Today Rashi Bhavishya: ಏಪ್ರಿಲ್ 24ರ ಗುರುವಾರ ದ್ವಾದಶ ರಾಶಿಗಳಿಗೆ ಹೇಗಿರಲಿದೆ?

ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ

ಮೇಷ ರಾಶಿ

ಈ ದಿನ ಉದ್ಯೋಗಿಗಳು ಕಚೇರಿಯಲ್ಲಿ ನಿಮ್ಮ ಯಾವುದೇ ಕೆಲಸಕ್ಕೆ ಸಹೋದ್ಯೋಗಿಗಳನ್ನು ಅವಲಂಬಿಸಬೇಡಿ. ಒಂದು ಸಣ್ಣ ತಪ್ಪು ನಿಮಗೆ ದೊಡ್ಡ ಆರ್ಥಿಕ ನಷ್ಟವನ್ನುಂಟು ಮಾಡುತ್ತದೆ. ವ್ಯಾಪಾರಸ್ಥರು ಇಂದು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಹುದು. ನಿಮ್ಮ ಸಣ್ಣ ನಿರ್ಧಾರವನ್ನು ಬುದ್ಧಿವಂತಿಕೆಯಿಂದ ತೆಗೆದುಕೊಂಡರೆ ಅದು ಉತ್ತಮವಾಗಿರುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಅವಿವಾಹಿತರಾಗಿದ್ದರೆ ಇಂದು ಮದುವೆಯ ಬಗ್ಗೆ ಮನೆಯಲ್ಲಿ ಚರ್ಚೆ ನಡೆಯಬಹುದು. ಒತ್ತಡದ ಕಾರಣದಿಂದ ನಿಮ್ಮ ಮನಸ್ಸಿನಲ್ಲಿ ಗೊಂದಲ ಆಶಾಂತಿ ಇರಬಹುದು.

ವೃಷಭ ರಾಶಿ

ಇಂದು ನಿಮಗೆ ತುಂಬಾ ಒಳ್ಳೆಯ ದಿನವಾಗಿದೆ. ಹಣಕಾಸು ಸ್ಥಿತಿಯಲ್ಲಿ ಎಲ್ಲಿಲ್ಲದ ಸುಧಾರಣೆ ನೋಡುವಿರಿ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗದಿರಲು ನೀವಾಡುವ ಮಾತಿನ ಕಡೆಗೆ ಗಮನಹರಿಸಿ. ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡಬೇಕಾಗಬಹುದು. ಕೆಲಸದ ಸ್ಥಳದಲ್ಲಿ ಜಗಳಗಳಿಂದ ದೂರವಿರುವುದು ಮತ್ತು ಕೆಲಸದ ಮೇಲೆ ನಿಮ್ಮ ಸಂಪೂರ್ಣ ಗಮನವನ್ನು ಕೇಂದ್ರೀಕರಿಸುವುದು ಉತ್ತಮ. ಚಿಲ್ಲರೆ ವ್ಯಾಪಾರಿಗಳು ಉತ್ತಮ ಆರ್ಥಿಕ ಲಾಭ ಗಳಿಸಬಹುದು. ಎಲ್ಲಾ ಜವಾಬ್ದಾರಿಗಳನ್ನು ನೀವು ಚೆನ್ನಾಗಿ ನಿರ್ವಹಿಸುತ್ತೀರಿ. ಶೀಘ್ರದಲ್ಲೇ ನಿಮ್ಮ ಶ್ರಮಕ್ಕೆ ಪ್ರತಿಫಲ ಪಡೆಯಲಿದ್ದೀರಿ. ಪ್ರವಾಸಿಗರಲ್ಲಿ ಹಣಕಾಸಿನ ಸಂಕಷ್ಟ ಎದುರಾಗಬಹುದು.

April-24-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯ ಮಂದಿಗೆ ಈ ದಿನ ಮಿಶ್ರ ಫಲ ನೋಡಬಹುದು. ಇಂದು ನೀವು ನಿಮ್ಮ ಕೆಲಸದ ಮೇಲೆ ಸರಿಯಾಗಿ ಗಮನಹರಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಕೆಲವು ಪ್ರಮುಖ ಕೆಲಸಗಳು ಇಂದು ಅಪೂರ್ಣವಾಗಿ ಉಳಿಯುವ ಸಾಧ್ಯತೆಯಿದೆ. ಹೆಚ್ಚಿದ ದುಂದುಗಾರಿಕೆಯಿಂದಾಗಿ ನಿಮ್ಮ ಬಜೆಟ್ ಅಸಮತೋಲನವಾಗಬಹುದು. ಹೀಗಾಗಿ ನಿಮ್ಮ ಖರ್ಚಿನ ಮೇಲೆ ಹೆಚ್ಚು ನಿಗಾ ಇರಿಸಿ. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರು ಇದ್ದರೆ ವೈದ್ಯರ ಭೇಟಿಯಾಗುವುದು ಉತ್ತಮ. ತ್ವರಿತ ಲಾಭ ಗಳಿಸಲು ಯಾವುದೇ ತಪ್ಪು ಮಾರ್ಗವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.

ಕರ್ಕ ರಾಶಿ

ಇಂದು ಉದ್ಯಮಿಗಳು ದೊಡ್ಡ ಆರ್ಥಿಕ ಲಾಭ ಪಡೆಯಬಹುದು. ನಿಮ್ಮ ವ್ಯವಹಾರದಲ್ಲಿ ನೀವು ಧನಾತ್ಮಕ ಬದಲಾವಣೆಗಳನ್ನು ನೋಡುತ್ತೀರಿ. ಹಣದ ವಿಷಯದಲ್ಲಿ ಇಂದು ನಿಮಗೆ ಒಳ್ಳೆಯ ದಿನವಾಗಿರುವುದಿಲ್ಲ. ನೀವು ಕಚೇರಿಯಲ್ಲಿ ಮತ್ತೆ ಮತ್ತೆ ಅದೇ ತಪ್ಪನ್ನು ಪುನರಾವರ್ತಿಸುವುದನ್ನು ತಪ್ಪಿಸಬೇಕು. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ತಂದೆಯೊಂದಿಗಿನ ನಿಮ್ಮ ಸಂಬಂಧವು ಬಲವಾಗಿರುತ್ತದೆ. ಅನೇಕ ಪ್ರಯತ್ನಗಳ ಹೊರತಾಗಿಯೂ ಹೊಸ ಉದ್ಯೋಗದಲ್ಲಿ ನೀವು ನಿರೀಕ್ಷಿತ ಫಲಿತಾಂಶವನ್ನು ಪಡೆಯುವುದಿಲ್ಲ.

ಸಿಂಹ ರಾಶಿ

ಕೆಲಸದಲ್ಲಿ ನಿಮ್ಮ ವಿರೋಧಿಗಳೊಂದಿಗೆ ಜಾಗರೂಕರಾಗಿರಿ. ಈ ದಿನ ಆತುರದಿಂದ ಅಥವಾ ಬೇರೆಯವರ ಸಲಹೆಯಂತೆ ಕೆಲಸ ಮಾಡುವುದು ನಿರ್ಧಾರ ತೆಗೆದಿಕೊಳ್ಳಲು ಮುಂದಾಗಬೇಡಿ. ನೀವು ಉದ್ಯಮಿಯಾಗಿದ್ದರೆ ನಿಮ್ಮ ವ್ಯಾಪಾರ ಯೋಜನೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ದೊಡ್ಡ ಲಾಭಕ್ಕಾಗಿ, ನಿಮ್ಮ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ಮಾಡಿ. ಭವಿಷ್ಯದಲ್ಲಿ ಆರ್ಥಿಕ ಬಿಕ್ಕಟ್ಟನ್ನು ತಪ್ಪಿಸಲು, ನಿಮ್ಮ ನಿರ್ಧಾರಗಳನ್ನು ನೀವು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕು. ನಿಮಗೆ ಸಣ್ಣ ಅನಾರೋಗ್ಯ ಸಮಸ್ಯೆ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ನಿರ್ಲಕ್ಷ್ಯವು ದುಬಾರಿಯಾಗಬಹುದು.

ಕನ್ಯಾ ರಾಶಿ

ಇಂದು ಉದ್ಯೋಗ ಅಥವಾ ವ್ಯವಹಾರವಾಗಿರಲಿ ನೀವು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ದೊಡ್ಡ ಕನಸಿಗೆ ಇಂದು ಬಹುಮುಖ್ಯ ದಿನವಾಗಿದೆ. ನಿಮ್ಮ ಅತ್ಯುತ್ತಮವಾದದ್ದನ್ನು ನೀಡಲು ಪ್ರಯತ್ನಿಸುವುದು ಉತ್ತಮ. ಇಂದು ಉದ್ಯಮಿಗಳಿಗೆ ಏರಿಳಿತಗಳು ತುಂಬಿರುತ್ತವೆ. ನಿಮ್ಮ ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು. ಯಶಸ್ಸನ್ನು ಸವಿಯಲು ಬಯಸಿದರೆ ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ. ಹಣದ ದೃಷ್ಟಿಯಿಂದ ದಿನ ಉತ್ತಮವಾಗಿರುತ್ತದೆ. ಆಧರೆ ಎಚ್ಚರಿಕೆಯಿಂದ ಖರ್ಚು ಮಾಡಬೇಕಾಗುತ್ತದೆ.

ತುಲಾ ರಾಶಿ

ಇಂದು ನೀವು ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುತ್ತೀರಿ. ವಿಶೇಷವಾಗಿ ಹಣದ ವಿಷಯಗಳಲ್ಲಿ ನಿಮಗೆ ಇಂದು ಅದೃಷ್ಟದ ದಿನ ಎನ್ನಬಹುದು. ಹಾಗೆ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಲು ನೀವು ಉತ್ತಮ ಮಾರ್ಗ ಕಂಡುಕೊಳ್ಳುತ್ತೀರಿ. ಮನೆಗಾಗಿ ಅಗತ್ಯ ವಸ್ತುಗಳ ಖರೀದಿಸಬಹುದು. ಕೌಟುಂಬಿಕ ವಿಚಾರದಲ್ಲಿ ಈ ದಿನ ನಿಮ್ಮ ಪರವಾದ ಒಲವು ಇರಲಿದೆ. ಹೂಡಿಕೆ, ಬ್ಯಾಂಕಿಂಗ್ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತೀರಿ. ದಾಖಲೆಗಳು, ಕಡತದಂತಹ ಕೆಲಸಗಳಲ್ಲಿ ಮತ್ತೆ ಅಡೆತಡೆ ಎದುರಿಸಬಹುದು. ವಿದ್ಯಾರ್ಥಿಗಳು ಈ ದಿನ ಎಚ್ಚರಿಕೆ ವಹಿಸಬೇಕು.

