Latest Updates
-
ಬೆಳಗ್ಗೆ ಮಾಡಿದ ರೊಟ್ಟಿ ಸಂಜೆಯಾದರೂ ಫ್ರೆಶ್ & ಸಾಫ್ಟ್ ಆಗಿರುತ್ತೆ! ಅಮ್ಮನ ಸೂಪರ್ ಕಿಚನ್ ಟಿಪ್ಸ್ ಇಲ್ಲಿದೆ -
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ? ಯಾರಿಗೆ ಸಂಕಷ್ಟ? ನಿಮ್ಮ ರಾಶಿ ಫಲ ಇಲ್ಲಿದೆ -
ಉಳಿದ ಅನ್ನದಿಂದ ಮಾಡಿ ಗರಿಗರಿಯಾದ ಕುರ್ಕುರೆ! ಹೊರಗಿನ ಸ್ನ್ಯಾಕ್ಗೂ ಮೀರಿದ ರುಚಿ.. ಮಾಡೋದು ಹೇಗೆ? -
30 ವರ್ಷ ದಾಟಿದ್ರಾ? ಈ 5 ಅಭ್ಯಾಸಗಳನ್ನು ತಕ್ಷಣ ಬದಲಿಸಿ.. ಜೀವನಪೂರ್ತಿ ಫಿಟ್ ಆಗಿರಿ! -
Happy Holi 2026: ನಿಮ್ಮ ಪ್ರೀತಿಪಾತ್ರರಿಗೆ ಕಳಿಸಿ ಈ ಸ್ಪೆಷಲ್ ಶುಭಾಶಯಗಳು! ಸ್ನೇಹ, ಪ್ರೀತಿ, ಸಂತೋಷ ತುಂಬಿದ ಮೆಸೇಜ್ ಇಲ್ಲಿವೆ -
ಹಸಿ ಬಟಾಣಿ ಬಳಸಿ ಖಸ್ತ ಪೂರಿ ಹೀಗೆ ಮಾಡಿ.. ಪ್ರತಿ ಪುರಿಯೂ ಹೂವಿನಂತೆ ಉಬ್ಬಿ ಬರುತ್ತೆ! ಸೂಪರ್ ರುಚಿ, 15 ನಿಮಿಷಗಳಲ್ಲಿ ರೆಡಿ! -
ಈ ದಿನ ಕೌಟುಂಬಿಕ ಸುಖ ಪ್ರಾಪ್ತಿ! ಪ್ರೇಮ ಜೀವನದಲ್ಲಿ ತೊಂದರೆಗಳು -
March 02 Horoscope: ಸಾಲದ ಕುರಿತಾದ ಚಿಂತೆಯೊಂದು ದೂರಾಗಲಿದೆ! -
ಮಾರ್ಚ್ನಲ್ಲಿ ಸೂರ್ಯ-ಕೇತು ಸಮನ್ವಯ ಚಲನೆ: ಮೂರು ರಾಶಿಯವರ ಬದುಕಲ್ಲಿ ಅದೃಷ್ಟ! -
Weekly Horoscope: ಮಾರ್ಚ್ 01 ರಿಂದ ಮಾರ್ಚ್ 07ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ದಿನ ಭವಿಷ್ಯ: ಏಪ್ರಿಲ್ 17ರಂದು ನಿಮ್ಮ ರಾಶಿಫಲ ಹೇಗಿದೆ?
ಶುಭ ದಿನ ಈ ದಿನ ದ್ವಾದಶ ರಾಶಿಗಳ ರಾಶಿಫಲ ನೋಡೋಣ:
ಮೇಷ ರಾಶಿ
ಈ ದಿನ ನೀವು ನಗುವಿನಿಂದ ಕಳೆಯಬಹುದು. ಅಮೂಲ್ಯ ವಸ್ತುಗಳ ಮೇಲೆ ಹೂಡಿಕೆ ಮಾಡುವುದು, ಪಂಚ ಲೋಹಗಳಲ್ಲಿ ಒಂದನ್ನು ಖರೀದಿಸಲು ಈ ದಿನ ಬಹಳ ಶುಭಕರ. ನಿಮ್ಮ ಉದ್ಯೋಗದ ಸ್ಥಳದಲ್ಲಿ ನಿಮ್ಮ ಪರವಾಗಿ ಪ್ರೋತ್ಸಾಗ ಸಿಗಲಿದೆ. ಹೊಸ ಜವಾಬ್ದಾರಿಗಾಗಿ ನೀವು ನಿಮ್ಮನ್ನು ಸಿದ್ದ ಮಾಡಬೇಕಾಗುತ್ತದೆ. ನಿರುದ್ಯೋಗಿಗಳಾಗಿದ್ದರೆ ಈ ಸಮಯದಲ್ಲಿ ಉತ್ತಮ ಅವಕಾಶ ಪಡೆಯಲಿದ್ದೀರಿ. ನಿಮ್ಮ ನಿತ್ಯದ ಕೆಲಸದಲ್ಲಿ ಅಡೆತಡೆ ನೋಡಬಹುದು. ಹಾಗೆ ಹಲವು ಕೆಲಸಗಳಲ್ಲಿ ಹೆಚ್ಚು ಸಮಯ ಮುಳುಗುವುದು ತಲೆನೋವು ತರಬಹುದು. ಸಂಜೆಯ ಸಮಯವನ್ನು ಅತ್ಯಂತ ಪ್ರಿಯರೊಂದಿಗೆ ಕಳೆಯುವಿರಿ. ಹಾಗೆ ಮನೆಯ ಹೊರಗಿನ ಊಟ ತಿಂಡಿಗೆ ನೀವು ಖರ್ಚು ಮಾಡುತ್ತೀರಿ. ಪ್ರೀತಿಯ ಜೀವನ ಸುಂದರವಾಗಿರಲಿದೆ.
ವೃಷಭ ರಾಶಿ
ಇಂದು ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯ ಕಾರಣದಿಂದಾಗಿ ಒತ್ತಡಕ್ಕೆ ಒಳಗಾಗಿರುತ್ತೀರಿ. ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ ಆರೋಗ್ಯವು ಉತ್ತಮವಾಗಿರುತ್ತದೆ. ದಿನದ ಕೊನೆಯಲ್ಲಿ ಹಣಕಾಸು ಪರಿಸ್ಥಿರಿ ಸುಧಾರಿಸುತ್ತದೆ. ಕುಟುಂಬದಲ್ಲಿ ಉತ್ತಮ ವಾತಾವರಣ ನೋಡಬಹುದು. ಉದ್ಯಮಿಗಳಿಗೆ ಇಂದು ಬಳ ಒಳ್ಳೆಯ ದಿನ. ಹಾಗೆ ವ್ಯಾಪಾರಿಗಳು ಅನಿರೀಕ್ಷಿತ ಗ್ರಾಹಕರಿಂದ ಲಾಭ ಮಾಡಬಹುದು. ನಿಮ್ಮ ರಹಸ್ಯಕರ ವಿಚಾರವೊಂದನ್ನು ಇಂದು ಹಂಚಿಕೊಳ್ಳಲು ಹೋಗಬೇಡಿ. ಸಮಯಕ್ಕೆ ಸರಿಯಾಗಿ ನೀವು ಕೆಲಸಗಳ ಪೂರ್ಣ ಮಾಡಿದರೆ ಮುಂದೆ ತೊಂದರೆಗಳು ತಪ್ಪಲಿದೆ. ಬ್ಯಾಂಕ್ ಸಂಬಂಧಿಸಿದ ಕೆಲಸಗಳಲ್ಲಿ ವೇಗ ಪಡೆಯಲಿದ್ದೀರಿ. ನಿಮ್ಮ ಅನಾರೋಗ್ಯ ಸಮಸ್ಯೆಯೊಂದಕ್ಕೆ ಪರಿಹಾರ ಪಡೆಯಲಿದ್ದೀರಿ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಈ ದಿನವು ಬಹಳ ಆರಾಮದಾಯಕ ದಿನ ಎನ್ನಬಹುದು, ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಆಪ್ತರೊಬ್ಬರ ಸಹಕಾರದಿಂದಾಗಿ ಒತ್ತಡಗಳು ಕಡಿಮೆಯಾಗಲಿದೆ. ನೀವು ಹಣಕಾಸಿಗಾಗಿ ಬೇರೊಂದು ಮೂಲವನ್ನು ನಂಬಿಕೊಂಡಿದ್ದರೆ ಅಥವಾ ಹಣದ ನಿರೀಕ್ಷೆಯಲ್ಲಿದ್ದರೆ ಈ ಸಮಯದಲ್ಲಿ ಧನಾತ್ಮಕ ಪರಿಣಾಮ ನೋಡಬಹುದು. ಕಠಿಣ ಪರಿಶ್ರಮ ಮತ್ತು ತಾಳ್ಮೆಯ ಮೂಲಕ ನೀವು ನಿಮ್ಮ ಗುರಿಗಳನ್ನು ತಲುಪುತ್ತೀರಿ. ಕುಟುಂಬಕ್ಕಾಗಿ ಮುಖ್ಯವಾದ ವಸ್ತುವೊಂದನ್ನು ನೀವು ಖರೀದಿಸಬಹುದು. ಹಾಗೆ ಹಣಕಾಸು ವಿಚಾರದಲ್ಲಿ ಆಪ್ತರಿಂದ ಸಹಾಯ ಪಡೆಯಲಿದ್ದೀರಿ. ಹೂಡಿಕೆಗೆ ಇದು ಸೂಕ್ತ ಸಮಯವಲ್ಲ. ಹಾಗೆ ಖರ್ಚುಗಳ ಮೇಲೆ ಗಮನವಿಡುವುದು ಒಳಿತು.
ಕರ್ಕ ರಾಶಿ
ಇಂದು ನಿಮಗೆ ಗದ್ದಲದಿಂದ ತುಂಬಿದ ದಿನವಾಗಿರುತ್ತದೆ. ನೀವು ಒಂದೇ ಸಮಯದಲ್ಲಿ ಹಲವಾರು ಕೆಲಸಗಳನ್ನು ಮಾಡಬೇಕಾಗಬಹುದು, ಆದರೆ ಅವುಗಳನ್ನು ಒಂದೊಂದಾಗಿ ಪೂರ್ಣಗೊಳಿಸುವುದು ನಿಮಗೆ ಉತ್ತಮವಾಗಿರುತ್ತದೆ. ಕುಟುಂಬದ ಹಿರಿಯರ ಸೇವೆ ಮಾಡಲು ನೀವು ಸಾಕಷ್ಟು ಸಮಯವನ್ನು ಕಳೆಯುತ್ತೀರಿ. ಕೌಟುಂಬಿಕ ಸಮಸ್ಯೆಗಳಿಂದಾಗಿ ಸಂಬಂಧದಲ್ಲಿ ಸ್ವಲ್ಪ ಅಂತರವಿದ್ದರೆ ಅದು ದೂರವಾಗುತ್ತದೆ. ನೀವು ಯಾವುದೇ ಭರವಸೆಯನ್ನು ಯಾರಿಗಾದರೂ ಎಚ್ಚರಿಕೆಯಿಂದ ಪರಿಗಣಿಸಿದ ನಂತರವೇ ನೀಡಬೇಕಾಗುತ್ತದೆ. ಹಾಗೆ ಅವರಿಂದ ಯಾವುದೇ ಸಹಾಯ ಪಡೆಯುವ ಮುನ್ನ ಷರತ್ತುಗಳನ್ನ ಅಥವಾ ಶಪಥಗಳ ಮಾಡಲು ಮುಂದಾಗಬೇಡಿ.
ಸಿಂಹ ರಾಶಿ
ಇಂದು ವ್ಯವಹಾರದ ವಿಷಯದಲ್ಲಿ ನಿಮಗೆ ದುರ್ಬಲ ದಿನವಾಗಲಿದೆ, ಏಕೆಂದರೆ ವ್ಯವಹಾರದಲ್ಲಿ ಅಪೇಕ್ಷಿತ ಲಾಭ ಸಿಗದ ಕಾರಣ ನೀವು ಚಿಂತಿತರಾಗುತ್ತೀರಿ. ಇಂದು ನೀವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಖ್ಯಾತಿ ಗಳಿಸುವ ದಿನವಾಗಿರುತ್ತದೆ. ನೀವು ನಿಮ್ಮ ತಾಯಿಯನ್ನು ಅವರ ಪ್ರೀತಿ ಮರಳಿ ಪಡೆಯುತ್ತೀರಿ. ಹಣದ ವಿಚಾರವಾಗಿ ಸ್ನೇಹಿತರ ಜೊತೆಗೆ ದೊಡ್ಡ ಸಮಸ್ಯೆ ಒಳಗಾಗಬಹುದು. ನಿಮ್ಮ ಬಹುದೊಡ್ಡ ಆಸೆಯೊಂದನ್ನು ಈಡೇರಿಸಿಕೊಳ್ಳಲು ಇದು ಶುಭ ಸಮಯ. ಯಾವುದೇ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳಬೇಡಿ.
ಕನ್ಯಾ ರಾಶಿ
ಇಂದು ನೀವು ಹೊಸ ವಾಹನವನ್ನು ಖರೀದಿಸುವ ಆಲೋಚನೆಯಲ್ಲಿದ್ದರೆ ಇಂದು ಅದರ ಪರವಾಗಿ ಶುಭ ದಿನವಾಗುತ್ತದೆ. ಇಂದು ವಿದ್ಯಾರ್ಥಿಗಳು ತಮ್ಮ ಅಧ್ಯಯನದತ್ತ ಗಮನಹರಿಸಲು ಉತ್ತಮ ದಿನವಾಗಿರುತ್ತದೆ. ನೀವು ಅನಗತ್ಯ ವಿಷಯಗಳಿಗೆ ಗಮನ ಕೊಡಬಾರದು. ಹೊಸ ಆಸ್ತಿ ಖರೀದಿಸುವ ನಿಮ್ಮ ಆಸೆ ಈಡೇರಬಹುದು. ನಿಮ್ಮ ಕೆಲಸದಲ್ಲಿನ ಅಡೆತಡೆ ನಿವಾರಣೆಯಾಗಲಿದೆ. ಕುಟುಂಬದಲ್ಲಿ ನಿಮ್ಮ ಮದುವೆ ವಿಚಾರವಾಗಿ ಚರ್ಚೆ ನಡೆಯಬಹುದು. ಹಾಗೆ ವೈವಾಹಿಕ ಜೀವನದಲ್ಲಿ ಸಂತಸ ಇರಲಿದೆ. ದೂರದ ಸಂಬಂಧಿಯೊಬ್ಬರು ನಿಮ್ಮ ಮನೆಗೆ ಭೇಟಿ ನೀಡಬಹುದು.
ತುಲಾ ರಾಶಿ
ಇಂದು ನಿಮಗೆ ಸಾಮಾನ್ಯ ದಿನವಾಗಿರುತ್ತದೆ. ಯಾವುದೇ ಕೆಲಸ ಮಾಡುವಾಗಲು ಹೆಚ್ಚು ಕೋಪಿತರಾಗಬೇಡಿ, ಇದು ನಿಮ್ಮ ಭವಿಷ್ಯದ ದೃಷ್ಟಿಯಿಂದ ಕೆಟ್ಟ ಪರಿಣಾಮಕ್ಕೆ ಕಾರಣವಾಗಬಹುದು. ನೀವು ಷೇರು ಮಾರುಕಟ್ಟೆಯಲ್ಲಿ ಸ್ವಲ್ಪ ನಷ್ಟವನ್ನು ಅನುಭವಿಸಬಹುದು. ನಿಮ್ಮ ಸಂಗಾತಿಯ ಭಾವನೆಗಳನ್ನು ಸಹ ಗೌರವಿಸಬೇಕು. ಹಿತ ಶತ್ರುಗಳಿಂದ ಈ ದಿನ ದೂರವೇ ಇರುವುದು ಒಳಿತು. ಉದರ ಸಂಬಂಧಿ ಅನಾರೋಗ್ಯಕ್ಕೆ ನೀವು ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ. ಹಣಕಾಸಿನ ವ್ಯವಹಾರದಲ್ಲಿ ನೀವು ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚಿದೆ. ಕೆಲಸದ ಸಂಬಂಧ ದೂರ ಪ್ರಯಾಣ ಸಂಭವವವಿದೆ.
ವೃಶ್ಚಿಕ ರಾಶಿ
ಇಂದು ನಿಮಗೆ ಗೊಂದಲದ ದಿನವಾಗಬಹುದು. ಏಕೆಂದರೆ ಹಣಕಾಸು ವಿಚಾರವಾಗಿ ನೀವು ಸಾಲ ಮಾಡಬೇಕೋ ಬೇಡವೋ ಎಂಬ ಗೊಂದಲಕ್ಕೆ ಸಿಲುಕುತ್ತೀರಿ. ಒಂದೇ ಸಮಯದಲ್ಲಿ ಅನೇಕ ಕೆಲಸಗಳನ್ನು ಮಾಡಬೇಕಾಗಿರುವುದರಿಂದ ನೀವು ತೊಂದರೆಗೊಳಗಾಗುತ್ತೀರಿ ಆದರೆ ನೀವು ಸ್ವಭಾವತಃ ಕಿರಿಕಿರಿಯುಂಟುಮಾಡುವಿರಿ ಇದರಿಂದಾಗಿ ನಿಮ್ಮ ಕುಟುಂಬ ಸದಸ್ಯರು ಸಹ ತೊಂದರೆಗೊಳಗಾಗುತ್ತಾರೆ. ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ. ವ್ಯಾಪಾರಿಗಳು ಈ ದಿನ ಬಹಳಷ್ಟು ಲಾಭ ಮಾಡಬಹುದು. ನಿಮ್ಮ ಮನೆಯಲ್ಲಿ ದೊಡ್ಡ ಆರ್ಥಿಕ ಸಮಸ್ಯೆಯನ್ನು ನೀವು ಬಗೆಹರಿಸಬಹುದು.
ಧನು ರಾಶಿ
ಇಂದು ನಿಮಗೆ ಕೆಲವು ಕಾನೂನು ವಿಷಯಗಳಲ್ಲಿ ಯಶಸ್ಸಿನ ದಿನವಾಗಿರುತ್ತದೆ ಏಕೆಂದರೆ ನೀವು ಕೆಲವು ಪೂರ್ವಜರ ಆಸ್ತಿ ಸಂಬಂಧ ದೊಡ್ಡ ಯಶಸ್ಸು ಪಡೆಯಲಿದ್ದೀರಿ. ನಿಮ್ಮ ಯಾವುದೇ ವ್ಯವಹಾರವು ಸ್ಥಗಿತಗೊಂಡಿದ್ದರೆ, ನಿಮ್ಮ ಸ್ನೇಹಿತರೊಬ್ಬರ ಸಹಾಯದಿಂದ ಅದನ್ನು ಅಂತಿಮಗೊಳಿಸಬಹುದು. ನಿಮ್ಮ ಅತ್ತೆ-ಮಾವನ ಕಡೆಯ ಯಾರೊಬ್ಬರಿಂದ ಆರ್ಥಿಕ ಪ್ರಯೋಜನಗಳ ಪಡೆಯಬಹುದು. ಹಾಗೆ ಆರ್ಥಿಕ ಬಲಕ್ಕಾಗಿ ನೀವು ಹೊಸ ಆದಾಯದ ಮೂಲ ಹುಡುಕಬಹುದು.
ಮಕರ ರಾಶಿ
ವ್ಯಾಪಾರ ಮಾಡುವ ಜನರಿಗೆ ಇಂದು ಒಳ್ಳೆಯ ದಿನವಾಗಲಿದೆ. ನಿಮ್ಮ ದೀರ್ಘಾವಧಿಯ ಯೋಜನೆಗಳು ವೇಗವನ್ನು ಪಡೆಯುತ್ತವೆ. ಕೆಲಸದ ಸ್ಥಳಕ್ಕೆ ಸಂಬಂಧಿಸಿದ ಸಮಸ್ಯೆಯೊಂದು ಬಗೆಹರಿಯಲಿದೆ. ನಿಮ್ಮ ಆಲೋಚನೆಯಂತೆ ಕಲಸಗಳ ಮಾಡಿ. ವಾಹನ ಸಂಬಂಧಿ ಖರ್ಚು ಹೆಚ್ಚಾಗಲಿದೆ. ನೀವು ಯಾರಿಂದಾದರೂ ಹಣವನ್ನು ಎರವಲು ಪಡೆದಿದ್ದರೆ ಅವರಿಂದ ಒತ್ತಡ ಹೆಚ್ಚಾಗಬಹುದು. ಹಿಂದಿನ ಯಾವ ವಿಚಾರವಾಗಿ ನೀವು ತೆಗೆದುಕೊಂಡ ನಿರ್ಧಾರವನ್ನು ಮತ್ತೆ ಬದಲಾಯಿಸಬಹುದು. ನಿಮ್ಮ ದೊಡ್ಡ ಪ್ರಯತ್ನದಲ್ಲಿ ಸಣ್ಣ ಅಡೆತಡೆಯನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಅಕ್ಕಪಕ್ಕದ ಮನೆಯರಲ್ಲಿ ಇಂದು ಜಗಳ ಉಂಟಾಗಬಹುದು.
ಕುಂಭ ರಾಶಿ
ಇಂದು ನೀವು ಆರ್ಥಿಕ ಲಾಭ ಮಾಡುವ ದಿನವವಾಗಿದೆ. ನಿಮ್ಮ ಎಲ್ಲಾ ಯೋಜನೆಗಳಲ್ಲಿ ಧನಾತ್ಮಕ ಬದಲಾವಣೆಗಳ ನೋಡುತ್ತೀರಿ, ಸಂಗಾತಿಯ ಜೊತೆಗೆ ಮನಸ್ತಾಪವಿದ್ದರೂ ಕೊನೆಯಲ್ಲಿ ಸುಖಾಂತ್ಯ ನೋಡುವಿರಿ. ಕುಟುಂಬದ ಸದಸ್ಯರೊಬ್ಬರು ನಿಮಗೆ ಹಣಕಾಸಿನ ನೆರವು ನೀಡಲಿದ್ದಾರೆ. ವಾಹನ ಮಾಲಿಕರು ಲಾಭ ಮಾಡುತ್ತಾರೆ. ಪ್ರಾಣಿ ಪಕ್ಷಿಗಳಿಗೆ ಇಂದು ಆಹಾರ ನೀಡಿದರೆ ನಿಮ್ಮ ದಿನವು ಧನಾತ್ಮಕವಾಗಲಿದೆ. ಶುಭ ಕಾರ್ಯದಲ್ಲಿ ನೀವು ಭಾಗಿಯಾಗಬಹುದು. ಪ್ರಯಾಣದಿಂದ ಆಯಾಸ, ಅನಾರೋಗ್ಯ ಕೂಡ ಕಾಡಬಹುದು.
ಮೀನ ರಾಶಿ
ಮೀನ ರಾಶಿಯವರು ಈ ದಿನ ಶುಭಕರ ಲಾಭಗಳ ನೋಡಲಿದ್ದಾರೆ. ನಿಮ್ಮ ದೈನಂದಿನ ಕೆಲಸಕ್ಕೆ ಅಡ್ಡಿಯಾಗಿದ್ದ ಸಮಸ್ಯೆಯೊಂದು ನಿವಾರಣೆಯಾಗಲಿದೆ. ಬಹಳ ದಿನಗಳಿಂದ ಮನೆಗಾಗಿ ಖರೀದಿಸಬೇಕು ಎಂದುಕೊಂಡಿದ್ದ ವಸ್ತುವೊಂದನ್ನು ಖರೀದಿಸಲಿದ್ದೀರಿ, ಹೀಗಾಗಿ ನಿಮ್ಮ ಹಣಕಾಸು ವಿಚಾರದಲ್ಲಿ ಸ್ವಲ್ಪ ಒತ್ತಡ ಇರಬಹುದು. ನೀವು ಯಾರಿಗಾದರು ಹಣ ವಾಪಾಸು ನೀಡಬೇಕಿದ್ದರೆ ಈ ದಿನದಂದು ಪಾವತಿಸುವುದು ಒಳಿತು. ಆರೋಗ್ಯದಲ್ಲಿ ಸುಧಾರಣೆ ಇರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











