Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Today Rashi Bhavishya: ಏಪ್ರಿಲ್ 27ರಂದು ನಿಮ್ಮ ರಾಶಿಯಲ್ಲಿ ಏನೆಲ್ಲಾ ಲಾಭವಿದೆ?
ಶುಭ ದಿನ, ಈ ದಿನದ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಲ್ಲಿ ಇಂದು ದಿಢೀರ್ ಲಾಭ ನೋಡುವ ದಿನವಾಗಿದೆ, ನಿಮ್ಮ ಆದಾಯ ಹೆಚ್ಚಾಗುತ್ತದೆ. ಹಣಕಾಸು ವಿಚಾರವಾಗಿ ಹಲವರಿಂದ ನೆರವು ಪಡೆಯುತ್ತೀರಿ, ಆದರೆ ನಿಮ್ಮ ಖರ್ಚುಗಳ ಮೇಲೆ ಗಮನವಿಡಿ. ಕೆಲವು ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ನಿಮ್ಮ ಬಾಕಿ ಇರುವ ಒಪ್ಪಂದಗಳಲ್ಲಿ ಒಂದು ಅಂತಿಮವಾದಾಗ ನಿಮ್ಮ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ. ಮನೆಯಲ್ಲಿ ಶಾಂತಿ ಇರಲಿದೆ.
ವೃಷಭ ರಾಶಿ
ಇಂದು ನಿಮಗೆ ಒಳ್ಳೆಯ ದಿನವಾಗಿದೆ. ಈ ದಿನ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಸಂಬಂಧಿಕರಿಂದ ಒಳ್ಳೆ ಸುದ್ದಿ ಕೇಳುತ್ತೀರಿ. ಮನೆಯವರಲ್ಲಿ ನಿಮ್ಮಿಂದಾಗಿ ಸಂತಸ ಇರಲಿದೆ. ಅವಿವಾಹಿತರಿಗೆ ಈ ದಿನ ಶುಭವಾಗುವ ಲಕ್ಷಣವಿದೆ. ಕೆಲಸದಲ್ಲಿ ಯಾವುದೇ ಅಪಾಯಕಾರಿ ಹೆಜ್ಜೆ ಇಡಬೇಡಿ, ಇದು ಸಮಸ್ಯೆ ಉಂಟು ಮಾಡಬಹುದು. ಸ್ನೇಹಿತರು ನಿಮ್ಮ ಮನೋಬಲ ಹೆಚ್ಚಿಸಲಿದ್ದಾರೆ. ನಿಮ್ಮ ಆರೋಗ್ಯದ ಕಡೆ ಗಮನವಿಡಿ.

ಮಿಥುನ ರಾಶಿ
ಇಂದು ನಿಮ್ಮ ನಾಯಕತ್ವದ ಕೌಶಲ್ಯಗಳು ಹೆಚ್ಚಾಗುತ್ತವೆ. ದಿನದ ಎರಡನೇ ಭಾಗದಲ್ಲಿ ನೀವು ಹಣಕಾಸಿನ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಕುಟುಂಬದ ಸದಸ್ಯರು ಹೇಳುವ ಯಾವುದೋ ವಿಷಯದ ಬಗ್ಗೆ ನಿಮಗೆ ಕೆಟ್ಟ ಭಾವನೆ ಉಂಟಾಗಬಹುದು. ಇಂದು ನೀವು ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು. ವಿದ್ಯಾರ್ಥಿಯಾಗಿದ್ದರೆ ಅನಗತ್ಯ ವಿಷಯಗಳ ಕುರಿತು ಗಮನಹರಿಸಬೇಡಿ.
ಕರ್ಕ ರಾಶಿ
ಈ ದಿನ ನಿಮ್ಮ ಒತ್ತಡ ಹೆಚ್ಚಸುವ ಸಂದರ್ಭ ಎದುರಿಸುತ್ತಿರಿ, ವಾಹನ ಸಂಬಂಧಿ ಖರ್ಚುಗಳು ಹೆಚ್ಚಾಗುತ್ತವೆ. ಇಂದು ಉದ್ಯೋಗಿಗಳಿಗೆ ಉತ್ತಮ ದಿನವಾಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಇಂದು ಸಣ್ಣಪುಟ್ಟ ಸಮಸ್ಯೆಗಳಿರಬಹುದು.
ಸಿಂಹ ರಾಶಿ
ಈ ದಿನ ನಿಮಗೆ ಲಾಭದಾಯಕ ದಿನ. ನಿಮ್ಮ ಆದಾಯ ಹೆಚ್ಚಾಗುವ ಸಣ್ಣ ಪುಟ್ಟ ಕೆಲಸದಲ್ಲಿ ನೀವು ಭಾಗಿಯಾಗುತ್ತೀರಿ, ಈ ದಿನ ವಿಶ್ರಾಂತಿ ಪಡೆಯುವ ದಿನವಾಗಿದೆ. ಹಿರಿಯರಿಂದ ನಿಮಗೆ ಉತ್ತಮ ಸಲಹೆಯೊಂದು ಸಿಗಲಿದೆ. ದೊಡ್ಡ ಹೂಡಿಕೆ ಮಾಡುವುದನ್ನು ತಪ್ಪಿಸಲು ಉದ್ಯಮಿಗಳಿಗೆ ಸಲಹೆ ನೀಡಲಾಗಿದೆ. ಮನೆಗಾಗಿ ಬಹುಮುಖ್ಯ ವಸ್ತುವೊಂದನ್ನು ಖರೀದಿಸಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿ ಈ ದಿನ ಬಹಳ ಎಚ್ಚರಿಕೆಯಿಂದ ಇರಬೇಕು. ನೀವು ಯಾವುದೇ ಕೆಲಸ ಮಾಡಿದರೆ ಅದರಿಂದ ತೃಪ್ತಿ ಪಡೆಯದೇ ಇರಬಹುದು. ಹಾಗೆ ಇಂದು ತಾಳ್ಮೆಯಿಂದ ಇರಲು ಪ್ರಯತ್ನಿಸಿ. ಕುಟುಂಬದಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಾಗಲಿದೆ. ನಿಮ್ಮ ಉಳಿತಾಯ ಹೆಚ್ಚಾಗಲಿದೆ. ಬಹಳ ಸಮಯದಿಂದ ಖರೀದಿಸಬೇಕೆಂದಿದ್ದ ವಸ್ತುವೊಂದನ್ನು ಮನೆಗೆ ತರಬಹುದು.
ತುಲಾ ರಾಶಿ
ಇಂದು ನೀವು ನಿಮ್ಮ ಕೆಲಸದ ಬಗ್ಗೆ ಹೆಚ್ಚು ಪ್ರಮಾಣಿಕವಾಗಿ, ಗಮನವಿಟ್ಟು ಮಾಡಿ ಮುಗಿಸಿ. ಮಕ್ಕಳ ಕುರಿತಾದ ಚಿಂತೆ ಹೆಚ್ಚಾಗಬಹುದು. ಇಂದು ಉದ್ಯಮಿಗಳಿಗೆ ಬಹಳ ಅದೃಷ್ಟದ ದಿನವಾಗಿದೆ. ಸಾಲ ಪಡೆದಿದ್ದರೆ ಇಂದು ಮರುಪಾವತಿ ಕುರಿತಾಗಿ ಆಲೋಚಿಸಿ. ಆರೋಗ್ಯದ ವಿಷಯದಲ್ಲಿ ದಿನವು ಉತ್ತಮವಾಗಿರುತ್ತದೆ. ಆಹಾರ ವಿಚಾರವಾಗಿ ಖರ್ಚು ಹೆಚ್ಚಾಬಹುದು.
ವೃಶ್ಚಿಕ ರಾಶಿ
ಈ ದಿನ ನಿಮ್ಮ ಗೌರವ ಹೆಚ್ಚಾಗಬಹುದು. ನಿಮ್ಮ ಮೇಲಿನ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡಲಿದ್ದೀರಿ. ವ್ಯಾಪಾರಿಗೆ ಇಂದು ಬಹಳ ಉತ್ತಮ ದಿನವಾಗಿದೆ. ನಿಮ್ಮ ಆದಾಯ ಮೂಲ ಹೆಚ್ಚಾಗಬಹುದು. ಮನೆಯ ವಾತಾವರಣ ನೀವು ಅಂದುಕೊಂಡಂತೆ ಇರಲಿದೆ. ಕೆಲಸದಲ್ಲಿನ ಅಡೆತಡೆ ದೂರಾಗಲಿದೆ. ಆಸ್ತಿ ವಿವಾರವಾಗಿ ಸಣ್ಣ ಪುಟ್ಟ ಸಮಸ್ಯೆಗಳ ಎದುರಿಸಬಹುದು.
ಧನು ರಾಶಿ
ಧನು ರಾಶಿಯವರು ಈ ದಿನ ಬಹಳ ಸಮಯ ಮನೆಯಿಂದ ಹೊರಗೆ ಕಳೆಯುತ್ತಾರೆ, ಹೀಗಾಗಿ ಬಹಳ ಎಚ್ಚರಿಕೆಯಿಂದ ಇರುವುದು ಮುಖ್ಯ. ಹಣದ ವಿಷಯದಲ್ಲಿ ಇಂದು ನಿಮಗೆ ತುಂಬಾ ಅದೃಷ್ಟದ ದಿನ. ಆಸ್ತಿಗೆ ಸಂಬಂಧಿಸಿದ ಯಾವುದೇ ಲಾಭದ ಸಾಧ್ಯತೆಯಿದೆ. ನಿಮ್ಮ ಜೀವನಶೈಲಿಯನ್ನು ಸುಧಾರಿಸಲು ನೀವು ಹೆಚ್ಚು ಖರ್ಚು ಮಾಡುತ್ತೀರಿ.
ಮಕರ ರಾಶಿ
ಆರ್ಥಿಕ ಸ್ಥಿತಿ ಇಂದು ಸುಧಾರಿಸಲಿದೆ. ವ್ಯಾಪಾರಸ್ಥರಿಗೆ ಮಿಶ್ರ ಲಾಭ ದೊರೆಯಲಿದೆ. ಅನಗತ್ಯ ವಿಚಾರಗಳಿಂದ ದೂರವೇ ಇರುವುದು ಉತ್ತಮ. ಯಾವ ಬಳಿಯು ಅಮೂಲ್ಯ ವಸ್ತಗಳನ್ನು ಇಂದು ಪಡೆಯಲು ಮುಂದಾಗಬೇಡಿ. ಇದು ಸಮಸ್ಯೆ ತರಬಹುದು. ದೂರ ಪ್ರಯಾಣಕ್ಕೆ ನೀವು ಮುಂದಾಗಹುದು. ನೀವು ಮಾಡಬೇಕಿದ್ದ ಕೆಲಸವನ್ನು ಅಡೆತಡೆ ಇಲ್ಲದೆ ಮುಗಿಸುವಿರಿ. ಆರೋಗ್ಯದಲ್ಲಿ ಸುಧಾರಣೆಯ ಲಕ್ಷಣಗಳಿವೆ.
ಕುಂಭ ರಾಶಿ
ಕುಂಭ ರಾಶಿಯವರಲ್ಲಿ ಈ ದಿನ ಬಹಳ ಲಾಭ ನೋಡಬಹುದು. ನೀವು ಕಬ್ಬಿಣದ ವ್ಯಾಪಾರಿಗಾಗಿದ್ದರೆ ಈ ದಿನವು ನಿಮಗೆ ಹಲವು ರೀತಿಯ ಲಾಭ ತರಲಿದೆ. ಕೆಲಸದ ಉದ್ದೇಶಕ್ಕೆ ನೀವು ದೂರ ಪ್ರಯಾಣಕ್ಕೆ ಮುಂದಾಗಬಹುದು. ಇದು ಸಣ್ಣ ಪುಟ್ಟ ಅನಾರೋಗ್ಯಕ್ಕೆ ಕಾರಣವಾಗಬಹುದು. ದಾಂಪತ್ಯದಲ್ಲಿ ಸುಖ ಇರಲಿದೆ. ಖರ್ಚುಗಳ ಮೇಲೆ ನಿಗಾ ಇರಿಸಿ.
ಮೀನ ರಾಶಿ
ಈ ದಿನ ನಿಮಗೆ ಹಣಕಾಸಿನ ವಿಚಾರವಾಗಿ ಲಾಭದಾಯಕ ದಿನವಾಗಿರಲಿದೆ. ಬಹಳ ಸಮಯದಿಂದ ನೀವು ಹಣಕ್ಕಾಗಿ ಬೇಡಿಕೆ ಅಥವಾ ಬಯಸಿದ್ದರೆ ನಿಮ್ಮ ಕೈ ಸೇರಬಹುದು. ಅದನ್ನು ನೀವು ಉತ್ತಮ ಕೆಲಸಕ್ಕೆ ಬಳಸುತ್ತೀರಿ. ಕೋಪಗೊಳ್ಳದೆ ಎಲ್ಲಾ ವಿಚಾರಗಳನ್ನು ಎದುರಿಸಿ. ಗೃಹಿಣಿಯರಲ್ಲಿ ಅನಾರೋಗ್ಯ ಕಾಡಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications