Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
Today Rashi Bhavishya: ಏಪ್ರಿಲ್ 26ರ ಶನಿವಾರವು ಯಾರಿಗೆ ಶುಭಕರವಾಗಿದೆ ನೋಡಿ!
ಶನಿವಾರದ ಈ ದಿನ ನಿಮ್ಮ ರಾಶಿಫಲದಲ್ಲಿ ಏನಿದೆ ನೋಡಿ:
ಮೇಷ ರಾಶಿ
ಇಂದು ನಿಮಗೆ ಮಿಶ್ರ ಫಲಿತಾಂಶ ನೀಡುವ ದಿನವಾಗಿದೆ. ಹೊಸ ಮನೆ, ಅಂಗಡಿ ಇತ್ಯಾದಿ ವಿಚಾರದಲ್ಲಿ ಸಂಪೂರ್ಣ ಗಮನವಿಡಿ. ಹಣಕ್ಕೆ ಸಂಬಂಧಿಸಿದ ಚಿಂತೆಗಳು ಹೆಚ್ಚಾಗಬಹುದು. ನೀವು ಇತ್ತೀಚೆಗೆ ಯಾವುದೇ ಹೂಡಿಕೆ ಮಾಡಿದ್ದರೆ ನಿರೀಕ್ಷಿತ ಫಲಿತಾಂಶ ಪಡೆಯದ ಕಾರಣ ತುಂಬಾ ನಿರಾಶೆಗೊಳ್ಳಬಹುದು. ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಉದ್ಯೋಗ ಅಥವಾ ವ್ಯವಹಾರವಾಗಿರಲಿ ಇಂದು ತುಂಬಾ ಕಷ್ಟಪಡಬೇಕಾಗಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗುತ್ತವೆ. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನ ಕಾಪಾಡಿ.
ವೃಷಭ ರಾಶಿ
ಇಂದು ನಿಮಗೆ ಲಾಭದಾಯಕ ದಿನವಾಗಿರುತ್ತದೆ. ಷೇರು ಮಾರುಕಟ್ಟೆಗೆ ಸಂಬಂಧಿಸಿದ ಜನರು ಉತ್ತಮ ಲಾಭವನ್ನು ಪಡೆಯುತ್ತಾರೆ. ಉದ್ಯೋಗದಲ್ಲಿರುವವರು ಕಚೇರಿಯಲ್ಲಿ ಹೆಚ್ಚು ಮಾತನಾಡುವುದನ್ನು ತಪ್ಪಿಸಿ. ನಿಮ್ಮ ಸಣ್ಣ ತಪ್ಪು ಇಡೀ ದಿನವನ್ನು ಹಾಳು ಮಾಡಬಹುದು. ದೊಡ್ಡ ಮೊತ್ತ ಪಡೆಯುವ ನಿಮ್ಮ ಆಲೋಚನೆಯಲ್ಲಿ ತಪ್ಪಾಗಬಹುದು. ಇಂದು ದೂರ ಪ್ರಯಾಣವನ್ನು ಆದಷ್ಟು ತಪ್ಪಿಸಿ. ನಿಮ್ಮ ಯಾವುದೇ ಆಸ್ತಿ ಸಂಬಂಧಿತ ವಿವಾದವು ನಿಮಗೆ ಸಮಸ್ಯೆಯಾಗಬಹುದು. ಆರೋಗ್ಯದ ವಿಷಯದಲ್ಲಿ ದಿನವು ಮಿಶ್ರವಾಗಿರುತ್ತದೆ.

ಮಿಥುನ ರಾಶಿ
ಇಂದು ನಿಮಗೆ ಖರ್ಚುಗಳಿಂದ ತುಂಬಿದ ದಿನವಾಗಿರುತ್ತದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಯತ್ನವನ್ನು ಮಾಡುತ್ತಿದ್ದರೆ, ನೀವು ಶೀಘ್ರದಲ್ಲೇ ಒಳ್ಳೆಯ ಸುದ್ದಿ ಪಡೆಯಬಹುದು. ನಿಮ್ಮ ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶ ಪಡೆಯುತ್ತೀರಿ. ಉದ್ಯೋಗಸ್ಥರಿಗೆ ಈ ದಿನ ಅನುಕೂಲಕರವಾಗಿದೆ. ನಿಮ್ಮ ಆದಾಯವನ್ನು ಗಮನದಲ್ಲಿಟ್ಟುಕೊಂಡು ಖರ್ಚು ಮಾಡಿದರೆ, ಅದು ನಿಮಗೆ ಉತ್ತಮವಾಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಅಸಡ್ಡೆ ತೋರಬೇಡಿ. ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯ.
ಕರ್ಕ ರಾಶಿ
ಇಂದು ನಿಮಗೆ ತುಂಬಾ ಖುಷಿ ಕೊಡುವ ದಿನವಾಗಿರುತ್ತದೆ. ಕುಟುಂಬದಲ್ಲಿ ಇಂದು ಉತ್ತಮ ದಿನವಲ್ಲ. ನೀವು ತುಂಬಾ ಜಾಗರೂಕರಾಗಿರಬೇಕು. ನಿಮ್ಮ ಪ್ರೀತಿಪಾತ್ರರ ಭಾವನೆಗಳನ್ನು ನೋಯಿಸುವ ಕೋಪದಲ್ಲಿ ಏನನ್ನೂ ಮಾಡಬೇಡಿ. ವ್ಯಾಪಾರಸ್ಥರು ಇಂದು ದೀರ್ಘ ಪ್ರಯಾಣ ಮಾಡಬೇಕಾಗಬಹುದು. ಈ ಪ್ರಯಾಣವು ತುಂಬಾ ಪ್ರಯೋಜನಕಾರಿಯಾಗಲಿದೆ. ಹೊಸದಾಗಿ ಉದ್ಯೋಗ ಹುಡುಕುವವರು ಇಂದು ಬಹಳ ಲಾಭದಾಯಕ ಅವಕಾಶ ಪಡೆಯಬಹುದು. ನೀವು ಕುಟುಂಬಸ್ಥರ ಜೊತೆ ಸೇರಿ ಪ್ರವಾಸ ಕೈಗೊಳ್ಳುವ ಕಾರ್ಯ ಸಂಬಂಧ ಚರ್ಚೆ ನಡೆಸಬಹುದು, ಮಕ್ಕಳ ಕುರಿತ ಚಿಂತೆ ಹೆಚ್ಚಾಗಬಹುದು.
ಸಿಂಹ ರಾಶಿ
ಇಂದು ನಿಮಗೆ ಸಮಸ್ಯೆಗಳಿಂದ ತುಂಬಿದ ದಿನವಾಗಿರುತ್ತದೆ. ಕೆಲಸದಲ್ಲಿನ ಸಮಸ್ಯೆ ನಿಮಗೆ ದೊಡ್ಡ ಒತ್ತಡಕ್ಕೆ ಕಾರಣವಾಗಬಹುದು. ಕೈಗೆ ಬಂದ ತುತ್ತು ಬಾಯಿಗೆ ಬರಲ್ಲ ಎನ್ನುವ ಸ್ಥಿತಿಯಲ್ಲಿ ನೀವು ಇಂದು ಸಿಲುಕಬಹುದು. ಕುಟುಂಬದಿಂದ ನಿಮ್ಮ ಮೇಲೆ ಹಣಕಾಸು ಅಥವಾ ಕೆಲಸ ಸಂಬಂಧಿ ಒತ್ತಡ ಹೆಚ್ಚಾಗಬಹುದು. ದಿನದ ಅಂತ್ಯದಲ್ಲಿ ನೀವು ಬಯಸಿದ ಕೆಲಸವೊಂದು ನೆರವೇರಲಿದೆ. ಇದರಿಂದ ತುಸು ನೆಮ್ಮದಿ ಸಿಗಲಿದೆ. ದೂರ ಪ್ರಯಾಣಕ್ಕೆ ಮುಂದಾಗಬೇಡಿ. ಇಂದು ಅಪರಿಚಿತರೊಂದಿಗೆ ಯಾವುದೇ ವ್ಯವಹಾರಗಳ ಮಾಡಲು ಮುಂದಾಗಬೇಡಿ.
ಕನ್ಯಾ ರಾಶಿ
ಇಂದು ನಿಮಗೆ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ. ನೀವು ವ್ಯಾಪಾರಿಗಳಾಗಿದ್ದರೆ ಈ ದಿನ ನಿಮ್ಮ ವ್ಯವಹಾರದಲ್ಲಿ ಬದಲಾವಣೆ ನೋಡಬಹುದು. ನೆರೆಹೊರೆ ಅಥವಾ ಸಂಬಂಧಿಕರ ನಡುವೆ ವಾಗ್ವಾದ ನಡೆಯುವ ಸಾಧ್ಯತೆ ಇದೆ. ಇಂದು ನಿಗದಿಪಡಿಸಲಾದ ಕೆಲಸವನ್ನು ಸರಿಯಾದ ಸಮಯದಲ್ಲಿ ಮತ್ತು ಪೂರ್ಣ ಕಠಿಣ ಪರಿಶ್ರಮದಿಂದ ಮಾಡಲು ಪ್ರಯತ್ನಿಸಿ. ನಿಮ್ಮ ಕೆಲಸಕ್ಕಿದ್ದ ಅಡ್ಡಿಯೊಂದು ನಿವಾರಣೆಯಾಗಲಿದೆ. ಅವಿವಾಹಿತರು ಈ ದಿನ ಶುಭ ಸುದ್ದಿ ಕೇಳಬಹುದು. ಚಿಲ್ಲರೆ ವ್ಯಾಪಾರಿಗಳು ಇಂದು ಉತ್ತಮ ಲಾಭ ಗಳಿಸಬಹುದು. ಕುಟುಂಬ ಜೀವನದಲ್ಲಿ ಸಂತೋಷ ಇರಲಿದೆ. ಯಾವ ಸಂಬಂಧಗಳಿಂದ ದೂರವಿರುವ ಪ್ರಯತ್ನದಲ್ಲಿದ್ದೀರೋ ಅವರು ಮತ್ತೆ ಹುಡುಕಿ ಬರಬಹುದು.
ತುಲಾ ರಾಶಿ
ಈ ದಿನವು ನಿಮಗೆ ನಿಮ್ಮ ಆಸ್ತಿ ಸಂಬಂಧಿ ವಿಚಾರವಾಗಿ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ದಿನವಾಗಿರಲಿದೆ. ವಿದ್ಯಾರ್ಥಿಗಳಿಗೆ ಇದು ಅತ್ಯಂತ ಒತ್ತಡ ತರುವ ದಿನವಾಗಬಹುದು. ಹಾಗೆ ನಿಮ್ಮ ದಾಂಪತ್ಯದಲ್ಲಿ ಏರುಪೇರು ಸಂಭವಿಸಬಹುದು. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಕುಟುಂಬದಲ್ಲಿ ಒಂದು ಶುಭ ಕಾರ್ಯ ಸಂಬಂಧ ಮಾತುಕತೆ ನಡೆಯಬಹುದು. ಹಣಕಾಸಿನ ವಿಚಾರದಲ್ಲಿ ಯಾರನ್ನೂ ನೀವು ಸುಲಭವಾಗಿ ನಂಬದೇ ಇರುವುದು ಉತ್ತಮ. ಆಹಾರದ ವಿಚಾರವಾಗಿ ಹಣ ಖರ್ಚಾಗಬಹುದು.
ವೃಶ್ಚಿಕ ರಾಶಿ
ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ಅನಿರೀಕ್ಷಿತವಾಗಿ ಒಬ್ಬರಿಂದ ಹಣದ ಸಹಾಯ ಪಡೆಯುತ್ತೀರಿ. ಮಕ್ಕಳಿಂದ ನೀವು ಯಾವುದಾದರು ವಸ್ತುವಿನ ಬೇಡಿಕೆ ಇಟ್ಟರೆ ಅದು ಈಡೇರಬಹುದು. ಮನೆಯಲ್ಲಿ ಶಾಂತಿ ಇರಲಿದೆ. ನೀವು ನಿರುದ್ಯೋಗಿಗಳಾಗಿದ್ದರೆ ಮತ್ತು ಉದ್ಯೋಗವನ್ನು ಹುಡುಕುತ್ತಿದ್ದರೆ ನಿಮ್ಮ ಪ್ರಯತ್ನಗಳನ್ನು ಹೆಚ್ಚಿಸಬೇಕು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತವೆ. ಶಾಪಿಂಗ್‌ಗಾಗಿ ನೀವು ಹೆಚ್ಚು ಖರ್ಚು ಮಾಡಬಹುದು. ನೀವು ಸರ್ಕಾರಿ ನೌಕರಿಯಲ್ಲಿದ್ದರೆ ಈ ದಿನ ನಿಮ್ಮ ವರ್ಗಾವಣೆ ಅಥವಾ ಬಡ್ತಿ ಸಂಬಂಧ ಪ್ರಗತಿ ನೋಡಬಹುದು. ಅನಗತ್ಯ ಖರ್ಚುಗಳಿಂದ ದೂರ ಇರುವುದು ಉತ್ತಮ.
ಧನು ರಾಶಿ
ಇಂದು ನಿಮಗೆ ತುಂಬಾ ಕಾರ್ಯನಿರತ ದಿನವಾಗಿರುತ್ತದೆ. ಹಲವು ದಿನಗಳಿಂದ ಬಯಸಿದ್ದ ವಸ್ತುವೊಂದನ್ನು ನೀವು ಖರೀದಿಸಬಹುದು. ಯಾವುದೇ ದೊಡ್ಡ ವ್ಯವಹಾರ ಮಾಡುವಾಗ ಆತುರದಿಂದ ದೂರವಿರಲು ವ್ಯಾಪಾರಸ್ಥರಿಗೆ ಸಲಹೆ ನೀಡಲಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸದಿಂದ ಅತೃಪ್ತಿ ಇರಬಹುದು. ಶುಭ ಕಾರ್ಯದಲ್ಲಿ ಭಾಗಿಯಾಗುವ ಉದ್ದೇಶದಿಂದ ಹಲವು ವಸ್ತುಗಳ ನೀವು ಖರೀದಿಸಬಹುದು. ನಿಮ್ಮ ಪ್ರೀತಿಪಾತ್ರರ ಸಹಾಯದಿಂದ ದೊಡ್ಡ ಸಮಸ್ಯೆಗಳನ್ನು ಪರಿಹರಿಸಬಹುದು. ಉಳಿತಾಯದ ಹಣವನ್ನು ಬೇರೆ ಕೆಲಸಕ್ಕೆ ಬಳಸಬಹುದು.
