Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
Today Rashi Bhavishya: ಏಪ್ರಿಲ್ 25ರ ಶುಭ ಶುಕ್ರವಾರದ ನಿಮ್ಮ ಭವಿಷ್ಯದಲ್ಲಿ ಏನಿದೆ?
ಶುಕ್ರವಾರವಾದ ಈ ಶುಭ ದಿನದಂದು ನಿಮ್ಮ ರಾಶಿಫಲ ಇಲ್ಲಿದೆ ನೋಡಿ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನದಂದು ಬಹಳ ಒತ್ತಡ ಇರಲಿದೆ. ಮಕ್ಕಳ ಕಡೆಯಿಂದ ಅಥವಾ ಕುಟುಂಬದ ಕಡೆಯಿಂದ ನಿಮ್ಮ ಒತ್ತಡವು ಹೆಚ್ಚಾಗಬಹುದು. ಹಾಗೆ ನಿಮ್ಮ ಮಾತಿನ ಕಾರಣಕ್ಕಾಗಿ ನೀವು ಬಹಳ ಸಮಸ್ಯೆಗೆ ಒಳಗಾಬೇಕಾಗುತ್ತದೆ. ಕುಟುಂಬದಲ್ಲಿ ನಿಮಗೆ ಕೆಲವು ದೊಡ್ಡ ಜವಾಬ್ದಾರಿಗಳು ಸಿಗಬಹುದು. ಕಬ್ಬಿಣದ ವ್ಯಾಪಾರಿಗಳು ಸಹ ಉತ್ತಮ ಲಾಭ ಪಡೆಯಬಹುದು. ನಿಮ್ಮ ಆದಾಯದ ಮೂಲಗಳು ಹೆಚ್ಚಾಗುತ್ತವೆ, ಅದು ನಿಮಗೆ ಸಂತೋಷ ತರಲಿದೆ. ಇಂದು ಯಾವುದೇ ಕೆಲಸ ಮಾಡುವಾಗಲು ಶ್ರಮವಹಿಸಿ, ಪ್ರಮಾಣಿಕವಾಗಿ ಮಾಡಿದರೆ ಉತ್ತಮ ಫಲಿತಾಂಶ ಪಡೆಯಲಿದ್ದೀರಿ.
ವೃಷಭ ರಾಶಿ
ಆರೋಗ್ಯದ ದೃಷ್ಟಿಯಿಂದ ಇಂದಸ್ಯೆಗಳ ಎದುರಿಸಬೇಕಾದ ದಿನವಾಗಿರಲಿದೆ. ಹಳೆಯ ಅನಾರೋಗ್ಯ ಸಂಬಂಧ ನೀವು ವೈದ್ಯರನ್ನು ಭೇಟಿಯಾಗುವುದು ಉತ್ತಮ. ನೀವು ಅರ್ಧಕ್ಕೆ ನಿಲ್ಲಿಸಿರುವ ಹಲವು ಕೆಲಸಗಳನ್ನು ಪೂರ್ಣ ಮಾಡುವ ಕುರಿತಾಗಿ ಆಲೋಚಿಸಿ. ನೀವು ಹಣಕಾಸು ವಿಚಾರವಾಗಿ ಬ್ಯಾಂಕ್, ಫೈನಾನ್ಸ್, ಅಥವಾ ಸ್ನೇಹಿತರ ಬಳಿ ಮನವಿ ಮಾಡಿದ್ದರೆ ಈ ದಿನ ಅದರಿಂದ ಧನಾತ್ಮಕ ಸುದ್ದಿ ಕೇಳುವಿರಿ. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನ ಕಾಪಾಡಿ. ಕೆಲಸದ ಜೊತೆಗೆ ನಿಮ್ಮ ಕುಟುಂಬಕ್ಕೆ ಸಾಕಷ್ಟು ಸಮಯ ನೀಡಿ.

ಮಿಥುನ ರಾಶಿ
ಇಂದು ನಿಮಗೆ ಸಾಮಾನ್ಯ ದಿನವಾಗಿರುತ್ತದೆ. ದೂರದ ಸಂಬಂಧಿ ಫೋನ್ ಕರೆಯ ಮೂಲಕ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಕುಟುಂಬದಲ್ಲಿ ಇಂದು ಉತ್ತಮ ದಿನವಲ್ಲ. ನೀವು ತುಂಬಾ ಜಾಗರೂಕರಾಗಿರಬೇಕು. ಉದ್ಯಮಿಗಳು ಕೆಲವು ಹೊಸ ಜನರೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಪಡೆಯಬಹುದು. ನಿಮ್ಮ ಕಾರ್ಯಗಳನ್ನು ಶಾಂತ ಮನಸ್ಸಿನಿಂದ ಮತ್ತು ಬುದ್ದಿವಂತಕೆಯಿಂದ ಪೂರ್ಣಗೊಳಿಸಲು ಪ್ರಯತ್ನಿಸಿದರೆ ನೀವು ಯಶಸ್ಸನ್ನು ಪಡೆಯಬಹುದು. ಕೆಲಸದ ವಿಚಾರವಾಗಿ ದೂರ ಪ್ರಯಾಣಕ್ಕೆ ನೀವು ಮುಂದಾಗಬಹುದು.
ಕರ್ಕ ರಾಶಿ
ಇಂದು ನಿಮಗೆ ಒಳ್ಳೆಯ ದಿನವಾಗಿರಲಿದೆ. ನಿಮ್ಮ ಸಂಗಾತಿಯೊಂದಿಗೆ ನೀವು ಜಗಳವಾಡಬಹುದು. ಶಾಂತಿ ಮತ್ತು ಪ್ರೀತಿಯಿಂದ ಅವರಲ್ಲಿ ಮಾತನಾಡುವುದು ಮುಖ್ಯ. ಸಂಬಳ ಪಡೆಯುವವರು ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಿ. ನಿಗದಿಪಡಿಸಲಾದ ಕೆಲಸವನ್ನು ಸರಿಯಾದ ಸಮಯದಲ್ಲಿ ಮತ್ತು ಪೂರ್ಣ ಕಠಿಣ ಪರಿಶ್ರಮದಿಂದ ಮಾಡಲು ಪ್ರಯತ್ನಿಸಿ. ಹಣದ ಪರಿಸ್ಥಿತಿ ಚೆನ್ನಾಗಿರುತ್ತದೆ. ಆದರೆ ಖರ್ಚುಗಳ ಮೇಲೆ ಹಿಡಿತ ಇಡಿ. ಹಾಗೆ ಬೇರೆಯವರ ಸೂಚನೆಯ ಪ್ರಕಾರವಾಗಿ ಹಣ ಹೂಡಿಕೆ ಅಥವಾ ಖರ್ಚಿಗೆ ಮುಂದಾಗುವುದನ್ನು ತಪ್ಪಿಸಿ. ನೀವು ಬಹಳ ದಿನದಿಂದ ಯಾವುದಾದರು ಅನಾರೋಗ್ಯ ಸಮಸ್ಯೆಗೆ ತುತ್ತಾಗಿದ್ದರೆ ಈ ದಿನ ವೈದ್ಯರ ಸಲಹೆ ಪಡೆದುಕೊಳ್ಳಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ದಿನ ಬಹಳ ಲಾಭದಾಯಕವಾಗಬಹುದು, ನಿಮ್ಮ ಮನೆಯಲ್ಲಿರುವ ದೊಡ್ಡ ಸಮಸ್ಯೆಯೊಂದು ಬಗೆಹರಿಯಲಿದೆ. ನಿಮ್ಮ ನಿರೀಕ್ಷೆಯಂತೆ ಹಣ ನಿಮ್ಮ ಕೈ ಸೇರಲಿದೆ. ಉದ್ಯೋಗಿಗಳು ಒತ್ತಡದ ನಡುವೆಯೂ ಉತ್ತಮ ದಿನವನ್ನಾಗಿ ನೋಡಬಹುದು. ನಿಮ್ಮ ಆಲೋಚನೆಯೊಂದಕ್ಕೆ ಮನೆಯ ಹಿರಿಯರಿಂದ ಬೆಂಬಲ ವ್ಯಕ್ತವಾಗಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಆಗುವುದನ್ನು ನೋಡಬಹುದು. ನಿಮ್ಮ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಆಯಾಸ, ಮೈ ಕೈ ನೋವಿನಂತಹ ಸಮಸ್ಯೆಗೆ ಗುರಿಯಾಗಬಹುದು. ಆಹಾರ ಸೇವನೆಯ ಕುರಿತು ಎಚ್ಚರಿಕೆ ಇಡಿ. ನಿರುದ್ಯೋಗಿಗಳಾಗಿದ್ದರೆ ಈ ದಿನ ಹೊಸ ಅವಕಾಶ ಬರಬಹುದು.
ಕನ್ಯಾ ರಾಶಿ
ಇಂದು ನಿಮಗೆ ಮಿಶ್ರ ಫಲದ ದಿನವಾಗಿದೆ. ದಿನದ ಆರಂಭದಲ್ಲಿ ನೀವು ಹಣಕಾಸು ವಿಚಾರವಾಗಿ ಬಹಳ ಧನಾತ್ಮಕವಾಗಿರಬಹುದು. ಆದರೆ ದಿನದ ಅಂತ್ಯದಲ್ಲಿ ನಿಮಗೆ ಹಣಕಾಸು ವಿಚಾರವಾಗಿ ಒತ್ತಡ ಹೆಚ್ಚಬಹುದು. ಈ ದಿನ ನಿಮ್ಮ ಮನೆಯಲ್ಲಿ ಸಂತಸದ ವಾತಾವರಣಕ್ಕೆ ನೀವು ಕಾರಣರಾಗಲಿದ್ದೀರಿ. ನಿಮ್ಮ ಯಾವುದೇ ಸರ್ಕಾರಿ ಕೆಲಸವು ಬಾಕಿ ಉಳಿದರೆ ಈ ದಿನ ನಿಮ್ಮ ಓಡಾಟ ಹೆಚ್ಚಾಗಲಿದೆ. ದೀರ್ಘಾವಧಿಯ ಯೋಜನೆಗಳು ವೇಗ ಪಡೆಯಲಿದೆ. ಕುಟುಂಬದಲ್ಲಿ ಹಿರಿಯರೊಬ್ಬರ ಆರೋಗ್ಯ ಹದ ಗೆಡಬಹುದು. ಹಾಗೆ ನಿಮ್ಮ ದೈನಂದಿನ ಕೆಲಸದಲ್ಲಿ ಆಪ್ತರಿಂದ ಅಡೆತಡೆ ನೋಡಬಹುದು.
ತುಲಾ ರಾಶಿ
ಇಂದು ನಿಮ್ಮ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳುವ ದಿನವಾಗಿರುತ್ತದೆ. ಇಂದು ಮಕ್ಕಳಿಗಾಗಿ ಕೆಲವು ಪ್ರಮುಖ ಶಾಪಿಂಗ್ ಕೂಡ ಮಾಡಬಹುದು. ನೀವು ಸ್ನೇಹಿತನೊಂದಿಗೆ ಬಿರುಕು ಹೊಂದಿದ್ದರೆ, ಇಂದು ಎಲ್ಲಾ ತಪ್ಪುಗ್ರಹಿಕೆಗಳು ದೂರವಾಗುತ್ತವೆ. ನಿಮ್ಮ ಸಣ್ಣ ತಪ್ಪು ದೊಡ್ಡ ನಷ್ಟಕ್ಕೆ ಕಾರಣವಾಗಬಹುದು. ಚಿಲ್ಲರೆ ವ್ಯಾಪಾರಿಗಳು ಇಂದು ಉತ್ತಮ ಲಾಭ ಗಳಿಸಬಹುದು. ನೀವು ಆಸ್ತಮಾದಿಂದ ಬಳಲುತ್ತಿದ್ದರೆ ಹೆಚ್ಚು ಜಾಗರೂಕರಾಗಿರಬೇಕು. ನೀವು ನಿರುದ್ಯೋಗಿಗಳಾಗಿದ್ದರೆ ಮತ್ತು ಉದ್ಯೋಗವನ್ನು ಹುಡುಕುತ್ತಿದ್ದರೆ ನಿಮ್ಮ ಪ್ರಯತ್ನಗಳನ್ನು ಹೆಚ್ಚಿಸಬೇಕು.
ವೃಶ್ಚಿಕ ರಾಶಿ
ಇಂದು ನೀವು ಯಾವುದೇ ನಿರ್ಧಾರವನ್ನು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಇಂದು ನಿಮಗೆ ಪ್ರಮುಖ ಕೆಲಸದಲ್ಲಿ ಅಡೆತಡೆಗಳು ಇರಬಹುದು. ಮನೆಯ ವಾತಾವರಣ ಶಾಂತವಾಗಿರುತ್ತದೆ. ನೀವು ಪ್ರೇಮ ವಿವಾಹವ ಬಯಸಿದರೆ ಕುಟುಂಬ ಸದಸ್ಯರ ಬೆಂಬಲ ಪಡೆಯಬಹುದು. ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ತುಂಬಾ ಆಸಕ್ತಿ ಹೊಂದಿರುತ್ತೀರಿ. ಪ್ರವಾಸ ಕುರಿತಾಗಿ ಉತ್ತಮ ನಿರ್ಧಾರಕ್ಕೆ ಬರಬಹುದು. ವೈವಾಹಿಕ ಜೀವನದಲ್ಲಿದ್ದ ಸಮಸ್ಯೆಯೊಂದು ಬಗೆಹರಿಯಲಿದೆ. ದೈಹಿಕವಾಗಿ ಸದೃಢವಾಗಿರಲು ಮಾನಸಿಕ ಚಿಂತೆಗಳನ್ನು ತೊಡೆದುಹಾಕಬೇಕು.
ಧನು ರಾಶಿ
ಇಂದು ನಿಮಗೆ ಸಂತೋಷದ ದಿನವಾಗಿರಲಿದೆ. ನೀವು ನಿಮ್ಮ ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ. ಇಂದು ಕಚೇರಿಯಲ್ಲಿ ಕೆಲಸದ ಹೊರೆ ಕಡಿಮೆ ಇರುತ್ತದೆ. ಹೋಟೆಲ್ ಅಥವಾ ರೆಸ್ಟೋರೆಂಟ್‌ಗೆ ಸಂಬಂಧಿಸಿದ ಜನರು ವ್ಯವಹಾರದಲ್ಲಿ ತೊಡಕು ಎದುರಿಸಬಹುದು. ನಿಮ್ಮ ಆದಾಯದ ಬಗ್ಗೆ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಯಾವುದೇ ಅಪರಿಚಿತರೊಂದಿಗೆ ವ್ಯವಹಾರ ಮಾಡಬೇಡಿ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಪ್ರತಿಕೂಲವಾಗಿ ಉಳಿಯುವ ಸಾಧ್ಯತೆಯಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಈ ದಿನ ಬಹಳ ಆಯಾಸ ಮತ್ತು ವಿಶ್ರಾಂತಿ ಇಲ್ಲದ ದಿನವಾಗಬಹುದು. ನಿಮ್ಮ ಕೆಲಸದಲ್ಲಿನ ಒತ್ತಡ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮಕ್ಕಳ ಆರೋಗ್ಯದ ವಿಚಾರವಾಗಿ ನಿಮಗೆ ಚಿಂತೆ ಕಾಡಬಹುದು. ನೀವು ಪೋಷಕರೊಂದಿಗೆ ಕೆಲವು ಮುಖ್ಯ ವಿಚಾರಗಳನ್ನು ಚರ್ಚಿಸಲು ಇಂದು ಒಳ್ಳೆಯ ದಿನ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಹಾದಿ ಸ್ಪಷ್ಟವಾಗುತ್ತದೆ. ಆರ್ಥಿಕ ದೃಷ್ಟಿಕೋನದಿಂದ ಇಂದು ನಿಮಗೆ ತುಂಬಾ ಅದೃಷ್ಟದ ದಿನವಾಗುವ ಅವಕಾಶಗಳಿವೆ.
ಕುಂಭ ರಾಶಿ
ಇಂದು ನಿಮಗೆ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ. ನೀವು ಕೆಲವು ಪ್ರಮುಖ ಜನರನ್ನು ಭೇಟಿಯಾಗುವ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ. ನಿಮ್ಮ ಮಗುವಿನ ಸಹವಾಸದ ಬಗ್ಗೆ ನೀವು ವಿಶೇಷ ಗಮನ ಹರಿಸಬೇಕಾಗುತ್ತದೆ. ನೀವು ಯಾವುದೋ ತಪ್ಪು ಕ್ರಮದತ್ತ ಸಾಗುತ್ತಿರಬಹುದು. ನಿಮ್ಮ ಬಾಸ್ ತಪ್ಪು ಎಂದು ಹೇಳುವ ಎಲ್ಲವನ್ನೂ ಒಪ್ಪಬೇಡಿ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಅನಗತ್ಯ ವಾದ ಉಂಟಾಗಬಹುದು. ಇಂದು ನೀವು ಇತರರ ವಿಷಯಗಳ ಬಗ್ಗೆ ಹೆಚ್ಚು ಮಾತನಾಡಬಾರದು.
ಮೀನ ರಾಶಿ
ಇಂದು ನಿಮ್ಮ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಮಾರ್ಗದರ್ಶನ ಪಡೆಯುತ್ತೀರಿ. ಇಂದು ನಿಮಗೆ ದೊಡ್ಡ ಯೋಜನೆಯಲ್ಲಿ ಕೆಲಸ ಮಾಡಲು ಸಹ ಅವಕಾಶ ಸಿಗಬಹುದು. ಮಾರುಕಟ್ಟೆ ಹೂಡಿಕೆ, ಉಳಿತಾಯದತ್ತ ಗಮನ ಹರಿಸುತ್ತೀರಿ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ನಿಮ್ಮ ಹಿರಿಯರನ್ನು ಗೌರವಿಸಿ, ವಿಶೇಷವಾಗಿ ನಿಮ್ಮ ತಂದೆಯೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಲು ಪ್ರಯತ್ನಿಸಿ. ಸಂಗಾತಿಯೊಂದಿಗೆ ನಿಮ್ಮ ಭಾವನಾತ್ಮಕ ಬಾಂಧವ್ಯ ಹೆಚ್ಚಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ದಿನ ಅನುಕೂಲಕರವಾಗಿರುತ್ತದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











