Latest Updates
-
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ
ಏಪ್ರಿಲ್ ಮಾಸದ ಆರ್ಥಿಕ ಭವಿಷ್ಯ ಪ್ರಕಾರ ಯಾವ ರಾಶಿಯವರಿಗೆ ಹಣಕಾಸು ಉತ್ತಮವಾಗಿರಲಿದೆ?
ಏಪ್ರಿಲ್ ಮಾಸ ಭವಿಷ್ಯದ ಪ್ರಕಾರ ದ್ವಾದಶ ರಾಶಿಗಳಿಗೆ ಹೇಗಿರಲಿದೆ, ಯಾವ ರಾಶಿಗಳಿಗೆ ಆರ್ಥಿಕವಾಗಿ ಅನುಕೂಲಕರವಾಗಿದೆ ಎಂದು ನೋಡೋಣ:
ಮೇಷ ರಾಶಿ
ಏಪ್ರಿಲ್ ಮಾಸ ಮೇಷ ರಾಶಿಯವರಿಗೆ ಆರ್ಥಿಕವಾಗಿ ತುಂಬಾ ಚೆನ್ನಾಗಿರಲಿದೆ, ವ್ಯಾಪಾರಿಗಳಿಗೆ ಆರ್ಥಿಕವಾಗಿ ತುಂಬಾ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ಲಾಭ ಗಳಿಸಲು ಸಾಧ್ಯವಾಗಲಿದೆ. ಹಣಕ್ಕೆ ಸಂಬಂಧಿಸಿದ ಪ್ರಯತ್ನಕ್ಕೆ ಫಲ ಸಿಗಲಿದೆ.

ವೃಷಭ ರಾಶಿ
ವ್ಯಾಪಾರಸ್ಥರು ಈ ಮಾಸ ಜಾಗ್ರತೆವಹಿಸಬೇಕು, ಹೂಡಿಕೆ ಮಾಡುವಾಗ ಜಾಗ್ರತೆವಹಿಸಬೇಕು, ಇಲ್ಲದಿದ್ದರೆ ಹಣದ ನಷ್ಟ ಉಂಟಾಗಬಹುದು. ನೀವು ಯೋಜಿತ ರೀತಿಯಲ್ಲಿ ಕೆಲಸ ಮಾಡಿದರೆ ಲಾಭ ಪಡೆಯಬಹುದು, ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಲು ಸಾಧ್ಯವಾಗಲಿದೆ.
ಮಿಥುನ ರಾಶಿ
ಆರ್ಥಿಕ ದೃಷ್ಟಿಯಿಂದ ಈ ಮಾಸ ಶುಭವಾಗಿದೆ. ಆಸ್ತಿ ಖರೀದಿ ಬಗ್ಗೆ ಆಲೋಚನೆ ಮಾಡುತ್ತಿರುವವರು ಈ ಮಾಸದಲ್ಲಿ ಆಸ್ತಿ ಖರೀದಿ ಮಾಡುತ್ತೀರಿ. ವ್ಯಾಪಾರಸ್ಥರು ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ.
ಕರ್ಕ ರಾಶಿ
ಆರ್ಥಿಕ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ, ವ್ಯಾಪಾರಸ್ಥರಿಗೆ ಲಾಭ ಪಡೆಯಲು ಸಾಧ್ಯವಾಗಲಿದೆ. ಪೂರ್ವಜರ ಆಸ್ತಿಯಿಂದ ಲಾಭ ಪಡೆಯಲು ಸಾಧ್ಯವಾಗಲಿದೆ. ಬಡ್ತಿ ನಿರೀಕ್ಷೆಯಲ್ಲಿರುವ ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ.
ಸಿಂಹ ರಾಶಿ
ಆರ್ಥಿಕ ದೃಷ್ಟಿಯಿಂದ ಈ ದಿನ ಮಿಶ್ರಫಲ. ವ್ಯಾಪಾರಿಗಳು ಉತ್ತಮ ಲಾಭ ಪಡೆಯುತ್ತೀರಿ. ಆರೋಗ್ಯ ವಿಷಯದಲ್ಲಿ ನೀವು ಜಾಗ್ರತೆವಹಿಸಬೇಕು, ಇಲ್ಲದಿದ್ದರೆ ಹಣ ನಷ್ಟ ಉಂಟಾಗಬಹುದು. ನ್ಯಾಯಾಲಯದಲ್ಲಿ ಕೇಸ್ ಇದ್ದರೆ ತೀರ್ಪು ಪಡೆಯಲು ಇನ್ನೂ ಸ್ವಲ್ಪ ಕಾಯಬೇಕಾಗುತ್ತದೆ.
ಕನ್ಯಾ ರಾಶಿ
ಹಣದ ವಿಷಯದಲ್ಲಿ ನೀವು ಜಾಗ್ರತೆವಹಿಸಬೇಕು, ಯಾವುದೇ ದೊಡ್ಡ ಹೂಡಿಕೆ ಮಾಡುವ ಮುನ್ನ ಜಾಗ್ರತೆ ಮಾಡಿ. ಹಣದ ವಿಷಯದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಆದಾಯಕ್ಕಿಂತ ಖರ್ಚು ಹೆಚ್ಚಿರಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ ವೃತ್ತಿ, ವ್ಯವಹಾರದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ. ವ್ಯಾಪಾರಿಗಳು ಉತ್ತಮ ಲಾಭ ಪಡೆಯಲು ಸಾಧ್ಯವಾಗಲಿದೆ, ಹಣ ಉಳಿತಾಯ ಮಾಡಲು ಸಾಧ್ಯವಾಗಲಿದೆ.
ವೃಶ್ಚಿಕ ರಾಶಿ
ಹಣದ ವಿಷಯದಲ್ಲಿ ನೀವು ಜಾಗ್ರತೆವಹಿಸಬೇಕು, ಜೂಜು, ಆನ್‌ಲೈನ್ ಗೇಮ್ ಮುಂತಾದ ಶಾರ್ಟ್‌ಕಟ್ ಮಾರ್ಗ ಅನುಸರಿಸಿದರೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ವ್ಯಾಪಾರಿಗಳು ನಿರೀಕ್ಷಿತ ಲಾಭ ಪಡೆಯಲು ಕಷ್ಟವಾಗಬಹುದು.
ಧನು ರಾಶಿ
ಆರ್ಥಿಕ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ, ಮನೆ ಖರೀದಿ ಮಾಡಬೇಕೆಂದು ಬಯಸುವವರಿಗೆ ಈ ಅವಧಿ ಅನುಕೂಲಕರವಾಗಿದೆ. ಉದ್ಯೋಗಿಗಳಿಗೆ ಆರ್ಥಿಕ ದೃಷ್ಟಿಯಿಂದ ಉತ್ತಮವಾಗಿರಲಿದೆ.
ಮಕರ ರಾಶಿ
ಮಕರ ರಾಸಿಯವರು ಹಣದ ವಹಿವಾಟು ಮಾಡುವಾಗ ಜಾಗ್ರತೆವಹಿಸಿ, ವ್ಯಾಪಾರಿಗಳು ತಮ್ಮ ವ್ಯಾಪಾರದಲ್ಲಿ ಸುಧಾರಣೆ ಕಂಡು ಬರಲಿದೆ, ಮನೆಯ ಸೌಕರ್ಯ ಹೆಚ್ಚಾಗಲಿದೆ. ಯಾರಿಗೂ ಸಾಲ ನೀಡಲು ಹೋಗಬೇಡಿ.
ಕುಂಭ ರಾಶಿ
ಆರ್ಥಿಕ ದೃಷ್ಟಿಯಿಂದ ನಿಮಗೆ ಅನುಕೂಲಕರವಲ್ಲ, ವೃತ್ತಿ ಬದುಕಿನ ದೃಷ್ಟಿಯಿಂದ ಉತ್ತಮವಾಗಿರಲಿದೆ, ಆದರೆ ಆದಾಯಕ್ಕಿಂತ ಹೆಚ್ಚು ಖರ್ಚು ಇರಲಿದೆ, ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವವರು ಹೆಚ್ಚು ಜಾಗ್ರತೆವಹಿಸಬೇಕು.
ಮೀನ ರಾಶಿ
ತಿಂಗಳ ಆರಂಭದಲ್ಲಿಯೇ ಕೆಲ ದೊಡ್ಡ ಖರ್ಚುಗಳು ಬರಬಹುದು, ಈ ಅವಧಿಯಲ್ಲಿ ಅಗತ್ಯ ಮೀರಿದ ಖರ್ಚು ಬರುವುದರಿಂದ ಸಾಲ ಮಾಡಬೇಕಾಗಿ ಬರುವುದು, ಅಗ್ಯತಕ್ಕಿಂತ ಹೆಚ್ಚು ಸಾ ಪಡೆಯಬೇಡಿ, ಅನಗ್ಯತ ಖರ್ಚು ನಿಯಂತ್ರಿಸಿ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications