Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
ದಿನ ಭವಿಷ್ಯ: ಏಪ್ರಿಲ್ 20ರಂದು ನಿಮ್ಮ ರಾಶಿಯಲ್ಲಿ ಯಾವೆಲ್ಲಾ ಅದೃಷ್ಟವಿದೆ?
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಏಪ್ರಿಲ್ 20ರ ದಿನ ಭವಿಷ್ಯ ನೋಡೋಣ:
ಮೇಷ ರಾಶಿ
ಇಂದು ನಿಮ್ಮ ಸುತ್ತಲಿನ ವಾತಾವರಣ ಆಹ್ಲಾದಕರವಾಗಿರುತ್ತದೆ. ನೀವು ಈ ದಿನ ಒಳ್ಳೆಯ ಸುದ್ದಿಗಳ ಕೇಳುತ್ತಿರುತ್ತೀರಿ. ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ನಿಮ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಈ ಸಮಯದಲ್ಲಿ ನಿಮ್ಮ ಸಂಪೂರ್ಣ ಗಮನ ಅಧ್ಯಯನದ ಕಡೆ ಇರಲಿ. ಅನಗತ್ಯ ವಿಚಾರವಾಗಿ ಯಾರೊಂದಿಗೂ ವಾದ ಅಥವಾ ಚರ್ಚೆಯಲ್ಲಿ ತೊಡಗಬೇಡಿ. ಕೆಲಸಗಳನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸುವುದು ಕಷ್ಟವಾಗಬಹುದು. ಈ ದಿನ ವಿಶ್ರಾಂತಿ ಪಡೆಯಲು ನೀವು ಇಚ್ಛಿಸುತ್ತೀರಿ. ಮನೆಗೆ ಸಂಬಂಧಿಸಿದ ದೊಡ್ಡ ಕೆಲಸವೊಂದನ್ನು ಮಾಡಬಹುದು. ಜಬಾವ್ದಾರಿಗಳು ಹೆಚ್ಚಾಗುವ ದಿನವಿದು. ನೀವು ದೊಡ್ಡ ಖರ್ಚು ಮಾಡುವ ಮನಸ್ಥಿತಿಯಲ್ಲಿದ್ದರೆ ಅದನ್ನು ತಪ್ಪಿಸಬೇಕು. ಈ ದಿನ ಕೋಪಗೊಳ್ಳುವುದನ್ನು ತಪ್ಪಿಸಿ.
ವೃಷಭ ರಾಶಿ
ಈ ದಿನವು ನಿಮಗೆ ಸಂಪತ್ತು ಮತ್ತು ಸಮೃದ್ಧಿಯಲ್ಲಿ ಹೆಚ್ಚಳ ನೋಡಬಹುದು. ಕೆಲಸಕ್ಕೆ ಸಂಬಂಧಿಸಿದಂತೆ ಹೊಸ ಪ್ರಯತ್ನಗಳು ಫಲ ನೀಡಲಿವೆ. ಈ ದಿನ ಸೋಮಾರಿಗಳಾಗುವುದನ್ನು ತಪ್ಪಿಸಿ. ನಿಮ್ಮ ಆರೋಗ್ಯದಲ್ಲಿ ಈ ದಿನ ಸುಧಾರಣೆ ನೋಡಬಹುದು. ಹಣಕಾಸಿನ ವಿಚಾರವಾಗಿ ಮನಸ್ತಾಪಗಳು ಹೆಚ್ಚಾಗಬಹುದು. ಹಾಗೆ ಆಪ್ತರಂದಿಗಿನ ವ್ಯವಹಾರವನ್ನು ಆದಷ್ಟು ತಾಳ್ಮೆಯಿಂದ ಮಾಡುವುದು ಉತ್ತಮ. ಮನೆಗೆ ಅಗತ್ಯ ವಸ್ತುವೊಂದನ್ನು ಖರೀದಿಸುವ ನಿಮ್ಮ ಆಸೆ ಮುಂದೂಡಬೇಕಾಗಬಹುದು. ಜಮೀನು, ಮನೆ ವಿಚಾರದಲ್ಲಿ ಅಡೆತಡೆಗಳು ಎದುರಿಸಬೇಕಾಗುತ್ತದೆ. ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ದೂರಾಗಬಹುದು.

