ದಿನ ಭವಿಷ್ಯ: ಏಪ್ರಿಲ್ 16ರಂದು ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?

ಶುಭ ದಿನ ಈ ದಿನ ದ್ವಾದಶ ರಾಶಿಗಳ ರಾಶಿಫಲ ನೋಡೋಣ:

ಮೇಷ ರಾಶಿ

ಇಂದು ನಿಮಗೆ ಒಳ್ಳೆಯ ದಿನವಾಗಿರಲಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಉತ್ಸಾಹ ಹೆಚ್ಚಾಗುವ ಕ್ಷಣ ಬರಲಿದೆ. ಹಾಗೆ ನಿಮ್ಮ ಪರವಾಗಿ ಅಥವಾ ಬೆಂಬಲವಾಗಿ ಒಬ್ಬರು ನಿಲ್ಲುತ್ತಾರೆ. ಮನೆಯಲ್ಲಿನ ಆರ್ಥಿಕ ಸಮಸ್ಯೆಗೆ ನೀವು ಪರಿಹಾರ ಕಂಡುಕೊಳ್ಳುತ್ತೀರಿ. ಹೆಚ್ಚು ಖರ್ಚು ಮಾಡುವ ಮುನ್ನ ಬಹಳ ಆಲೋಚಿಸುವುದು ಉತ್ತಮ. ನಿಮ್ಮ ದೈಹಿಕ ಸಮಸ್ಯೆಗಳನ್ನು ನಿರ್ಲಕ್ಷಿಸುವುದನ್ನು ಸಹ ನೀವು ತಪ್ಪಿಸಬೇಕಾಗುತ್ತದೆ. ನಿಮ್ಮ ಸಹೋದರ ಸಹೋದರಿಯರಿಗೆ ನಿಮ್ಮ ಸಂಪೂರ್ಣ ಬೆಂಬಲ ಸಿಗುತ್ತದೆ. ಯಾವುದೇ ಪ್ರಮುಖ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳುವುದನ್ನು ನೀವು ತಪ್ಪಿಸಬೇಕಾಗುತ್ತದೆ.

ವೃಷಭ ರಾಶಿ

ಇಂದು ನಿಮ್ಮ ಸುತ್ತಲಿನ ವಾತಾವರಣ ಆಹ್ಲಾದಕರವಾಗಿರುತ್ತದೆ. ನೀವು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಹಿರಿಯರಿಂದ ಸಲಹೆ ಪಡೆದು ಮಾಡುವುದು ಒಳ್ಳೆಯದು. ಹಣದ ವಿಚಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡಬೇಡಿ. ಕೆಲಸದಲ್ಲಿ ದಿನವು ಮಿಶ್ರಣವಾಗುವ ನಿರೀಕ್ಷೆಯಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಸಾಲೆಯುಕ್ತ ಆಹಾರ ತಪ್ಪಿಸಿ. ನಿಮ್ಮ ಮನಸ್ಸು ಯಾವುದೋ ವಿಷಯದ ಬಗ್ಗೆ ತೊಂದರೆಗೊಳಗಾಗುತ್ತದೆ. ನಿಮ್ಮ ಹಳೆಯ ತಪ್ಪುಗಳಿಂದಾಗಿ ಕೆಲಸದಲ್ಲಿ ನಿಂದನೆಯನ್ನು ಎದುರಿಸಬೇಕಾಗಬಹುದು. ತಂದೆ ತಾಯಿಗೆ ಗೌರವ ನೀಡುವುದು ಹಾಗೆ ಅವರ ಸೂಚನೆ ಪಾಲಿಸುವುದು ಉತ್ತಮ.