ಮಕರ ರಾಶಿ
ಇಂದು ನೀವು ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲು ಉತ್ತಮ ದಿನವಾಗಿರುತ್ತದೆ. ವ್ಯಾಪಾರಸ್ಥರು ಇಂದು ದೊಡ್ಡ ಗ್ರಾಹಕರೊಂದಿಗೆ ವ್ಯವಹರಿಸಲು ಅವಕಾಶ ಪಡೆಯಬಹುದು. ಹೀಗಾಗಿ ಲಾಭವೂ ಹೆಚ್ಚಾಗಬಹುದು. ಅವಸರದಿಂದ ಯಾವುದೇ ಹೂಡಿಕೆ ಮಾಡಲು ಹೋಗಬೇಡಿ. ಕುಟುಂಬದಲ್ಲಿ ಒಬ್ಬರ ಆರೋಗ್ಯ ಏರುಪೇರಾಗಬಹುದು. ಕಚೇರಿ ವಿಚಾರಗಳು ಸುಗಮವಾಗಿ ನಡೆಯಲಿದೆ. ಕಬ್ಬಿಣ ವ್ಯಾಪಾರಿಗಳು ಲಾಭ ಮಾಡುವರು. ಮನೆಯಲ್ಲಿರುವ ವಸ್ತುವೊಂದು ಕೆಟ್ಟು ಹೋಗಬಹುದು. ಗೃಹಿಣಿಯರು ಆರೋಗ್ಯದ ಕಡೆಗೆ ಗಮನಹರಿಸಬೇಕು.
ಕುಂಭ ರಾಶಿ
ಇಂದು ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಲಿದೆ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಅತಿಯಾಗಿ ಖರ್ಚು ಮಾಡಬೇಡಿ. ಹಾಗೆ ಈ ದಿನ ಮಾಡಿದ್ದ ಸಾಲವನ್ನು ತೀರಿಸುವುದು ಬಹಳ ಉತ್ತಮ. ವ್ಯಾಪಾರಿಗಳು ಹೊಸ ವ್ಯವಹಾರಗಳ ಮಾಡುವ ಬದಲಾಗಿ ತಮ್ಮ ವ್ಯಾಪಾರ ವೃದ್ಧಿಸಲು ಕ್ರಮ ಕೈಗೊಳ್ಳಿ. ನಿಮ್ಮ ನಿರೀಕ್ಷೆಯಂತೆ ಹಣಕಾಸು ವಿಚಾರದಲ್ಲಿ ಸಮಸ್ಯೆ ಎದುರಿಸಬಹುದು. ಮನೆಗಾಗಿ ಹೊಸ ವಸ್ತು ಖರೀದಿಸಬಹುದು. ಚಿನ್ನ ಅಥವಾ ಬೆಳ್ಳಿ ಮೇಲಿನ ಹೂಡಿಕೆಗೆ ಇದು ಸಕಾಲ. ಉದ್ಯಮಿಗಳು ಇಂದು ದೊಡ್ಡ ಸವಾಲನ್ನು ಎದುರಿಸಬೇಕಾಗಬಹುದು. ಆರೋಗ್ಯದಲ್ಲಿ ಸುಧಾರಣೆ ಸಾಧ್ಯ.
ಮೀನ ರಾಶಿ
ಇಂದು ನಿಮಗೆ ಕಷ್ಟಗಳಿಂದ ತುಂಬಿದ ದಿನವಾಗಿರುತ್ತದೆ. ಆದರೆ ಹಣಕಾಸು ವಿವಾರವಾಗಿ ನೀವು ಬಲವಾಗುತ್ತೀರಿ. ಇಂದು ಕಡಿಮೆ ಪ್ರಯತ್ನದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ನಿಮ್ಮ ವ್ಯವಹಾರವು ವೇಗವಾಗಿ ಬೆಳೆಯುತ್ತದೆ. ಹೊಸ ವ್ಯವಹಾರಗಳು ನಿಮ್ಮ ಕೈ ಹಿಡಿಯಲಿದೆ. ಸಣ್ಣ ವ್ಯಾಪಾರಿಗಳಲ್ಲಿ ಒತ್ತಡ ಹೆಚ್ಚುತ್ತದೆ. ನಿಮ್ಮ ಮನೆಯಲ್ಲಿ ದೊಡ್ಡ ವಿಚಾರಗಳ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