ಮಿಥುನ ರಾಶಿ
ಇಂದು ನಿಮ್ಮ ಮಾತು ಮತ್ತು ನಡವಳಿಕೆಯ ಮೇಲೆ ನಿಯಂತ್ರಣ ಕಾಯ್ದುಕೊಳ್ಳಬೇಕಾದ ದಿನವಾಗಿರುತ್ತದೆ. ಮನೆಯ ವಾತಾವರಣ ಶಾಂತವಾಗಿರಲು ನಿಮ್ಮ ಸ್ವಭಾವದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ನೀವು ಸಣ್ಣ ವಿಷಯಗಳ ಮೇಲೆ ಹಠ ಸಾಧಿಸುವ ಆಲೋಚನೆ ಬಿಡಬೇಕು. ಉದ್ಯೋಗಿಗಳಿಗೆ ಹೆಚ್ಚು ಜಾಗರೂಕರಾಗಿರಲು ಸಲಹೆ ನೀಡಲಾಗುತ್ತದೆ. ವ್ಯಾಪಾರಿಗಳು ಇಂದು ನೆಮ್ಮದಿನ ದಿನವನ್ನಾಗಿ ಕಳೆಯಬಹುದು. ನಿಮ್ಮ ಮಕ್ಕಳಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ಇಂದು ತಲೆನೋವು, ಜ್ವರ ಮುಂತಾದ ಸಮಸ್ಯೆಗಳಿರಬಹುದು.
ಕರ್ಕ ರಾಶಿ
ಇಂದು ನಿಮಗೆ ಗೊಂದಲದಿಂದ ತುಂಬಿದ ದಿನವಾಗಿರುತ್ತದೆ. ಹೆಚ್ಚು ಒತ್ತಡ ಹಾಗೆ ಹೆಚ್ಚು ಖರ್ಚು ಮಾಡುವ ದಿನವಾಗಿದೆ. ನಿಮ್ಮ ಆಪ್ತರಿಂದ ಸಂಪೂರ್ಣ ಬೆಂಬಲ ಸಿಗಲಿದೆ. ಕೆಲಸದ ಸ್ಥಳದಲ್ಲಿ ನಿಮಗೆ ಕೆಲವು ದೊಡ್ಡ ಜವಾಬ್ದಾರಿಗಳು ಸಿಗಬಹುದು, ಆದರೆ ನಿಮ್ಮ ಬಾಸ್ ಅದರಲ್ಲಿ ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ಕ್ರೀಡೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಬಹುದು. ಹಣದ ಪರಿಸ್ಥಿತಿ ಸುಧಾರಿಸಬಹುದು. ಸಿಕ್ಕಿಬಿದ್ದ ಹಣವನ್ನು ಸ್ವೀಕರಿಸಲಾಗುತ್ತದೆ, ಹಾಗೆಯೇ ಇಂದು ನಿಮ್ಮ ಕೈಯಲ್ಲಿ ಹಣವನ್ನು ಗಳಿಸಲು ಉತ್ತಮ ಅವಕಾಶವಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ನೀವು ಇತ್ತೀಚೆಗೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ನೀಡಿದ್ದರೆ, ನೀವು ಅದ್ಭುತ ಯಶಸ್ಸನ್ನು ಪಡೆಯಬಹುದು.
