Rashi Bhavishya: ಏಪ್ರಿಲ್ 29ರ ಈ ಮಂಗಳವಾರ ನಿಮ್ಮ ರಾಶಿಫಲ

ಶುಭ ದಿನ, ಈ ದಿನದ ರಾಶಿಫಲ ನೋಡೋಣ:

ಮೇಷ ರಾಶಿ

ಇಂದು ನೀವು ಆಡಳಿತದ ಸಂಪೂರ್ಣ ಲಾಭವನ್ನು ಪಡೆಯುತ್ತೀರಿ. ನಿಮ್ಮ ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ಇಂದು ನೀವು ನಿಮ್ಮ ಸ್ಥಗಿತಗೊಂಡ ಕೆಲವು ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೀರಿ. ಆರ್ಥಿಕ ಪರಿಸ್ಥಿತಿಯಲ್ಲಿ ಉತ್ಕರ್ಷದ ಬಲವಾದ ಸಾಧ್ಯತೆಯಿದೆ. ಸರ್ಕಾ ಯೋಜನೆಗಳ ಸಂಪೂರ್ಣ ಲಾಭವನ್ನು ಸಹ ನೀವು ಪಡೆಯುತ್ತೀರಿ. ಯಾವುದೇ ಕೆಲಸದಲ್ಲಿ ನೀವು ಅದರ ನೀತಿಗಳು ಮತ್ತು ನಿಯಮಗಳಿಗೆ ಸಂಪೂರ್ಣ ಗಮನ ಹರಿಸಬೇಕಾಗುತ್ತದೆ. ಕುಟುಂಬ ಜೀವನದಲ್ಲಿ ಸಾಮರಸ್ಯ ಇರಲಿದೆ. ವೈವಾಹಿಕ ಜೀವನದಲ್ಲಿ ಸಮಸ್ಯೆ ಕಡಿಮೆಗೊಳಿಸಲು ಪ್ರಯತ್ನಿಸಿ.

ವೃಷಭ ರಾಶಿ

ಇಂದು ನೀವು ದೀರ್ಘ ಪ್ರಯಾಣ ಕೈಗೊಳ್ಳುವ ದಿನವಾಗಿರುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವ ಕೆಲಸ ಮಾಡುತ್ತೀರಿ. ಆಧ್ಯಾತ್ಮಿಕ ಕೆಲಸ ಮಾಡುತ್ತೀರಿ. ಹಣದ ವಿಚಾರದಲ್ಲಿ ಈ ದಿನ ಬಹಳ ಎಚ್ಚರಿಕೆ ಅಗತ್ಯ. ನೀವು ಖರ್ಚು ಹೆಚ್ಚು ಮಾಡುತ್ತೀರಿ. ನಿಮ್ಮ ಸಂಗಾತಿಯಿಂದ ನಿಮಗೆ ಸಾಕಷ್ಟು ಬೆಂಬಲ ಸಿಗುತ್ತದೆ. ನೀವು ಹೊಸ ವಾಹನವನ್ನು ಖರೀದಿಸಬಹುದು, ಆದರೆ ನಿಮ್ಮ ಇಚ್ಛೆಯಂತೆ ಕೆಲವು ಕೆಲಸಗಳು ನಡೆಯದೆ ಇರಬಹುದು. ಇಂದು ಯಾವುದೇ ಪ್ರಮುಖ ನಿರ್ಧಾರ ತೆಎಗೆದುಕೊಳ್ಳಬೇಡಿ. ಹಣದ ವಿಷಯಗಳಲ್ಲಿ ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳುವುದನ್ನು ತಪ್ಪಿಸಿ.

April-29-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಇಂದು ನೀವು ಆತುರದಿಂದ ಮತ್ತು ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ವೈಯಕ್ತಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಕಂಡು ಬರಲಿದೆ. ಆರ್ಥಿಕವಾಗಿ ಈ ದಿನ ಉತ್ತಮವಾಗಿದೆ. ನೀವು ದಾನ ಕಾರ್ಯಗಳಲ್ಲಿ ತುಂಬಾ ಆಸಕ್ತಿ ಹೊಂದಿರುತ್ತೀರಿ. ಕೆಲಸದ ಕಾರ್ಯದಿಂದ ನೀವು ಬಹಳ ದೂರ ಪ್ರಯಾಣಕ್ಕೆ ಮುಂದಾಗಬಹುದು. ಮನೆಯಲ್ಲಿ ಹಣಕಾಸು ವಿಚಾರವಾಗಿ ಬಹಳ ಒತ್ತಡ ಎದುರಿಸುತ್ತೀರಿ. ವಿಶ್ರಾಂತಿ ಪಡೆಯುವುದು ಬಹಳ ಮುಖ್ಯವಾಗಲಿದೆ. ಆರೋಗ್ಯದ ಕುರಿತು ಬಹಳ ಎಚ್ಚರಿಕೆ ಅಗತ್ಯ.

ಕರ್ಕ ರಾಶಿ

ಇಂದು ನಿಮಗೆ ಸಾಮಾನ್ಯ ದಿನವಾಗಿರುತ್ತದೆ. ಪಾಲುದಾರಿಕೆಯ ವ್ಯಾಪಾರದಲ್ಲಿದ್ದರೆ ಲಾಭ ಹೆಚ್ಚಾಗಬಹುದು. ಕಠಿಣ ಪರಿಶ್ರಮಕ್ಕೆ ಉತ್ತಮ ಫಲ ಸಿಗಲಿದೆ, ಈ ದಿನ ನಿಮಗೆ ಧನಾತ್ಮಕವಾಗಿರಲಿದೆ. ನಡೆಯುವ ಕೆಲಸಕ್ಕೆ ನೀವು ಸಂಪೂರ್ಣ ಗಮನ ಹರಿಸುತ್ತೀರಿ. ನಿಮ್ಮ ನಾಯಕತ್ವದ ಕೌಶಲ್ಯಗಳು ಹೆಚ್ಚಾಗುತ್ತವೆ. ದಾಂಪತ್ಯ ಜೀವನದಲ್ಲಿ ಹೇರಳವಾದ ಸಂತೋಷ ಇರುತ್ತದೆ. ಆರ್ಥಿಕವಾಗಿ ಈ ದಿನ ನಿಮಗೆ ಉತ್ತಮವಾಗಿದೆ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ, ಕುಟುಂಬದಲ್ಲಿನ ಸಮಸ್ಯೆಗೆ ಹೊರಗಿನವರು ಹಸ್ತಕ್ಷೇಪ ಮಾಡದಂತೆ ಜಾಗ್ರತೆವಹಿಸಿ.

ಸಿಂಹ ರಾಶಿ

ಇಂದುvನಿಮ್ಮvಆದಾಯvಮತ್ತುvಖರ್ಚಿಗಾಗಿvಬಜೆಟ್vರೂಪಿಸಲುvಒಳ್ಳೆಯ ದಿನವಾಗಿರುತ್ತದೆ. ನೀವು ಯಾವುದೇ ದೊಡ್ಡ ಅಪಾಯಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ. ಕೆಲಸದ ಹೊರೆ ಹೆಚ್ಚಿರಲಿದೆ, ಇದರಿಂದ ನೀವು ತುಂಬಾ ಕಿರಿಕಿರಿ ಅನುಭವಿಸಬಹುದು. ಮಗುವಿನ ಶಿಕ್ಷಣಕ್ಕೆ ಸಂಬಂಧಿಸಿದ ಚಿಂತೆ ಕಾಡಬಹುದು. ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ನಿಮ್ಮ ಕೆಲವು ಕೆಲಸಗಳಿಗೆ ಸಂಬಂಧಿಸಿದಂತೆ ಕುಟುಂಬ ಸದಸ್ಯರೊಂದಿಗೆ ಸಂಘರ್ಷ ಉಂಟಾಗುವ ಸಾಧ್ಯತೆಯಿದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇಡಿ.

ಕನ್ಯಾ ರಾಶಿ

ಇಂದು ನಿಮಗೆ ಮಧ್ಯಮ ಫಲ ನೀಡುವ ದಿನವಾಗಿರಲಿದೆ. ಉದ್ಯೋಗಿಗಳಿಗೆ ಈ ದಿನ ಸಾಮಾನ್ಯವಾಗಿರುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು, ನಿಮ್ಮ ಆದಾಯವನ್ನು ಹೆಚ್ಚಿಸಲು ನಿಮ್ಮ ಪ್ರಯತ್ನಗಳನ್ನು ನೀವು ಮತ್ತಷ್ಟು ಚುರುಕುಗೊಳಿಸಿ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು, ಆದರೆ ತಾಳ್ಮೆಯಿಂದ ವರ್ತಿಸಿ. ನೀವು ಕೆಲವು ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ನಿಮ್ಮ ಮಕ್ಕಳ ಭವಿಷ್ಯ ಕುರಿತ ಚಿಂತೆ ಹೆಚ್ಚಾಗಬಹುದು. ಬಹಳ ಸಮಯದಿಂದ ನೀವು ಬಯಸಿದ್ದ ವಸ್ತು ನಿಮ್ಮ ಕೈಸೇರಬಹುದು.

