಹಳ ಅನುಕೂಲ ಹಾಗೂ ಮತ್ತಷ್ಟು ಶುಭ ತರುವಂತಹ ಸಮಯ ಆಗಿರಲಿದೆ. ವರ್ಷದ ಆರಂಭದಲ್ಲಿ, ಸೂರ್ಯನು ಬುಧ, ಶುಕ್ರ ಮತ್ತು ಮಂಗಳರೊಂದಿಗೆ ಧನು ರಾಶಿಯಲ್ಲಿ ಇರುತ್ತಾನೆ. ಗುರು ಮಿಥುನ ರಾಶಿಯಲ್ಲಿ ಇರುತ್ತಾನೆ. ಗುರುವಿನ ರಾಶಿಯಾದ ಶನಿ ಮೀನ ರಾಶಿಯಲ್ಲಿ ಇರುತ್ತಾನೆ. ಕೇತು ಸಿಂಹ ರಾಶಿಯಲ್ಲಿ ಇರುತ್ತಾನೆ ಮತ್ತು ರಾಹು ಕುಂಭ ರಾಶಿಯಲ್ಲಿ ಇರುತ್ತಾನೆ, ಇದು ವರ್ಷದ ಫಲಿತಾಂಶಗಳನ್ನು ತರಲಿದೆ.

ಮೇಷ ರಾಶಿಯು ಪ್ರಸ್ತುತ ಶನಿಯ ಸಾಡೇ ಸಾತಿಯ ಪ್ರಭಾವದಲ್ಲಿದೆ. ಹಾಗಾದರೆ 2026 ನೇ ವರ್ಷವು ಮೇಷ ರಾಶಿಯವರಿಗೆ ವಿಶೇಷವಾಗಿ ವೃತ್ತಿ, ವ್ಯವಹಾರ, ಪ್ರೇಮ ಜೀವನ ಮತ್ತು ಆರೋಗ್ಯದ ವಿಷಯದಲ್ಲಿ ಹೇಗೆ ಇರುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿಯವರಿಗೆ ಈ ಗ್ರಹಗಳ ಸ್ಥಾನ ಪಲ್ಲಟದ ಆಧಾರದ ಮೇಲೆ 2026ರ ರಾಶಿಫವನ್ನು ತಿಳಿಯಬಹುದು. ಅದರ ಆಧಾರ ಮೇಲೆ ಮೇಷ ರಾಶಿಯವರಿಗೆ ಈ ವರ್ಷ ಬಹಳ ಅನುಕೂಲಕರ. ನಿಮ್ಮ ಸಾಮಾಜಿಕ ಸ್ಥಾನಮಾನ, ಪ್ರತಿಷ್ಠೆ, ಗೌರವ ಹೆಚ್ಚಳವಾಗುತ್ತದೆ. ವೈಯಕ್ತಿಕ ಸಂಘರ್ಷ, ಸುಧಾರಿತ ಜೀವನಶೈಲಿ ಮತ್ತು ಮಾನಸಿಕ ಆರೋಗ್ಯದಲ್ಲಿ ನಿಮಗೆ ಧನಾತ್ಮಕ ದಿನಗಳಿರಲಿದೆ. ಸಾಂದಾರ್ಭಿಕ ಅನಾರೋಗ್ಯ ಸಮಸ್ಯೆಗಳು ಬಹಳಷ್ಟು ಕಾಡಬಹುದು. ಆದ್ರೆ ಅದರಿಂದ ನಿಮಗೆ ಹಾನಿ ಕಡಿಮೆ ಇರಲಿದೆ.
ಹಣಕಾಸು ಮತ್ತು ಆರ್ಥಿಕತೆ
ಹಣಕಾಸು ಮತ್ತು ವ್ಯವಹಾರ ದೃಷ್ಟಿಕೋನದಿಂದ 2026 ನಿಮಗೆ ಸುಧಾರಣೆ ತರಲಿದೆ. ಈ ವರ್ಷ ನಿಮ್ಮ ಹಲವು ವ್ಯವಹಾರಗಳು ಲಾಭದಾಯಕವಾಗಲಿದೆ. ಈ ವರ್ಷ ವ್ಯವಹಾರ ಮತ್ತು ಉದ್ಯೋಗದಲ್ಲಿ ಉತ್ತಮ ಪ್ರಗತಿ ಕಾಣಲಿದೆ. ಸರ್ಕಾರಿ ಉದ್ಯೋಗಗಳಿಗಾಗಿ ಶ್ರಮಿಸುವವರು ವಿಶೇಷ ಯಶಸ್ಸನ್ನು ಸಾಧಿಸುತ್ತಾರೆ. ಹಾಗೆ ವರ್ಗಾವಣೆ, ಬಡ್ತಿ, ಬೇರೆ ಕೆಲಸಗಳಿಗೆ ಪ್ರಯತ್ನಿಸುತ್ತಿದ್ದ ಮಂದಿಗೂ ಕೂಡ ಈ ಸಮಯ ಬಹಳ ಅನುಕೂಲ ತರಲಿದೆ. ಮನೆ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಹೊಸ ರೀತಿಯ ಲಾಭವಿದೆ. ಇನ್ನು ಮಾರುಕಟ್ಟೆ ಸಂಬಂಧಿತ ವಿಚಾರದಲ್ಲಿ ತೊಡಗಿರುವ ಮಂದಿಗೆ ಈ ಸಮಯವು ಬಹಳಷ್ಟು ಲಾಭದಾಯಕಾಗುತ್ತದೆ.
ಪಾಲುದಾರಿಕೆ ವ್ಯವಹಾರಗಳು ಈ ವರ್ಷ ಲಾಭದಾಯಕಾಗಲಿದೆ. ನಿಮ್ಮ ತಾಯಿಯ ಆರೋಗ್ಯವು ಸುಧಾರಿಸುತ್ತದೆ. ನಿಮ್ಮ ತಾಯಿಯ ಸಂತೋಷ, ಕಂಪನಿ ಮತ್ತು ಆಶೀರ್ವಾದಗಳು ಹೆಚ್ಚಾಗುತ್ತವೆ. ಕೆಲಸ ಬದಲಾವಣೆಗೆ ದೊಡ್ಡ ಅವಕಾಶಗಳು ಒಲಿದುಬರಲಿದೆ. ವಿದ್ಯಾರ್ಥಿಗಳಿಗೆ 2026ರಲ್ಲಿ ಶುಭವಿದೆ. ನೀವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುತ್ತೀರಿ. ಹಾಗೆ ಮುಂಬರುವ ವರ್ಷದಲ್ಲಿ ವಿವಾಹ ಸಂಬಂಧಿತ ವಿಚಾರದಲ್ಲಿ ಮಿಶ್ರಫಲವಿದೆ. ನಿಮ್ಮ ಹುಡುಕಾಟಗಳು ಮುಂದವರೆಯಬಹುದು. ಮನೆಯ ವಿಚಾರದಲ್ಲಿನ ಹಲವು ಪ್ರಯತ್ನಗಳು ಫಲ ನೀಡಲಿದೆ. ಅದ್ರಲ್ಲೂ ಬಹು ಸಮಯದಿಂದ ನೀವು ವಾಹನ ಖರೀದಿ, ಚಿನ್ನ ಬೆಳ್ಳಿ ಖರೀದಿಗೆ ಮನಸ್ಸು ಮಾಡಿದ್ದರೆ ಈ ವರ್ಷ ಅಂತಹ ಕೆಲಸಗಳು ನೆರವೇರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications