Latest Updates
-
ಶನಿ-ಮಂಗಳನ ಚಲನೆಯಿಂದ ದ್ವಿ ದ್ವಾದಶ ಯೋಗ: ಈ ರಾಶಿಯವರಿಗೆ ಆಶೀರ್ವಾದ, ಹಣ ಲಾಭದ ನಿರೀಕ್ಷೆ -
ವಿಶ್ವದ ದುಬಾರಿ ಬಣ್ಣ ಇದು: 1 ಗ್ರಾಮ್ಗೆ ಬರೋಬ್ಬರಿ 80 ಸಾವಿರ ರೂ.! -
ಎಷ್ಟೇ ಹಠಮಾರಿ ಕಲೆಗಳಿದ್ದರೂ ಚಿಟಿಕೆಯಲ್ಲಿ ಮಾಯ! ಇಲ್ಲಿದೆ ಹಣ ಉಳಿಸುವ ಸಿಂಪಲ್ ಉಪಾಯ -
ಊಟ, ಮುದ್ದೆ ಸವಿಯೋಕೆ ಈ ರೀತಿ ಮಟನ್ ಸಾಂಬಾರ್ ಮಾಡಿ! -
10 ನಿಮಿಷದ ಸ್ನ್ಯಾಕ್ಸ್ ರೆಸಿಪಿ.. 1 ಕಪ್ ರವೆ, 1 ಬಾಳೆಹಣ್ಣು ಇದ್ದರೆ ಸಾಕು! 2 ದಿನ ಇಟ್ಟು ತಿನ್ನಬಹುದು -
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ -
ನಿಶಕ್ತಿ, ಬಲಹೀನತೆ ಇದ್ರೆ ವಾರದಲ್ಲಿ ಈ 2 ಮುದ್ದೆ ತಿನ್ನಿ ಸಾಕು -
ಹೆಸರುಬೇಳೆ ಬಳಸಿ ಪಕೋಡ ಮಾಡಿ ಸವಿಯಿರಿ! ಇಲ್ಲಿವೆ ಶೆಫ್ ಸ್ಟೈಲ್ನ ಈ 2 ಸಿಂಪಲ್ ವಿಧಾನಗಳು -
ಮೀನ ರಾಶಿಯಲ್ಲಿ ಶುಕ್ರ-ಚಂದ್ರನ ಸಮ್ಮಿಲನ; ಅಪರೂಪದ ಕಲಾತ್ಮಕ ಯೋಗ ಸೃಷ್ಟಿ! -
ಬೇಕರಿ ರುಚಿಯ ಆಪಲ್ ಕೇಕ್ ಥಟ್ ಅಂತ ಮನೆಯಲ್ಲಿ ಮಾಡಿ! ಇಲ್ಲಿದೆ ಸುಲಭದ ವಿಧಾನ
ಏಪ್ರಿಲ್ 13ರ ಈ ದಿನ ನಿಮ್ಮ ರಾಶಿಫಲ ಹೇಗಿದೆ?
ವೈದಿಕ ಶಾಸ್ತ್ರದ ಪ್ರಕಾರ ಏಪ್ರಿಲ್ 13ರ ರಾಶಿ ಫಲ ಯಾವ ರೀತಿ ಇದೆ ನೋಡೋಣ:
ಮೇಷ ರಾಶಿ
ಈ ದಿನ ನಿಮಗೆ ಸೌಕರ್ಯಗಳು ಮತ್ತು ಐಷಾರಾಮಿ ಜೀವನ ನೋಡಬಹುದು. ಈ ದಿನ ಮನೋರಂಜನಾ ದಿನವಾಗಿ ಕಳೆಯಬಹುದು. ಪ್ರವಾಸ, ಸಿನಿಮಾ ಕಡೆ ನಿಮ್ಮ ಒಲವು ಇರಬಹುದು. ನೀವು ಆಲೋಚಿಸಿರುವಂತೆ ಲಾಭದಾಯಕ ದಿನವನ್ನು ನೀವು ನೋಡಬಹುದು. ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಸಂದಿಗ್ಧತೆ ಇದ್ದರೆ ಈ ಸಮಯದಲ್ಲಿ ನಿಮ್ಮ ತೊಂದರೆಗಳು ದೂರವಾಗುತ್ತವೆ. ನೀವು ಕೆಲಸವನ್ನು ಆನಂದಿಸುವಿರಿ. ನಿಮ್ಮ ಭವಿಷ್ಯಕ್ಕಾಗಿ ಸ್ವಲ್ಪ ಹಣವನ್ನು ಉಳಿಸಲು ಸಹ ನೀವು ಯೋಜಿಸಬಹುದು. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಅಂತರವಿದ್ದರೆ ಅದು ಕೊನೆಗೊಳ್ಳುತ್ತದೆ. ಬಹಳ ದಿನದಿಂದ ನೀವು ಕೀಲು, ಮೂಳೆಗೆ ಸಂಬಂಧಿಸಿದ ಸಮಸ್ಯೆಗೆ ತುತ್ತಾಗಿದ್ದರೆ ಚಿಕಿತ್ಸೆಗೆ ಮುಂದಾಗುವುದು ಉತ್ತಮ.
