Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ದಿನ ಭವಿಷ್ಯ: ಏಪ್ರಿಲ್ 14ರ ಈ ದಿನ ನಿಮಗೆ ಯಾವ ಲಾಭವಿದೆ ನೋಡಿ!
ಶುಭ ದಿನ ಈ ದಿನ ದ್ವಾದಶ ರಾಶಿಗಳ ರಾಶಿಫಲ ನೋಡೋಣ
ಮೇಷ ರಾಶಿ
ಈ ದಿನ ನಿಮ್ಮ ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮನ್ವಯವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಮನೆ ಮತ್ತು ಹೊರಗಿನ ಜನರ ಸಹಾಯ ಮತ್ತು ಬೆಂಬಲವನ್ನು ಪಡೆಯುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಹಣದ ವಿಚಾರವಾಗಿ ನಿಮ್ಮಲ್ಲಿ ಹೊಸ ರೀತಿಯ ಬದಲಾವಣೆಗಳ ನೋಡಬಹುದು. ಹಾಗೆ ಒಂದಿಷ್ಟು ಪ್ರೀತಿಯ ಜೀವನದಲ್ಲಿ ಸಿಡುಕು, ಒತ್ತಡ ಹೆಚ್ಚಾಗಬಹುದು. ದೂರ ಪ್ರಯಾಣದಂತಹ ಕೆಲಸದಿಂದ ದೂರ ಇರುವುದು ಉತ್ತಮ. ನಿಮ್ಮ ದೈನಂದಿನ ಕೆಲಸಕ್ಕೆ ಅಡ್ಡಿಯಾದ ವಿಚಾರವೊಂದು ಬಗೆಹರಿಯಲಿದೆ. ಬಹಳ ಸಮಯದಿಂದ ಬಯಸಿದ್ದ ವಸ್ತು ನಿಮ್ಮ ಕೈಸೇರಲಿದೆ. ಸ್ನೇಹಿತರ ಸಂಘದಿಂದ ಖರ್ಚು ಹೆಚ್ಚಾಗಲಿದೆ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಈ ದಿನವು ವೃತ್ತಿ ಮತ್ತು ವ್ಯವಹಾರ ಸಂಬಂಧಿ ಒತ್ತಡದಿಂದ ಕೂಡಿರಲಿದೆ. ಅಂದುಕೊಂಡಂತೆ ಕೆಲಸ ಕಾರ್ಯಗಳು ನಡೆಯದೆ ನಿಮಗೆ ಒತ್ತಡ ನೀಡಬಹುದು. ಹಾಗೆ ನಿಮ್ಮ ವೃತ್ತಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಬಹುನಿರೀಕ್ಷಿತ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಈ ಸಮಯದಲ್ಲಿ ನಿಮ್ಮ ಪ್ರಯತ್ನಗಳು ಮತ್ತು ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ನೀವು ನಿರೀಕ್ಷೆಗಿಂತ ಹೆಚ್ಚಿನ ಲಾಭ ಮಾಡುವ ನಿರೀಕ್ಷೆ ಇದೆ. ಪ್ರೇಮ ಸಂಬಂಧದಲ್ಲಿ ಚಿಂತನಶೀಲವಾಗಿ ಮುಂದುವರಿಯಿರಿ. ವೈಯಕ್ತಿಕ ಜೀವನದ ಕಡೆಗೂ ಗಮನವಿರಲಿ.

ಮಿಥುನ ರಾಶಿ
ಸಂಗಾತಿಯ ಭಾವನೆಗಳಿಗೆ ಬೆಲೆ ಕೊಡಿ. ಈ ಸಮಯದಲ್ಲಿ ನೀವು ತುಂಬಾ ಸಮತೋಲಿತವಾಗಿ ವರ್ತಿಸಬೇಕು. ಬಹಳ ಸಮಯ ಮನೆಯಿಂದ ಹೊರಗೆ ಕಳೆಯುವುದು ಉತ್ತಮವಲ್ಲ. ಹಣಕಾಸು ವಿಚಾರವಾಗಿ ಹಲವು ಸಮಸ್ಯೆ ಎದುರಿಸುತ್ತೀರಿ. ಬೇರೊಂದು ಕೆಲಸಕ್ಕಾಗಿ ಕೂಡಿ ಇಟ್ಟ ಹಣವನ್ನು ಮತ್ತೆ ಅನಗತ್ಯ ಖರ್ಚಿಗೆ ವ್ಯಯಿಸುತ್ತೀರಿ. ಮನೆಯಲ್ಲಿ ಕಿರಿ ಕಿರಿ ತರುವ ವಿಚಾರಗಳು ನಡೆಯಬಹುದು. ಸಂಬಂಧಿಕರ ಭೇಟಿಯ ಸಾಧ್ಯತೆ ಇದೆ. ತರಾತುರಿಯಲ್ಲಿ ಯಾವುದೇ ಒಪ್ಪಂದವನ್ನು ಅಂತಿಮಗೊಳಿಸಬೇಡಿ. ಆರೋಗ್ಯದ ಕಡೆಗೆ ಗಮನಹರಿಸಿ.
ಕರ್ಕ ರಾಶಿ
ಕರ್ಕ ರಾಶಿಯವರು ಈ ದಿನ ಸುತ್ತಾಟ, ಓಡಾಟದಲ್ಲಿ ಕಳೆಯಬೇಕಾಗಬಹುದು. ಇದರಿಂದ ಆಯಾಸ, ಅನಾರೋಗ್ಯದಂತಹ ಸಮಸ್ಯೆ ಕಾಡಬಹುದು. ಈ ದಿನ ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಮುಖ್ಯ ದಿನವಾಗಬಹುದು. ಏಕೆಂದರೆ ಇಷ್ಟು ವೃತ್ತಿ ಹಾಗೂ ವ್ಯವಹಾರಿಕವಾಗಿ ನೀವು ಎದುರಿಸಿದ್ದ ಸಮಸ್ಯೆಯೊಂದು ಬಗೆಹರಿಯಲಿದೆ. ಮನೆಗಾಗಿ ವಸ್ತು ಖರೀದಿಸುತ್ತೀರಿ. ಚಿನ್ನ ಬೆಳ್ಳಿ ಮೇಲಿನ ಹೂಡಿಕೆಯಿಂದ ನಿಮಗೆ ಲಾಭವಾಗಲಿದೆ. ಸ್ನೇಹಿತರು, ಸಂಗಾತಿ, ಪೋಷಕರ ಕಡೆಯಿಂದ ನಿಮಗೆ ಉತ್ತಮ ಬೆಂಬಲ ಸಿಗಲಿದೆ. ಹಾಗೆ ನಿಮ್ಮ ವಾಹನ ಖರೀದಿಯ ಆಸೆಗೆ ಈ ಸಮಯದಲ್ಲಿ ಬೆಂಬಲವಾಗಿ ಹೊಸ ಬದಲಾವಣೆ ನೋಡಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಮಂದಿ ಈ ದಿನದಂದು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುತ್ತವೆ ಆದರೆ ಹಣ ನಿಮ್ಮ ಕೈಯಿಂದ ಖರ್ಚು ಹೆಚ್ಚಾಗುಂತೆ ಮಾಡಲಿದೆ. ಸಂಪೂರ್ಣ ಜವಾಬ್ದಾರಿ ಮತ್ತು ಕಠಿಣ ಪರಿಶ್ರಮದಿಂದ ಕಲಸದಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಅವಿವಾಹಿತರು ಇಂದು ತಮ್ಮ ಮುಂದಿನ ಜೀವನದ ಕುರಿತಾದ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು. ವ್ಯಾಪಾರಿಗಳಿಗೆ ಬುದ್ದಿವಂತಿಕೆ ಹಾಗು ಚಾನಾಕ್ಷತನದಿಂದ ಲಾಭ ಮಾಡುವರು. ದೇವಾಲಯ ಭೇಟಿಯ ಸಾಧ್ಯತೆ ಹೆಚ್ಚಾಗಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಇಂದು ಒತ್ತಡದ ದಿನ ಅನುಭವಿಸಲಿದ್ದಾರೆ. ವೃತ್ತಿ ಜೀವನದಲ್ಲಿರುವವರು ಹೆಚ್ಚು ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ. ಹಾಗೆ ಬಹಳ ಸಮಯದಿಂದ ಅವರಲ್ಲಿದ್ದ ಗೊಂದಲವೊಂದು ನಿವಾರಣೆಯಾಗಲಿದೆ. ನೀವು ಸಕಾರಾತ್ಮಕವಾಗಿ ಚಿಂತಿಸಿ, ಶಾಂತ ಮನಸ್ಸಿನಿಂದ ಕೆಲಸದ ಕಡೆಗೆ ಗಮನಹರಿಸಿ. ದಿನದ ಎರಡನೇ ಭಾಗದಲ್ಲಿ ಇದ್ದಕ್ಕಿದ್ದಂತೆ ನೀವು ಕೆಲವು ಒಳ್ಳೆಯ ಸುದ್ದಿಗಳ ಪಡೆಯಬಹುದು. ಆಸ್ತಿಗೆ ಸಂಬಂಧಿಸಿದ ಕೆಲವು ವಿಷಯಗಳು ಬಗೆಹರಿಯುವ ಸಾಧ್ಯತೆಯಿದೆ. ವ್ಯಾಪಾರಿಗಳಲ್ಲಿ ನಷ್ಟದ ಸಾಧ್ಯತೆಗಳಿವೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ದಿನ ಹೆಚ್ಚು ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ. ಹಣಕಾಸಿನ ವಿಷಯಗಳಲ್ಲಿ ಯಾವುದೇ ಆತುರ ಮಾಡದೆ ನಿರ್ಧಾರ ತೆಗೆದುಕೊಳ್ಳಿ. ವಿಶೇಷವಾಗಿ ನೀವು ಇಂದು ಹಣಕ್ಕೆ ಸಂಬಂಧಿಸಿದ ವಹಿವಾಟುಗಳನ್ನು ಮಾಡಲಿದ್ದರೆ ಜಾಗರೂಕರಾಗಿರಿ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಇನ್ನಷ್ಟು ಬಲವಾಗಿರುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ನಿಮ್ಮ ಯಾವುದೇ ಪ್ರಮುಖ ಕೆಲಸವನ್ನು ಅರ್ಧಕ್ಕೆ ಬಿಡಬೇಡಿ. ಕೆಲಸದ ಸ್ಥಳದಲ್ಲಿ ಅನಗತ್ಯ ಚರ್ಚೆ, ವಾದಕ್ಕೆ ಮುಂದಾಗುವುದನ್ನು ಆದಷ್ಟು ನಿಯಂತ್ರಿಸಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಈ ದಿನ ಹಲವು ಕೆಲಸದಲ್ಲಿ ಅಡೆತಡೆಯ ಜೊತೆಗೆ ಒಂದಿಷ್ಟು ಲಾಭ ನೋಡಲಿದ್ದಾರೆ. ಹಣಕಾಸು ವಿಚಾರವಾಗಿ ಬಹಳ ಶುಭ ದಿನ. ನಿಮಗೆ ಬರಬೇಕಿದ್ದ ಬಾಕಿ ಹಣವು ಈ ದಿನ ಸಂದಾಯವಾಗಲಿದೆ. ಹಣದ ಸ್ಥಿತಿ ಚೆನ್ನಾಗಿರುವುದು ಮನದಲ್ಲಿ ಶಾಂತಿ ನೆಲೆಸುವಂತೆ ಮಾಡಲಿದೆ. ಕಚೇರಿಯ ವಾತಾವರಣವು ಸಕಾರಾತ್ಮಕವಾಗಿರುತ್ತದೆ. ನೀವು ಉನ್ನತ ಅಧಿಕಾರಿಗಳ ಬೆಂಬಲವನ್ನು ಸಹ ಪಡೆಯುತ್ತೀರಿ. ಆರೋಗ್ಯದ ದೃಷ್ಟಿಯಿಂದ ಸಣ್ಣ ಪುಟ್ಟ ವ್ಯತ್ಯಾಸಗಳ ನೋಡಬಹುದು. ವಿವಾಹಿತರಲ್ಲಿ ದಾಂಪತ್ಯ ಸಂಬಂಧಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಧನು ರಾಶಿ
ಆರ್ಥಿಕ ಸಮಸ್ಯೆವಿರುತ್ತದೆ ಹಾಗಂತ ತುಂಬಾ ಸಾಲ ಮಾಡಬೇಡಿ. ಇಲ್ಲವೆ ಯಾರಿಂದಲೂ ಹಣಕ್ಕಾಗಿ ಮನವಿ ಮಾಡಬೇಡಿ. ಉದ್ಯೋಗಿಗಳು ಬೇಡದ ವಿಷಯದ ಕಡೆಗೆ ಗಮನಹರಿಸುವ ಬದಲಿಗೆ ಪ್ರಮುಖ ಕೆಲಸ ಕಾರ್ಯದತ್ತ ಗಮನಹರಿಸಿ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ನಿಮ್ಮ ಕೆಲಸದ ಕಡೆಗೆ ಗಮನಹರಿಸದೆ ಬೇರೆಯವರ ಕೆಲಸದ ಕಡೆಗೆ ಗಮನಹರಿಸಲು ಹೋಗಬೇಡಿ. ನಿಮ್ಮ ಆದಾಯದಲ್ಲಿ ಹೆಚ್ಚಳ ಆಗುವ ಸಾಧ್ಯತೆ ಇದೆ. ವೈವಾಹಿಕ ಜಿವನ ಚೆನ್ನಾಗಿರಲಿದೆ.
ಮಕರ ರಾಶಿ
ಕೆಲಸದ ದೃಷ್ಟಿಯಿಂದ ಈ ದಿನ ನೀವು ತುಂಬಾ ಕಾರ್ಯನಿರತವಾಗಿರುತ್ತೀರಿ. ನಿಮ್ಮ ದಿನದ ಎಲ್ಲಾ ಯೋಜನೆಗಳನ್ನು ನೀವು ಮುಂಚಿತವಾಗಿ ಮಾಡಿದರೆ ಅದು ಉತ್ತಮವಾಗಿರುತ್ತದೆ. ಸಂಗಾತಿಯೊಮದಿಗೆ ಭಿನ್ನಾಭಿಪ್ರಾಯ ಉಂಟಾದರೆ ಕೋಪವನ್ನು ನಿಯಂತ್ರಿಸಿ. ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿದೆ. ನೀವು ಹಠಾತ್ ಹಣವನ್ನು ಪಡೆಯಬಹುದು. ಕೆಲಸದ ವಿಷಯದಲ್ಲಿ ಇಂದು ನಿಮಗೆ ಉತ್ತಮವಾಗಿರುತ್ತದೆ. ನಿಮ್ಮ ಆಲೋಚನೆಯಲ್ಲಿ ಬದಲಾವಣೆ ತರುವ ಮೂಲಕ ಹಲವು ರೀತಿಯ ಲಾಭ ಮಾಡುವ ಅವಕಾಶವಿದೆ.
ಕುಂಭ ರಾಶಿ
ಕುಂಭ ರಾಶಿ ಮಂದಿಗೆ ಇಂದು ಮಿಶ್ರ ಫಲವಿದೆ. ನೀವು ಅಂದುಕೊಂಡ ಕೆಲಸ ಸಮಯದಲ್ಲಿ ಸರಿಯಾಗಿ ಮುಗಿದರೂ ಅದರಿಂದ ನಿಮಗೆ ಸಂತೋಷ ಇರುವುದಿಲ್ಲ. ಹಾಗೆ ಕಾಂಟ್ರಾಕ್ಟ್ ಕೆಲಸಗಾರರು ಎಚ್ಚರಿಯಿಂದ ಹೆಜ್ಜೆ ಇಡಿ. ವಿವಾಹ ಸಂಬಂಧಗಳು ಈ ಸಮಯದಲ್ಲಿ ಬಿರುಕಿಗೆ ಕಾರಣವಾಗಬಹುದು. ನಿಮ್ಮ ಮನೆಯಲ್ಲಿದ್ದ ವಸ್ತುವೊಂದನ್ನು ಮಾರಾಟ ಮಾಡಬಹುದು. ಮಕ್ಕಳ ಸಾಧನೆ ಖುಷಿ ನೀಡಲಿದೆ. ವಾಹನ ಸಂಬಂಧಿ ಸಾಲ ಮರುಪಾವತಿ ಮಾಡಬಹುದು. ದೊಡ್ಡ ನಿರ್ಧಾರಗಳನ್ನು ಪುನಃ ಆಲೋಚಿಸಿ ತೆಗೆದುಕೊಳ್ಳುವುದು ಉತ್ತಮ.
ಮೀನ ರಾಶಿ
ಮೀನ ರಾಶಿಯ ಮಂದಿ ಈ ಸಮಯದಲ್ಲಿ ಬಹಳ ಜಾಗರುಕತೆಯಿಂದ ಹೆಜ್ಜೆ ಇಡಿ. ಚಿಲ್ಲರೆ ವ್ಯಾಪಾರಿಗಳಿಗೆ ಅಧಿಕ ಲಾಭದ ದಿನವಾಗಬಹುದು. ಅದರಲ್ಲೂ ಹೋಟೆಲ್, ಕ್ಯಾಂಟೀನ್, ದಿನಸಿ ವ್ಯಾಪಾರಿಗಳು ಲಾಭ ಮಾಡುವ ದಿನವಿದು. ನಿಮ್ಮ ಕನಸಿನ ಆಲೋಚನೆಗೆ ದಾರಿ ಸಿಗಲಿದೆ. ಕೆಲಸದ ಒತ್ತಡದಿಂದ ವಿರಾಮ ಪಡೆಯಲು ಮುಂದಾಗಿ. ಖರ್ಚುಗಳ ಮೇಲೆ ನೀವು ಗಮನವಿಡಿ. ದೊಡ್ಡ ನಿರ್ಧಾರಕ್ಕೂ ಮುನ್ನ ಸಲಹೆ ಪಡೆದುಕೊಳ್ಳಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