ಸಿಂಹ ರಾಶಿ
ಇಂದು ನಿಮಗೆ ಸಾಮಾನ್ಯ ದಿನವಾಗಿರುತ್ತದೆ. ನಿಮ್ಮ ಯಾವುದೇ ವಿರೋಧಿಗಳಿಂದ ಪ್ರಭಾವಿತರಾಗುವುದನ್ನು ನೀವು ತಪ್ಪಿಸಬೇಕಾಗುತ್ತದೆ. ಪ್ರೀತಿಯ ವಿಷಯದಲ್ಲಿ ಇಂದು ನಿಮಗೆ ಬಹಳ ಮಧುರ ದಿನವಾಗಬಹುದು. ನಿಮ್ಮ ಸಂಗಾತಿಯೊಂದಿಗಿನ ಬಾಂಧವ್ಯ ಹದಗೆಡಬಹುದು. ಕುಟುಂಬಸ್ಥರಲ್ಲಿ ಹಣಕಾಸು ವಿಚಾರವಾಗಿ ಮನಸ್ತಾಪಗಳು. ಅವಿವಾಹಿತರಲ್ಲಿ ಅನಿರೀಕ್ಷಿತ ಲಾಭಗಳ ನೋಡಬಹುದು. ಹಾಗೆ ನಿಮ್ಮ ದೈನಂದಿನ ಕೆಲಸದಲ್ಲಿದ್ದ ಅಡೆತಡೆಗಳು ನಿವಾರಣೆಯಾಗಬಹುದು. ನಿಮ್ಮ ಅನುಕೂಲದಂತೆ ಈ ದಿನ ಬಯಸಿದ್ದ ವಸ್ತುವೊಂದನ್ನ ಪಡೆಯಲಿದ್ದೀರಿ. ಆಪ್ತರ ಆರೋಗ್ಯ ವಿಚಾರವಾಗಿ ನಿರ್ಲಕ್ಷ್ಯ ಮಾಡಬೇಡಿ. ನೀವು ಬಹಳ ಸಮಯ ಮನೆಯಿಂದ ಹೊರಗೆ ಕಳೆಯಬೇಕಾಗಬಹುದು.
ಕನ್ಯಾ ರಾಶಿ
ಇಂದು ನೀವು ಯಾವುದೇ ಚರ್ಚೆಯಿಂದ ದೂರವಿರುವುದು ಉತ್ತಮ. ಅನಗತ್ಯ ಚರ್ಚೆಯು ನಿಮ್ಮ ಮನಸ್ಸಿನ ಸ್ಥಿತಿ ಹಾಳು ಮಾಡಬಹುದು. ಕೆಲವು ದಿನಗಳಿಂದ ನೀವು ಅತಿಯಾದ ಕೆಲಸದ ಒತ್ತಡ ಅನುಭವಿಸುತ್ತಿದ್ದರೆ, ಇಂದು ವಿಶ್ರಾಂತಿಗೆ ಮುಂದಾಗಬಹುದು. ಸ್ನೇಹಿತರೊಂದಿಗೆ ಅಥವಾ ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಹಣದ ವಿಚಾರವಾಗಿ ಈ ದಿನ ನಿಮ್ಮ ಪರವಾದ ಒಲವು ಇರಲಿದೆ. ಕುಟುಂಬ ಸದಸ್ಯರೊಬ್ಬರಿಂದ ಉತ್ತಮ ಸಹಕಾರ ಪಡೆಯಲಿದ್ದೀರಿ. ಮಕ್ಕಳ ವಿಚಾರದಲ್ಲಿ ಕೆಲವು ಅಚ್ಚರಿಯ ಘಟನೆಗಳು ನಡೆಯಬಹುದು. ಮನೆಯಲ್ಲಿ ಹೊಸ ವಿಚಾರಗಳ ಚರ್ಚೆ ನಿಮಗೆ ಸಂತಸ ತರಲಿದೆ.
ತುಲಾ ರಾಶಿ
ಇಂದು ನಿಮಗೆ ಎಲ್ಲಾ ವಿಚಾರದಲ್ಲೂ ಸಾಮಾನ್ಯ ದಿನವಾಗಿರುತ್ತದೆ. ವ್ಯವಹಾರದ ವಿಷಯದಲ್ಲಿ ಸಣ್ಣ ಪುಟ್ಟ ಅಡೆತಡೆ ಇದ್ದರೂ ಅದನ್ನು ಬಗೆಹರಿಸುತ್ತೀರಿ. ಹಾಗೆ ಆರೋಗ್ಯದಲ್ಲೂ ಏರಿಳಿತ ನೋಡಬಹುದು. ವ್ಯಾಪಾರಿಗಳು ಬೆಳಗ್ಗಿನ ಸಮಯದಲ್ಲಿ ಹೆಚ್ಚು ಲಾಭ ಮಾಡಿದರೆ ಮಧ್ಯಾಹ್ನದ ನಂತರ ವ್ಯಾಪಾರ ಕುಸಿಯಬಹುದು. ಹೊಸ ಉದ್ಯೋಗ ಹುಡುಕುತ್ತಿದ್ದರೆ ಈ ದಿನ ಹೆಚ್ಚಿನ ಶ್ರಮ ಅಗತ್ಯ. ಇದರಿಂದ ಹೊಸ ಅವಕಾಶ ಪಡೆಯಬಹುದು. ಸರ್ಕಾರದ ನಿಯಮಗಳನ್ನು ಉಲ್ಲಂಘಿಸುವುದನ್ನು ತಪ್ಪಿಸಿ. ದುಬಾರಿ ವಸ್ತುಗಳ ಖರೀದಿಗೆ ಇಂದು ಶುಭ ದಿನವಲ್ಲ.
ವೃಶ್ಚಿಕ ರಾಶಿ
ಇಂದು ನೀವು ಹೊಸದನ್ನು ಮಾಡಲು ಒಳ್ಳೆಯ ದಿನವಾಗಿರುತ್ತದೆ. ವ್ಯಾಪಾರಸ್ಥರು ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗಬಹುದು. ಗ್ರಹಗಳ ನಕಾರಾತ್ಮಕ ಸ್ಥಾನದಿಂದಾಗಿ ಇಂದು ನಿಮ್ಮ ಕೆಲವು ಕೆಲಸಗಳು ಮಧ್ಯದಲ್ಲಿ ಅಪೂರ್ಣವಾಗಬಹುದು. ಇಂದು ನಿಮ್ಮ ಮನಸ್ಸಿನಲ್ಲಿ ಗೊಂದಲ ಉಂಟಾಗುತ್ತದೆ. ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಆತುರಪಡುತ್ತೀರಿ. ಕೆಲವು ವಿಚಾರಗಳು ನಿಮ್ಮನ್ನು ಭಾವುಕರನ್ನಾಗಿ ಮಾಡಬಹುದು. ಆಹಾರದ ವಿಚಾರವಾಗಿ ಖರ್ಚು ಹೆಚ್ಚಾಗಬಹುದು. ಎಲ್ಲಾ ವಿಚಾರದಲ್ಲೂ ಮೌನವಾಗಿರುವುದು ಈ ದಿನ ದುಬಾರಿಯಾಗಬಹುದು.
ಧನು ರಾಶಿ
ಇಂದು ಯಾವುದೇ ಕಾರಣವಿಲ್ಲದೆ ಕೋಪಗೊಳ್ಳಬೇಡಿ. ನೀವು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ಉದ್ಯೋಗಸ್ಥರು ಕಚೇರಿಯಲ್ಲಿ ಹೆಚ್ಚಿನ ಗೌರವ ಪಡೆಯಬಹುದು. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ, ವಿಶೇಷವಾಗಿ ನೀವು ಸಾಲ ವಹಿವಾಟುಗಳನ್ನು ಮಾಡದಿದ್ದರೆ ಉತ್ತಮ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ. ನಿಮ್ಮ ಮಾತಿನ ಬಗ್ಗೆ ಕುಟುಂಬದ ಹಿರಿಯ ಸದಸ್ಯರು ಕೆಟ್ಟದಾಗಿ ಭಾವಿಸಬಹುದು. ವಾಹನ ಮಾಲಿಕರು ಎಚ್ಚರಿಕೆಯಿಂದ ಇರಬೇಕು. ನಿಮ್ಮ ದೊಡ್ಡ ಕನಸಿಗೆ ಪುಟ್ಟ ಹೆಜ್ಜೆ ಇಡುವ ದಿನವಾಗಬಹುದು.
ಮಕರ ರಾಶಿ
ಈ ದಿನ ನೀವು ಕುಟುಂಬಸ್ಥರೊಂದಿಗೆ ಹೊರಗೆ ತೆರಳುವ ಅಥವಾ ಪ್ರವಾಸ ಕುರಿತಾಗಿ ಚರ್ಚೆ ಮಾಡಬಹುದು. ಸಂಬಳ ಪಡೆಯುವ ಜನರು ತಮ್ಮ ಕಠಿಣ ಪರಿಶ್ರಮದ ಉತ್ತಮ ಫಲಿತಾಂಶಗಳನ್ನು ಉನ್ನತ ಸ್ಥಾನದ ಸಾಧನೆಯ ರೂಪದಲ್ಲಿ ಪಡೆಯುವ ಬಲವಾದ ಸಾಧ್ಯತೆಯಿದೆ. ನಿಮ್ಮ ವ್ಯವಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದು ಒಳ್ಳೆಯದು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಜನರು ಉತ್ತಮ ಲಾಭ ಪಡೆಯಬಹುದು. ನಿಮ್ಮ ಕೆಲಸವು ವೇಗ ಪಡೆದುಕೊಳ್ಳಲಿದೆ.
ಕುಂಭ ರಾಶಿ
ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ದುರ್ಬಲ ದಿನವಾಗಿರುತ್ತದೆ. ಹೊಸ ಕೆಲಸವನ್ನು ಪ್ರಾರಂಭಿಸುವ ನಿಮ್ಮ ಕನಸು ನನಸಾಗಬಹುದು. ನೀವು ಪ್ರವಾಸಕ್ಕೆ ಹೋದರೆ ಖರ್ಚುಗಳ ಕಡೆಗೂ ಗಮನವಿಡಿ. ಇಂದು ನೀವು ಉಳಿತಾಯದ ಮೇಲೆ ಹೆಚ್ಚು ಗಮನಹರಿಸುವ ಅವಕಾಶ ಪಡೆಯುತ್ತೀರಿ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ. ನಿಮ್ಮ ಪ್ರಮುಖ ನಿರ್ಧಾರಗಳಲ್ಲಿ ನಿಮ್ಮ ಪ್ರೀತಿಪಾತ್ರರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಬಹಳ ವೆಚ್ಚದಾಯಕ ಕೆಲಸದಿಂದ ದೂರವೇ ಉಳಿದುಬಿಡಿ. ಹೆಚ್ಚುತ್ತಿರುವ ಆಯಾಸ ಮತ್ತು ಒತ್ತಡದಿಂದಾಗಿ ಆರೋಗ್ಯವು ಹದಗೆಡಬಹುದು.
ಮೀನ ರಾಶಿ
ಇಂದು ನಿಮಗೆ ಸಕಾರಾತ್ಮಕ ಫಲಿತಾಂಶಗಳ ತರುವ ದಿನವಾಗಿದೆ. ಕುಟುಂಬದ ಸದಸ್ಯರಿಂದ ನೀವು ಯಾವುದಾದರು ವಸ್ತುವೊಂದನ್ನು ಬಯಸಿದ್ದರೆ ನಿಮಗೆ ನಿರಾಸೆ ಮೂಡಬಹುದು. ಉದ್ಯೋಗಿಗಳಿಗೆ ಹೆಚ್ಚು ಜಾಗರೂಕರಾಗಿರುವುದು ಹೆಚ್ಚು. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ. ಹಣದ ವಿಷಯದಲ್ಲಿ ದಿನವು ಉತ್ತಮವಾಗಿರುತ್ತದೆ. ನೀವು ಅದ್ಭುತ ಯಶಸ್ಸನ್ನು ಪಡೆಯಬಹುದು. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ಆಳವಾಗಿರಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











