Today Rashi Bhavishya: ಏಪ್ರಿಲ್ 22ರಂದು ನಿಮ್ಮ ರಾಶಿಯಲ್ಲಿ ಯಾವ ಫಲವಿದೆ?

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಏಪ್ರಿಲ್ 22ರ ದಿನ ಭವಿಷ್ಯ ನೋಡೋಣ:

ಮೇಷ ರಾಶಿ

ಇಂದು ನಿಮಗೆ ತುಂಬಾ ಕಾರ್ಯನಿರತ ದಿನವಾಗಿರುತ್ತದೆ. ಅರ್ಧಕ್ಕೆ ನಿಂತ ಕೆಲವು ಕೆಲಸಗಳನ್ನು ಪೂರ್ಣ ಮಾಡಬೇಕಾಗುತ್ತದೆ. ಕಲಸದ ಕಾರಣಕ್ಕೆ ಇಂದು ಪ್ರಯಾಣಿಸಬೇಕಾಗುತ್ತದೆ. ಹಣದ ವಿಷಯದಲ್ಲಿ ಇಂದು ನಿಮಗೆ ಒಳ್ಳೆಯ ದಿನವಾಗುವ ಸಾಧ್ಯತೆಯಿದೆ. ಬೇರೆಯವರಿಂದ ಹಣ ಪಡೆಯುವ ನಿಮ್ಮ ನಿರೀಕ್ಷೆ ಫಲಿಸಲಿದೆ. ಹಾಗೆ ಕುಟುಂಬದಲ್ಲೂ ಹಣಕಾಸು ವಿಚಾರಗಳು ಸಲೀಸಾಗಿ ನಡೆಯಲಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಇಂದು ಕೆಲವು ಸಣ್ಣ ಪುಟ್ಟ ಸಮಸ್ಯೆಗಳ ನೀವು ಎದುರಿಸಬೇಕಾಗಬಹುದು. ಹಾಗೆ ಇದು ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು. ಬಹಳ ದಿನದಿಂದ ನಿಮ್ಮ ಮನದಲ್ಲಿದ್ದ ವಿಚಾರವೊಂದನ್ನು ಸಂಬಂಧಿಸಿದವರ ಜೊತೆಗೆ ಹಂಚಿಕೊಳ್ಳುತ್ತೀರಿ.

ವೃಷಭ ರಾಶಿ

ಇಂದು ನೀವು ಬುದ್ಧಿವಂತಿಕೆಯಿಂದ ಕೆಲಸಗಳನ್ನು ಮಾಡುವ ದಿನವಾಗಿರುತ್ತದೆ. ನಿಮ್ಮ ಕೆಲಸದಲ್ಲಿ ತುಂಬಾ ಶ್ರಮ ಹಾಕುತ್ತೀರಿ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಮನೆಯ ಹಿರಿಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಪೂರ್ವಜರ ಆಸ್ತಿಯ ಬಗ್ಗೆ ಯಾವುದೇ ವಿವಾದವು ಶಾಂತವಾಗಬಹುದು. ಸರ್ಕಾರಿ ಕೆಲಸ ಮಾಡುವ ಜನರಿಗೆ ಇಂದು ಶುಭವಾಗಬಹುದು. ನೀವು ಬ್ಯಾಂಕಿಂಗ್ ವಲಯದೊಂದಿಗೆ ಸಂಬಂಧ ಹೊಂದಿದ್ದರೆ ಇಂದು ನೀವು ತುಂಬಾ ಕಷ್ಟಪಡಬೇಕಾಗಬಹುದು. ನಿಮ್ಮ ಸಂಗಾತಿಯ ಭಾವನೆಗಳನ್ನು ನೀವು ಗೌರವಿಸಬೇಕಾಗುತ್ತದೆ.

April-22-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಯಾವುದೇ ಕಾನೂನು ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಲಿದೆ. ನೀವು ಅವಿವಾಹಿತರಾಗಿದ್ದರೆ ಬಯಸಿದ ಸಂಗಾತಿಯನ್ನು ಹುಡುಕುವ ಸಾಧ್ಯತೆಯಿದೆ. ಹಣದ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ. ನೀವು ವ್ಯಾಪಾರ ಮಾಡಿದರೆ ಮತ್ತು ನಿಮ್ಮ ಕೆಲವು ಪ್ರಮುಖ ಕೆಲಸಗಳಲ್ಲಿ ಸರ್ಕಾರದ ಅಡಚಣೆ ಇದ್ದರೆ ಇಂದು ನೀವು ಈ ಸಮಸ್ಯೆಯನ್ನು ತೊಡೆದುಹಾಕಬಹುದು. ಇಂದು ನಿಮ್ಮ ಆಸೆಯೊಂದಕ್ಕೆ ಕುಟುಂಬಸ್ಥರಿಂದ ಬೆಂಬಲ ಸಿಗಬಹುದು, ನೀವು ಮನೆಯಿಂದಲೇ ಸಣ್ಣನ ವ್ಯವಹಾರ, ಉದ್ಯಮ ಕಟ್ಟಲು ಬಯಸಿದ್ದರೆ ಇಂದು ಒಂದು ಹೆಜ್ಜೆ ಮುಂದಿಡುತ್ತೀರಿ.

ಕರ್ಕ ರಾಶಿ

ಇಂದು ನಿಮಗೆ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ. ಪ್ರಯಾಣ ಮಾಡುವಾಗ ಎಚ್ಚರಿಕೆ ಇಡುವುದು ಉತ್ತಮ. ಕೆಲಸದಲ್ಲಿ ನಿಮ್ಮ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ವ್ಯವಹಾರದಲ್ಲಿನ ಕುಸಿತದಿಂದಾಗಿ ನೀವು ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತೀರಿ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತವೆ. ನೀವು ಹೇಳುವ ಯಾವುದೋ ವಿಷಯವು ಚರ್ಚೆಗೆ ಕಾರಣವಾಗಬಹುದು. ನಿಮಗಾಗಿ ವಸ್ತುವೊಂದನ್ನು ನೀವು ಖರೀದಿಸಬಹುದು. ಅನಿರೀಕ್ಷಿತವಾಗಿ ಪ್ರಭಾವಿಗಳ ಭೇಟಿಯಾಗುತ್ತೀರಿ. ಇದರಿಂದ ನಿಮ್ಮಲ್ಲಿ ಹೊಸ ವಿಚಾರಧಾರೆಯೊಂದು ಮೊಳಕೆಯೊಡಯಲಿದೆ.

ಸಿಂಹ ರಾಶಿ

ಇಂದು ನಿಮಗೆ ಮಿಶ್ರ ಫಲದ ದಿನ. ಕೆಲಸದ ಸ್ಥಳದಲ್ಲಿನ ನಿಮ್ಮ ಶ್ರಮವನ್ನು ಗುರುತಿಸುತ್ತಾರೆ. ಹಾಗೆ ನಿಮಗೆ ಪ್ರಶಂಸೆ ಸಿಗಬಹುದು. ಅನೇಕ ಕೆಲಸಗಳು ಪರಿಪೂರ್ಣ ಆಗದೆ ಇರಬಹುದು. ನಿಮ್ಮ ಹಣಕಾಸು ಪರಿಸ್ಥಿತಿಯು ನೀವು ಅಂದುಕೊಂಡಂತೆ ಇರುವುದಿಲ್ಲ. ಇನ್ನು ವ್ಯಾಪಾರ ಮಾಡುವವರಿಗೆ ಇಂದು ಅತ್ಯಂತ ಅದೃಷ್ಟದ ದಿನ. ನಿಮ್ಮ ಜವಾಬ್ದಾರಿಗಳನ್ನು ಪೂರೈಸುವಲ್ಲಿ ನೀವು ಕೆಲವು ತಪ್ಪುಗಳನ್ನು ಮಾಡಬಹುದು. ಕುಟುಂಬದಲ್ಲಿ ಕೆಲವು ಶುಭ ಕಾರ್ಯಕ್ರಮಗಳ ಆಯೋಜನೆಯಿಂದಾಗಿ ವಾತಾವರಣವು ಆಹ್ಲಾದಕರವಾಗಿರುತ್ತದೆ.

ಕನ್ಯಾ ರಾಶಿ

ಇಂದು ನಿಮಗೆ ಏರಿಳಿತಗಳಿಂದ ತುಂಬಿದ ದಿನವಾಗಿರುತ್ತದೆ. ದಿನದ ಆರಂಭವು ನೀವು ಅಂದುಕೊಂಡಂತೆ ಇರಲಿದೆ. ಆದರೆ ದಿನದ ಅಂತ್ಯದಲ್ಲಿ ನಾಳೆಯ ಬಗೆಗಿನ ಚಿಂತೆ ಹೆಚ್ಚಾಗಬಹುದು. ನಿಮ್ಮ ಖರ್ಚುಗಳ ಮೇಲೆ ಹೆಚ್ಚು ಗಮನವಿಡಿ. ಯಾರಿಂದಾದರು ಹಣ ಬರಬೇಕಿದ್ದರೆ ಅವರನ್ನು ಸಂಪರ್ಕಿಸಲು ಇಂದು ಬಹಳ ಉತ್ತಮ ಸಮಯ. ಕೆಲವು ವಿಷಯಗಳಲ್ಲಿ ನೀವು ಮೃದುವಾಗಿರುವುದನ್ನು ತಪ್ಪಿಸಬೇಕಾಗುತ್ತದೆ. ನೀವು ಯಾರ ಬಗ್ಗೆಯೂ ಅಸೂಯೆಯ ಭಾವನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು. ನಿಮ್ಮ ಹಣಕಾಸಿನ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ.

ತುಲಾ ರಾಶಿ

ಇಂದು ನೀವು ಆತುರದಿಂದ ಮತ್ತು ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ಕೆಲಸದ ಸ್ಥಳದಲ್ಲಿ ಅಪರಿಚಿತರು ನಿಮ್ಮ ಕೆಲಸಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುವುದರಿಂದ ನೀವು ಅವರಿಂದ ದೂರವಿರಬೇಕು. ನೀವು ಅವಿವಾಹಿತರಾಗಿದ್ದರೆ ಇಂದು ನಿಮ್ಮ ವಿವಾಹದ ಬಗ್ಗೆ ಮನೆಯಲ್ಲಿ ಚರ್ಚೆ ನಡೆಯಬಹುದು. ಹಣದ ವಿಷಯದಲ್ಲಿ ಇಂದು ಸ್ವಲ್ಪ ದುಬಾರಿಯಾಗುವ ಸಾಧ್ಯತೆಯಿದೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಬುದ್ಧಿವಂತಿಕೆಯಿಂದ ಖರ್ಚು ಮಾಡಲು ಸೂಚಿಸಲಾಗಿದೆ. ನಿಮ್ಮ ಮನೆಗೆ ಯಾವುದಾದರು ಹೊಸ ವಸ್ತು ಖರೀದಿಸುವ ಆಲೋಚನೆ ಇದ್ದರೆ ಮುಂದೂಡುವುದು ಬಹಳ ಉತ್ತಮ.

ವೃಶ್ಚಿಕ ರಾಶಿ

ಇಂದು ನಿಮ್ಮ ಮನಸ್ಸು ಕೆಲಸದ ಬಗ್ಗೆ ಚಿಂತೆ ಮಾಡುತ್ತದೆ, ಏಕೆಂದರೆ ನಿಮ್ಮ ಆರೋಗ್ಯವು ಹದಗೆಡಬಹುದು. ನಿಮ್ಮ ಕಾರ್ಯಕ್ಷಮತೆಯಲ್ಲಿ ನೀವು ದೊಡ್ಡ ಸುಧಾರಣೆಯನ್ನು ಸಹ ನೋಡಬಹುದು. ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವೂ ನಿಮಗೆ ಸಿಗುತ್ತದೆ. ಕೆಲಸದ ಸ್ಥಳದಲ್ಲಿದ್ದ ಅಡೆತಡೆ ನಿವಾರಣೆಯಾಗಲಿದೆ. ಯಾವುದೇ ಕೆಲಸ ಮಾಡುವಾಗ ಆತುರಪಡುವುದನ್ನು ತಪ್ಪಿಸಬೇಕು. ನಿಮ್ಮ ಯಾವುದೇ ಕೆಲಸವು ಹಣದ ಕಾರಣದಿಂದಾಗಿ ಸಿಲುಕಿಕೊಂಡಿದ್ದರೆ, ಅದನ್ನು ಪೂರ್ಣಗೊಳಿಸಬಹುದು.

ಧನು ರಾಶಿ

ಇಂದು ನಿಮಗೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಉತ್ತಮ ದಿನವಲ್ಲ. ನಿಮ್ಮ ಬಯಕೆಯಂತೆ ಯಾವುದೇ ವ್ಯವಹಾರಗಳು ನಡೆಯದೇ ಇರಬಹುದು, ಹಾಗೆ ಕೆಲವು ಅಡ್ಡಿ ಆತಂಕ ಎದುರಾಗಬಹುದು. ವಾಹನ ಖರೀದಿ, ದುರಸ್ಥಿಗಾಗಿ ನೀವು ಸಾಲ ಮಾಡಬೇಕಾಗಿ ಬರಬಹುದು. ನಿಮ್ಮ ಮನೆಗೆ ಅತಿಥಿಯ ಆಗಮನದಿಂದಾಗಿ ಕುಟುಂಬದ ಎಲ್ಲಾ ಸದಸ್ಯರು ಕಾರ್ಯನಿರತರಾಗಿರುತ್ತಾರೆ. ನಿಮಗೆ ದೀರ್ಘಕಾಲದಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದಾದರು ಅಂಗದಲ್ಲಿ ನೋವು ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಮಕರ ರಾಶಿ

ಇಂದು ನಿಮಗೆ ಸಕಾರಾತ್ಮಕ ಫಲಿತಾಂಶಗಳನ್ನು ತರುವ ದಿನವಾಗಿದೆ. ಉದ್ಯೋಗಿಗಳಿಗೆ ಇಂದು ಬಹಳ ಮುಖ್ಯದ ದಿನವಾಗಿದೆ. ನಿಮ್ಮ ಜೀವನದಲ್ಲಿ ಕೆಲವು ದೊಡ್ಡ ಸಕಾರಾತ್ಮಕ ಬದಲಾವಣೆಗಳಾಗಬಹುದು. ನಿಮ್ಮ ವ್ಯಾಪಾರ ವೃದ್ಧಿಯಾಗುವ ಸಾಧ್ಯತೆ ಇದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ವಾಹನ ಸಂಬಂಧಿ ಖರ್ಚು ಹೆಚ್ಚಾಗಬಹುದು. ಮನೆಯ ಎಲ್ಲ ಸದಸ್ಯರೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ಆರೋಗ್ಯ ಯಥಾಸ್ಥಿತಿಯಲ್ಲಿರಲಿದೆ.

ಕುಂಭ ರಾಶಿ

ಈ ದಿನವು ನಿಮಗೆ ಸಂಪತ್ತು ಮತ್ತು ಸಮೃದ್ಧಿಯಲ್ಲಿ ಹೆಚ್ಚಳವನ್ನು ತರಲಿದೆ. ಕುಟುಂಬ ಸದಸ್ಯರೊಂದಿಗಿನ ವಿವಾದಗಳು ಜಗಳಗಳಾಗಿ ಬದಲಾಗಬಹುದು. ಶಾಂತ ಮನಸ್ಸಿನಿಂದ ಕೆಲಸ ಮಾಡಲು ಸಲಹೆ ನೀಡಲಾಗುತ್ತದೆ. ಕೆಲಸದ ಕಾರಣಕ್ಕೆ ಮನೆಯಿಂದ ಹೊರಗೆ ನೀವು ಹೆಚ್ಚು ಸಮಯ ಕಳೆಯುತ್ತೀರಿ. ನಿಮ್ಮ ನಿತ್ಯದ ಕೆಲಸದಲ್ಲಿ ಅಡೆತಡೆಗಳ ನೋಡಬೇಕಾಗುತ್ತದೆ. ನಿಮ್ಮ ಆರೋಗ್ಯದಲ್ಲಿಯೂ ಕೆಲವು ಏರಿಳಿತಗಳು ಉಂಟಾಗುತ್ತವೆ. ನೀವು ಯಾರಿಂದಾದರು ಹಣದ ಬೇಡಿಕೆ ಇಟ್ಟಿದ್ದರೆ ಈ ದಿನ ಯಶಸ್ಸು ಸಿಗಲಿದೆ. ಬಹಳ ಸಮಯದಿಂದ ನೀವು ನಿರುದ್ಯೋಗಿಗಳಾಗಿದ್ದರೆ ಇಂದು ಶ್ರಮ ಹಾಕಿದರೆ ಉತ್ತಮ ಉದ್ಯೋಗ ಪಡೆಯಬಹುದು.

ಮೀನ ರಾಶಿ

ಇಂದು ನಿಮ್ಮ ಅಗತ್ಯಗಳನ್ನು ಪೂರೈಸುವ ದಿನವಾಗಿರುತ್ತದೆ. ನೀವು ಕಠಿಣ ಪರಿಶ್ರಮದಿಂದ ಹಿಂದೆ ಸರಿಯಬೇಡಿ. ಮನೆಯ ಸದಸ್ಯರೊಬ್ಬರ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ ಇದೆ. ನೀವು ಸಣ್ಣ ವ್ಯಾಪಾರಿಗಳಾಗಿದ್ದರೆ ನಿಮಗೆ ಲಾಭ ಹೆಚ್ಚಾಗುವ ಸಾಧ್ಯತೆ ಇದೆ. ಹಣದ ವಿಷಯದಲ್ಲಿ ದುಬಾರಿಯಾಗುವ ನಿರೀಕ್ಷೆಯಿದೆ. ನಿಮಗಾಗಿ ಈ ದಿನ ಕೆಲವು ಸಮಯ ಮೀಸಲಿಡಲಿದ್ದೀರಿ. ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ನಿಮ್ಮ ಶ್ರಮಕ್ಕೆ ತಕ್ಕ ಫಲವನ್ನು ಶೀಘ್ರದಲ್ಲೇ ಪಡೆಯಬಹುದು. ಹೊಸದಾಗಿ ಸ್ವಂತ ಉದ್ಯಮ ಕಟ್ಟಿದ್ದರೆ ತಾಳ್ಮೆಯಿಂದ ಅದರಲ್ಲಿ ನಂಬಿಕೆ ಇಡಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

April-22-daily-horoscope-prediction-for-12-zodiac-signs-in-kannada

Here is April 22 daily horoscope prediction for 12 zodiac signs read on...
Story first published: Tuesday, April 22, 2025, 6:55 [IST]
X
Desktop Bottom Promotion