April-16-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಇಂದು ನಿಮಗೆ ಸಮಸ್ಯೆಗಳಿಂದ ತುಂಬಿದ ದಿನವಾಗಿರುತ್ತದೆ. ಕೆಲಸಕ್ಕೆ ಸಂಬಂಧಿಸಿದಂತೆ ಬಹಳಷ್ಟು ಒತ್ತಡಕ್ಕೆ ಒಳಗಾಗುತ್ತೀರಿ, ಮಕ್ಕಳ ಕಡೆಯಿಂದ ಖರ್ಚು ಹೆಚ್ಚಾಗಲಿದೆ. ಕೆಲಸದ ಸ್ಥಳದಲ್ಲಿ ದೊಡ್ಡ ಜವಾಬ್ದಾರಿ ಸಿಕ್ಕರೆ, ಕೆಲಸದ ಬಗ್ಗೆ ಕಿರಿಯರಿಂದ ಸಹಾಯ ಪಡೆಯಬಹುದು. ಹಣದ ವಿಷಯದಲ್ಲಿ, ದಿನವು ತುಂಬಾ ದುಬಾರಿಯಾಗಲಿದೆ. ನಿಮ್ಮ ಬಜೆಟ್ ಅಸಮತೋಲಿತವಾಗಿರಬಹುದು. ಸಂಗಾತಿಯೊಂದಿಗಿನ ಸಣ್ಣ ಭಿನ್ನಾಭಿಪ್ರಾಯ ಕೂಡ ದೊಡ್ಡದಾಗಬಹುದು. ಆರೋಗ್ಯದ ದೃಷ್ಟಿಯಿಂದ ಈ ದಿನ ಮನೆಯ ಹಿರಿಯ ಸದಸ್ಯರಲ್ಲಿ ತೊಡಕು ನೋಡಬಹುದು. ಹೂಡಿಕೆಗೆ ಇದು ಸೂಕ್ತ ಸಮಯವಲ್ಲ, ಹಾಗೆ ಹಣದ ವ್ಯವಹಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಿ.

ಕರ್ಕ ರಾಶಿ

ಇಂದು ನಿಮಗೆ ಮಿಶ್ರ ಫಲಿತಾಂಶ ಪಡೆಯುವ ದಿನ. ನಿಮ್ಮ ಉದ್ವೇಗದ ಸ್ವಭಾವದಿಂದಾಗಿ ನೀವು ತೊಂದರೆಗೊಳಗಾಗುತ್ತೀರಿ. ಹಣದ ವಿಷಯದಲ್ಲಿ ಈ ದಿನ ನಿಮಗೆ ತುಂಬಾ ಸವಾಲಾಗಿದೆ. ಹಣಕಾಸಿನ ಅಡೆತಡೆಗಳಿಂದಾಗಿ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕಚೇರಿಯಲ್ಲಿ ಜವಾಬ್ದಾರಿಗಳ ಹೊರೆ ನಿಮ್ಮ ಮೇಲೆ ಹೆಚ್ಚು ಇರುತ್ತದೆ. ನೀವು ಪ್ರವಾಸಕ್ಕೆ ಹೋಗಲು ಯೋಜಿಸಬಹುದು. ಕುಟುಂಬಸ್ಥರು ಶುಭ ಕಾರ್ಯ ಸಂಬಂಧ ಚರ್ಚೆಯಲ್ಲಿ ಹಾಗೆ ಹಣಕಾಸಿನ ಒಗ್ಗೂಡಿಸಲು ಮುಂದಾಗಬಹುದು. ನಿಮಗೆ ಬರಬೇಕಿದ್ದ ದೊಡ್ಡ ಮೊತ್ತವೊಂದು ಕೈ ಸೇರಬಹುದು. ವ್ಯಾಪಾರಿಗಳು ಲಾಭ ಮಾಡುವಂತಹ ದಿನವಿದು. ಸ್ನೇಹಿತರೊಬ್ಬರಿಂದ ನೋವಿನ ವಿಚಾರ ಕೇಳಬಹುದು.

ಸಿಂಹ ರಾಶಿ

ಇಂದು ನಿಮಗೆ ಮೋಜಿನ ದಿನವಾಗಿರುತ್ತದೆ. ಕುಟುಂಬದ ಯಾವುದೇ ಸದಸ್ಯರು ಉದ್ಯೋಗದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅದು ಕೂಡ ಪರಿಹಾರವಾಗುತ್ತದೆ. ನಿಮ್ಮ ಸಂಗಾತಿಗೆ ನೀವು ಅಚ್ಚರಿಯ ಉಡುಗೊರೆಯನ್ನು ತರಬಹುದು. ನೀವು ಯಾವುದೇ ಹಳೆಯ ಸಾಲವನ್ನು ಮರುಪಾವತಿಸಲು ಸಹ ಸಾಧ್ಯವಾಗುತ್ತದೆ. ನಿಮ್ಮ ಹಣಕಾಸಿನ ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಂಡರೆ, ಶೀಘ್ರದಲ್ಲೇ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗಬಹುದು. ಕಛೇರಿಯಲ್ಲಿ ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ಮನೆಯ ವಾತಾವರಣದಲ್ಲಿ ನೆಮ್ಮದಿ ಇರಲಿದೆ.

ಕನ್ಯಾ ರಾಶಿ

ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ದುರ್ಬಲ ದಿನವಾಗಿರುತ್ತದೆ. ನಿಮ್ಮ ಯಾವುದೇ ಹಳೆಯ ಸಮಸ್ಯೆಗಳು ಮತ್ತೆ ಕಾಢಬಹುದು. ಆಸ್ತಿಗೆ ಸಂಬಂಧಿಸಿದಂತೆ ನಿಮ್ಮ ಸಹೋದರ ಸಹೋದರಿಯರೊಂದಿಗೆ ನೀವು ವಿವಾದಕ್ಕೆ ಸಿಲುಕಬಹುದು. ಹಣದ ಪರಿಸ್ಥಿತಿ ಸುಧಾರಿಸಬಹುದು. ನಿಮಗೆ ಹಣ ಬರುವ ಸಾಧ್ಯತೆ ಇದೆ. ಆರೋಗ್ಯ ದುರ್ಬಲವಾಗಿರುತ್ತದೆ. ಕೆಲಸದ ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಲು ಸಲಹೆ ನೀಡಲಾಗಿದೆ. ಉದ್ಯಮಿಗಳು ತಮ್ಮ ವ್ಯವಹಾರವನ್ನು ಮುಂದುವರಿಸಲು ಯೋಜಿಸುತ್ತಿದ್ದರೆ ನಿಮ್ಮ ದಾರಿಯಲ್ಲಿ ದೊಡ್ಡ ಅಡಚಣೆ ಉಂಟಾಗಬಹುದು.

ತುಲಾ ರಾಶಿ

ಇಂದು ನಿಮಗೆ ಗೊಂದಲದಿಂದ ತುಂಬಿದ ದಿನವಾಗಿರುತ್ತದೆ. ಕೆಲಸದ ಬಗ್ಗೆ ಸಹೋದ್ಯೋಗಿಯಿಂದ ಸಲಹೆ ಪಡೆಯಬೇಕಾಗಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ನೀವು ಖರ್ಚು ಮಾಡಬೇಕಾಗುತ್ತದೆ. ನೀವು ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಆದರೆ ನಿಮ್ಮ ದಾರಿಯಲ್ಲಿ ದೊಡ್ಡ ಅಡಚಣೆಯಿದ್ದರೆ, ಈ ತಿಂಗಳು ನಿಮ್ಮ ಆ ಸಮಸ್ಯೆ ಬಗೆಹರಿಯಲಿದೆ. ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವವರಿಗೆ ಈ ತಿಂಗಳು ತುಂಬಾ ಅದೃಷ್ಟಕರವಾಗಿರುತ್ತದೆ. ಅವಿವಾಹಿತರಿಗೆ ಈ ಸಮಯದಲ್ಲಿ ಬಹಳ ಲಾಭವಾಗುವ ಸಾಧ್ಯತೆ ಇದೆ. ನಿಮ್ಮ ಕನಸಿನ ವಸ್ತುವೊಂದಕ್ಕೆ ಹಣ ಸಂಗ್ರಹಿಸುತ್ತಿದ್ದರೆ ಈ ದಿನ ಅದಕ್ಕೆ ಉತ್ತಮ ದಾರಿ ಸಿಗಲಿದೆ.

ವೃಶ್ಚಿಕ ರಾಶಿ

ರಾಜಕೀಯದಲ್ಲಿ ಕೆಲಸ ಮಾಡುವ ಜನರಿಗೆ ಇಂದು ಒಳ್ಳೆಯ ದಿನವಾಗಿರುತ್ತದೆ. ಇಂದು ನಿಮಗೆ ಹಣದ ವಿಷಯದಲ್ಲಿ ತುಂಬಾ ಅದೃಷ್ಟದ ದಿನ. ಕಚೇರಿಯಲ್ಲಿನ ಉನ್ನತ ಅಧಿಕಾರಿಗಳ ಸಹಾಯದಿಂದ ನಿಮ್ಮ ಯಾವುದೇ ಕಷ್ಟಕರವಾದ ಕಾರ್ಯವನ್ನು ಇಂದು ಪೂರ್ಣಗೊಳಿಸುತ್ತೀರಿ. ಮನೆಯ ವಿಚಾರವಾಗಿ ನೀವು ಖರ್ಚು ಮಾಡಬೇಕಾಗುತ್ತದೆ. ಇದರಿಂದ ನಿಮ್ಮ ಹಣಕಾಸು ಸ್ಥಿತಿ ಮತ್ತಷ್ಟು ಹದಗೆಡಬಹುದು. ನೀವು ಹೆಚ್ಚು ಚಿಂತೆ ಮಾಡುವುದು ಬಿಡುವುದು ಒಳ್ಳೆಯದು. ವ್ಯಾಪಾರ ಮಾಡುವುದಾದರೆ ನೀವು ತುಂಬಾ ಜಾಗರೂಕರಾಗಿರಬೇಕು. ನಿಮ್ಮ ಕಷ್ಟಗಳನ್ನು ಹೆಚ್ಚಿಸುವಂತಹ ಯಾವುದೇ ಕೆಲಸವನ್ನು ತರಾತುರಿಯಲ್ಲಿ ಮಾಡಬೇಡಿ.

ಧನು ರಾಶಿ

ಈ ದಿನವು ನಿಮಗೆ ಸಂತೋಷ ತರುವ ದಿನವಾಗಲಿದೆ, ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ನೋಡಬಹುದು. ನಿಮಗೆ ಸಿಕ್ಕಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸಿ. ಹೊಸ ಉದ್ಯೋಗವನ್ನು ಹುಡುಕಲು ಇದು ಸರಿಯಾದ ಸಮಯ. ಈ ಅವಧಿಯಲ್ಲಿ ವ್ಯಾಪಾರಸ್ಥರು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು, ನಿಮ್ಮ ಪ್ರಮುಖ ಕೆಲಸಗಳಿಗೆ ಅಡ್ಡಿ ಉಂಟಾಗಬಹುದು. ನಿಮ್ಮ ಯಾವುದೇ ಸಂಬಂಧಿಕರೊಂದಿಗೆ ಯಾವುದೇ ವಹಿವಾಟು ನಡೆಸುವುದನ್ನು ನೀವು ತಪ್ಪಿಸಬೇಕಾಗುತ್ತದೆ. ವೈವಾಹಿಕ ಜೀವನದಲ್ಲಿ ಸಣ್ಣ ಸಮಸ್ಯೆ ಕಾಡಬಹುದು.