ವೃಷಭ ರಾಶಿ
ಇಂದು ನಿಮಗೆ ಲಾಭದಾಯಕ ದಿನವಾಗಿರುತ್ತದೆ. ನಿಮ್ಮ ವ್ಯವಹಾರದಲ್ಲಿ ಪಾಲುದಾರಿಕೆಗೆ ಮುಂದಾದರೆ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗಬಹುದು. ಹಣ ಹೂಡಿಕೆ ಮತ್ತು ಉಳಿತಾಯ ಮಾಡುವ ಕುರಿತು ಆಲೋಚಿಸಬೇಕು. ಸಾಲ ನೀಡುವ ಕಾರ್ಯಕ್ಕೆ ಅಥವಾ ಹಣದಿಂದ ದೊಡ್ಡ ವಸ್ತು ಖರೀದಿಸಲು ಮುಂದಾಗಬೇಡಿ, ಇದರಿಂದ ಕಷ್ಟಕ್ಕೆ ಒಳಗಾಗಬಹುದು. ಮಕ್ಕಳ ವಿದ್ಯಾಭ್ಯಾಸ ಸಂಬಂಧ ಚಿಂತೆ ಕಾಡಬಹುದು. ಈ ದಿನ ಪ್ರಶಾಂತತೆ ಇರಲಿದೆ. ಹಾಗೆ ವಿಶ್ರಾಂತಿಗೆ ನೀವು ಮುಂದಾಗುತ್ತೀರಿ. ನೀವು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದರೆ ಕುಟುಂಬ ಸದಸ್ಯರಲ್ಲಿ ಪ್ರೀತಿ ಮತ್ತು ಒಗ್ಗಟ್ಟು ಇರುತ್ತದೆ.

ಮಿಥುನ ರಾಶಿ
ಇಂದು ನಿಮಗೆ ಆರೋಗ್ಯದ ದೃಷ್ಟಿಯಿಂದ ದುರ್ಬಲ ದಿನವಾಗಿರುತ್ತದೆ ಏಕೆಂದರೆ ನೀವು ಕೆಲಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೀರಿ. ಕೌಟುಂಬಿಕ ಸಮಸ್ಯೆಗಳು ಮತ್ತೆ ಉದ್ಭವಿಸಬಹುದು, ಅದು ನಿಮಗೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ. ಹಿರಿಯ ಸದಸ್ಯರು ನಿಮಗೆ ಸಾಕಷ್ಟು ಸಹಾಯ ಮಾಡುತ್ತಾರೆ. ನಿಮ್ಮ
ಮನಸ್ಸಿನಲ್ಲಿ ನಡೆಯುತ್ತಿರುವ ಗೊಂದಲಗಳ ಬಗೆಹರಿಸಿಕೊಳ್ಳಿ. ಇಂದು ನೀವು ಮಕ್ಕಳ ಶಿಕ್ಷಣದ ಬಗ್ಗೆ ಚಿಂತಿಸುವಿರಿ. ನಿಮ್ಮ ಆರೋಗ್ಯವು ದುರ್ಬಲವಾಗಿ ಉಳಿಯುವ ಸಾಧ್ಯತೆಯಿದೆ.
ಕರ್ಕ ರಾಶಿ
ಇಂದು ನೀವು ಹೊಸ ಮನೆ, ಅಂಗಡಿ ಇತ್ಯಾದಿಗಳನ್ನು ಖರೀದಿಸುವ ಕುರಿತು ಆಲೋಚಿಸಿದ್ದರೆ ಈ ದಿನದಲ್ಲಿ ಉತ್ತಮ ಪ್ರಗತಿ ನೋಡಬಹುದು. ನೀವು ಈ ದಿನ ಯಾವ ಕೆಲಸವನ್ನು ಕೈಗೊಂಡರೂ, ಅದರಲ್ಲಿ ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ತಾಳ್ಮೆಯಿಂದ ವರ್ತಿಸಿ. ನಿಮ್ಮ ಒಳ್ಳೆಯ ಕೆಲಸಗಳು ನಿಮ್ಮನ್ನು ಉತ್ತಮ ಆಲೋಚನೆಯ ಕಡೆಗೆ ಕರೆದೊಯ್ಯಲಿದೆ. ಇದರಿಂದ ನಿಮ್ಮ ಗೌರವ ಹೆಚ್ಚಾಗಲಿದೆ. ಹಣದ ವಿಚಾರವಾಗಿ ನಿಮ್ಮ ಯಾವುದಾದರು ಕೆಲಸ ಅರ್ಧಕ್ಕೆ ನಿಂತಿದ್ದರೆ ಇಂದು ಪೂರ್ಣ ಮಾಡಬಹುದು. ಆರೋಗ್ಯದಲ್ಲಿನ ಏರಿಳಿತವು ನಿಮ್ಮಲ್ಲಿ ಆತ್ಮವಿಶ್ವಾಸ ಕುಂದುವಂತೆ ಮಾಡಬಹುದು.
ಸಿಂಹ ರಾಶಿ
ಇಂದು ನಿಮಗೆ ಅತ್ಯಂತ ಫಲಪ್ರದವಾದ ದಿನ. ನಿಮ್ಮ ಕೆಲಸ ಕಾರ್ಯಗಳು ಬಹಳ ಸುಲಭವಾಗಿ ಮುಗಿಯುವ ಹಾಗೆ ಎಲ್ಲಾ ಕೆಲಸಗಳಲ್ಲಿ ನಿಮ್ಮ ಪರವಾದ ಒಲವು ಇರಲಿದೆ. ನಿಮ್ಮ ವೃತ್ತಿಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಸಹ ದೂರವಾಗುತ್ತವೆ. ಸ್ನೇಹಿತರಿಂದ ಉತ್ತಮ ಹೂಡಿಕೆ ಯೋಜನೆ ಸಿಗಬಹುದು, ಆದರೆ ನಿಮ್ಮ ತಾಯಿಗೆ ನೀಡಿದ ಭರವಸೆಯನ್ನು ಸಮಯಕ್ಕೆ ಸರಿಯಾಗಿ ಪೂರೈಸಬೇಕಾಗುತ್ತದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ.
ಕನ್ಯಾ ರಾಶಿ
ಇಂದು ನಿಮಗೆ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ. ರಾಜಕೀಯದತ್ತ ಸಾಗುತ್ತಿರುವ ಜನರು ಸ್ವಲ್ಪ ಬುದ್ಧಿವಂತಿಕೆಯಿಂದ ಮುಂದುವರಿಯಬೇಕಾಗುತ್ತದೆ. ನೀವು ಯಾರಿಗೂ ಬೇಡದ ಸಲಹೆ ನೀಡುವುದನ್ನು ತಪ್ಪಿಸಬೇಕು. ಅತಿಯಾದ ಕೆಲಸಕ್ಕೆ ವಿರಾಮ ನೀಡಿ ವಿಶ್ರಾಂತಿಯ ಕಡೆ ಗಮನವಿಡಿ. ಇತರರ ಸಲಹೆಯ ಮೇರೆಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಸಂಗಾತಿಯೊಂದಿಗಿನ ಸಂಬಂಧವು ಸುಧಾರಿಸುತ್ತದೆ. ಇಂದು ನಿಮ್ಮ ಪ್ರೀತಿಪಾತ್ರರು ನಿಮಗಾಗಿ ವಿಶೇಷವಾದದ್ದನ್ನು ಮಾಡಬಹುದು.
ತುಲಾ ರಾಶಿ
ಇಂದು ನೀವು ಹಣದ ಬಗ್ಗೆ ಯೋಜನೆಗಳನ್ನು ರೂಪಿಸುವ ದಿನವಾಗಿರುತ್ತದೆ. ನೀವು ಯಾರಿಂದಲೂ ಹಣವನ್ನು ಸಾಲ ಪಡೆಯುವುದನ್ನು ತಪ್ಪಿಸಬೇಕು. ವಾಹನಗಳನ್ನು ಎಚ್ಚರಿಕೆಯಿಂದ ಬಳಸಬೇಕು. ನಿಮಗೆ ಪ್ರಿಯವಾದದ್ದನ್ನು ಕಳೆದುಕೊಂಡಿದ್ದರೆ, ಅದನ್ನು ಮರಳಿ ಪಡೆಯಬಹುದು. ನೀವು ವ್ಯವಹಾರದಲ್ಲಿ ಪಾಲುದಾರಿಕೆಯನ್ನು ಮಾಡಿಕೊಂಡರೆ, ನಿಮ್ಮ ವ್ಯವಹಾರವು ತುಂಬಾ ಚೆನ್ನಾಗಿ ನಡೆಯುತ್ತದೆ. ನಿಮ್ಮ ಮನೆಯ ಶಾಂತಿಯನ್ನು ಕಾಪಾಡಿಕೊಳ್ಳಲು ನಿಮ್ಮ ನಡವಳಿಕೆಯಲ್ಲಿ ಸೌಮ್ಯವಾಗಿರಬೇಕು.
ವೃಶ್ಚಿಕ ರಾಶಿ
ಇಂದು ನಿಮಗೆ ಮಿಶ್ರ ಫಲ ನೋಡಬಹುದು. ಈ ದಿನ ಆರಂಭದಲ್ಲಿ ಆದಾಯ ಹೆಚ್ಚಾಗಿದ್ದರು ಖರ್ಚು ಕೂಡ ಹೆಚ್ಚಾಗುತ್ತದೆ. ನಿಮ್ಮ ಆದಾಯ ಮತ್ತು ಖರ್ಚಿನ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ನಿಮಗೆ ಉತ್ತಮವಾಗಿರುತ್ತದೆ. ಹೊಸ ಕೆಲಸ ಮಾಡುವ ಬಯಕೆ ನಿಮ್ಮಲ್ಲಿ ಮೂಡಬಹುದು. ನಿಮ್ಮ ಮಕ್ಕಳಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಎಲೆಕ್ಟ್ರಾನಿಕ್ಸ್ ಅಲಂಕಾರಿಕ ವಸ್ತುಗಳು ಇತ್ಯಾದಿ ವ್ಯಾಪಾರ ಮಾಡುವವರಿಗೆ ಇಂದು ಲಾಭದಾಯಕ ದಿನವಾಗಿದೆ. ನಿಮ್ಮ ಹಣಕಾಸಿನ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಮನೆಯ ಹಿರಿಯ ಸದಸ್ಯರ ಆರೋಗ್ಯದ ಕಡೆಗೆ ಗಮನವಿಡಿ.
ಧನು ರಾಶಿ
ಇಂದು ನೀವು ಅನಗತ್ಯ ಜಗಳಗಳು ಮತ್ತು ತೊಂದರೆಗಳಿಂದ ದೂರ ಇರುವುದು ಬಹಳ ಉತ್ತಮ. ಅದರಲ್ಲೂ ವಾಹನ ಸವಾರರು ಬಹಳ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಹೂಡಿಕೆ ಬಗ್ಗೆ ಮತ್ತೆ ಪರಿಶೀಲನೆ ಅಗತ್ಯ. ವ್ಯಾಪಾರಿಗಳಲ್ಲಿ ಈ ದಿನ ಬುದ್ಧಿವಂತಿಕೆ ಇದ್ದರೆ ಲಾಭ ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಎಲ್ಲಾ ಕೆಲಸಕ್ಕೂ ಬೆಂಬಲವಾಗಿ ನಿಲ್ಲಬಹುದು. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ ಮತ್ತು ನಿಮ್ಮ ಮಕ್ಕಳ ಬಗ್ಗೆ ನೀವು ತುಂಬಾ ಹೆಮ್ಮೆಪಡುತ್ತೀರಿ. ಅನಗತ್ಯ ವಸ್ತುಗಳಿಗಾಗಿ ಖರ್ಚು ಮಾಡಬೇಕಾಗಬಹುದು. ಈ ದಿನ ಸ್ನೇಹಿತರ ಸಂಘದಿಂದ ಅಂತರ ಕಾಪಾಡಿಕೊಳ್ಳಿ.
ಮಕರ ರಾಶಿ
ಇಂದು ನಿಮಗೆ ಸಾಮಾನ್ಯ ದಿನವಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಸೋಮಾರಿತನವನ್ನು ತಪ್ಪಿಸಬೇಕಾಗುತ್ತದೆ. ನಿಮ್ಮ ಕುಟುಂಬ ಸದಸ್ಯರ ಸಮಸ್ಯೆಗಳನ್ನು ಆಲಿಸಲು ಸಹ ನೀವು ಸಮಯ ತೆಗೆದುಕೊಳ್ಳುತ್ತೀರಿ. ನೀವು ಸಣ್ಣಪುಟ್ಟ ಕೆಲಸಗಳಲ್ಲಿ ನಿರತರಾಗಿರುತ್ತೀರಿ. ನಿಮ್ಮ ಹಿಂದಿನ ತಪ್ಪುಗಳಿಂದ ನೀವು ಕಲಿಯಬೇಕು. ನಿಮ್ಮ ಯಾವುದೇ ವಹಿವಾಟು ನಿಮಗೆ ಸಮಸ್ಯೆಯಾಗಬಹುದು. ಮಕ್ಕಳು ಕೆಲಸದ ನಿಮಿತ್ತ ಎಲ್ಲೋ ಹೊರಗೆ ಹೋಗಬಹುದು. ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.
ಕುಂಭ ರಾಶಿ
ಇಂದು ನೀವು ನಿಮ್ಮ ಮಾತು ಮತ್ತು ನಡವಳಿಕೆಯಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಇತರರ ಸಲಹೆಯ ಮೇರೆಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಸಂಗಾತಿಯೊಂದಿಗಿನ ಸಂಬಂಧವು ಸುಧಾರಿಸುತ್ತದೆ. ಇಂದು ಉದ್ಯೋಗಿಗಳಿಗೆ ತುಂಬಾ ಬಿಡುವಿಲ್ಲದ ದಿನವಾಗಿರುತ್ತದೆ. . ಇಂದು ನೀವು ಹಣ ಸಂಪಾದಿಸಲು ಉತ್ತಮ ಅವಕಾಶವನ್ನು ಪಡೆಯುವ ಬಲವಾದ ಸಾಧ್ಯತೆಯಿದೆ.
ಮೀನ ರಾಶಿ
ಇಂದು ಕೆಲಸದ ಸ್ಥಳದಲ್ಲಿ ನಿಮ್ಮ ಉತ್ತಮ ಚಿಂತನೆಯಿಂದ ನಿಮಗೆ ಲಾಭವಾಗುತ್ತದೆ. ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳಿಸುವಲ್ಲಿ ಸಮಸ್ಯೆ ಎದುರಾಗಬಹುದು. ನೀವು ಹೊಸ ವಾಹನ ಇತ್ಯಾದಿಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ ನಿಮಗೆ ಯಶಸ್ಸು ಸಿಗಬಹುದು. ನಿಮ್ಮ ಕಣ್ಣುಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಕೆಲಸದ ಕಾರಣದಿಂದ ದೂರ ಪ್ರಯಾಣ ಮಾಡುವಾಗ ಎಚ್ಚರ ಇರಲಿ. ವ್ಯಾಪಾರಿಗಳಿಗೆ ಮಿಶ್ರ ದಿನವಿದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











