ದಿನ ಭವಿಷ್ಯ: ಏಪ್ರಿಲ್ 12ರ ಹನುಮ ಜಯಂತಿ ದಿನ ನಿಮ್ಮ ಭವಿಷ್ಯದಲ್ಲಿ ಏನಿದೆ?

ವೈದಿಕ ಶಾಸ್ತ್ರದ ಪ್ರಕಾರ ಏಪ್ರಿಲ್ 12ರ ರಾಶಿ ಫಲ ಯಾವ ರೀತಿ ಇದೆ ನೋಡೋಣ:

ಮೇಷ ರಾಶಿ

ಈ ದಿನ ನಿಮಗೆ ಸೌಕರ್ಯಗಳು ಮತ್ತು ಐಷಾರಾಮಿ ವಸ್ತುಗಳ ಪಡೆಯುವ ಲಾಭವಿದೆ. ನಿಮ್ಮ ಮನೆಯಲ್ಲಿ ನಿಮ್ಮಲ್ಲಿನ ದೊಡ್ಡ ಸಮಸ್ಯೆಗೆ ಪರಿಹಾರ ಸಿಗಲಿದೆ. ಹಣ ಖರ್ಚು ಮಾಡುತ್ತೀರಿ. ಸಂಬಂಧಿಕರ ಕಷ್ಟಕ್ಕೆ ನೆರವಾಗುವ ಮೂಲಕ ಅವರಲ್ಲಿ ಸಂತೋಷ ಇರಲು ಕಾರಣರಾಗುತ್ತೀರಿ. ವ್ಯಾಪಾರ, ವ್ಯವಹಾರದಲ್ಲೂ ಈ ದಿನ ನಿಮ್ಮ ಪರವಾದ ಒಲವು ನೋಡಬಹುದು. ಹಣ ಉಳಿತಾಯ ಮಾಡುವ ಕಡೆಗೂ ನೀವು ಗಮನವಿಡಿ. ಸಾಧ್ಯವಾದಷ್ಟು ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ಎಚ್ಚರಿಕೆಯಿಂದ ನಿಮ್ಮ ಕೆಲಸಗಳ ಪೂರೈಸಿ. ಸಂಬಂಧಿಕರ ಭೇಟಿಯಿಂದ ನಿಮ್ಮಲ್ಲಿ ಹೊಸ ವಿಚಾರವೊಂದು ಮುನ್ನಲೆಗೆ ಬರಬಹುದು. ಆರೋಗ್ಯವು ಉತ್ತಮವಾಗಿರುತ್ತದೆ .

ವೃಷಭ ರಾಶಿ

ಇಂದು ನಿಮಗೆ ಲಾಭದಾಯಕ ದಿನವಾಗಿರುತ್ತದೆ. ನಿಮ್ಮ ವ್ಯವಹಾರದಲ್ಲಿ ಯಾರೊಂದಿಗಾದರೂ ಪಾಲುದಾರಿಕೆ ಮಾಡಿಕೊಳ್ಳುವ ಮೊದಲು ನೀವು ಎಚ್ಚರಿಕೆಯಿಂದ ಯೋಚಿಸಬೇಕು. ಕೆಲವು ದಿನಗಳಿಂದ ಮನೆಯಲ್ಲಿ ವಾತಾವರಣವು ಉತ್ತಮವಾಗಿಲ್ಲದಿದ್ದರೆ, ಇಂದು ದೊಡ್ಡ ಸುಧಾರಣೆಯನ್ನು ಕಾಣಬಹುದು. ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ತೊಡೆದುಹಾಕಲು ನೀವು ನಿಮ್ಮ ದೈನಂದಿನ ದಿನಚರಿಯನ್ನು ಬದಲಾಯಿಸಬೇಕಾಗುತ್ತದೆ. ಇಂದು ನಿಮ್ಮ ಪ್ರೀತಿಪಾತ್ರರು ನಿಮಗಾಗಿ ವಿಶೇಷವಾದದ್ದನ್ನು ಮಾಡಬಹುದು. ವಾಹನ ಚಾಲಕರು ಎಚ್ಚರಿಕೆಯಿಂದ ಇರುವುದು ಉತ್ತಮ.

April-12-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಇಂದು ನಿಮಗೆ ಆರೋಗ್ಯದ ದೃಷ್ಟಿಯಿಂದ ದುರ್ಬಲ ದಿನವಾಗಿರುತ್ತದೆ. ಏಕೆಂದರೆ ನೀವು ಕೆಲಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೀರಿ. ಇದು ಒತ್ತಡಕ್ಕೆ ಕಾರಣವಾಗಲಿದೆ. ಹಾಗೆ ಮಾನಸಿಕ ನೆಮ್ಮದಿ ಹಾಳು ಮಾಡಬಹುದು. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ ಇಲ್ಲದಿದ್ದರೆ ನೀವು ದೊಡ್ಡ ತೊಂದರೆಗೆ ಸಿಲುಕಬಹುದು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ನಿಮ್ಮ ಮನಸ್ಸಿನಲ್ಲಿ ನಡೆಯುತ್ತಿರುವ ಗೊಂದಲಗಳ ಬಗ್ಗೆ ನಿಮ್ಮ ಸಹೋದರರೊಂದಿಗೆ ಮಾತನಾಡಬೇಕಾಗುತ್ತದೆ, ಇದು ನಿಮಗೆ ಸಮಸ್ಯೆಗಳಿಂದ ಹೆಚ್ಚಿನ ಮಟ್ಟಿಗೆ ಪರಿಹಾರವನ್ನು ನೀಡುತ್ತದೆ. ಸ್ನೇಹಿತರಿಂದ ಹಣಕಾಸಿನ ನೆರವು ಪಡೆಯಬಹುದು.

ಕರ್ಕ ರಾಶಿ

ಇಂದು ನೀವು ಹೊಸ ಮನೆ, ಅಂಗಡಿ ಇತ್ಯಾದಿಗಳ ಕುರಿತು ಹಾಗೆ ಹೊಸ ಉದ್ಯೋಗದ ಕುರಿತು ಆಲೋಚಿಸುವ ದಿನವಾಗಿರಲಿದೆ, ಇದಲ್ಲಿ ಧನಾತ್ಮಕ ಫಲಿತಾಂಶ ಕೂಡ ನಿಮಗೆ ಸಿಗಲಿದೆ. ಕೆಲಸದ ಸ್ಥಳದಲ್ಲಿದ್ದ ಅಡೆತಡೆಗಳು ಈ ಸಮಯದಲ್ಲಿ ಹೆಚ್ಚಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಮನಸ್ಸನ್ನು ಶಾಂತವಾಗಿಡಲು ನಿಮಗೆ ಸಲಹೆ ನೀಡಲಾಗುತ್ತದೆ. ಹಣದ ಪರಿಸ್ಥಿತಿ ಚೆನ್ನಾಗಿರುತ್ತದೆ ಆದ್ರೆ ಅನಗತ್ಯ ವಸ್ತುಗಳಿಗೆ ನೀವು ಖರ್ಚು ಮಾಡಬೇಕಾಗಬಹುದು. ಸಮಾಜದಲ್ಲಿ ಗೌರವ ಹೆಚ್ಚಾಗುವ ಕೆಲಸ ಮಾಡಲಿದ್ದೀರಿ. ನಿಮ್ಮ ಮದುವೆ ಸಂಬಂಧ ಒಂದಿಷ್ಟು ವಿಚಾರ ಮತ್ತೆ ಚರ್ಚೆಯಾಗಬಹುದು.

ಸಿಂಹ ರಾಶಿ

ಇಂದು ನಿಮಗೆ ಅತ್ಯಂತ ಫಲಪ್ರದವಾದ ದಿನವಾಗಿದೆ. ಕೆಲಸದ ನಿಮಿತ್ತ ನೀವು ಹೊರಗೆ ಹೋಗಬಹುದು. ನಿಮ್ಮ ಒಂದು ನಿರ್ಧಾರಕ್ಕೆ ವಿಷಾದ ವ್ಯಕ್ತಪಡಿಸಬಹುದು. ವ್ಯವಹಾರದಲ್ಲಿ ನಿಮಗೆ ಉತ್ತಮ ಅನಿಸಿಕೆ ಇರುತ್ತದೆ. ವ್ಯಾಪಾರಸ್ಥರು ಲಾಭ ಗಳಿಸಲು ಉತ್ತಮ ಅವಕಾಶವನ್ನು ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿ ಗಟ್ಟಿಯಾಗುತ್ತದೆ ಇದರಿಂದ ಮನೆಯಲ್ಲಿ ನೆಮ್ಮದಿ ಇರಲಿದೆ. ವಾಹನ ಖರೀದಿಗಾಗಿ ನೀವು ಮಾಡುತ್ತಿರುವ ಆಲೋಚನೆಯಲ್ಲಿ ಬದಲಾವಣೆ ಮಾಡಬಹುದು. ಇಂದು ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾ ಬಲಶಾಲಿಯಾಗುತ್ತೀರಿ. ಆರೋಗ್ಯದ ಕಡೆ ಗಮನವಿರಲಿ.

ಕನ್ಯಾ ರಾಶಿ

ಇಂದು ನಿಮಗೆ ಕೆಲಸ ಕಾರ್ಯದಲ್ಲಿ ಧನಾತ್ಮಕ ಪ್ರಭಾವಗಳ ಎದುರು ನೋಡಬಹುದು. ವ್ಯಾಪಾರದಲ್ಲಿ ಬುದ್ದಿವಂತಿಕೆಯಿಂದ ಮುಂದುವರೆಯುವುದು ಉತ್ತಮ. ದೊಡ್ಡ ಹೂಡಿಕೆಯೊಂದನ್ನು ತಪ್ಪಿಸುವುದು ನಿಮ್ಮ ಹಣಕಾಸು ಸ್ಥಿತಿ ಸುಧಾರಿಸಲು ಕಾರಣವಾಗುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆ ಎದುರಾಗಬಹುದು, ನಿರ್ಲಕ್ಷ್ಯ ಮಾಡಬೇಡಿ. ಅದರಲ್ಲೂ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಸೂಕ್ತ ಚಿಕಿತ್ಸೆಗೆ ಮುಂದಾಗಬೇಕಾಗುತ್ತದೆ. ನಿಮ್ಮ ವೈಯಕ್ತಿಕ ವಿಚಾರವಾಗಿ ಇಂದು ಟೀಕೆ ಕೇಳಬಹುದು.

ತುಲಾ ರಾಶಿ

ಇಂದು ನಿಮ್ಮ ಹಣಕಾಸು ವಿಚಾರವಾಗಿ ಬಹಳ ಕಠಿಣ ದಿನವಾಗಿ ಎದುರಿಸುತ್ತೀರಿ. ಅಗತ್ಯ ಸಮಯದಲ್ಲಿ ನಿಮಗೆ ಬರಬೇಕಿದ್ದ ಹಣಕ್ಕೆ ಅಡೆತಡೆಯಾಗಬಹುದು. ಹಾಗೆ ಇದು ನಿಮ್ಮನ್ನು ಕಷ್ಟಗಳಲ್ಲಿ ಸಿಲುಕಿಸಬಹುದು. ನಿಮಗೆ ಪ್ರಿಯವಾದದ್ದನ್ನು ಕಳೆದುಕೊಂಡಿದ್ದರೆ, ಅದನ್ನು ಮರಳಿ ಪಡೆಯಬಹುದು. ನೀವು ವ್ಯವಹಾರದಲ್ಲಿ ಹೊಸ ರೀತಿಯ ಪ್ರಗತಿಗೆ ಮುಂದಾಗಲು ಸೂಕ್ತ ದಿನವಿದು. ನಿಮ್ಮ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚಿದೆ. ದಾಂಪತ್ಯ ಜೀವದಲ್ಲಿ ಇಂದು ಸಣ್ಣ ಪುಟ್ಟ ಸಮಸ್ಯೆ ಎದುರಿಸುತ್ತೀರಿ.

ವೃಶ್ಚಿಕ ರಾಶಿ

ಇಂದು ನಿಮಗೆ ಮಿಶ್ರ ಫಲದ ದಿನವಾಗಿದೆ. ದಿನದ ಆರಂಭದಿಂದ ಕೈಯಲ್ಲಿ ಹಣ ಓಡಾಡುತ್ತಿರುತ್ತದೆ, ಆದ್ರೆ ದಿನದ ಅಂತ್ಯದಲ್ಲಿ ಖರ್ಚುಗಳು ಹೆಚ್ಚಾಗಬಹುದು. ಉದ್ಯಮಿಗಳು ಹಣದ ವಿಷಯದಲ್ಲಿ ಯಾವುದೇ ರೀತಿಯ ಆತುರವನ್ನು ಮಾಡಬೇಡಿ, ಇಲ್ಲದಿದ್ದರೆ ನೀವು ಮೋಸ ಹೋಗಬಹುದು. ನಿಮ್ಮ ಒಡಹುಟ್ಟಿದವರೊಂದಿಗೆ ಉತ್ತಮ ಸಂಬಂಧವನ್ನು ಇರಿಸಿಕೊಳ್ಳಲು ಪ್ರಯತ್ನಿಸಿ. ಮನೆಯ ಒಂದು ಪ್ರಮುಖ ಕೆಲಸದ ಕಾರಣ ಹೆಚ್ಚು ಸಮಯ ಕಳೆಯಬೇಕಾಗುತ್ತದೆ. ಹೊಸ ಕೆಲಸ ಮಾಡುವ ಬಯಕೆ ನಿಮ್ಮಲ್ಲಿ ಮೂಡಬಹುದು. ಕೆಲಸದಲ್ಲಿನ ಒತ್ತಡವು ನಿಮ್ಮನ್ನು ಹಲವು ವಿಚಾರಗಳಿಂದ ದೂರ ಮಾಡಲಿದೆ.

ಧನು ರಾಶಿ

ಇಂದು ನೀವು ಅನಗತ್ಯ ಜಗಳಗಳು ಮತ್ತು ತೊಂದರೆಗಳಿಂದ ಪರಿಹಾರ ಪಡೆಯುತ್ತೀರಿ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿಮ್ಮ ಯಶಸ್ಸು ನೋಡಬಹುದು. ಅವಿವಾಹಿತರಲ್ಲಿ ಇಂದು ಹಣ ಹೆಚ್ಚಾಗುವ ಸಾಧ್ಯತೆ ಇದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಆತುರ ಪಡಬೇಡಿ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಇಂದು ಅವರಿಗೆ ಒಳ್ಳೆಯ ಮದುವೆಯ ಪ್ರಸ್ತಾಪ ಬರಬಹುದು. ಚಿಲ್ಲರೆ ವ್ಯಾಪಾರಸ್ಥರು ಇಂದು ಲಾಭ ಮಾಡುವ ಅವಕಾಶ ಗಿಟ್ಟಿಸಬಹುದು.

ಮಕರ ರಾಶಿ

ಇಂದು ನಿಮಗೆ ಬಹಳ ಸಂತೋಷದ ದಿನವಾಗಲಿದೆ, ಮಕ್ಕಳ ಕಾರಣಕ್ಕಾಗಿ ನೀವು ಖುಷಿಯಿಂದ ಇರಬಹುದು. ನೀವು ಸಣ್ಣಪುಟ್ಟ ಕೆಲಸಗಳಲ್ಲಿ ನಿರತರಾಗಿರುತ್ತೀರಿ. ನಿಮ್ಮ ಹಿಂದಿನ ತಪ್ಪುಗಳಿಂದ ನೀವು ಕಲಿಯಬೇಕು. ನಿಮ್ಮ ಯಾವುದೇ ವಹಿವಾಟು ನಿಮಗೆ ಸಮಸ್ಯೆಯಾಗಬಹುದು. ಹೊಸ ಕೆಲಸವನ್ನು ಪ್ರಾರಂಭಿಸಲಿದ್ದರೆ ನಿಮ್ಮ ದಾರಿಯಲ್ಲಿ ಕೆಲವು ಅಡಚಣೆಗಳು ಉಂಟಾಗಬಹುದು. ಉದ್ಯೋಗಸ್ಥರ ದಿನವು ಸಾಮಾನ್ಯವಾಗಿರುತ್ತದೆ. ನೀವು ಬಡ್ತಿ ಪಡೆಯಲು ಬಯಸಿದರೆ ಹೆಚ್ಚು ಕೆಲಸ ಮಾಡಲು ಸಲಹೆ ನೀಡಲಾಗುತ್ತದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ.

ಕುಂಭ ರಾಶಿ

ಇಂದು ನೀವು ನಿಮ್ಮ ಮಾತು ಮತ್ತು ನಡವಳಿಕೆಯ ಮೇಲೆ ಹಿಡಿಯ ಇಡಬೇಕು. ಯಾವುದೇ ಕಾರಣವಿಲ್ಲದೆ ಕೋಪಗೊಳ್ಳುವ ನಿಮ್ಮ ಅಭ್ಯಾಸವು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮ್ಮ ಬಾಕಿ ಇರುವ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕಾಗುತ್ತದೆ. ಈ ದಿನ ಹಣದ ಬಗ್ಗೆ ಜಾಗ್ರತೆವಹಿಸಬೇಕು. ಕೆಲಸ ದಜೊತೆಗೆ ಕುಟುಂಬಕ್ಕಾಗಿಯೂ ಸಮಯ ಮೀಸಲಿಡಿ. ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆಯೂ ಉತ್ತಮವಾಗಿರುತ್ತದೆ. ಸಂಗಾತಿಯ ಜೊತೆಗೆ ಭಿನ್ನಾಭಿಪ್ರಾಯವಿರಬಹುದು. ಆರೋಗ್ಯದ ಕಡೆಗೆ ಗಮನಹರಿಸಿ. ಏಕೆಂದರೆ ಸಣ್ಣ ಸಮಸ್ಯೆಗಳು ಮುಂದೆ ದೊಡ್ಡದಾಗಬಹುದು.

ಮೀನ ರಾಶಿ

ಇಂದು ಕೆಲಸದ ಸ್ಥಳದಲ್ಲಿ ನಿಮ್ಮ ಉತ್ತಮ ಚಿಂತನೆಯಿಂದ ಲಾಭ ಅಥವಾ ಮೆಚ್ಚುಗೆಯ ಮಾತುಗಳ ಕೇಳುವಿರಿ. ಇಂದು ಹಲವು ವಿಚಾರವಾಗಿ ನಿಮ್ಮಲ್ಲಿ ನಕಾರಾತ್ಮಕ ಭಾವನೆ ಮೂಡಬಹುದು. ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ವಾಹನ ಸಂಬಂಧಿ ಖರ್ಚು ಇಂದು ಹೆಚ್ಚಾಗಬಹುದು. ವ್ಯಾಪಾರಿಗಳು ಹಣದ ವಿಚಾರದಲ್ಲಿ ಜಾಗ್ರತೆವಹಿಸಿ. ನಿಮ್ಮ ಸಣ್ಣ ತಪ್ಪು ದೊಡ್ಡ ನಷ್ಟಕ್ಕೆ ಕಾರಣವಾಗಬಹುದು ಹೀಗಾಗಿ ಬಹಳ ಎಚ್ಚರಿಕೆ ಅಗತ್ಯ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

April-12-daily-horoscope-prediction-for-12-zodiac-signs-in-kannada

Here is April 12 daily horoscope prediction for 12 zodiac signs read on...
Story first published: Saturday, April 12, 2025, 6:05 [IST]
X
Desktop Bottom Promotion