Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ದಿನ ಭವಿಷ್ಯ: ಏಪ್ರಿಲ್ 11ರ ಶುಕ್ರವಾರ ನಿಮಗೆ ಏನೆಲ್ಲಾ ಶುಭವಿದೆ?
ವೈದಿಕ ಶಾಸ್ತ್ರದ ಪ್ರಕಾರ ಏಪ್ರಿಲ್ 11ರ ರಾಶಿ ಫಲ ಯಾವ ರೀತಿ ಇದೆ ನೋಡೋಣ:
ಮೇಷ ರಾಶಿ
ಉದ್ಯೋಗದಲ್ಲಿರುವ ಜನರಿಗೆ ಇಂದು ಒಳ್ಳೆಯ ದಿನವಾಗಲಿದೆ. ಹೊಸದಾಗಿ ಉದ್ಯೋಗ ಹುಡುಕುವವರಿಗೂ ಈ ಸಮಯದಲ್ಲಿ ಒಳ್ಳೆಯ ಫಲಿತಾಂಶ ನೋಡಬಹುದು. ಮನೆಯ ವಾತಾವರಣದಲ್ಲಿ ನಿಮ್ಮಿಂದ ಸಂತೋಷ ಇರಲಿದೆ. ಅನಗತ್ಯವಾಗಿ ಖರ್ಚು ಮಾಡುವ ಆಲೋಚನೆಯನ್ನು ಮತ್ತೆ ಪರಿಶೀಲಿಸಿ. ಸ್ನೇಹಿತರಿಂದ ಹಣಕಾಸು ನೆರವಿಗೆ ಕರೆ ಬರಬಹುದು, ಆದ್ರೆ ಈ ಸಹಕಾರವು ನಿಮಗೆ ಸಂಕಷ್ಟ ತರಬಹುದು. ಹಣಕಾಸು ವಿಚಾರವಾಗಿ ದೊಡ್ಡ ಹೆಜ್ಜೆ ಇಡಬೇಡಿ. ವ್ಯಾಪಾರಿಗಳು ಈ ದಿನ ಬಹಳ ಶ್ರಮ ಹಾಕಬೇಕಾಗುತ್ತದೆ. ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ಸಣ್ಣಪುಟ್ಟ ಚರ್ಚೆಗಳ ನೋಡಬಹುದು. ನೀವು ಹೇಳುವ ಯಾವುದೋ ವಿಷಯದಿಂದ ಕುಟುಂಬದ ಸದಸ್ಯರು ಕೋಪಗೊಳ್ಳಬಹುದು.
ವೃಷಭ ರಾಶಿ
ಇಂದು ನೀವು ಉತ್ತಮ ಆಸ್ತಿಯನ್ನು ಸಂಪಾದಿಸುವ ದಿನವಾಗಿರುತ್ತದೆ. ವ್ಯಾಪಾರಕ್ಕೆ ಸಂಬಂಧಿಸಿದ ಜನರ ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ. ಇದಲ್ಲದೆ ನೀವು ಕೆಲವು ಹೊಸ ಕೆಲಸಗಳಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಯಶಸ್ಸನ್ನು ಪಡೆಯಬಹುದು. ಉದ್ಯೋಗಿಗಳು ಉನ್ನತ ಸ್ಥಾನವನ್ನು ಪಡೆಯುತ್ತಾರೆ. ಇದು ನಿಮ್ಮ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಓಡಾಟವನ್ನು ಹೆಚ್ಚಿಸುತ್ತದೆ. ನಿಮ್ಮ ಹಿಂದಿನ ಕೆಲವು ತಪ್ಪುಗಳಿಂದ ನೀವು ಕಲಿಯಬೇಕಾಗುತ್ತದೆ. ಆರೋಗ್ಯವಾಗಿರಲು, ನಿಮ್ಮ ದಿನಚರಿಯನ್ನು ನೀವು ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು. ಹೊರಗಿನ ಊಟ ತಿಂಡಿಯ ಮೇಲೆ ಹಿಡಿತ ಇರಲಿ.

ಮಿಥುನ ರಾಶಿ
ಇಂದು ನಿಮಗೆ ಸಾಮಾನ್ಯ ದಿನವಾಗಿರುತ್ತದೆ. ಕೆಲಸದ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಗೊಂದಲಗಳು ಉಂಟಾಗುತ್ತದೆ. ಕೆಲಸದ ದೃಷ್ಟಿಯಿಂದ ತಿಂಗಳ ಆರಂಭವು ನಿಮಗೆ ಉತ್ತಮವಾಗಿರುವುದಿಲ್ಲ, ವಿಶೇಷವಾಗಿ ನೀವು ಕೆಲಸವನ್ನು ಮಾಡುತ್ತಿದ್ದರೆ ಈ ಸಮಯದಲ್ಲಿ ನಿಮ್ಮ ಕಷ್ಟಗಳು ಹೆಚ್ಚಾಗಬಹುದು. ನೀವು ನಿರುದ್ಯೋಗಿಗಳಾಗಿದ್ದರೆ ಮತ್ತು ನಿಮಗೆ ಬೇಕಾದ ಕೆಲಸವನ್ನು ಹುಡುಕುತ್ತಿದ್ದರೆ, ನಿಮ್ಮ ಪ್ರಯತ್ನಗಳನ್ನು ವೇಗಗೊಳಿಸಬೇಕು. ವಾಹನ ಚಾಲಕರು ಇಂದು ಎಚ್ಚರಿಕೆಯಿಂದ ಇರಬೇಕು, ವಾಹನ ಸಂಬಂಧಿ ಖರ್ಚು ಹೆಚ್ಚಾಗಬಹುದು. ದಾಂಪತ್ಯದಲ್ಲಿ ಸಣ್ಣ ಪುಟ್ಟ ಮನಸ್ತಾಪ ಎದುರಾಗಬಹುದು.
ಕರ್ಕ ರಾಶಿ
ಈ ದಿನ ನಿಮಗೆ ಭೌತಿಕ ಸೌಕರ್ಯಗಳಲ್ಲಿ ಹೆಚ್ಚಳ ತರಲಿದೆ. ನೀವು ಹೊಸದಾಗಿ ಯಾವುದಾದರು ಕೆಲಸ ಆರಂಭಿಸಿದ್ದರೆ ಇಂದು ಹಣ ಹೂಡಿಕೆ ಮಾಡಬಹುದು. ನಿಮ್ಮ ಅಮೂಲ್ಯ ವಸ್ತುಗಳ ಕುರಿತು ಹೆಚ್ಚಾಗಿ ಗಮನವಿಡಿ. ನಿಮ್ಮ ಯಾವುದೇ ಆಸೆ ಈಡೇರಿಕೆಗಾಗಿ ಕುಟುಂಬದಲ್ಲಿ ಕೆಲವು ಧಾರ್ಮಿಕ ಸಮಾರಂಭಗಳ ಯೋಜಿಸಬಹುದು. ನೀವು ಯಾರೊಬ್ಬರ ಪ್ರಭಾವದಿಂದ ಷೇರು ಮಾರುಕಟ್ಟೆ ಇತ್ಯಾದಿಗಳಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಬೇಕು. ಪ್ರೀತಿಯ ವಿಚಾರದಲ್ಲಿ ಮನಸ್ಥಾಪಗಳು ಬರಬಹುದು. ಯಾರನ್ನೂ ಕೂಡ ಈ ದಿನ ಕುರುಡರಂತೆ ನಂಬಲು ಹೋಗಬೇಡಿ.
ಸಿಂಹ ರಾಶಿ
ಇಂದು ನಿಮಗೆ ಉತ್ತಮ ದಿನವಾಗಲಿದೆ. ಕೆಲಸದ ಬಗ್ಗೆ ಹೊಸ ಆಲೋಚನೆಗಳು ನಿಮ್ಮ ಮನಸ್ಸಿಗೆ ಬರುತ್ತವೆ. ಕುಟುಂಬ ಸದಸ್ಯರೊಬ್ಬರ ಆರೋಗ್ಯದಲ್ಲಿ ಕ್ಷೀಣತೆ ಉಂಟಾಗುವುದರಿಂದ ನೀವು ಚಿಂತಿತರಾಗುತ್ತೀರಿ. ವಾಹನಗಳನ್ನು ಎಚ್ಚರಿಕೆಯಿಂದ ಬಳಸಬೇಕು. ದಾಂಪತ್ಯ ಜೀವನದಲ್ಲಿ ಹೇರಳವಾದ ಸಂತೋಷ ಇರುತ್ತದೆ. ಉದ್ಯೋಗಿಗಳಲ್ಲಿ ಹೊಸ ರೀತಿಯ ಒತ್ತಡ ಇರಲಿದೆ. ನಿಮ್ಮದೊಂದು ಆಸೆ ಈಡೇರಬಹುದು. ಹಾಗೆ ಬೇರೆಯವರ ಮಾತಿನಂತೆ ನಡೆದುಕೊಳ್ಳುವುದರಿಂದ ನಿಮ್ಮ ಸಂಬಂಧ ಬಲವಾಗುತ್ತದೆ. ವ್ಯಾಪಾರಿಗಳು ನಿಮ್ಮ ವ್ಯಾಪಾರ ಯೋಜನೆಗಳನ್ನು ರಹಸ್ಯವಾಗಿಡಿ.
ಕನ್ಯಾ ರಾಶಿ
ಇಂದು ನಿಮಗೆ ಒಂದು ನಿರ್ಧಾರ ತೆಗೆದುಕೊಳ್ಳುವಲ್ಲಿ ಪ್ರಮುಖ ದಿನವಾಗಲಿದೆ. ಯಾವುದೇ ಸರ್ಕಾರಿ ಯೋಜನೆಯ ಸಂಪೂರ್ಣ ಲಾಭವನ್ನು ನೀವು ಪಡೆಯಬಹುದು. ಪಾಲುದಾರಿಕೆಯ ವ್ಯವಹಾರದಲ್ಲಿದ್ದರೆ ಈ ದಿನ ಈ ಕುರಿತಾಗಿ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಉದ್ಯೋಗದ ಸ್ಥಳದಲ್ಲಿ ಬಹಳ ಒತ್ತಡ ಎದುರಿಸಬೇಕಾಗಬಹುದು. ನಿಮ್ಮ ವ್ಯವಹಾರಗಳನ್ನು ಆದಷ್ಟು ದಾಖಲು ಮಾಡಿಟ್ಟುಕೊಳ್ಳುವುದು ಉತ್ತಮ. ಆರ್ಥಿಕ ಸಮಸ್ಯೆಗೆ ಸಿಲುಕಿದ್ದರೆ ಈ ದಿನ ಸಣ್ಣ ಮಟ್ಟದಲ್ಲಿ ಬಿಡುಗಡೆ ಪಡೆಯಬಹುದು. ಮನೆಯ ವಾತಾವರಣ ಚೆನ್ನಾಗಿರಲಿದೆ, ಅನಗ್ಯತ ಭಿನ್ನಾಭಿಪ್ರಾಯಗಳಿಂದ ದೂರವಿರಿ.
ತುಲಾ ರಾಶಿ
ಇಂದು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಏರುಪೇರು ಉಂಟಾಗಬಹುದು, ನೀವು ಬಾಕಿ ಸಾಲವನ್ನು ಮರುಪಾವತಿ ಮಾಡಬಹುದು. ಹಾಗೆ ಹಣವನ್ನು ಅಗತ್ಯ ವಿಚಾರವಾಗಿ ವ್ಯಯಿಸಬೇಕಾಗಬಹುದು ಇದು ಸಮಸ್ಯೆ ದೊಡ್ಡದು ಮಾಡಬಹುದು. ಬಹಳ ದಿನಗಳ ನಂತರ ನೀವು ಹಳೆಯ ಸ್ನೇಹಿತನನ್ನು ಭೇಟಿಯಾಗಬಹುದು. ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದ ಯೋಚಿಸಿ. ಈ ದಿನ ಕೆಲಸದ ಒತ್ತಡ ಹೆಚ್ಚಿರಲಿದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸ ಕಾರ್ಯಗಳ ಪೂರ್ಣಗೊಳಿಸಿ. ಆರೋಗ್ಯದ ವಿಚಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸಬೇಡಿ. ಮನೆಗೆ ವಸ್ತುವೊಂದನ್ನು ನೀವು ಖರೀದಿಸಬಹುದು.