ತುಲಾ ರಾಶಿ

ತುಲಾ ರಾಶಿಯ ಮಂದಿ ಈ ದಿನ ಹೆಚ್ಚು ಶ್ರಮ ಹಾಕಬೇಕಾಗುತ್ತದೆ, ನಿಮ್ಮ ಆದಾಯ ಹೆಚ್ಚಿಸಿಕೊಳ್ಳಬೇಕಾದರೆ ನೀವು ಸೋಮಾರಿತನ ಬಿಡಬೇಕು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆ ಇದೆ. ಆದರೆ ಹಣವನ್ನು ನೋಡಿಕೊಂಡು ಖರ್ಚು ಮಾಡಿ. ಈ ದಿನ ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಕುಟುಂಬ ಸದಸ್ಯರ ಅಗತ್ಯಗಳಿಗೆ ನೀವು ಸಂಪೂರ್ಣ ಗಮನ ಹರಿಸುವಿರಿ. ಅನಗತ್ಯ ವಿಚರವಾಗಿ ಖರ್ಚು ಮಾಡಬೇಡಿ. ವ್ಯಾಪಾರ ಸಂಬಂಧವಾಗಿ ಕೆಲವು ಬದಲಾವಣೆ ಮಾಡಲು ನೀವು ಮುಂದಾಗಬಹುದು.

ವೃಶ್ಚಿಕ ರಾಶಿ

ಇಂದು ನೀವು ಹಲವು ಸಮಾಜಮುಖಿ ಕಾರ್ಯದಲ್ಲಿ ಭಾಗಿಯಾಗಬಹುದು. ಕೇವಲ ಅದೃಷ್ಟವನ್ನು ನಂಬಿದರೆ ಸಾಲದು ಹೆಚ್ಚು ಶ್ರಮಪಟ್ಟರೆ ಮಾತ್ರ ಗುರಿ ಸಾಧಿಸಲು ಸಾಧ್ಯವಾಗುವುದು. ಹಿರಿಯರ ಮಾತುಗಳನ್ನು ನೀವು ಎಚ್ಚರಿಕೆಯಿಂದ ಕೇಳಬೇಕು. ನಿಮಗೆ ಕುಟುಂಬ ಸದಸ್ಯರಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ಉದ್ಯೋಗ ಅಥವಾ ವ್ಯವಹಾರವಾಗಿರಲಿ ನಿಮ್ಮ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಹಣದ ವಿಷಯದಲ್ಲಿ ಈ ದಿನ ಏರಿಳಿತಗಳಿಂದ ಕೂಡಿರಲಿದೆ. ಬಹಳ ದಿನಗಳಿಂದ ಬಾಕಿ ಇರುವ ಯಾವುದೇ ಕೆಲಸವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿ ಆಗುತ್ತೀರಿ.

ಧನು ರಾಶಿ

ಇಂದು ನಿಮಗೆ ಸಂತೋಷದ ದಿನವಾಗಿರುತ್ತದೆ. ನಿಮ್ಮ ದಾಂಪತ್ಯ ಮತ್ತು ಪ್ರೇಮ ವಿಚಾರಗಳಲ್ಲಿ ಸಂತೋಷ ನೋಡುವಿರಿ. ನಿಮ್ಮ ಕೆಲಸದ ಮೇಲೂ ಸರಿಯಾಗಿ ಗಮನಹರಿಸಲು ಸಾಧ್ಯವಾಗದೇ ಇರಬಹುದು. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ಉದ್ಯೋಗಸ್ಥರಿಗೆ ಈ ದಿನ ಸವಾಲಿನಿಂದ ಕೂಡಿರಲಿದೆ. ನಿಮ್ಮ ಕುಟುಂಬದ ಸದಸ್ಯರೊಬ್ಬರ ಆರೋಗ್ಯದ ಬಗ್ಗೆ ಇದ್ದ ಚಿಂತೆಯೊಂದು ದೂರಾಗುತ್ತದೆ. ಉಳಿತಾಯ ಮಾಡುವ ನಿಮ್ಮ ನಿರ್ಧಾರವನ್ನು ಬದಲಾಯಿಸಬೇಡಿ. ಕೆಲಸದ ಸ್ಥಳದಲ್ಲಿ ಒತ್ತಡಗಳು ಬರಬಹುದು.

