Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
Rashi Bhavishya: ಏಪ್ರಿಲ್ 30ರ ಈ ಬುಧವಾರದ ನಿಮ್ಮ ರಾಶಿಫಲ
ಶುಭ ದಿನ, ಈ ದಿನದ ರಾಶಿಫಲ ನೋಡೋಣ:
ಮೇಷ ರಾಶಿ
ವ್ಯವಹಾರದ ದೃಷ್ಟಿಯಿಂದ ಇಂದು ನಿಮಗೆ ಉತ್ತಮ ದಿನವಾಗಲಿದೆ. ನಿಮ್ಮ ಆಲೋಚನೆಯಲ್ಲಿ ಸಕಾರಾತ್ಮಕತೆ ಇರುತ್ತದೆ ಮತ್ತು ಉಳಿತಾಯದ ಬಗ್ಗೆಯೂ ಸಂಪೂರ್ಣ ಗಮನ ಹರಿಸುತ್ತೀರಿ. ಅತಿಥಿಗಳ ಆಗಮನದ ನಿರೀಕ್ಷೆ ಇದೆ. ನಿಮ್ಮ ಹಲವು ಕೆಲಸಗಳನ್ನು ಬಹಳ ಪ್ರಾಮಾಣಿಕವಾಗಿ ಮಾಡಿ ಮುಗಿಸಿ. ಇದು ಮುಂದೊಂದು ದಿನ ಉತ್ತಮ ಫಲ ನೀಡಲಿದೆ. ನಿಮ್ಮ ಜವಾಬ್ದಾರಿಗಳಿಂದ ಹಿಂದೆ ಸರಿಯಬೇಡಿ. ನಿಮ್ಮ ಯಾವುದೇ ಹಳೆಯ ವಹಿವಾಟು ನಿಮಗೆ ಸಮಸ್ಯೆಯಾಗಬಹುದು. ಮಕ್ಕಳಿಂದ ಉತ್ತಮ ಸುದ್ದಿ ಕೇಳುವಿರಿ.
ವೃಷಭ ರಾಶಿ
ಇಂದು ನಿಮಗೆ ಒಂದು ಪ್ರಮುಖ ದಿನವಾಗಲಿದೆ. ನೀವು ಪ್ರವಾಸಕ್ಕೆ ಹೋಗಬಹುದು. ಈ ದಿನ ನಿಮ್ಮ ಬಹಳ ಮುಖ್ಯ ವ್ಯಕ್ತಿಯೊಬ್ಬರನ್ನು ಭೇಟಿ ಆಗುತ್ತೀರಿ. ಆಹಾರ ವಿಚಾರವಾಗಿ ದುಬಾರಿ ದಿನವಾಗಬಹುದು. ನೀವು ಕೆಲವು ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ನಿಮಗೆ ಯಾವುದಾದರು ಕೆಲಸದ ಕುರಿತಾದ ಒತ್ತಡ ಚಿಂತೆ ಹೆಚ್ಚಾಗಬಹುದು. ಕೆಲಸದ ಕಾರಣಕ್ಕೆ ದೂರ ಪ್ರಯಾಣಕ್ಕೆ ಮುಂದಾಗಬಹುದು. ವ್ಯಾಪಾರಿಗಳು ಈ ಸಮಯದಲ್ಲಿ ಲಾಭ ಮಾಡುತ್ತಾರೆ. ಬಹಳ ದಿನಗಳಿಂದ ಅರ್ಧಕ್ಕೆ ನಿಲ್ಲಿಸಿದ ಕೆಲಸ ಪೂರ್ಣ ಮಾಡಿ.

ಮಿಥುನ ರಾಶಿ
ಇಂದು ನಿಮ್ಮ ಮಾತು ಮತ್ತು ನಡವಳಿಕೆಯ ಮೇಲೆ ಹಿಡಿತ ಇರಲಿ. ಇದರಿಂದ ನಿಮ್ಮ ಸ್ನೇಹ ಸಂಬಂಧಗಳು ಹಾಳಾಗಬಹುದು. ಆಪ್ತರ ಜೊತೆಗೆ ಹಣದ ವ್ಯವಹಾರ ಮಾಡಲು ಇಂದು ಸೂಕ್ತ ದಿನವಲ್ಲ. ನಿಮ್ಮ ಹಣಕಾಸು ಪರಿಸ್ಥಿತಿಯಲ್ಲಿ ಸವಾಲುಗಳು ಎದುರಾಗಬಹುದು. ಕೌಟುಂಬಿಕ ಜೀವನ ಉತ್ತಮವಾಗಿರಲಿದೆ. ನಿಮಗೆ ಬಹುಕಾಲದ ಅನಾರೋಗ್ಯ ಸಮಸ್ಯೆ ಇದ್ದರೆ ಈ ದಿನ ಎಚ್ಚರಿಕೆ ಅಥವಾ ನಿಯಮಿತ ಪರೀಕ್ಷೆಗೆ ಒಳಗಾಗಬೇಕಾಗಬಹುದು. ನಿಮ್ಮದಲ್ಲದ ವಸ್ತುವೊಂದನ್ನು ಖರೀದಿಸಲು ಹಣ ನೀಡಬೇಕಾಗಬಹುದು.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಇಂದು ದೊಡ್ಡ ಯಶಸ್ಸು ಸಿಗುವ ಅವಕಾಶವೊಂದು ಬರಲಿದೆ. ನೀವು ನಿರುದ್ಯೋಗಿಗಳಾಗಿದ್ದರೆ ಆಪ್ತರಿಂದ ಉತ್ತಮ ಅವಕಾಶಕ್ಕೆ ಕರೆ ಬರಬಹುದು. ಯಾರಿಂದಾದರು ಹಣ ಪಡೆದಿದ್ದರೆ ವಾಪಾಸು ನೀಡುವುದು ಉತ್ತಮ. ಹಾಗೆ ಸಾಲ ಮಾಡದೇ ಇರುವುದು ನಿಮ್ಮ ಒತ್ತಡ ಕಡಿಮೆ ಮಾಡಲಿದೆ. ದೊಡ್ಡ ಮಟ್ಟದಲ್ಲಿ ಹಣ ಖರ್ಚು ಮಾಡಲು ಹೋಗಬೇಡಿ. ನಿಮ್ಮ ಮನೆಯಲ್ಲಿ ಹೇಳುವಂತಹ ಒಂದು ಸಲಹೆ ನಿಮ್ಮ ದಿನವನ್ನು ಬದಲಾಯಿಸಬಹುದು. ಆರೋಗ್ಯದ ಕಡೆ ಗಮನವಿಡಿ.
ಸಿಂಹ ರಾಶಿ
ಇಂದು ನೀವು ಕಠಿಣ ಪರಿಶ್ರಮ ಮತ್ತು ಸಮರ್ಪಣಾಭಾವದಿಂದ ಕೆಲಸ ಮಾಡುವ ದಿನವಾಗಿರುತ್ತದೆ. ಹಣಕಾಸು ವಿಚಾರವಾಗಿ ಒತ್ತಡ ಹೆಚ್ಚಾಗಬಹುದು ಆದ್ರೆ ದಿನದ ಅಂತ್ಯದಲ್ಲಿ ನಿವಾರಣೆ ಸಾಧ್ಯತೆ ಇದೆ. ಸ್ಮೇಹಿತರೊಂದಿಗಿನ ಸಂಬಂಧ ಉತ್ತಮವಾಗಲಿದೆ. ಬೇರೆ ಅವರ ಮಾತುಗಳಿಗೆ ಕಿವಿಗೊಡಬೇಡಿ ನಿಮ್ಮ ಕೆಲಸ ಪೂರೈಸಲು ಮುಂದಾಗಿ. ಹಣ ಖರ್ಚು ಮಾಡುವಾಗ ಮುಂದಿನ ಆಲೋಚನೆಗಳಿರಲಿ. ಅವಿವಾಹಿತರಿಗೆ ಒಳ್ಳೆಯ ದಿನ. ದಿನವಿಡಿ ನಿಮಗೆ ಒತ್ತಡವಿದ್ದರೂ ಕೊನೆಯಲ್ಲಿ ಕೆಲವೊಂದು ವಿಚಾರವಾಗಿ ಹೆಲುವಾಗಲಿದೆ.
