Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಶುಕ್ರನಿಂದ ಅರ್ಧ ಕೇಂದ್ರ ಯೋಗ: ಮೂರು ರಾಶಿಯವರಿಗೆ ಹಣಕಾಸಿನ ಜಾಕ್‌ಪಾಟ್!
ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳ ಸಂಚಾರದಿಂದ ಹಲವು ರೀತಿಯ ಯೋಗಗಳು ಉಂಟಾಗುವುದು ನೋಡಬಹುದು. ಅದ್ರಲ್ಲೂ ಗ್ರಹಗಳ ಸಂಚಾರದಿಂದ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ಹಾಗೆ, ಗ್ರಹಗಳ ಸಂಯೋಗದಿಂದ ಶುಭ ಹಾಗೂ ಅಶುಭ ಲಾಭಗಳಿಗೂ ಕಾರಣವಾಗುವುದು ನೋಡಬಹುದು.
ಈಗ ಆಗಸ್ಟ್ ತಿಂಗಳಲ್ಲಿ ಹಲವು ರಾಶಿಗಳಲ್ಲಿನ ಚಲನೆ ಎಲ್ಲಾ ರಾಶಿಗಳ ಮೇಲೂ ಪರಿಣಾಮ ಉಂಟು ಮಾಡುತ್ತಿರುವುದು ನಾವು ನೋಡಬಹುದು. ಹಾಗೆ ಈಗ ಶುಕ್ರ ಗ್ರಹದ ಚಲನೆ ಸಹ ತನ್ನ ಸ್ಥಾನಪಲ್ಲಟದ ಕಾರಣದಿಂದ ಹಲವು ರಾಶಿಗಳಿಗೆ ಶುಭ ಯೋಗಗಳು ಉಂಟಾಗುವುದು ನೋಡಬಹುದು. ಅದ್ರಲ್ಲೂ ಶುಕ್ರನನ್ನು ಸೌಂದರ್ಯ, ಐಷಾರಾಮಿ, ಪ್ರೀತಿ, ಆಸ್ತಿ, ಸಂಪತ್ತಿನ ಪ್ರತೀಕ ಎಂದು ಪರಿಗಣಿಸಲಾಗಿದೆ.

ಶುಕ್ರನು ಪ್ರಸ್ತುತ ಮಿಥುನ ರಾಶಿಯಲ್ಲಿ ಪ್ರಯಾಣಿಸುತ್ತಿದ್ದಾನೆ. ಈ ಮಿಥುನ ರಾಶಿಗೆ ಬುಧನು ಅಧಿಪತಿಯಾಗಿದ್ದಾನೆ. ಆದ್ರೆ ಈಗ ಶುಕ್ರನು ಮಿಥುನ ರಾಶಿಗೆ ಚಲಿಸುವುದು ಬುಧನೊಂದಿಗೆ ಸಂಯೋಗವಾಗುತ್ತಾನೆ. ಇದರಿಂದ ಶುಭಕರ ಯೋಗ ರೂಪುಗೊಳ್ಳುತ್ತದೆ. ಹಾಗೆ ಶುಕ್ರನು ಆಗಸ್ಟ್ 14ರಂದು ಯುರೇನಸ್ ಜೊತೆ ಯೋಗವನ್ನು ರೂಪಿಸುತ್ತಾನೆ. ಈ ಎರಡು ಗ್ರಹಗಳು 45 ಡಿಗ್ರಿಗಳಿಂದ ಅರ್ಧ ಕೇಂದ್ರ ಯೋಗವನ್ನು ರೂಪಿಸುತ್ತವೆ.
ಈ ಯೋಗದ ಪ್ರಭಾವವು ಎಲ್ಲಾ ರಾಶಿ ಜನರ ಮೇಲೆಯೂ ಪರಿಣಾಮ ಬೀರುತ್ತಿವೆ. ವಿಶೇಷವಾಗಿ ಕೆಲವು ರಾಶಿ ಜನರಿಗೆ ಶುಭಕರ ಅಂಶವಿರುವುದು ನೋಡಬಹುದು. ಹಾಗಾದ್ರೆ ಯಾವ ರಾಶಿಯವರಿಗೆ ಈ ಯೋಗ ಲಾಭದಾಯಕ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಅರ್ಧ ಕೇಂದ್ರ ರಾಜಯೋಗವು ಹಲವು ರೀತಿಯ ಲಾಭಕ್ಕೆ ಕಾರಣವಾಗಲಿದೆ. ನಿಮ್ಮ ಬಹಳ ವರ್ಷದ ಕಠಿಣ ಪರಿಶ್ರಮವೊಂದು ನಿಮ್ಮ ಕೈ ಹಿಡಿಯಲಿದೆ. ಕೆಲಸ ಮಾಡುವ ಜನರಿಗೆ ಇದು ಬಹಳ ಉತ್ತಮ ಸಮಯ ಆಗಿರಲಿದೆ. ಪ್ರಗತಿಯ ಅವಕಾಶಗಳಿವೆ. ಆಧ್ಯಾತ್ಮಿಕ ವಿಚಾದಲ್ಲಿ ನಿಮಗೆ ಅತ್ಯುತ್ತಮ ಸಮಯ ಎನ್ನಬಹುದು. ಉನ್ನತ ಶಿಕ್ಷಣ, ಉನ್ನತ ವೃತ್ತಿಯ ಅವಕಾಶ ನಿಮ್ಮದಾಗಲಿದೆ. ನಿಮ್ಮ ಆರ್ಥಿಕ ಸಮಸ್ಯೆಗಳು ಬಗೆಹರಿಯಲಿವೆ. ದೊಡ್ಡ ವಿಚಾರಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ, ಅದ್ರಲ್ಲೂ ವಾಹನ ಖರೀದಿ, ಮನೆ ನಿರ್ಮಾಣ, ಮದುವೆ, ಶುಭ ಕಾರ್ಯಗಳ ಸಂಬಂಧದಲ್ಲಿ ಧನಾತ್ಮಕ ಬದಲಾವಣೆಗಳ ನೋಡಬಹುದು. ಸಾಲ ಮರುಪಾವತಿಯಾಗಬಹುದು.
ವೃಶ್ಚಿಕ ರಾಶಿ
ಅರ್ಧ ಕೇಂದ್ರ ಯೋಗವು ವೃಶ್ಚಿಕ ರಾಶಿಯ ಜನರಿಗೆ ಲಾಭದಾಯಕವಾಗುವುದು ನೋಡಬಹುದು. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳ ಪೂರ್ಣ ಮಾಡುವಿರಿ. ಮಾರುಕಟ್ಟೆ ವಿಚಾರಗಳಲ್ಲಿ ಲಾಭವಿದೆ. ವಾಹನ ಸಂಬಂಧಿ ಖರ್ಚು ಇದ್ದರೂ ಅದರಿಂದ ಸಂತಸ ಇರಲಿದೆ. ಕುಟುಂಬದಲ್ಲಿದ್ದ ಹಣಕಾಸು ಸಂಬಂಧಿ ಒತ್ತಡ ನಿವಾರಣೆಯಾಗಲಿದೆ. ನೀವು ಈ ಸಮಯದಲ್ಲಿ ಕುಟುಂಬ ಸಮೇತರಾಗಿ ದೇವಾಲಯ ಪ್ರವಾಸ ಕೈಗೊಳ್ಳಬಹುದು. ಮನೆಯಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಾಗಲಿದೆ.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಈ ಅರ್ಧ ಕೇಂದ್ರ ಯೋಗವು ಧನಾತ್ಮಕ ಕೆಲಸಗಳಿಗೆ ಕಾರಣವಾಗಲಿದೆ. ನವವಿವಾಹಿತರು ಮಕ್ಕಳ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅದಕ್ಕೆ ಪರಿಹಾರ ಸಿಗುತ್ತದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ. ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ವ್ಯಾಪಾರ, ವ್ಯವಹಾರ ಸಂಬಂಧಿ ವಿಚಾರವಾಗಿ ಇದ್ದ ಸಮಸ್ಯೆಗಳು ದೂರಾಗಲಿದೆ. ದೀರ್ಘಕಾಲದ ಅನಾರೋಗ್ಯ ಸಮಸ್ಯೆ ನಿವಾರಣೆ ಆಗುವ ನಿರೀಕ್ಷೆ ಇದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications











