Latest Updates
-
ಬಿಸಿಗಾಳಿ ಕಾಟ: ಮದುವೆ ಡೇಟಿಂಗ್ ಪ್ಲಾನ್ ಹಾಳಾಗದಂತೆ ತಡೆಯುವುದು ಹೇಗೆ? -
ಬಾಲ್ಕನಿ ಅಲಂಕಾರ: ಹಬ್ಬದ ಸಂಭ್ರಮಕ್ಕೆ 10 ನಿಮಿಷದ ಮ್ಯಾಜಿಕ್ -
ಬಿಸಿಲಿನ ಬೇಗೆಗೆ ಈ ಪಾನೀಯಗಳೇ ಮದ್ದು, ತಂಪಾಗಿರಿ ಹೀಗೆ! -
ಬೈಸಾಕಿ ಮತ್ತು ವಿಷು ಹಬ್ಬದ ಲುಕ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ತೆಲಂಗಾಣ ಬಿಸಿಲ ಬೇಗೆ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ -
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ
165 ವರ್ಷಗಳ ಬಳಿಕ ಅರ್ಧ ಕೇಂದ್ರ ಯೋಗ: ಯಾವೆಲ್ಲಾ ರಾಶಿಯವರಿಗೆ ಅದೃಷ್ಟ? ಖ್ಯಾತಿ ಗಳಿಸೋದು ಖಚಿತ!
ವೈದಿಕ ಜ್ಯೋತಿಷ್ಯದ ಪ್ರಕಾರ ಜಾತಕದಲ್ಲಿನ ಒಂಬತ್ತು ಗ್ರಹಗಳ ಸ್ಥಾನಗಳು ತಮ್ಮದೇ ಆದ ಪರಿಣಾಮಗಳನ್ನು ಬೀರುತ್ತವೆ. ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಅವಧಿಯ ನಂತರ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಹೀಗೆ ಒಂದಾದ ನಂತರ ಒಂದು ಗ್ರಹಗಳ ಸಂಚಾರವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡಲಿದೆ. ಇನ್ನು ಈ 9 ಗ್ರಹಗಳ ಪೈಕಿ ಶುಕ್ರನನ್ನು ಬಹಳ ಮುಖ್ಯ ಗ್ರಹವೆಂದು ಪರಿಗಣಿಸಲಾಗುತ್ತದೆ. ರಾಕ್ಷಸರ ಗುರು ಎಂದು ಸಹ ಶುಕ್ರನನ್ನು ಕರೆಯಲಾಗಿದೆ.
ಹಾಗೆ ಶುಕ್ರನು ಐಶ್ವರ್ಯ, ಸಂಪತ್ತು, ಸಮೃದ್ಧಿ, ಪ್ರೀತಿಯ ಪ್ರತೀಕ. ಶುಕ್ರನು ಪ್ರಸ್ತುತ ಶನಿಯ ರಾಶಿಯಾದ ಮಕರ ರಾಶಿಯಲ್ಲಿ ಚಲಿಸುತ್ತಿದ್ದಾನೆ. ಬುಧ, ಸೂರ್ಯ ಮತ್ತು ಮಂಗಳ ಕೂಡ ಅದರೊಂದಿಗೆ ಸಂಯೋಗವಾಗುವುದು ನೋಡಬಹುದು. ಶುಕ್ರನು ನೆಪ್ಚೂನ್‌ನೊಂದಿಗೆ ಸೇರಿಕೊಂಡು ಅರ್ಧಕೇಂದ್ರ ಯೋಗವನ್ನು ರೂಪಿಸುತ್ತದೆ.

ಈ ಯೋಗವು ಕೆಲವು ರಾಶಿ ಜನರಿಗೆ ಸಕಾರಾತ್ಮಕ ಪರಿಣಾಮಗಳನ್ನು ತರುತ್ತದೆ. ಜ್ಯೋತಿಷ್ಯದ ಪ್ರಕಾರ ಜನವರಿ 29 ರಂದು ಸಂಜೆ 6:06 ಕ್ಕೆ ಶುಕ್ರ ಮತ್ತು ನೆಪ್ಚೂನ್ ಪರಸ್ಪರ 45 ಡಿಗ್ರಿಗಳ ಅಂತರದಲ್ಲಿ ಚಲಿಸಲಿದ್ದು, ಇದು ಅರ್ಧಕೇಂದ್ರ ಯೋಗ ಸೃಷ್ಟಿಸಲಿದೆ. ಸದ್ಯ ನೆಪ್ಚ್ಯೂನ್ ಮೀನ ರಾಶಿಯಲ್ಲಿದೆ. ನೆಪ್ಚ್ಯೂನ್ ಒಂದೇ ರಾಶಿಯಲ್ಲಿ 14ರಿಂದ 15 ವರ್ಷಗಳ ಕಾಲ ಚಲಿಸಲಿದೆ. ಹಾಗೆ ಇಂದು ರಾಶಿಗೆ ಮತ್ತೆ ಮರಳಲು 165 ವರ್ಷ ತೆಗೆದುಕೊಳ್ಳಲಿದೆ. ಸದ್ಯ ಈಗ 165 ವರ್ಷದ ಬಳಿಕ ಮೀನ ರಾಶಿಗೆ ಚಲಿಸಲಿದೆ.
ಮೇಷ ರಾಶಿ
ಈ ರಾಶಿಯ ಜನರಿಗೆ ನೆಪ್ಚೂನ್ ಮತ್ತು ಶುಕ್ರನ ಅರ್ಧ ಕೇಂದ್ರ ಯೋಗವು ಪ್ರಯೋಜನಕಾರಿಯಾಗಬಹುದು. ನಿಮ್ಮಲ್ಲಿ ಈ ಯೋಗವು ಹೊಸ ಆರಂಭಗಳ ತರಲಿದೆ. ದೊಡ್ಡ ಮಟ್ಟದ ಹಣಕಾಸಿನ ಲಾಭಗಳು ನಿಮಗಿವೆ. ಆಪ್ತರೊಬ್ಬರ ಸಹಕಾರ ಮೂಲಕ ನಿಮ್ಮ ಹಲವು ಕೆಲಸಗಳನ್ನು, ಬೇಡಿಕೆಗಳನ್ನು ಈಡೇರಿಸಿಕೊಳ್ಳುವಿರಿ. ಅವಿವಾಹಿತರಲ್ಲಿ ವಿವಾಹಯೋಗದಂತಹ ಲಾಭವಿದೆ. ದೀರ್ಘಕಾಲದಿಂದ ಬಾಕಿ ಉಳಿಸಿಕೊಂಡಿದ್ದ ಹಲವು ಕೆಲಸಗಳು ಅಡ್ಡಿಗಳಿಲ್ಲದೆ ನಡೆಯಲಿವೆ. ನಿಮ್ಮ ರಾಶಿಯ ಹನ್ನೆರಡನೇ ಮನೆಯಲ್ಲಿ ನೆಪ್ಚೂನ್ ಮತ್ತು ಹತ್ತನೇ ಮನೆಯಲ್ಲಿ ಶುಕ್ರ ಚಲಿಸಲಿದ್ದಾನೆ. ನಿಮ್ಮ ಉದ್ಯೋಗ ಸಂಬಂಧಿತ ವಿಚಾರಗಳಲ್ಲಿ ಶುಭವಾಗುತ್ತಿದೆ. ಅದ್ರಲ್ಲೂ ನಿರುದ್ಯೋಗಿಗಳಿಗೆ ಉದ್ಯೋಗವಕಾಶಗಳು ಹೆಚ್ಚಾಗಲಿದೆ. ವ್ಯಾಪಾರಿಗಳಿಗೆ ಉತ್ತಮ ಲಾಭಕರ ದಿನಗಳಿವೆ.
ಮಕರ ರಾಶಿ
ಅರ್ಧ ಕೇಂದ್ರ ಯೋಗವು ಈ ರಾಶಿಯ ಜನರಿಗೆ ಸಂತಸದ ದಿನಗಳ ತರಲಿವೆ. ನಿಮ್ಮ ದೊಡ್ಡ ಸಾಲದ ಪ್ರಮಾಣವೊಂದು ಕಡಿಮೆಯಾಗಲಿದೆ. ನಿಮ್ಮ ರಾಶಿಯ ಲಗ್ನ ಮನೆಯಲ್ಲಿ ಶುಕ್ರ ಚಲಿಸಲಿದ್ದಾನೆ. ಇದು ದೀರ್ಘಾವದಿಯ ಕೆಲಸಗಳು ಆಸೆಗಳನ್ನು ಪೂರೈಸಿಕೊಳ್ಳಲು ನೆರವಾಗಲಿವೆ. ಈ ಸಮಯದಲ್ಲಿ ಆಧ್ಯಾತ್ಮಿಕತೆಯ ಕಡೆಗೆ ಹೆಚ್ಚಿನ ಒಲವು ಇರಲಿದೆ. ನಿಮ್ಮ ಧಾರ್ಮಿಕ ಆಲೋಚನೆಗಳು ಶುಭ ತರುವ ಕಡೆ ಇರಲಿದೆ. ನ್ಯಾಯಾಲಯ ಸಂಬಂಧಿತ ವಿಚಾರಗಳು, ಓಡಾಟಗಳು ನಿಮ್ಮಲ್ಲಿ ಲಾಭದಾಯಕವಾಗಲಿದೆ. ವೈವಾಹಿಕ ಜೀವನವು ಸಾಮರಸ್ಯದಿಂದ ಉಳಿಯುತ್ತದೆ ಮತ್ತು ಕುಟುಂಬ ಸಂತೋಷವನ್ನು ಸಾಧಿಸಲಾಗುತ್ತದೆ. ಈ ಅವಧಿಯು ಆರೋಗ್ಯದ ದೃಷ್ಟಿಯಿಂದಲೂ ಅನುಕೂಲಕರವಾಗಿರುತ್ತದೆ.
ಮೀನ ರಾಶಿ
ಈ ರಾಶಿಯ ಜನರಿಗೆ ನೆಪ್ಚೂನ್-ಶುಕ್ರ ಸಂಯೋಗವು ಅತ್ಯಂತ ಶುಭವಾಗಬಹುದು. ಈ ಸಂಯೋಗವು ಶುಕ್ರ ಮತ್ತು ನೆಪ್ಚೂನ್ ಅನ್ನು ಲಗ್ನ ಮನೆಯಲ್ಲಿ ಇರಿಸುತ್ತದೆ. ಬಹುಕಾಲದಿಂದ ಬಾಕಿ ಉಳಿದಿರುವ ಆಸೆ ಈಡೇರಬಹುದು. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ನಿಮಗೆ ಅವಕಾಶಗಳು ಸಿಗುತ್ತವೆ. ಈ ಅವಧಿಯಲ್ಲಿ ಹಠಾತ್ ಆರ್ಥಿಕ ಲಾಭಗಳನ್ನು ನೋಡಬಹುದು. ನಿಮ್ಮ ವ್ಯವಹಾರದ ವಿಚಾರವಾಗಿ ನಿಮ್ಮ ನಿರ್ಧಾರವು ಉತ್ತಮವಾಗಿರಲಿದೆ. ವೃತ್ತಿ ಸಂಬಂಧಿತ ವಿಚಾರವು ನೀವು ಬಯಸಿರುವ ಫಲಿತಾಂಶಗಳ ತರಲಿವೆ. ವ್ಯವಹಾರದಲ್ಲಿ ಫಲಿತಾಂಶಗಳು ಮಿಶ್ರವಾಗಿರಬಹುದು, ಆದ್ದರಿಂದ ಪ್ರತಿಯೊಂದು ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











