Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
Rashi Bhavishya: ಏಪ್ರಿಲ್ 28ರಂದು ನಿಮ್ಮ ರಾಶಿಯಲ್ಲಿ ಏನೆಲ್ಲಾ ಲಾಭವಿದೆ?
ಶುಭ ದಿನ, ಈ ದಿನದ ರಾಶಿಫಲ ನೋಡೋಣ:
ಮೇಷ ರಾಶಿ
ಈ ದಿನ ನೀವು ದೂರ ಪ್ರಯಾಣದಿಂದ ಸಮಸ್ಯೆ ಎದುರಿಸಬಹುದು. ಹೀಗಾಗಿ ಪ್ರಯಾಣ ಮಾಡುವ ಮುನ್ನ ಬಹಳಷ್ಟು ಸಮಯ ಆಲೋಚಿಸಿ. ನೀವು ಭಾವನೆಗಳನ್ನು ನಿಮ್ಮ ಆಪ್ತರ ಜೊತೆ ಹೇಳಿಕೊಳ್ಳಿ, ಮೌನವಾಗಿ ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸಬೇಡಿ. ವ್ಯಾಪಾರಿಗಳಿಗೆ ಲಾಭ ಪಡೆಯಬಹುದು. ಉದ್ಯೋಗಿಗಳಿಗೆ ದಿನವು ಅನುಕೂಲಕರವಾಗಿರುತ್ತದೆ. ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಇದು ಶುಭ ದಿನ
ವೃಷಭ ರಾಶಿ
ಕಚೇರಿಯಲ್ಲಿ ನಿಮ್ಮ ಕೆಲಸದ ಕಡೆ ಸಂಪೂರ್ಣ ಗಮನ ನೀಡಿ. ನಿಮ್ಮ ಕೆಲಸದಲ್ಲಿ ಸೋಮಾರಿತನ ಬಿಟ್ಟುಬಿಡಿ. ಹಾಗೆ ಯಾವುದೇ ಕೆಲಸವನ್ನು ತರಾತುರಿಯಲ್ಲಿ ಮಾಡಲು ಹೋಗಬೇಡಿ. ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ನೀವು ಮನೆಗಾಗಿ ಹೊಸ ವಸ್ತು ಖರೀದಿಗೆ ಮುಂದಾಗಬಹುದು, ಹಾಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆ ಇರಲಿದೆ. ಹಣದ ಸಮಸ್ಯೆ ಇಂದು ಕಾಣಿಸದೆ ಇರಬಹುದು.

ಮಿಥುನ ರಾಶಿ
ಇಂದು ನಿಮ್ಮ ದೊಡ್ಡ ಸವಾಲೊಂದನ್ನು ಬಗೆಹರಿಸಲಿದ್ದೀರಿ. ಕೌಟುಂಬಿಕ ಕಾರಣಕ್ಕಾಗಿ ನೀವು ಯಾವುದಾದರು ಕೆಲಸ ಅರ್ಧಕ್ಕೆ ನಿಲ್ಲಿಸಿದ್ದರೆ ಅದನ್ನು ಪೂರ್ಣ ಮಾಡುವಿರಿ. ಸರ್ಕಾರಿ ಕೆಲಸ ಮಾಡುವವರಿಗೆ ಇಂದು ಅದೃಷ್ಟದ ದಿನವಾಗಲಿದೆ. ನಿಮ್ಮ ಕಠಿಣ ಪರಿಶ್ರಮವು ಫಲ ನೀಡುತ್ತದೆ. ಸಂಗಾತಿಯೊಂದಿಗೆ ವೈಮನಸ್ಸು ಉಂಟಾಗಬಹುದು.
ಕರ್ಕ ರಾಶಿ
ವೈಯಕ್ತಿಕ ಜೀವನದ ತೊಂದರೆಗಳು ನಿವಾರಣೆ ಸಾಧ್ಯತೆ ಇದೆ. ಕುಟುಂಬ ಹಾಗೂ ವೈವಾಹಿಕ ಜೀವನ ಚೆನ್ನಾಗಿರಲಿದೆ. ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಲು ಹೋಗಬೇಡಿ. ನಿರುದ್ಯೋಗಿಗಳಾಗಿದ್ದರೆ ಈ ಸಮಯದಲ್ಲಿ ಲಾಭದಾಯಕವಾಗುವ ಕೆಲಸ ಹುಡುಕಬಹುದು. ಉದ್ಯೋಗಿಗಳು ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಗೃಹಿಣಿಯರ ಆರೋಗ್ಯ ಸುಧಾರಿಸಲಿದೆ.
ಸಿಂಹ ರಾಶಿ
ನಿಮ್ಮ ಯಾವುದೇ ಪ್ರಮುಖ ಕೆಲಸವು ಬಹಳ ಸಮಯದಿಂದ ಬಾಕಿ ಉಳಿದಿದ್ದರೆ ಅದು ಇಂದು ಪೂರ್ಣಗೊಳ್ಳುವ ಸಾಧ್ಯತೆಯಿದೆ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ನೀವು ನಿಮ್ಮ ವ್ಯವಹಾರದ ನಿರ್ಧಾರಗಳನ್ನು ಪೂರ್ಣ ವಿಶ್ವಾಸದಿಂದ ತೆಗೆದುಕೊಳ್ಳುತ್ತೀರಿ. ಹಣಕಾಸು ವಿಚಾರದಲ್ಲಿ ನಿಮ್ಮ ಪರವಾದ ದಿನವಾಗಿದೆ. ಹೂಡಿಕೆ, ಉಳಿತಾಯಕ್ಕೆ ಉತ್ತಮ ದಿನ.
ಕನ್ಯಾ ರಾಶಿ
ಉದ್ಯೋಗಿಗಳಿಗೆ ಈ ದಿನ ಒತ್ತಡದಿಂದ ಕೂಡಿದ ದಿನವಾಗಬಹುದು. ನಿಮ್ಮ ಕೆಲಸವನ್ನು ನಿಗಧಿತ ಸಮಯದಲ್ಲಿ ಪೂರ್ಣ ಮಾಡಲು ಪ್ರಯತ್ನಿಸಿ. ಪ್ರವಾಸಕ್ಕೆ ತೆರಳುವ ನಿಮ್ಮ ಬಯಕೆಗೆ ಮತ್ತೊಂದು ಹೆಜ್ಜೆ ಮುಂದೆ ಸಾಗುತ್ತೀರಿ. ಇಂದು ಯಾರ ಬಳಿಯೂ ಸುಳ್ಳು ಹೇಳುವ ಪ್ರಯತ್ನ ಮಾಡಬೇಡಿ. ಇದು ದೊಡ್ಡ ಸಮಸ್ಯೆ ತರಬಹುದು. ಆಹಾರ ಸಂಬಂಧಿ ಖರ್ಚು ಹೆಚ್ಚಾಗಬಹುದು. ಸಣ್ಣ ವ್ಯಾಪಾರಿಗಳು ಹಣಕಾಸು ವಿಚಾರವಾಗಿ ಎಚ್ಚರವಹಿಸಿ.
ತುಲಾ ರಾಶಿ
ಇಂದು ನಿಮ್ಮ ಕೆಲಸದ ನಿಮಿತ್ತ ಬಹಳ ಪ್ರಯಾಣಿಸಬೇಕಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ, ಈ ದಿನ ಕುಟುಂಬಸ್ಥರ ಜೊತೆಗೆ ಖುಷಿಯಾಗಿ ಕಳೆಯುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ದಿನದ ಎರಡನೇ ಭಾಗದಲ್ಲಿ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಆರೋಗ್ಯದ ದೃಷ್ಟಿಯಿಂದ ದಿನವು ಉತ್ತಮವಾಗಿರುತ್ತದೆ.
ವೃಶ್ಚಿಕ ರಾಶಿ
ಈ ದಿನ ಜವಾಬ್ದಾರಿ ಹೆಚ್ಚಾಗಲಿದೆ. ವ್ಯಾಪಾರಸ್ಥರು ಲಾಭಗಳಿಸಬಹುದು, ಕುಟುಂಬದಲ್ಲಿ ಖುಷಿ, ನೆಮ್ಮದಿ ಇರಲಿದೆ. ನಿಮ್ಮ ಪ್ರಮುಖ ಚಿಂತೆ ದೂರಾಗಲಿದೆ, ಈ ದಿನ ಧನಾತ್ಮಕವಾಗಿರಲಿದೆ. ವ್ಯಾಪಾರಿಗಳಿಗೆ ಈ ದಿನ ಧನ ಲಾಭವಾಗಲಿದೆ, ಉದ್ಯೋಗಿಗಳು ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ, ವೈವಾಹಿಕ ಜೀವನ ಚೆನ್ನಾಗಿರಲಿದೆ. ಉಳಿತಾಯದ ಹಣ ಬೇರೆ ಕೆಲಸಕ್ಕೆ ಬಳಸಬೇಕಾಗುತ್ತದೆ.
ಧನು ರಾಶಿ
ಧನು ರಾಶಿಯವರು ಈ ದಿನ ಬಹಳ ಅತಿಯಾದ ಆತ್ಮವಿಶ್ವಾಸದಿಂದ ಮುಜುಗರಕ್ಕೊಳಗಾಗಬೇಕಾಗಬಹುದು. ವ್ಯಾಪಾರಸ್ಥರಿಗೆ ಇಂದು ದೊಡ್ಡ ಸವಾಲು ಎದುರಾಗಬಹುದು. ಶೀಘ್ರದಲ್ಲೇ ನಿಮ್ಮ ಆಸೆ ಈಡೇರುತ್ತದೆ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಅನಗತ್ಯ ವಿಚಾರಕ್ಕೆ ನೀವು ಖರ್ಚು ಮಾಡಬಹುದು. ನಿಮ್ಮ ದೊಡ್ಡ ಸಮಸ್ಯೆಯೊಂದು ಬಗೆಹರಿಯಬಹುದು.
ಮಕರ ರಾಶಿ
ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆದರೆ ನೀವು ಐಷಾರಾಮಿ ವಸ್ತುಗಳಿಗಾಗಿ ಮತ್ತೆ ಖರ್ಚು ಮಾಡುವುದನ್ನು ತಪ್ಪಿಸಬೇಕು. ವ್ಯಾಪಾರಿಗಳಿಗೆ ಧನಲಾಭವಾಗಲಿದೆ. ಉದ್ಯೋಗಿಗಳ ಬಾಕಿ ಇರುವ ಕೆಲಸ ಪೂರ್ಣಗೊಳ್ಳಲಿದೆ. ನೀವು ಕುಟುಂಬದವರ ಜೊತೆ ಸಮಯ ಕಳೆಯಿರಿ. ದಿನದ ಅಂತ್ಯದಲ್ಲಿ ಲಾಭದಾಯಕ ದಿನ ಇರಲಿದೆ. ವಾಹನ ಚಾಲಕರು ಎಚ್ಚರಿಕೆಯಿಂದ ಇರಿ.
ಕುಂಭ ರಾಶಿ
ಕುಂಭ ರಾಶಿಯವರು ಈ ದಿನದಂದು ಬಹಳ ಶ್ರಮ ವಹಿಸಿ ಕೆಲಸ ಮಾಡಬೇಕಾಗುತ್ತದೆ. ಈ ದಿನ ಸವಾಲಿನಿಂದ ಕೂಡಿರಲಿದೆ, ಆದರೆ ಅದನ್ನು ಜಯಿಸುವಲ್ಲಿ ಯಶಸ್ವಿಯಾಗುತ್ತೀರಿ. ವ್ಯಾಪಾರಿಗಳಿಗೆ ಧನಲಾಭವಾಗಲಿದೆ. ನಿಮ್ಮ ಉಳಿತಾಯದ ಹಣ ಅಥವಾ ಮುಖ್ಯ ಕೆಲಸಕ್ಕಾಗಿ ಕೂಡಿ ಇಟ್ಟ ಹಣವನ್ನು ಬೇರೆ ಕೆಲಸಕ್ಕೆ ಬಳಸುತ್ತೀರಿ. ತಾಳ್ಮೆಯಿಂದ ನಿಮ್ಮ ಕೆಲಸಗಳ ಪೂರೈಸಿ.
ಮೀನ ರಾಶಿ
ಇಂದು ನಿಮಗೆ ಮಿಶ್ರ ಫಲದ ದಿನವಾಗಿದೆ. ನಿಮ್ಮ ಪೋಷಕರ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ಕಂಡುಬರಬಹುದು. ಚಿನ್ನ ಖರೀದಿ ಅಥವಾ ದುಬಾರಿ ಬೆಲೆಯ ವಸ್ತುವೊಂದನ್ನು ನೀವು ಖರೀದಿಸಲು ಮುಂದಾಗಬಹುದು. ಕೆಲಸದಲ್ಲಿ ಒತ್ತಡ ಹೆಚ್ಚಬಹುದು. ಪ್ರೀತಿಯ ಜೀವನದಲ್ಲಿ ಸಂತೋಷ ನೋಡುವಿರಿ. ವಾಹನ ಚಾಲಕರು ಎಚ್ಚರಿಕೆಯಿಂದ ಇರಿ. ಅಮೂಲ್ಯ ವಸ್ತುಗಳ ಮೇಲೆ ನಿಗಾ ಇಡಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