ಮಕರ ರಾಶಿ

ಈ ದಿನ ಹಣಕಾಸಿನ ವಿಚಾರವಾಗಿ ಮನೆಯಿಂದ ನಿಮ್ಮ ಮೇಲೆ ಒತ್ತಡ ಹೆಚ್ಚಾಗಲಿದೆ. ನಿಮ್ಮ ಯಾವುದೇ ಕೆಲಸವು ದೀರ್ಘಕಾಲದವರೆಗೆ ಬಾಕಿ ಉಳಿದಿದ್ದರೆ, ಅದು ಪೂರ್ಣಗೊಳ್ಳಬಹುದು. ಈ ಸಮಯದಲ್ಲಿ ನಿಮಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ಅದರಲ್ಲೂ ಪಂಚೇಂದ್ರಿಯ ಅಥವಾ ತಲೆನೋವು ಸಂಬಂಧಿ ಸಮಸ್ಯೆ ಕಾಡಬಹುದು. ಸಣ್ಣ ಮಟ್ಟದ ವ್ಯಾಪಾರಸ್ಥರು ತಮ್ಮ ಬುದ್ದಿವಂತಿಕೆಯಿಂದ ಲಾಭ ಮಾಡುವ ದಿನವಾಗಿದೆ. ವಾಹನ ಸಂಬಂಧಿ ಖರ್ಚು ಹೆಚ್ಚಾಗಲಿದೆ. ದೂರ ಪ್ರಯಾಣಕ್ಕೂ ನೀವು ಮುಂದಾಗಬಹುದು.

ಕುಂಭ ರಾಶಿ

ಇಂದು ನಿಮಗೆ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ. ನೀವು ವಿವಾಹಿತರಾಗಿದ್ದರೆ ನಿಮ್ಮ ವೈವಾಹಿಕ ಜೀವನದ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು. ನಿಮ್ಮ ಸಂಗಾತಿಯ ಭಾವನೆಗಳನ್ನು ನಿರ್ಲಕ್ಷಿಸಬೇಡಿ. ಮಕ್ಕಳ ಭವಿಷ್ಯದ ಕುರಿತಾಗಿ ಇಂದು ಚಿಂತೆ ಕಾಡಬಹುದು. ನಿಮ್ಮ ಸಹೋದ್ಯೋಗಿಗಳಿಂದ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಮುಂದೆ ದೇವಾಲಯ ಭೇಟಿ ಸಂಬಂಧ ಇಂದು ಯೋಜನೆ ರೂಪಿಸಬಹುದು. ಯಾರಿಂದಾದರು ಅಮೂಲ್ಯವಾದ ವಸ್ತು ಪಡೆದಿದ್ದರೆ ಜೋಪಾನ ಮಾಡುವುದು ಉತ್ತಮ.

ಮೀನ ರಾಶಿ

ಇಂದು ನಿಮ್ಮ ಕೆಲಸದಲ್ಲಿನ ಅಡೆತಡೆಗಳಿಂದ ನೀವು ತೊಂದರೆಗೊಳಗಾಗುತ್ತೀರಿ. ಆದರೆ ದಿನದ ಅಂತ್ಯದಲ್ಲಿ ಎಲ್ಲಾ ಕೆಲಸವು ಸುಖಾಂತ್ಯವಾಗಲಿದೆ. ಈ ದಿನ ವೃತ್ತಿ ಬದುಕಿನಲ್ಲಿ ಹೆಚ್ಚು ಒತ್ತಡ ಇರಲಿದೆ. ಪಾಲುದಾರಿಕೆ ವ್ಯಾಪಾರ ಮಾಡುತ್ತಿರುವವರು ತುಂಬಾನೇ ಜಾಗ್ರತೆವಹಿಸಿ, ನೀವು ನಿಮ್ಮ ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಿ. ನಿಮ್ಮ ಹಣಕಾಸಿನ ನೆರವಿಗೆ ಆಪ್ತರೊಬ್ಬರು ಆಗಮಿಸಬಹುದು. ಆರೋಗ್ಯ ಸುಧಾರಿಸಲಿದೆ. ದುಬಾರಿ ವಸ್ತುವೊಂದನ್ನು ಖರೀದಿಸುವ ಸಾಧ್ಯತೆ ಇದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

April-16-daily-horoscope-prediction-for-12-zodiac-signs-in-kannada

Here is April 16 daily horoscope prediction for 12 zodiac signs read on...
Story first published: Wednesday, April 16, 2025, 7:01 [IST]
X
Desktop Bottom Promotion