ವೃಶ್ಚಿಕ ರಾಶಿ

ಈ ದಿನ ಆರೋಗ್ಯದ ದೃಷ್ಟಿಯಲ್ಲಿ ಉತ್ತಮವಾಗಿದೆ. ನಿಮ್ಮ ದೊಡ್ಡ ಅನಾರೋಗ್ಯ ಸಮಸ್ಯೆಗೆ ಅಥವಾ ಕೆಲಸ ಕಾರ್ಯಕ್ಕೆ ಅಡ್ಡಿಯಾಗಿದ್ದ ಅನಾರೋಗ್ಯದಿಂದ ಮುಕ್ತಿ ಪಡೆಯುತ್ತೀರಿ. ನೀವು ಉದ್ಯಮಿಯಾಗಿದ್ದರೆ ಇಂದು ಅನುಭವಿ ವ್ಯಕ್ತಿಯಿಂದ ಸೂಕ್ತ ಸಲಹೆ ಪಡೆಯಬಹುದು. ಭವಿಷ್ಯದಲ್ಲಿ ನೀವು ಸರಿಯಾದ ಫಲಿತಾಂಶಗಳನ್ನು ಪಡೆಯುತ್ತೀರಿ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಲಾಭ ಮಾಡುವುದು ಕಷ್ಟವಾಗಬಹುದು. ಅವಿವಾಹಿತರಲ್ಲಿ ದೊಡ್ಡ ಹಣಕಾಸು ಸಮಸ್ಯೆಗೆ ಇಂದು ನಾಂದಿಯಾಗಬಹುದು. ಕೋಪವನ್ನು ನಿಯಂತ್ರಿಸದಿದ್ದರೆ ಮನೆಯ ಶಾಂತಿಗೆ ಭಂಗವಾಗಬಹುದು. ಕೆಲಸದ ಕಾರಣಕ್ಕೆ ಪ್ರಯಾಣ ಮಾಡಬಹುದು.

ಧನು ರಾಶಿ

ಇಂದು ನಿಮಗೆ ಬಹಳ ವಿಶೇಷವಾದ ದಿನವಾಗಿರುತ್ತದೆ. ಹಲವು ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ಮುಗಿಯಲಿವೆ. ಅದರಲ್ಲೂ ಆಸ್ತಿ ವಿವಾದ, ಕೋರ್ಟು, ಬ್ಯಾಂಕಿಂಗ್‌ನಂತಹ ವ್ಯವಹಾರದಲ್ಲಿ ಧನಾತ್ಮಕ ಬದಲಾವಣೆ ನೋಡಬಹುದು. ಯಾರಿಗಾದರು ಈ ದಿನ ಹಣ ನೀಡಿದರೆ ಅವರಿಂದ ದೊಡ್ಡ ಪಾಠ ಕಲಿಯುತ್ತೀರಿ. ಉದ್ಯೋಗಸ್ಥರು ಇಂದು ಕಛೇರಿಯಲ್ಲಿ ಹೆಚ್ಚಿನ ಸಮಯವನ್ನು ವ್ಯವಹರಿಸಬೇಕು. ಹೊಸ ಉದ್ಯೋಗ ಹುಡುಕುತ್ತಿದ್ದರೆ ಈ ಸಮಯದಲ್ಲಿ ಅತ್ಯುತ್ತಮ ಅವಕಾಶ ಪಡೆಯುವ ಸಾಧ್ಯತೆ ಇದೆ. ಹೊಸ ವೃತ್ತಿ ಅಥವಾ ಕೆಲಸ ಆರಂಭಿಸುವ ಮುನ್ನ ಹಿರಿಯರ ಅಥವಾ ತಜ್ಞರ ಅಭಿಪ್ರಾಯ ಆಲಿಸುವುದು ಅಗತ್ಯ.

ಮಕರ ರಾಶಿ

ಕೆಲಸದ ವಿಷಯದಲ್ಲಿ ಇಂದು ನಿಮಗೆ ತುಂಬಾ ಬಿಡುವಿಲ್ಲದ ದಿನವಾಗಿರುತ್ತದೆ. ಹಣದ ವಿಷಯದಲ್ಲಿ ಇಂದು ದುಬಾರಿ ದಿನವಾಗಲಿದೆ. ಮನೆಯ ಖರ್ಚು ಹೆಚ್ಚಾಗಬಹುದು. ಅದರಲ್ಲೂ ಅನಗತ್ಯ ವಿಚಾರವಾಗಿ ನೀವು ಹಣ ಖರ್ಚು ಮಾಡುತ್ತೀರಿ. ಬಹಳ ಸಮಯದ ಬಳಿಕ ನೀವು ಸಂಬಂಧಿಕರ ಮನೆಗೆ ಭೇಟಿ ಮಾಡುವ ಕುರಿತಾಗಿ ಆಲೋಚಿಸಬಹುದು. ನಿಮ್ಮ ಕೆಲವು ಕೆಲಸಗಳಲ್ಲಿ ಸರ್ಕಾರದ ಅಡೆತಡೆಗಳು ಇರಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಮಕ್ಕಳ ಭವಿಷ್ಯದ ಚಿಂತೆ ಹೆಚ್ಚಾಗಬಹುದು.

ಕುಂಭ ರಾಶಿ

ಕುಂಭ ರಾಶಿಯ ಮಂದಿ ಈ ದಿನ ಅತ್ಯುತ್ತಮ ಲಾಭ ನೋಡುವ ದಿನವಾಗಿದೆ. ನಿಮ್ಮ ಆರ್ಥಿಕ, ಆರೋಗ್ಯ, ಸಂತೋಷದಲ್ಲಿ ಹೆಚ್ಚು ಶುಭ ದಿನವಾಗಿ ನೋಡುತ್ತೀರಿ. ಭವಿಷ್ಯದಲ್ಲಿ ಆರ್ಥಿಕ ಬಿಕ್ಕಟ್ಟನ್ನು ತಪ್ಪಿಸಲು ಮತ್ತು ನಿಮ್ಮ ಹಣವನ್ನು ಸರಿಯಾಗಿ ಬಳಸಿಕೊಳ್ಳಲು ಮುಂದಾಗಿ. ಉಳಿತಾಯ, ಹೂಡಿಕೆಗೆ ಮುಂದಾಗಿ. ಕುಟುಂಬದ ಸಂತೋಷಕ್ಕಾಗಿ ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತೀರಿ. ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾಗುತ್ತದೆ. ಆಹಾರದ ವಿಚಾರವಾಗಿ ಹಣ ಖರ್ಚು ಮಾಡಬೇಕಾಗುತ್ತದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಜನರ ಆದಾಯ ಹೆಚ್ಚಾಗುವ ಸಾಧ್ಯತೆಯಿದೆ.

ಮೀನ ರಾಶಿ

ಮೀನ ರಾಶಿತವರಿಗೆ ಈ ದಿನ ಶುಭಕರವಾಗಿದೆ. ನಿಮ್ಮ ಎಲ್ಲಾ ಕೆಲಸಗಳಲ್ಲಿ ಧನಾತ್ಮಕ ಪರಿಣಾಮಗಳ ನೋಡಬಹುದು. ಅದರಲ್ಲೂ ನಿಮ್ಮ ಆರ್ಥಿಕ ಸ್ಥಿತಿ ಎಂದಿಗಿಂತ ಹೆಚ್ಚು ಸುಧಾರಿಸಲಿದೆ. ಅನಿರೀಕ್ಷಿತವಾಗಿ ನಿಮಗೆ ಹಣಕಾಸಿನ ನೆರವು ಸಿಗಲಿದೆ. ಹಾಗೆ ಕುಟುಂಬಸ್ಥರ ಜೊತೆಗೆ ನೀವು ಸಂತೋಷದ ಕ್ಷಣ ಕಳೆಯುವಿರಿ. ನೀವು ಚಿನ್ನ ಮತ್ತು ಬೆಳ್ಳಿಯ ವ್ಯಾಪಾರ ಮಾಡಿದರೆ ಯೋಗ್ಯವಾದ ಲಾಭವನ್ನು ಗಳಿಸಬಹುದು. ಷೇರು ಮಾರುಕಟ್ಟೆಗೆ ಸಂಬಂಧಿಸಿದ ಜನರು ಅಪಾರ ಆರ್ಥಿಕ ಲಾಭ ಗಳಿಸುವ ಸಾಧ್ಯತೆಯಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

April-24-daily-horoscope-prediction-for-12-zodiac-signs-in-kannada

Here is April 24 daily horoscope prediction for 12 zodiac signs read on...
Story first published: Thursday, April 24, 2025, 6:54 [IST]
X
Desktop Bottom Promotion