ಮಕರ ರಾಶಿ

ಇಂದು ನಿಮಗೆ ಮಿಶ್ರ ಫಲಿತಾಂಶಗಳ ದಿನವಾಗಲಿದೆ. ನಿಮ್ಮ ವ್ಯವಹಾರ ಯೋಜನೆಗಳಿಂದ ನೀವು ಲಾಭ ಪಡೆಯುತ್ತೀರಿ. ಈ ದಿನ ನಿಮ್ಮ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ. ಕುಟುಂಬ ಜೀವನ ಚೆನ್ನಾಗಿರಲಿದೆ. ಕೆಲಸದ ಜೊತೆಗೆ ಆರೋಗ್ಯದ ಕಡೆಗೂ ಗಮನಹರಿಸಿ. ಹೊಸದನ್ನು ಮಾಡುವ ನಿಮ್ಮ ಪ್ರಯತ್ನವು ಫಲ ನೀಡುತ್ತದೆ. ನೀವು ಹೊಸ ಉದ್ಯೋಗ ಹುಡುಕುತ್ತಿದ್ದರೆ ಒಳ್ಳೆಯ ಅವಕಾಶ ಪಡೆಯಬಹುದು. ನೀವು ವಾಹನ ಚಾಲಕರಾಗಿದ್ದರೆ ಎಚ್ಚರಿಕೆ ಇರಲಿ. ತುಂಬಾ ದಿನಗಳಿಂದ ಬಯಸಿದ್ದ ವಸ್ತು ನಿಮ್ಮದಾಗಲಿದೆ.

ಕುಂಭ ರಾಶಿ

ಇಂದು ನಿಮ್ಮ ಖರ್ಚುಗಳ ಮೇಲೆ ನಿಯಂತ್ರಣ ಕಾಯ್ದುಕೊಳ್ಳಲು ಉತ್ತಮ ದಿನವಾಗಿರುತ್ತದೆ. ಸಾಲ ಪಡೆದಿದ್ದರೆ ಹೆಚ್ಚು ವಿಳಂಬ ಮಾಡದೆ ಅದನ್ನು ತೀರಿಸಲು ಮುಂದಾಗಿ. ಆಹಾರ ಸಂಬಂಧವಾಗಿ ಅಥವಾ ಧಾನ್ಯಗಳ ವಿಚಾರವಾಗಿ ಹಣ ಖರ್ಚು ಮಾಡಬೇಕಾಗಬಹುದು. ಆಸ್ತಿಗೆ ಸಂಬಂಧಿಸಿದ ಯಾವುದೇ ವಿಷಯವು ಇಂದು ನಿಮ್ಮ ತೊಂದರೆಗೆ ಕಾರಣವಾಗಬಹುದು. ಅಥವಾ ಅದರ ಫಲಿತಾಂಶ ನಿಮ್ಮ ಪರವಾಗಿ ಇಲ್ಲದಿರಬಹುದು. ಇಂದು ಆದಷ್ಟು ತಾಳ್ಮೆಯಿಂದ ವರ್ತಿಸುವುದು ಒಳಿತು. ನಿಮ್ಮ ದೈನಂದಿನ ಕೆಲಸದಲ್ಲಿ ಯಾವುದೇ ಅಡ್ಡಿ ಆತಂಕ ಇರುವುದಿಲ್ಲ.

ಮೀನ ರಾಶಿ

ಇಂದು ಮೀನ ರಾಶಿಯವರು ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ದಿನವಾಗಿರಲಿದೆ. ಈ ದಿನ ಕೆಲಸದ ಕಡೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ದಿನಚರಿಯಲ್ಲಿ ಬದಲಾವಣೆ ಮಾಡಿದರೆ ಒಳ್ಳೆಯದು. ಕುಟುಂಬದ ಸದಸ್ಯರ ಜೊತೆ ಭಿನ್ನಾಭಿಪ್ರಾಯ ಉಂಟಾಗಬಹುದು. ಉದ್ಯೋಗ ಬದಲಿಸುವ ನಿಮ್ಮ ಆಲೋಚನೆಯನ್ನು ಮುಂದೂಡುವುದು ಬಹಳ ಉತ್ತಮ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

April-29-daily-horoscope-prediction-for-12-zodiac-signs-in-kannada

Here is April 29 daily horoscope prediction for 12 zodiac signs read on...
Story first published: Tuesday, April 29, 2025, 6:15 [IST]
X
Desktop Bottom Promotion