ದಿನ ಭವಿಷ್ಯ: ಏಪ್ರಿಲ್ 21ರಂದು ನಿಮ್ಮ ರಾಶಿಯಲ್ಲಿ ಏನೆಲ್ಲಾ ಲಾಭವಿದೆ?

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಏಪ್ರಿಲ್ 21ರ ದಿನ ಭವಿಷ್ಯ ನೋಡೋಣ:

ಮೇಷ ರಾಶಿ

ನೀವು ಇಂದು ಸ್ನೇಹಿತನಿಗೆ ಹಣದ ಮೂಲಕ ಸಹಾಯ ಮಾಡಬಹುದು. ಯಾವುದೇ ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಆರೋಗ್ಯದ ವಿಷಯದಲ್ಲಿ ಈ ದಿನವು ಏರಿಳಿತಗಳಿಂದ ತುಂಬಿರುತ್ತದೆ. ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸಲು ಸಲಹೆ ನೀಡಲಾಗಿದೆ. ಕಚೇರಿಯಲ್ಲಿನ ಒತ್ತಡ ಅಥವಾ ಕೆಲಸಕ್ಕೆ ಸಂಬಂಧಿಸಿದ ಒತ್ತಡ ಹೆಚ್ಚಾಗಬಹುದು. ನಿಮ್ಮ ಮನದಲ್ಲಿರುವ ಗೊಂದಲ ನಿವಾರಣೆಗೆ ಮುಂದಾಗುವುದು ಉತ್ತಮ. ಹಣದ ವಿಷಯದಲ್ಲಿ, ದಿನವು ಉತ್ತಮವಾಗಿರುತ್ತದೆ. ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಬಹುದು.

ವೃಷಭ ರಾಶಿ

ಇಂದು ನೀವು ಕೆಲಸಕ್ಕಾಗಿ ಹೆಚ್ಚು ಪ್ರಯಾಣಿಸಬೇಕಾಗಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಕುಟುಂಬ ಜೀವನದಲ್ಲಿ ಎಲ್ಲವೂ ಸಾಮಾನ್ಯವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರಲ್ಲಿ ನಿಮ್ಮ ಸಂಬಂಧವು ಉತ್ತಮವಾಗಲಿದೆ. ಈ ದಿನ ವ್ಯಾಪಾರಿಗಳಲ್ಲಿ ಲಾಭದಾಯಕ ದಿನ ನೋಡಬಹುದು. ಹಲವು ದಿನದಿಂದ ನಿಮ್ಮ ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ಸೂಕ್ತ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು. ನಿಮ್ಮ ಕುಟುಂಬಸ್ಥರಿಂದ ಉತ್ತಮ ಬೆಂಬಲ ಪಡೆಯುತ್ತೀರಿ. ವಾಹನ ಸಂಬಂಧಿ ಖರ್ಚು ಇರಬಹುದು.

April-21-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿ ಮಂದಿ ಈ ದಿನ ಹೆಚ್ಚು ಶ್ರಮ ಪಡಬೇಕಾಗುತ್ತದೆ. ಈ ದಿನ ನೀವು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ಹಣದ ಬಗ್ಗೆ ಹೇಳುವುದಾದರೆ ಈ ದಿನ ಉತ್ತಮವಾಗಿದೆ. ಆರ್ಥಿಕ ದೃಷ್ಟಿಯಿಂದ ಇಂದು ನಿಮಗೆ ತುಂಬಾ ಶುಭಕರವಾಗಿರುತ್ತದೆ. ನಿಮ್ಮ ಕೆಲಸಕ್ಕೆ ಇರುವ ಅಡೆತಡೆಗಳು ದೂರಾಗಲಿದೆ. ಪ್ರಣಯ ಜೀವನದಲ್ಲಿ ಪ್ರೀತಿ ಇರಲಿದೆ. ಈ ದಿನ ಖುಷಿಯಿಂದ ಇರುತ್ತೀರಿ. ಮನೆಯವರ ಮಾತನ್ನು ದಿಕ್ಕರಿಸುವ ನಿರ್ಧಾರ ಮಾಡಬೇಡಿ. ಹೊಸ ಉದ್ಯೋಗ ಹುಡುಕುತ್ತಿದ್ದರೆ ಹೆಚ್ಚು ಶ್ರಮ ಹಾಕಿದರೆ ಲಾಭವಿದೆ.

ಕರ್ಕ ರಾಶಿ

ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಇಂದು ನಿಮ್ಮ ಸ್ಥಗಿತಗೊಂಡ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ. ಸರ್ಕಾರಿ ಕೆಲಸ ಮಾಡುವವರು ಈ ದಿನ ಉತ್ತಮವಾಗಿರಲಿದೆ. ಆಸ್ತಿ, ಕಾನೂನು, ಜಮೀನು ವಿಚಾರಗಳಲ್ಲಿ ನಿಮಗೆ ಮತ್ತೆ ಅಡೆತಡೆ ಸಂಭವಿಸಲಿದೆ. ಕೆಲಸದ ವಿಷಯದಲ್ಲಿ ಹೆಚ್ಚು ಒತ್ತಡ ತೆಗೆದುಕೊಳ್ಳಬೇಡಿ. ನೀವು ಸರಿಯಾದ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮಾಡುತ್ತಿದ್ದರೆ ಶೀಘ್ರದಲ್ಲೇ ಉತ್ತಮ ಸುದ್ದಿ ಕೇಳುವಿರಿ. ಗೃಹಿಣಿಯರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಸಣ್ಣ ವಿಚಾರಗಳನ್ನು ದೊಡ್ಡದು ಮಾಡಲು ಮುಂದಾಗಬೇಡಿ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ.

ಸಿಂಹ ರಾಶಿ

ಈ ದಿನ ಸಿಂಹ ರಾಶಿಯ ಮಂದಿ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ನಿಮ್ಮ ಸಂಗಾತಿಯ ಜೊತೆಗೆ ಅನಗತ್ಯ ಚರ್ಚೆ ಅಥವಾ ಮಾತಿನ ಚಕಮಕಿಗೆ ಆಸ್ಪದ ನೋಡಬೇಡಿ. ಸಾಲ ಮಾಡುವ ಸಾಧ್ಯತೆ ಇರುವುದರಿಂದ ಹಣಕಾಸಿನ ಸ್ಥಿತಿಯು ಸುಧಾರಣೆಗಿಂತ ಹೆಚ್ಚು ಸಮಸ್ಯಾತ್ಮಕ ಆಗಬಹುದು. ಹಾಗೆ ವ್ಯಾಪಾರಿಗಳಲ್ಲಿ ದೊಡ್ಡ ಮಟ್ಟದ ಲಾಭಕ್ಕಿಂತ ದೊಡ್ಡ ನಿರ್ಧಾರಗಳು ಹೆಚ್ಚಾಗಬಹುದು. ನೀವು ಬಹುಮುಖ ಪ್ರತಿಮೆ ಎಂಬುದನ್ನು ತೋರಿಸುವ ಹಲವು ನಿದರ್ಶನಗಳು ಎದುರಾಗಲಿವೆ. ಅವಿವಾಹಿತರಲ್ಲಿ ಸುದ್ದಿ ಕೇಳುವ ಅವಕಾಶವಿದೆ .

ಕನ್ಯಾ ರಾಶಿ

ಇಂದು ಕನ್ಯಾರಾಶಿಯವರಲ್ಲಿ ಮಿಶ್ರ ಫಲ ನೋಡಬಹುದು. ನಿಮ್ಮ ವೈಯಕ್ತಿಕ ವಿಚಾರಗಳು, ಹಣಕಾಸು ಪರಿಸ್ಥಿತಿಗಳು ದೊಡ್ಡ ಸಮಸ್ಯೆ ತರಬಹುದು. ನೀವು ಸಾಲ ಮಾಡಿದ್ದರೆ ಅಥವಾ ಯಾರಿಗಾದರು ಹಣ ನೀಡುವ ಸನ್ನಿವೇಶಗಳಿದ್ದರೆ ಈ ದಿನ ಪೂರೈಸಿಕೊಳ್ಳಿ. ಮನೆಗಾಗಿ ಅಗತ್ಯ ವಸ್ತುವೊಂದನ್ನು ಖರೀದಿಸಬಹುದು. ನಿಮ್ಮ ಕುಟುಂಬದಲ್ಲಿ ಒಬ್ಬರಿಗೆ ನೀವು ಹಣದ ನೆರವು ನೀಡಬಹುದು. ವಾಹನ ಚಾಲಕರು ಎಚ್ಚರಿಕೆ ವಹಿಸಬೇಕು. ಯಂತ್ರೋಪಕರಣ ವ್ಯಪಾರಿಗಳು ದೊಡ್ಡ ಟೆಂಡರ್ ಹಿಡಿಯಬಹುದು.

