Today Rashi Bhavishya: ಏಪ್ರಿಲ್ 23ರಂದು ನಿಮ್ಮ ರಾಶಿಫಲ ಹೀಗಿದೆ!

ಈ ದಿನದ ರಾಶಿಫಲ ಪ್ರಕಾರ ಈ ದಿನ ಯಾವೆಲ್ಲಾ ರಾಶಿಗಳಿಗೆ ಶುಭ ಎಂದು ನೋಡೋಣ...

ಮೇಷ ರಾಶಿ

ಇಂದು ನಿಮ್ಮ ಕುಟುಂಬದ ಯಾವುದೇ ಸದಸ್ಯರ ವಿವಾಹ ಸಂಬಂಧ ಚರ್ಚೆಯಲ್ಲಿ ಭಾಗಿಯಾಗಬಹುದು. ಉತ್ತಮ ಕೆಲಸಗಳಲ್ಲಿ ನೀವು ತೊಡಗಬಹುದು. ಸ್ನೇಹಿತರೊಬ್ಬರಿಗೆ ನೀವು ಸಹಕಾರ ನೀಡಬಹುದು. ನಿಮ್ಮ ನಡುವಿನ ಎಲ್ಲಾ ತಪ್ಪು ತಿಳುವಳಿಕೆಗಳನ್ನು ನಿವಾರಿಸಲು ನಿಮ್ಮ ಕೈಲಾದಷ್ಟು ಪ್ರಯತ್ನಿಸುತ್ತೀರಿ. ನೀವು ಕೆಲಸದಲ್ಲಿ ಪ್ರಶಂಸೆಗೆ ಪಾತ್ರರಾಗಬಹುದು. ಪ್ರಯಾಣ ಮಾಡುವಾಗ ಆರೋಗ್ಯದ ಕಡೆ ಎಚ್ಚರಿಕೆ ಅಗತ್ಯ. ಇಂದು ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಲ್ಲ. ಯಾರನ್ನು ಇಂದು ಕುರುಡಾಗಿ ನಂಬಲು ಹೋಗಬೇಡಿ. ವ್ಯವಹಾರಗಳ ಮಾಡುವಾಗ ಬಹಳ ಎಚ್ಚರಿಕೆ ವಹಿಸಿ. ಆನ್‌ಲೈನ್ ವ್ಯವಹಾರಗಳಲ್ಲಿ ನೀವು ಸಮಸ್ಯೆಗಳ ಎದುರಿಸಬಹುದು.

ವೃಷಭ ರಾಶಿ

ಇಂದು ನಿಮ್ಮ ವ್ಯವಹಾರದಲ್ಲಿ ಕೆಲವು ದೊಡ್ಡ ಬದಲಾವಣೆಗಳನ್ನು ಮಾಡಬಹುದು. ಈ ದಿನ ಆರ್ಥಿಕವಾಗಿ ಉತ್ತಮವಾಗಿರಲಿದೆ, ಆರೋಗ್ಯ ಸಮಸ್ಯೆವಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ನಿಮ್ಮ ಸಹೋದ್ಯೋಗಿಯೊಬ್ಬರು ನಿಮ್ಮ ಕೆಲಸದಲ್ಲಿ ಸಂಪೂರ್ಣ ಬೆಂಬಲ ನೀಡುತ್ತಾರೆ. ನೀವು ಒಂದೇ ಸಮಯದಲ್ಲಿ ಹಲವಾರು ಕೆಲಸಗಳನ್ನು ಕೈಗೆತ್ತಿಕೊಂಡರೆ ನಿಮ್ಮ ಸಮಸ್ಯೆಗಳು ಹೆಚ್ಚಾಗಬಹುದು. ಉತ್ತಮ ಆರೋಗ್ಯಕ್ಕಾಗಿ ನೀವು ಆಹಾರಕ್ರಮದ ಕಡೆಗೆ ಗಮನಹರಿಸಿ, ನಿಮ್ಮ ಸಂಗಾತಿಯು ಉತ್ತಮ ಮನಸ್ಥಿತಿಯಲ್ಲಿರುತ್ತಾರೆ. ಮನೆಗಾಗಿ ನೀವು ಹಣ ಖರ್ಚು ಮಾಡಬೇಕಾಗುತ್ತದೆ. ಹಾಗೆ ವಾಹನ ಸಂಬಂಧಿ ಖರ್ಚು ಕೂಡ ಹೆಚ್ಚಾಗಲಿದೆ. ನೀವು ಬಾಡಿಗೆ ವಾಹನ ಚಲಾಯಿಸುವವರಾಗಿದ್ದರೆ ಎಚ್ಚರಿಕೆ ಅಗತ್ಯ.

Here is April 23 daily horoscope prediction for 12 zodiac signs read on

ಮಿಥುನ ರಾಶಿ

ಇಂದು ನೀವು ಯಾವುದನ್ನಾದರೂ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದಿದ್ದರೆ ಅದರಿಂದ ಮುಂದಾಗುವ ಆಗುಹೋಗುಗಳನ್ನು ಮತ್ತೆ ಅವಲೋಕಿಸುವುದು ಮುಖ್ಯ. ನಿಮ್ಮ ಸಮಸ್ಯೆ ಬಗೆಹರಿಸಲು ನಿಮ್ಮ ಆಪ್ತರು ಸಹಾಯಕ್ಕೆ ಬರುತ್ತಾರೆ. ಹಣದ ವಿಚಾರದಲ್ಲಿ ಯಾವುದೇ ರೀತಿಯ ಅಜಾಗರೂಕತೆ ಬೇಡ. ಹಣಕಾಸಿನ ವ್ಯವಹಾರ ಮಾಡುವಾಗ ವಿಶೇಷವಾಗಿ ಜಾಗರೂಕರಾಗಿರಿ. ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಬಹುದು. ನೀವು ಮನೆಗೆ ಹೊಸ ಎಲೆಕ್ಟ್ರಾನಿಕ್ ವಸ್ತುಗಳ ತರಬಹುದು. ವ್ಯವಹಾರದಲ್ಲಿ ನಿಮಗೆ ಸಹಾಯ ಮಾಡುವ ಕೆಲವು ತಜ್ಞರ ಭೇಟಿಯಾಗಬಹುದು. ಗೃಹಿಣಿಯರು ಲಾಭ ಮಾಡುವ ದಿನವಿದು.

ಕರ್ಕ ರಾಶಿ

ಇಂದು ನೀವು ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲು ಉತ್ತಮ ದಿನವಾಗಿರುತ್ತದೆ. ಈ ದಿನ ಆರ್ಥಿಕವಾಗಿಯೂ ಉತ್ತಮವಲ್ಲ, ಸಾಲ ಮಾಡಿದ್ದರೆ ಅದನ್ನು ಮರುಕಳಿಸುವ ಒತ್ತಡವಿರಬಹುದು, ವ್ಯಾಪಾರಿಗಳಿಗೆ ಧನ ಲಾಭದ ಸಮಸ್ಯೆ ಇರಲಿದೆ. ಈ ದಿನ ಸಂಗಾತಿಯ ಆರೋಗ್ಯ ಚಿಂತೆ ಕಾಡಬಹುದು. ಆಸ್ಪತ್ರೆಗೆ ಹಣ ಖರ್ಚಾಗಬಹುದು. ನಿಮ್ಮ ಕೆಲವು ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳದ ಕಾರಣ ನಿಮ್ಮ ಮನಸ್ಸು ಚಂಚಲವಾಗಬಹುದು. ನಿಮ್ಮ ಹಳೆಯ ಸ್ನೇಹಿತ ಹೇಳಿದ ವಿಷಯದ ಬಗ್ಗೆ ನಿಮಗೆ ಕೆಟ್ಟ ಭಾವನೆ ಬರಬಹುದು.

ಸಿಂಹ ರಾಶಿ

ಇಂದು ನಿಮಗೆ ತುಂಬಾ ಕಾರ್ಯನಿರತ ದಿನವಾಗಿರುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಪ್ರಯಾಣಿಸಬೇಕಾಗಬಹುದು. ಹಳೆಯ ವಿಷಯ ಮತ್ತೆ ಮರುಕಳಿಸಬಹುದು, ಆದರೆ ಚಿಂತೆ ಮಾಡಬೇಡಿ, ಸಮಯ ಎಲ್ಲವನ್ನೂ ಪರಿಹರಿಸುತ್ತದೆ. ನಿಮ್ಮ ಕೆಲಸದ ಸ್ಥಳದಲ್ಲಿ ಬಡ್ತಿ ಪಡೆದ ನಂತರ ನೀವು ತುಂಬಾ ಸಂತೋಷವಾಗಿರುತ್ತೀರಿ. ಮಕ್ಕಳ ಭವಿಷ್ಯದ ಕುರಿತು ಚಿಂತೆ ಕಾಡಬಹುದು. ನಿಮ್ಮ ದೈನಂದಿನ ವ್ಯವಹಾರದಲ್ಲಿ ಸಣ್ಣ ಅಡೆತಡೆ ನೋಡಬಹುದು. ಹಾಗೆ ಹಣದ ವಿಚಾರವಾಗಿ ನೀವು ಅಂದುಕೊಂಡ ದಿನವಾಗಿರುವುದಿಲ್ಲ. ಹಾಗೆ ಹಳೆಯ ಸಾಲ ತೀರಿಸಿದರು ಮತ್ತೆ ಹಣಕ್ಕಾಗಿ ಸಾಲ ಮಾಡುವ ಮನಸ್ಸು ಮಾಡಬಹುದು.

ಕನ್ಯಾ ರಾಶಿ

ಈ ದಿನ ನಿಮಗೆ ಸಂತೋಷವನ್ನು ತರಲಿದೆ. ರಕ್ತ ಸಂಬಂಧಗಳು ಬಲಗೊಳ್ಳುತ್ತವೆ. ಅವಿವಾಹಿತರಲ್ಲಿ ಹೊಸ ಆದಾಯ ನೋಡಬಹುದು. ನಿಮಗೆ ಇಷ್ಟವಾದದ್ದನ್ನು ಮಾಡಲು ಸಾಧ್ಯವಾಗುವುದು, ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ. ನೀವು ಯಾವುದರಿಂದಲೂ ದೊಡ್ಡ ವಿಷಯ ಮಾಡಬೇಕಾಗಿಲ್ಲ. ಕುಟುಂಬದಲ್ಲಿ ಪೂಜೆಯ ಆಯೋಜನೆಯಿಂದಾಗಿ ವಾತಾವರಣವು ಆಹ್ಲಾದಕರವಾಗಿರುತ್ತದೆ. ಸಂಗಾತಿಯೊಂದಿಗೆ ಭಾವನಾತ್ಮಕ ಬಾಂಧವ್ಯ ಹೆಚ್ಚಾಗಲಿದೆ. ಆರ್ಥಿಕ ದೃಷ್ಟಿಯಿಂದ ಈ ದಿನ ನಿಮಗೆ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ.

ತುಲಾ ರಾಶಿ

ಇಂದು ನೀವು ವಾಹನಗಳನ್ನು ಎಚ್ಚರಿಕೆಯಿಂದ ಬಳಸಬೇಕು. ಕೆಲಸದ ಸ್ಥಳದಲ್ಲಿ ಯಾವುದೇ ನಿರ್ಧಾರವನ್ನು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಆರೋಗ್ಯ ಸಮಸ್ಯೆಯಿದ್ದರೆ ಹೆಚ್ಚು ಜಾಗ್ರತೆವಹಿಸಿ, ಈ ದಿನ ವೃತ್ತಿ ಬದುಕಿನಲ್ಲಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಒತ್ತಡ ಹೆಚ್ಚಿರಲಿದೆ, ಕೆಲಸದಲ್ಲಿ ಒತ್ತಡ ಹೆಚ್ಚಿರಲಿದೆ. ಈ ದಿನ ನೀವು ಪ್ರಮುಖ ವಿಷಯದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳಬಹುದು. ದೊಡ್ಡ ಕೆಲಸಗಳಲ್ಲಿ ನೀವು ತೊಡಗಬೇಕಾಗಬಹುದು. ವ್ಯಾಪಾರಿಗಳಿಗೆ ಈ ದಿನ ಲಾಭದಾಯಕ ದಿನವಾಗಲಿದೆ.

ವೃಶ್ಚಿಕ ರಾಶಿ

ಇಂದು ನಿಮಗೆ ತುಂಬಾ ಖುಷಿ ಕೊಡುವ ದಿನವಾಗಿರುತ್ತದೆ. ನಿಮ್ಮ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲಿದೆ. ವ್ಯಾಪಾರಿಗಳು ಈ ದಿನ ಸ್ವಲ್ಪ ಜಾಗ್ರತೆವಹಿಸಬೇಕು. ಹಣಕಾಸಿನ ಸ್ಥಿತಿ ಚೆನ್ನಾಗಿರಲಿದೆ, ಆದರೆ ಅತಿಯಾಗಿ ಖರ್ಚು ಮಾಡಲು ಹೋಗಬೇಡಿ. ನಿಮ್ಮ ಆದಾಯವನ್ನು ಗಮನದಲ್ಲಿಟ್ಟುಕೊಂಡು ಖರ್ಚು ಮಾಡಿ. ಉದ್ಯೋಗದ ಸ್ಥಳದಲ್ಲಿ ಒತ್ತಡ ಹೆಚ್ಚಾಗಬಹುದು. ಮನೆಯ ಸದಸ್ಯರೊಬ್ಬರು ಅನಾರೋಗ್ಯಕ್ಕೆ ಒಳಗಾಗಬಹುದು. ಕೆಲವು ವಿಚಾರಗಳು ನಿಮ್ಮನ್ನು ಭಾವುಕರನ್ನಾಗಿ ಮಾಡಬಹುದು.

ಧನು ರಾಶಿ

ಇಂದು ನಿಮಗೆ ಕಷ್ಟಗಳಿಂದ ತುಂಬಿದ ದಿನವಾಗಿರಬಹುದು. ಕೆಲಸದ ವಿಚಾರದಲ್ಲಿ ನಿಮ್ಮ ಕೆಲಸದಿಂದ ತೃಪ್ತಿ ಇರುವುದಿಲ್ಲ. ಹೀಗಾಗಿ ನಿಮ್ಮ ಕಾರ್ಯಗಳ ಬಗ್ ನೀವು ಜಾಗರೂಕರಾಗಿರಬೇಕು. ಅವಿವಾಹಿತರಿಗೆ ವಿವಾಹ ಸಂಬಂಧ ಸುದ್ದಿ ಕೇಳಿಬರಬಹುದು. ವಿದ್ಯಾರ್ಥಿಗಳಿಗೆ ಬೌದ್ಧಿಕ ಮತ್ತು ಮಾನಸಿಕ ಹೊರೆಯಿಂದ ಪರಿಹಾರ ಸಿಗುತ್ತದೆ. ನಿಮ್ಮ ಪ್ರಗತಿಗೆ ಅಡ್ಡಿಯಾಗುವ ಅಡೆತಡೆಗಳು ನಿವಾರಣೆಯಾಗುತ್ತವೆ. ನೀವು ಮನೆಯ ನೆಮ್ಮದಿ ಕಡೆಗೆ ಗಮನಹರಿಸಿ. ಪ್ರೀತಿಯ ವಿಚಾರದಲ್ಲಿ ದೊಡ್ಡ ಹೊಡೆತ ಬೀಳಬಹುದು.

ಮಕರ ರಾಶಿ

ಇಂದು ನಿಮಗೆ ಉತ್ಸಾಹಭರಿತ ದಿನವಾಗಿರುತ್ತದೆ. ನಿಮ್ಮ ಪ್ರಗತಿಗೆ ಅಡ್ಡಿಯಾಗುವ ಅಡೆತಡೆಗಳು ನಿವಾರಣೆಯಾಗುತ್ತವೆ. ನೀವು ಇತ್ತೀಚೆಗೆ ವೃತ್ತಿ ಜೀವನದಲ್ಲಿ ಏನಾದರು ಬದಲಾಣೆ ಮಾಡಿದ್ದರೆ ಅದರ ಫಲ ಸರಿಯಾಗಿ ಸಿಗುತ್ತಿದೆಯೇ ಎಂದು ಗಮನಿಸುವುದು ಒಳಿತು. ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಸರಿಯಾದ ಸಮಯ ಬಂದಾಗ ನಿಮ್ಮ ಸಮಸ್ಯೆ ಖಂಡಿತಾ ಪರಿಹಾರವಾಗಲಿದೆ. ನೀವು ಯಾವುದೇ ಆಸ್ತಿಯಲ್ಲಿ ವ್ಯವಹಾರ ಮಾಡುತ್ತಿದ್ದರೆ, ಅದನ್ನು ಬಹಳ ಎಚ್ಚರಿಕೆಯಿಂದ ಮಾಡಿ.

ಕುಂಭ ರಾಶಿ

ಈ ದಿನವು ನಿಮಗೆ ಸಂಪತ್ತಿನ ಪ್ರಗತಿಗೆ ಕಾರಣವಾಗಬಹುದು. ನಿಮ್ಮ ವ್ಯವಹಾರದಲ್ಲಿ ಹೂಡಿದ ಹಣ ಲಾಭದತ್ತ ಮರಳಬಹುದು. ಹೂಡಿಕೆಗೂ ಇದು ಉತ್ತಮ ಸಮಯ. ಹಿಂದೆ ನಡೆದಿರುವ ಘಟನೆಗಳ ಮರೆಯುವುದು ಉತ್ತಮ. ನೀವು ಎರಡನೇ ಸಂಬಂಧ ಹುಡುಕುತ್ತಿದ್ದರೆ ಈ ದಿನ ಅದರಲ್ಲಿ ಯಶಸ್ಸು ಸಿಗಲಿದೆ. ಹಣದ ವಿಚಾರವಾಗಿ ದೊಡ್ಡ ಸವಾಲು ಇರುವುದಿಲ್ಲ. ನಂಬಿಕಸ್ಥರೊಂದಿಗೆ ವ್ಯವಹಾರ ಮಾಡುವುದು ಉತ್ತಮ. ಬಹಳ ದಿನಗಳಿಂದ ಮನದಲ್ಲಿದ್ದ ವಿಚಾರವೊಂದನ್ನು ಮನೆಯಲ್ಲಿ ಹಂಚಿಕೊಳ್ಳುತ್ತೀರಿ.

ಮೀನ ರಾಶಿ

ಇಂದು ನಿಮಗೆ ಸಮಸ್ಯೆಗಳಿಂದ ತುಂಬಿದ ದಿನವಾಗಿರುತ್ತದೆ. ನಿಮ್ಮ ಕೆಲವು ದೈಹಿಕ ಸಮಸ್ಯೆಗಳು ಉದ್ಭವಿಸಬಹುದು ಮತ್ತು ನಿಮ್ಮ ವ್ಯವಹಾರದಲ್ಲಿ ನಷ್ಟವಾಗುವ ಸಾಧ್ಯತೆಯೂ ಇದೆ. ವ್ಯಾಪಾರಿಗಳಿಗೆ ಈ ದಿನ ಅನುಕೂಲಕರವಾಗಿರಲಿದೆ. ಕೆಲಸ ಹುಡುಕುತ್ತಿರುವವರು ಶೀಘ್ರದಲ್ಲಿಯೇ ಶುಭ ಸುದ್ದಿ ಪಡೆಯುತ್ತೀರಿ. ಕುಟುಂಬ ಜೀವನ ಚೆನ್ನಾಗಿರಲಿದೆ. ನೀವು ಯಾವುದೋ ಪ್ರಮುಖ ಕೆಲಸವನ್ನು ಮಾಡುತ್ತಿದ್ದರೆ ಅದು ಈ ದಿನ ಯಶಸ್ವಿಯಾಗಿ ಪೂರ್ಣವಾಗಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

April-23-daily-horoscope-prediction-for-12-zodiac-signs-in-kannada

Here is April 23 daily horoscope prediction for 12 zodiac signs read on...
Story first published: Wednesday, April 23, 2025, 6:39 [IST]
X
Desktop Bottom Promotion