ದಿನ ಭವಿಷ್ಯ: ಏಪ್ರಿಲ್ 19ರಂದು ನಿಮ್ಮ ರಾಶಿಯಲ್ಲಿ ಯಾವೆಲ್ಲಾ ಫಲವಿದೆ?

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಏಪ್ರಿಲ್ 19ರ ದಿನ ಭವಿಷ್ಯ ನೋಡೋಣ:

ಮೇಷ ರಾಶಿ

ಮೇಷ ರಾಶಿಯವರಿಗೆ ಈ ದಿನದಂದು ಲಾಭದಾಯಕ ಕ್ಷಣಗಳು ಎದುರಾಗುತ್ತವೆ. ಈ ದಿನ ಮಾನಸಿಕ ಒತ್ತಡ ಹೆಚ್ಚಿರಲಿದೆ, ಆರ್ಥಿಕವಾಗಿ ಈ ಅವಧಿ ಅನುಕೂಲಕರವಾಗಿದೆ. ಹಾಗೆ ನಿಮ್ಮ ಪರವಾದ ಕೆಲಸವೊಂದು ನಡೆಯಲು ನೀವು ಶ್ರಮ ಹಾಕಬೇಕಾಗುತ್ತದೆ. ಹಿಂದೆ ಬಯಸಿದ್ದ ವಸ್ತುವೊಂದು ಸಿಕ್ಕರು ಅದರಿಂದ ನಿಮ್ಮಲ್ಲಿ ಸಂತೋಷ ಇರುವುದಿಲ್ಲ. ಮನೆಗೆ ಅಗತ್ಯ ವಸ್ತುಗಳ ಖರೀದಿಗೆ ನೀವು ಮುಂದಾಗುತ್ತೀರಿ. ವ್ಯಾಪಾರಿಗಳಿಗೆ ಒಳ್ಳೆಯ ದಿನವಲ್ಲ. ಕಾನೂನು, ಬ್ಯಾಂಕ್ ಕುರಿತ ಕೆಲಸ ಕಾರ್ಯದಲ್ಲಿ ಅಡೆತಡೆ ಇರಲಿದೆ. ಮಾರ್ಕೆಟಿಂಗ್ ಕೆಲಸದಲ್ಲಿರುವವರು ಹೆಚ್ಚು ಪ್ರಯಾಣಿಸಬೇಕಾಗಬಹುದು. ಆಹಾರ ವಿಚಾರವಾಗಿ ಹೆಚ್ಚು ಖರ್ಚು ಮಾಡಬೇಕಾಗಬಹುದು. ಹಾಗೆ ಆಪ್ತರೊಬ್ಬರಿಗೆ ನೀವು ಹಣಕಾಸಿನ ನೆರವು ನೀಡಬಹುದು. ವೈದ್ಯರು ವಿದೇಶದಲ್ಲಿ ನೆಲೆಸುವ ಕುರಿತು ಆಲೋಚಿಸಿದ್ದರೆ ಈ ಸಮಯದಲ್ಲಿ ಲಾಭದಾಯಕವಾಗುತ್ತಿದೆ.

ವೃಷಭ ರಾಶಿ

ವೃಷಭ ರಾಶಿಯ ಮಂದಿ ಈ ದಿನದಂದು ಮಿಶ್ರ ಫಲ ನೋಡುತ್ತಾರೆ. ನೀವು ಅನಾರೋಗ್ಯ ವಿಚಾರವಾಗಿ ವೈದ್ಯರ ಸಂಪರ್ಕಿಸಿದ್ದರೆ ಈ ದಿನ ಅದರಿಂದ ಮುಕ್ತಿ ಪಡೆಯಬಹುದು. ಹಾಗೆ ದೂರ ಪ್ರಯಾಣದಿಂದಲು ಆರಾಮ ಸಿಗಲಿದೆ. ಕೆಲಸ ಕಾರ್ಯದಲ್ಲಿ ಈ ದಿನ ಉತ್ತಮವಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ಆರ್ಥಿಕ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ. ದಿನದ ಅಂತ್ಯದಲ್ಲಿ ಹೊಸ ವಿಚಾರವೊಂದು ನಿಮ್ಮಲ್ಲಿ ಒತ್ತಡ ತರಬಹುದು. ಹಾಗೆ ನೀವು ಹೊಸ ಸ್ಥಳಕ್ಕೆ ತೆರಳಬೇಕಾಗಬಹುದು. ಬಹಳ ದಿನದ ಕನಸನ್ನು ನನಸು ಮಾಡಿಕೊಳ್ಳಲು ನೀವು ಹಾಕಿರುವ ಶ್ರಮದಲ್ಲಿ ಸ್ವಲ್ಪ ಫಲಿತಾಂಶ ಪಡೆಯಬಹುದು.

April-19-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಈ ದಿನ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವ ಕೆಲಸ ಮಾಡುತ್ತೀರಿ. ನೀವು ಎಲ್ಲ ವಿಷಯದಲ್ಲಿಯೂ ಧನಾತ್ಮಕವಾಗಿ ಯೋಚನೆ ಮಾಡುವ ಶಕ್ತಿ ಹೊಂದಿರುತ್ತೀರಿ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಆಕೋಚನೆಗಳಿಗೆ ಬೆಂಬಲ ಸಿಗಲಿದೆ. ಹಾಗೆ ನಿಮ್ಮ ಕೆಲಸದ ಕುರಿತಾಗಿ ಹಲವು ಮೆಚ್ಚುಗೆ ವ್ಯಕ್ತಪಡಿಸಬಹುದು. ಸ್ನೇಹಿತರಿಗೆ, ಆಪ್ತರಿಗೆ ಸಹಾಯ ಮಾಡುವ ಅವಕಾಶ ಒದಗಿ ಬಂದರೆ ಈ ದಿನ ಪೂರ್ಣಗೊಳಿಸಿ. ಹೊಸ ಉದ್ಯೋಗ ಹುಡುಕುತ್ತಿದ್ದರೆ ಅಥವಾ ನಿರುದ್ಯೋಗಿಗಳಾಗಿದ್ದರೆ ಈ ದಿನ ನೀವು ಶ್ರಮ ವಹಿಸಿದರೆ ಹೊಸ ಉದ್ಯೋಗದ ಕುರಿತಾದ ಶುಭ ಸುದ್ದಿ ಕೇಳಬಹುದು. ಕಾಲು, ಮೂಳೆಗೆ ಸಂಬಂಧಿಸಿದ ನಿಮ್ಮಲ್ಲಿ ಯಾವುದೇ ಸಮಸ್ಯೆ ಇದ್ದರೆ ಸೂಕ್ತ ಚಿಕಿತ್ಸೆಗೆ ಮುಂದಾಗುವುದು ಉತ್ತಮ. ವಾಹನ ಮಾಲಿಕರು ಈ ದಿನ ಎಚ್ಚರಿಕೆಯಿಂದಿರಿ.

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಈ ದಿನವು ಬಹಳ ಉತ್ತಮ ಫಲಿತಾಂಶ ನೀಡಲಿದೆ. ಅದರಲ್ಲೂ ಶೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಇನ್ನು ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಶುಭ ಸುದ್ದಿ ಸಿಗಬಹುದು. ಅವಿವಾಹಿತರಲ್ಲಿ ಹೊಸ ಕೆಲಸದ ಆರಂಭ ಆಗಲಿದೆ, ಹಾಗೆ ನಿಮ್ಮ ವಿವಾಹ ಸಂಬಂಧವಾಗಿಯೂ ಶುಭ ಸುದ್ದಿ ಕೇಳಬಹುದು. ಮನೆಯ ವಾತಾವರಣದಲ್ಲಿ ಸಂತೋಷ ಇರಲಿದೆ. ಪೋಷಕರಲ್ಲಿ ಈ ದಿನ ಮಕ್ಕಳ ಭವಿಷ್ಯದ ಚಿಂತೆ ಕಾಡಬಹುದು. ವಾಹನ ಚಲಾಯಿಸುವಾಗ ಜಾಗ್ರತೆವಹಿಸಿ. ವ್ಯಾಪಾರಿಗಳು ತಮ್ಮ ಬುದ್ದಿವಂತಿಕೆಯ ಮೂಲಕ ಲಾಭ ಗಳಿಸುವ ದಿನವಾಗಿರಲಿದೆ.

ಸಿಂಹ ರಾಶಿ

ಸಿಂಹ ರಾಶಿಯವರು ಈ ದಿನದಂದು ಶಾಂತವಾಗಿದ್ದಷ್ಟು ನಿಮ್ಮ ಓಳಿತಾಗಲಿದೆ. ಏಕೆಂದರೆ ಈ ದಿನ ನಿಮ್ಮ ಮಾನಸಿಕ ಸ್ಥಿತಿ ಹಾಳು ಮಾಡುವ ಹಲವು ಕೆಲಸಗಳು ಎದುರಾಗಲಿದೆ. ನೀವು ಈ ದಿನ ಸಂಗಾತಿಯ ಜೊತೆ ರೋಮ್ಯಾಂಟಿಕ್ ಸಮಯ ಕಳೆಯುತ್ತೀರಿ. ಹಣದ ವಿಚಾರದಲ್ಲಿ ಸ್ವಲ್ಪ ದುಬಾರಿ ದಿನ ಎನಿಸಬಹುದು. ನಿಮ್ಮ ಹಣವನ್ನು ಬೇರೊಂದು ವಿಚಾರಕ್ಕೆ ಬಳಸಬೇಕಾಗುತ್ತದೆ. ಹಣದ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಖರ್ಚು ಮಾಡುವ ಮುನ್ನ ಮುಂದಿನ ಸವಾಲುಗಳ ಕುರಿತಾಗಿ ಆಲೋಚಿಸಿ. ಪೂರ್ಣ ಪ್ರಮಾಣದಲ್ಲಿ ಕೆಲಸದ ಕಡೆಗೆ ಇಂದು ಗನಹರಿಸಿ. ಕುಟುಂಬಸ್ಥರೊಂದಿಗೆ ಸಣ್ಣ ಪುಟ್ಟ ವೈಮನಸ್ಸು ಮೂಡಬಹುದು.

ಕನ್ಯಾ ರಾಶಿ

ಕೆಲಸದ ಕುರಿತಾಗಿ ನಿಮ್ಮಲ್ಲಿದ್ದ ದೊಡ್ಡ ಚಿಂತೆಯೊಂದು ಈ ದಿನ ದೂರಾಗಲಿದೆ. ಈ ದಿನ ನಿಮಗೆ ಹೆಚ್ಚಿನ ಗೌರವ ದೊರೆಯುತ್ತದೆ. ನಿಮ್ಮ ಉತ್ತಮ ಗುಣವನ್ನು ಜನರು ಪ್ರಶಂಸಿಸುತ್ತಾರೆ. ಯಾವುದೇ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ಇರಲಿ. ಉದ್ಯೋಗ ತೊರೆದು ಸ್ವಂತ ವ್ಯಾಪಾರ ಶುರು ಮಾಡಲು ಯೋಚಿಸುತ್ತಿದ್ದರೆ ಶೀಘ್ರದಲ್ಲಿಯೇ ಸರಿಯಾದ ಅವಕಾಶ ಕೂಡಿಬರಲಿದೆ. ಆಸ್ತಿ ವ್ಯವಹಾರಕ್ಕೆ ಈ ದಿನ ಉತ್ತಮವಾಗಿದೆ. ಯಾರೊಂದಿಗೂ ಅನಗತ್ಯ ಚರ್ಚೆಗೆ ಮುಂದಾಗಬೇಡಿ. ನಿದ್ರೆಗೆ ಸಂಬಂಧಿಸಿದ ಸಮಸ್ಯೆ ನೀವು ಎದುರಿಸಬಹುದು.

ತುಲಾ ರಾಶಿ

ಈ ದಿನ ತುಂಬಾ ಚೆನ್ನಾಗಿರಲಿದೆ. ಈ ದಿನವು ಕಾರ್ಯನಿರತವಾಗಿರುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂಬಂಧವನ್ನು ಉತ್ತಮವಾಗಿ ಇರಿಸಿಕೊಳ್ಳಲು ಪ್ರಯತ್ನಿಸಿ. ಸಣ್ಣ ವಿಷಯಗಳಿಗೆ ಜಗಳ ಒಳ್ಳೆಯದಲ್ಲ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ದೂರದ ಸಂಬಂಧಿಯೊಬ್ಬರು ನಿಮ್ಮ ಮನೆಗೆ ಆಗಮಿಸಬಹುದು. ಇದು ನಿಮ್ಮಲ್ಲಿ ಸಂತಸದ ಕ್ಷಣಕ್ಕೆ ಕಾರಣವಾಗಬಹುದು. ಉದ್ಯೋಗದ ವಿಚಾರವಾಗಿ ತರಾತುರಿಯ ನಿರ್ಧಾರ ಕೈಗೊಳ್ಳಬೇಡಿ. ಮನೆಗಾಗಿ ಹಣ ಖರ್ಚು ಮಾಡಬೇಕಾಗಬಹುದು.

ವೃಶ್ಚಿಕ ರಾಶಿ

ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶ ಹೋಗಲು ಬಯಸಿದರೆ ಇದೀಗ ಉತ್ತಮ ಅವಕಾಶ ನಿಮ್ಮದಾಗಲಿದೆ. ಕಚೇರಿಯಲ್ಲಿ ನಿಮ್ಮ ಕೆಲಸ ಹೆಚ್ಚಾಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವ ಕೆಲಸ ಮಾಡಲಿದ್ದೀರಿ. ಪಂಚೇಂದ್ರಿಯ ಸಂಬಂಧಿ ಅನಾರೋಗ್ಯಕ್ಕೆ ನೀವು ತುತ್ತಾಗಬಹುದು. ಉನ್ನತ ಅಧಿಕಾರಿಗಳು ನಿಮ್ಮ ಕಾರ್ಯ ವೈಖರಿಯಿಂದ ಸ್ವಲ್ಪ ಅತೃಪ್ತರಾದಂತೆ ಕಾಣಿಸಬಹುದು. ನೀವು ಮಾಡಿದ ಕೆಲಸಗಳಲ್ಲಿ ತಪ್ಪನ್ನು ಹುಡುಕಬಹುದು. ಆದರೆ ಇದನ್ನು ನೀವು ಧನಾತ್ಮಕಾಗಿ ತೆಗೆದುಕೊಳ್ಳಿ. ಅನಗತ್ಯ ಚರ್ಚೆಗೆ ಮುಂದಾಗುವ ಬದಲು ಬಹಳ ತಾಳ್ಮೆಯಿಂದ ಇರಿ.

ಧನು ರಾಶಿ

ಕೆಲವು ದಿನಗಳಿಂದ ನಿಮ್ಮ ಆರೋಗ್ಯವು ಹದಗೆಟ್ಟಿದ್ದರೆ ಈ ದಿನದಂದು ಬಹಳ ಕಷ್ಟಪಡಬೇಕಾಗಬಹುದು. ಉದ್ಯೋಗಿಗಳು ಬಹಳ ದಿನದಿಂದ ಬಯಸಿದ್ದ ವಸ್ತುವೊಂದನ್ನು ಪಡೆಯಲಿದ್ದೀರಿ. ವ್ಯಾಪಾರಿಗಳು ಈ ದಿನ ಲಾಭದಾಯಕ ಸ್ಥಿತಿಗೆ ಮರಳುತ್ತಾರೆ. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ. ಇಂದು ದೊಡ್ಡ ಬಂಡವಾಳ ಹೂಡಿಕೆ ಮಾಡದೆ ಇರುವುದೇ ಒಳ್ಳೆಯದು. ಯಾವುದೇ ಕೆಲಸವಾಗಲಿ ಬಹಳ ಎಚ್ಚರಿಕೆಯಿಂದ ಮಾಡಿ ಮುಗಿಸಿ. ಕುಟುಂಬಸ್ಥರಿಂದ ಹಣ ನೆರವು ಕೇಳಿದ್ದರೆ ಈ ದಿನ ಅವರಿಂದ ಬೆಂಬಲ ಪಡೆಯಲಿದ್ದೀರಿ.

ಮಕರ ರಾಶಿ

ಈ ದಿನ ತುಂಬಾ ಚೆನ್ನಾಗಿರಲಿದೆ. ಈ ದಿನವು ಕಾರ್ಯನಿರತವಾಗಿರುತ್ತದೆ. ಉದ್ಯಮಿಗಳ ಆರ್ಥಿಕ ಸ್ಥಿತಿ ಸುಧಾರಿಸುವುದು. ಮನೆಯ ವಾತಾವರಣವು ಚೆನ್ನಾಗಿರಲಿದೆ. ಹಣದ ವಿಷಯದಲ್ಲಿ ದಿನವು ತುಂಬಾ ದುಬಾರಿಯಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂಬಂಧವನ್ನು ಉತ್ತಮವಾಗಿ ಇರಿಸಿಕೊಳ್ಳಲು ಪ್ರಯತ್ನಿಸಿ. ಬಹಳ ಸಮಯದ ನಿಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳುವ ಸಮಯವಿದು. ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡಲು ಮುಂದಾಗಬೇಡಿ ಇದರಿಂದ ನಿಮ್ಮ ಸಾಲ ಹೆಚ್ಚಾಗಬಹುದು. ಸಮಯಕ್ಕೆ ಸರಿಯಾದ ಎಲ್ಲಾ ಕೆಲಸ ಮುಗಿಸಿ.

ಕುಂಭ ರಾಶಿ

ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ವ್ಯಾಪಾರಿಗಳು ತಮ್ಮ ವ್ಯವಹಾರದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಈ ದಿನ ಹಣದ ವ್ಯವಹಾರ ನೀವು ಜಾಗ್ರತೆಯಿಂದ ಮಾಡಬೇಕು. ವಿದ್ಯಾರ್ಥಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ಮನೆಯ ವಾತಾವರಣ ಚೆನ್ನಾಗಿರುತ್ತದೆ, ಕೆಲಸದ ಬಗ್ಗೆ ನೋಡುವುದಾದರೆ ನಿಮ್ಮ ಮೇಲೆ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಬಹಳ ಸಮಯ ನೀವು ಮನೆಯಿಂದ ಹೊರಗೆ ಕಳೆಯಬೇಕಾಗಬಹುದು. ಕೆಲಸದ ಸಂಬಂಧ ದೂರ ಪ್ರಯಾಣ ಮಾಡಬೇಕಾಗಬಹುದು.

ಮೀನ ರಾಶಿ

ಮೀನ ರಾಶಿಯ ಮಂದಿಗೆ ಈ ದಿನ ಬಹಳ ಉತ್ತಮ ಫಲಗಳ ನೀಡಲಿದೆ. ವೈವಾಹಿಕ ಜೀವನದಲ್ಲಿ ಶುಭ ಇರಲಿದೆ. ಕಚೇರಿಯಲ್ಲೂ ನಿಮ್ಮ ಗೌರವ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸಬಹುದು. ಆರೋಗ್ಯದ ಕಡೆಗೆ ನೀವು ವಿಶೇಷ ಗಮನವಿಡಿ. ಸ್ಥಗಿತಗೊಂಡ ವ್ಯಾಪಾರ ಯೋಜನೆಯಲ್ಲಿ ನೀವು ಮತ್ತೆ ಕೆಲಸವನ್ನು ಪ್ರಾರಂಭಿಸಬಹುದು. ನೀವು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗಿದೆ. ಮನೆಯಲ್ಲಿ ಉತ್ತಮ ವಾತಾವರಣ ಇರಲಿದೆ. ನಿಮ್ಮ ಸಂಬಂಧಗಳು ಇನ್ನಷ್ಟು ಬಲಗೊಳ್ಳುತ್ತವೆ. ಆರೋಗ್ಯ ಉತ್ತಮವಾಗಿರುತ್ತದೆ. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

April-19-daily-horoscope-prediction-for-12-zodiac-signs-in-kannada

Here is April 19 daily horoscope prediction for 12 zodiac signs read on...
Story first published: Saturday, April 19, 2025, 9:02 [IST]
X
Desktop Bottom Promotion