ತುಲಾ ರಾಶಿ

ತುಲಾ ರಾಶಿಯವರು ಇಂದು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಕೆಲಸದ ದೃಷ್ಟಿಯಿಂದ ಇಂದು ನಿಮಗೆ ಸರಾಸರಿಯ ದಿನವಾಗಿರುತ್ತದೆ. ಹೆಚ್ಚಿನ ಶ್ರಮವನ್ನು ಜನರು ಗುರುತಿಸುತ್ತಾರೆ. ಮನೆಯ ನವೀಕರಣ ಅಥವಾ ಅದಕ್ಕೆ ಪೂರಕ ವಸ್ತು ಖರೀದಿಯ ಆಲೋಚನೆ ಮಾಡಬಹುದು. ಇಂದು ಮನೆಯಿಂದ ಹೊರ ಹೋದರೆ ಅಥವಾ ಪ್ರಯಾಣದ ಸಮಯದಲ್ಲಿ ಅಮೂಲ್ಯ ವಸ್ತುಗಳ ಮೇಲೆ ಹೆಚ್ಚು ಗಮನವಿಡಿ. ಖಾಸಗಿ ಕಂಪನಿಯ ಉದ್ಯೋಗಿಗಳಿಗೆ ಅನಿರೀಕ್ಷಿತ ಜವಾಬ್ದಾರಿ ಹಾಗೂ ಹೊರೆ ಅನುಭವಿಸಬೇಕಾಗಬಹುದು.

ವೃಶ್ಚಿಕ ರಾಶಿ

ನಿಮ್ಮ ವೈಯಕ್ತಿಕ ಜೀವನದಲ್ಲಿ ಕೆಲವು ದಿನಗಳವರೆಗೆ ಯಾವುದಾದರು ಸಮಸ್ಯೆ ಇದ್ದರೆ ಇಂದು ಪರಿಹಾರಕ್ಕೆ ನೀವು ಮುಂದಾಗಬಹುದು. ನಿಮ್ಮ ಹಣಕಾಸು ಪರಿಸ್ಥಿತಿಯಲ್ಲಿ ದೊಡ್ಡ ಬದಲಾವಣೆಗಳು ಕಾಣುವುದಿಲ್ಲ. ಆಸ್ತಿಗೆ ಸಂಬಂಧಿಸಿದಂತೆ ವ್ಯವಹಾರ ಮಾಡಿದರೆ ಲಾಭ ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನವು ಬಲವಾಗಿರುತ್ತದೆ. ವ್ಯಾಪಾರಿಗಳು ಲಾಭಕ್ಕಿಂತ ಹೆಚ್ಚು ಒತ್ತಡ ಅನುಭವಿಸಬಹುದು. ಕೃಷಿ ಸಂಬಂಧಿ ಚಟುವಟಿಕೆಗಳು ಚುರುಕುಪಡೆಯಲಿವೆ. ಮನೆಯಲ್ಲಿ ನಿಮ್ಮಿಂದಾಗಿ ಸತೋಷಕರ ವಾತಾವರಣ ಇರಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ.

ಧನು ರಾಶಿ

ಧನು ರಾಶಿಯ ಮಂದಿ ಈ ದಿನದಂದು ತಮ್ಮ ಐಷಾರಾಮಿ ವಸ್ತು ಖರೀದಿಗೆ ಒಂದು ಹೆಜ್ಜೆ ಮುಂದಿಡಬಹುದು. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ನಿಮಗೆ ಸಂಬಂಧಿಸಿದ ರಹಸ್ಯ ವಿಷಯಗಳನ್ನು ಹಂಚಿಕೊಳ್ಳ ಬೇಡಿ. ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ನೀವು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಪ್ರಯತ್ನವನ್ನು ಮಾಡುತ್ತಿದ್ದರೆ, ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಹಣಕ್ಕೆ ಸಂಬಂಧಿಸಿದ ವ್ಯವಹಾರದಲ್ಲಿ ತರಾತುರಿ ನಿರ್ಧಾರ ಮಾಡಬೇಡಿ. ನಿಮ್ಮದಲ್ಲದ ವಿಚಾರವಾಗಿ ಹಣ ಖರ್ಚು ಮಾಡಬೇಕಾಗುತ್ತದೆ.

ಮಕರ ರಾಶಿ

ಮಕರ ರಾಶಿ ಮಂದಿ ಈ ದಿನ ಎಚ್ಚರಿಕೆಯಿಂದ ಇರಬೇಕು. ನೀವು ಓಡಾಟದಿಂದ ಕೂಡಿದ ಕೆಲಸ ಮಾಡುತ್ತಿದ್ದರೆ, ವಾಹನ ಚಾಲನೆ, ಕೈಕಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದರೆ ಎಚ್ಚರಿಕೆ ಅಗತ್ಯ. ಅವಿವಾಹಿತರಲ್ಲಿ ಶುಭ ಸುದ್ದಿ ಕೇಳಿಬರಲಿದೆ. ಹಾಗೆ ನಿಮ್ಮ ಖರ್ಚಿನ ಮೇಲೆ ನಿಗಾ ಇಡಿ. ದಿನದ ಆರಂಭದಲ್ಲಿ ನಿಮ್ಮ ಕೈಗೆ ಹಣ ಸೇರಬಹುದು, ಆದ್ರೆ ಸಂಜೆಯ ವೇಳೆ ಖರ್ಚುಗಳು ಹೆಚ್ಚಾಗಬಹುದು. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಸರ್ಕಾರಿ ಕೆಲಸ ಮಾಡುವವರು ಬಯಸಿದ ವರ್ಗಾವಣೆ ಪಡೆಯಬಹುದು.

ಕುಂಭ ರಾಶಿ

ಆರ್ಥಿಕ ದೃಷ್ಟಿಯಿಂದ ಕುಂಭ ರಾಶಿಯವರಿಗೆ ಇಂದು ಶುಭ ತರುವ ದಿನ. ನೀವು ಯಾರಿಂದಾದರು ಹಣದ ನಿರೀಕ್ಷೆಯಲ್ಲಿದ್ದರೆ ಈ ದಿನ ಶುಭವಾಗುತ್ತಿದೆ. ಯಾವುದೇ ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ನಿಮ್ಮ ಉದಾರ ಸ್ವಭಾವದ ಲಾಭ ಪಡೆಯಲು ಯತ್ನಿಸುವವರ ಬಗ್ಗೆ ಜಾಗೃತಿವಹಿಸಿ. ಕೆಲವು ಪ್ರಮುಖ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗಬಹುದು. ಆರೋಗ್ಯದ ವಿಚಾರವಾಗಿ ಎಚ್ಚರಿಕೆಯಿಂದಿರಿ. ಅಪರಿಚಿತರೊಂದಿಗಿನ ವ್ಯವಹಾರವನ್ನು ಮುಂದುವರೆಸದೆ ಇರುವುದು ಉತ್ತಮ.

ಮೀನ ರಾಶಿ

ಮೀನ ರಾಶಿಯ ಮಂದಿ ಈ ದಿನ ಬಹಳ ಶಾಂತವಾಗಿ ಕಳೆಯಬೇಕಿದೆ. ಹಾಗೆ ಹಣಕಾಸಿನ ಸ್ಥಿತಿ ಚೆನ್ನಾಗಿರಲಿದೆ, ನಿಮ್ಮ ಸರಿಯಾದ ನಿರ್ಧಾರಗಳಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಖರ್ಚುಗಳಿಗೆ ಕಡಿವಾಣ ಹಾಕಿ. ನಿಮ್ಮ ಅನಾರೋಗ್ಯ ಸಮಸ್ಯೆ ನಿಮ್ಮ ಕೆಲಸದ ಮೇಲೆ ಪ್ರಭಾವ ಬೀರಬಹುದು. ಇದರಿಂದ ಒತ್ತಡ ಕೂಡ ಹೆಚ್ಚಾಗಬಹುದು. ಹೀಗಾಗಿ ಅನಾರೋಗ್ಯದ ಲಕ್ಷಣವನ್ನು ನಿರ್ಲಕ್ಷಿಸಬೇಡಿ. ಸಾಲ ಮರುಪಾವತಿಗೆ ಇಂದು ಶುಭಕಾಲ. ಹಾಗೆ ಸಾಕು ಪ್ರಾಣಿಗಳಿಗೆ ಅಥವಾ ಪಕ್ಷಿಗಳಿಗೆ ಅನ್ನ ಆಹಾರ ಇಲ್ಲವೆ ನೀರು ನೀಡಿದರೆ ಒಳಿತಾಗಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

April-21-daily-horoscope-prediction-for-12-zodiac-signs-in-kannada

Here is April 21 daily horoscope prediction for 12 zodiac signs read on...
Story first published: Monday, April 21, 2025, 6:52 [IST]
X
Desktop Bottom Promotion