ಕನ್ಯಾ ರಾಶಿ
ಇಂದು ನೀವು ಅನಗತ್ಯ ವಾದಗಳಲ್ಲಿ ಸಿಲುಕುವುದನ್ನು ತಪ್ಪಿಸಬೇಕಾಗುತ್ತದೆ. ನೀವು ವ್ಯಾಪಾರಿಗಳಾಗಿದ್ದರೆ ಹೆಚ್ಚು ಮೊತ್ತದ ಸಾಲ ನೀಡುವುದನ್ನು ತಪ್ಪಿಸಿ. ಹಾಗೆ ದೊಡ್ಡ ವ್ಯವಹಾರಗಳನ್ನು ಆದಷ್ಟು ಸಲಹೆ, ಸೂಚನೆಗಳ ಮೇರೆಗೆ ಪೂರ್ಣಗೊಳಿಸಿ. ಆತ್ಮ ತೃಪ್ತಿಯ ಕೆಲಸಗಳಲ್ಲಿ ಭಾಗಿಯಾಗಿ. ಮನೆಯ ಸದಸ್ಯರೊಬ್ಬರಿಗೆ ಅಗತ್ಯ ವಸ್ತುವೊಂದನ್ನು ನೀವು ನೀಡುವಿರಿ. ಹಾಗೆ ಮನೆಯಲ್ಲಿ ಬದಲಾವಣೆ ತರುವ ಉದ್ದೇಶದಿಂದ ಕೆಲವು ದುರಸ್ಥಿ ವಸ್ತುಗಳನ್ನು ಬದಲಾಯಿಸಬಹುದು. ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.
ತುಲಾ ರಾಶಿ
ಇಂದು ನಿಮಗೆ ಮಿಶ್ರ ಫಲಿತಾಂಶಗಳ ದಿನವಾಗಲಿದೆ. ನೀವು ಯಾವುದೇ ಪ್ರಮುಖ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ದೂರ ಸಂಬಂಧಿಗಳಿಂದ ನಿಮಗೆ ಶುಭ ಸುದ್ದಿ ಬರಬಹುದು. ನೀವು ವಾಹನ ಖರೀದಿಸಲು ಹಲವು ದಿನದಿಂದ ಆಲೋಚಿಸಿದ್ದರೆ ಈ ಸಮಯದಲ್ಲಿ ಒಂದು ಹೆಜ್ಜೆ ಮುಂದೆ ಸಾಗುತ್ತೀರಿ. ನಿಮ್ಮ ಖರ್ಚುಗಳನ್ನು ಯೋಜಿಸಿ ಅಗತ್ಯ ಕೆಲಸಗಳನ್ನು ಮಾತ್ರ ಮಾಡಿದರೆ ನಿಮಗೆ ಉತ್ತಮವಾಗಿರುತ್ತದೆ. ದಾಂಪತ್ಯದಲ್ಲಿ ಉತ್ತಮ ಸಂತೋಷದ ದಿನವಾಗಲಿದೆ. ಮಕ್ಕಳ ಕುರಿತಾಗಿ ಹಲವು ಸಮಯದಿಂದ ಇದ್ದ ಚಿಂತೆಯೊಂದು ದೂರಾಗಲಿದೆ. ದೇವಾಲಯ ಭೇಟಿಯಂತಹ ಆಧ್ಯಾತ್ಮಿಕ ಕಾರ್ಯದಲ್ಲಿ ನೀವು ಭಾಗಿಯಾಗಬಹುದು.
ವೃಶ್ಚಿಕ ರಾಶಿ
ಇಂದು ನೀವು ನಿಮ್ಮ ಪ್ರಮುಖ ಕಾರ್ಯಗಳ ಮೇಲೆ ಸಂಪೂರ್ಣವಾಗಿ ಗಮನಹರಿಸುವ ದಿನವಾಗಿರುತ್ತದೆ. ಬಹುದಿನದಿಂದ ಬಾಕಿ ಉಳಿದಿದ್ದ ಕೆಲವೊಂದನ್ನು ಪೂರ್ಣ ಮಾಡುವಿರಿ. ನಿಮ್ಮ ಕೆಲಸದ ಸ್ಥಳದಲ್ಲಿ ನಿಮಗೆ ಕೆಲವು ಪ್ರಶಂಸೆಗಳು ಸಿಗಬಹುದು ಮತ್ತು ನಿಮ್ಮ ಕೆಲಸಕ್ಕೆ ಮೆಚ್ಚುಗೆ ದೊರೆಯುತ್ತದೆ. ನೀವು ಧಾರ್ಮಿಕ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಬಹುದು. ಆತುರದಿಂದ ಯಾರಿಗೂ ಮಾತು ಕೊಡಬೇಡಿ. ಇಂದು ಚಿನ್ನ, ಬೆಳ್ಳಿಯಂತಹ ದುಬಾರಿ ವಸ್ತುವೊಂದನ್ನು ಖರೀದಿಸುವ ಆಲೋಚನೆ ಬರಬಹುದು. ಅದಕ್ಕಾಗಿ ತಯಾರಿಯೂ ನಡೆಯಬಹುದು. ಆರೋಗ್ಯದಲ್ಲಿ ಸುಧಾರಣೆ ನೋಡುವಿರಿ.
ಧನು ರಾಶಿ
ಇಂದು ನೀವು ಕೆಲವು ಪ್ರಭಾವಿಗಳ ಭೇಟಿಯಾಗಬಹುದು. ನಿಮ್ಮ ನಿರಂತರ ಆರೋಗ್ಯ ಸಮಸ್ಯೆಗಳು ನಿಮಗೆ ಮತ್ತೆ ತೊಂದರೆ ನೀಡಬಹುದು. ಹೀಗಾಗಿ ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು, ನೀವು ಸ್ವಂತ ಉದ್ಯೋಗ ಮಾಡುತ್ತಿದ್ದರೆ ಚಿಂತೆಗಳು ಹೆಚ್ಚಾಗಬಹುದು. ಗೃಹಿಣಿಯರಲ್ಲಿ ಪತಿಯ ಕೆಲಸದ ಕುರಿತಾದ ಚಿಂತೆ ಹೆಚ್ಚಾಗಬಹುದು. ಎಲ್ಲಾ ವಿಚಾರಗಳು ನೀವು ಅಂದುಕೊಂಡಂತೆ ನಡೆಯಬೇಕು ಎಂಬ ವಾದವನ್ನು ಬಿಡಬೇಕು. ವ್ಯಾಪಾರಿಗಳಲ್ಲಿ ಹಣ ಖರ್ಚು ಹೆಚ್ಚಾಗಲಿದೆ. ಅಪರಿಚಿತಗರೊಂದಿಗಿನ ವ್ಯವಹಾರದ ಮೇಲೆ ಗಮನವಿಡಿ.
ಮಕರ ರಾಶಿ
ಇಂದು ನಿಮಗೆ ಧನಾತ್ಮಕ ದಿನವಾಗಿರಲಿದೆ. ನೀವು ಯಾವುದೇ ವಿಷಯದ ಬಗ್ಗೆಯೂ ಮೊಂಡುತನ ಅಥವಾ ದುರಹಂಕಾರವನ್ನು ತೋರಿಸಬಾರದು. ದಾಂಪತ್ಯದಲ್ಲಿದ್ದ ಸಣ್ಣ ಮನಸ್ತಾಪವೊಂದು ದೊಡ್ಡ ಸಮಸ್ಯೆಯಾಗಿ ಕಾಡಬಹುದು. ಕುಟುಂಬದಲ್ಲಿ ನಿಮ್ಮ ವಿಚಾರಗಳಿಗೆ ಅಡೆತಡೆ ಉಂಟಾಗಬಹುದು. ನಿಮಗೆ ಬರಬೇಕಿದ್ದ ವಸ್ತು, ಹಣ ಮತ್ತೆ ಮುಂದೂಡಬಹುದು. ಹಿರಿಯರೊಬ್ಬರಿಗೆ ಸಹಾಯ ಮಾಡುವ ಸಮಯ ಬರಬಹುದು. ವಾಹನ ಸಂಬಂಧಿ ಖರ್ಚುಗಳ ಮೇಲೆ ನಿಗಾ ಇಡಿ.
ಕುಂಭ ರಾಶಿ
ವ್ಯಾಪಾರ ಮಾಡುವ ಜನರ ಮೇಲೆ ಹೆಚ್ಚಿನ ಕೆಲಸದ ಒತ್ತಡ ಇರುತ್ತದೆ. ನೀವು ಹೊಸದಾಗಿ ಮನೆ ಕಟ್ಟುವ ಆಲೋಚನೆಯಲ್ಲಿ ಮತ್ತೆ ಅಡೆತಡೆ ಇರಬಹುದು. ಮಕ್ಕಳ ಕುರಿತಾಗಿ ಎಚ್ಚರ ವಹಿಸಿ. ವಾಹನ ಸವಾರರು ಇಂದು ದೂರ ಪ್ರಯಾಣ ಮಾಡಬೇಕಾಗಿ ಬರುವ ಕಾರಣ ಎಚ್ಚರಿಕೆ ಬಹಳ ಅಗತ್ಯ. ನೀವು ಖಾಸಗಿ ಕಂಪನಿ ಉದ್ಯೋಗಿ ಆಗಿದ್ದರೆ ಒತ್ತಡದ ದಿನವಾಗಲಿದೆ. ಉದ್ಯಮಿಗಳಿಗೆ ಲಾಭದಾಯಕ ದಿನ. ವ್ಯಾಪಾರಿಗಳಿಗೆ ಆದಾಯದ ಮೂಲ ಹೆಚ್ಚಾಗಬಹುದು. ದೊಡ್ಡ ಸಮಸ್ಯೆಗಳನ್ನ ನಿವಾರಿಸಲು ಆಪ್ತರ ಸಹಕಾರ ಪಡೆಯುವುದು ಉತ್ತಮ.
ಮೀನ ರಾಶಿ
ಇಂದು ನಿಮಗೆ ಕೆಲಸದಲ್ಲಿ ತೃಪ್ತಿ ತರುವ ದಿನವಾಗಿದೆ. ರಾಜಕೀಯ ಸಂಬಂಧಿಸಿದ ಜನರಲ್ಲಿ ದೊಡ್ಡ ಯಶಸ್ಸು ನೋಡಬಹುದು. ಚಿಲ್ಲರೆ ವ್ಯಾಪಾರಿಗಳಿಗೆ ಈ ದಿನ ಬಹಳ ಉತ್ತಮ. ಬಟ್ಟೆ, ಹೂವು, ತರಕಾರಿ, ದಿನಸಿ ವ್ಯವಹಾರ, ವ್ಯಾಪಾರಿಗಳಿಗೆ ಬಹಳ ಲಾಭದಾಯಕ ದಿನವಾಗಿರಲಿದೆ. ಯಾವುದೇ ಅಪರಿಚಿತರೊಂದಿಗೆ ವಹಿವಾಟು ನಡೆಸದಿರುವುದು ಉತ್ತಮ. ಸಮಸ್ಯೆಯನ್ನು ಎದುರಿಸಿ, ಅದರಿಂದ ಹೊರಬರುವ ದಾರಿಯೂ ನಿಮಗೆ ಸಿಗಲಿದೆ. ಸಮಾಜದಲ್ಲಿ ನಿಮ್ಮ ಗೌರವ, ಘಟನೆ ಹೆಚ್ಚಾಗುವಂತಹ ಕಾರ್ಯಗಳ ಮಾಡುವಿರಿ. ಆಧ್ಯಾತ್ಮಿಕ ಕೆಲಸಗಳಿಗಾಗಿ ನೀವು ಖರ್ಚು ಮಾಡಬೇಕಾಗಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