ವೃಶ್ಚಿಕ ರಾಶಿ
ಇಂದು ನಿಮಗೆ ಸಕಾರಾತ್ಮಕ ಫಲಿತಾಂಶಗಳ ತರುವ ದಿನವಾಗಿದೆ. ನಿಮ್ಮ ಹಳೆಯ ತಪ್ಪುಗಳನ್ನು ಮತ್ತೆ ಮಾಡಲು ಮುಂದಾಗಬೇಡಿ. ಕೌಟುಂಬಿಕ ಸಮಸ್ಯೆಗಳು ಮತ್ತೆ ತಲೆ ಎತ್ತುತ್ತವೆ ಇದು ಸ್ವಲ್ಪ ಚಿಂತೆಗೀಡು ಮಾಡುತ್ತದೆ. ನಿಮ್ಮ ಕೆಲವು ಹಳೆಯ ವ್ಯವಹಾರಗಳು ಇತ್ಯರ್ಥವಾಗುತ್ತವೆ. ಈ ದಿನ ನೀವು ಕೆಲಸದ ಕಾರಣಕ್ಕೆ ಪ್ರಯಾಣ ಮಾಡಬೇಕಾಗಬಹುದು. ಚಿಲ್ಲರೆ ಮಾರುಕಟ್ಟೆಯ ವ್ಯಾಪಾರಿಗಳಿಗೆ ಈ ದಿನವು ಬಹಳ ಉತ್ತಮವಾಗುತ್ತದೆ. ಇಂದು ಚಿನ್ನ, ಬೆಳ್ಳಿ ಖರೀದಿಯ ಆಲೋಚನೆ ಮಾಡಿದ್ದರೆ ಮುಂದುವರೆಯುವುದು ಉತ್ತಮ.
ಧನು ರಾಶಿ
ವ್ಯಾಪಾರ ಮಾಡುವ ಜನರಿಗೆ ಇಂದು ಒಳ್ಳೆಯ ದಿನವಾಗಲಿದೆ. ಆರ್ಥಿಕವಾಗಿ ಈ ದಿನ ಉತ್ತಮವಾಗಿರಲಿದೆ. ಕೆಲಸದ ಸ್ಥಳದಲ್ಲಿ ನೀವು ಪ್ರತಿಕೂಲ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಏಕಕಾಲದಲ್ಲಿ ಅನೇಕ ಕೆಲಸಗಳನ್ನು ಮಾಡಬೇಕಾಗಿರುವುದರಿಂದ ನಿಮ್ಮ ಏಕಾಗ್ರತೆ ಹಾಳಾಗಬಹುದು. ನಿಮ್ಮ ಪರಿಶ್ರಮ ನಂಬಿಕೊಂಡು ಮುಂದುವರೆಯಿರಿ. ಯಾವುದಾದರು ಬಾಕಿ ಹಣ ನಿಮಗೆ ಬರಬೇಕಿದ್ದರೆ ಈ ದಿನ ನಿಮ್ಮ ಪರವಾದ ಒಲವು ಇರಲಿದೆ. ಮಕ್ಕಳ ಭವಿಷ್ಯದ ಕುರಿತಾಗಿ ನಿಮ್ಮಲ್ಲಿ ಚಿಂತೆ ಹೆಚ್ಚಾಗಬಹುದು. ಆರೋಗ್ಯದಲ್ಲಿ ಏರುಪೇರು ಸಾಧ್ಯತೆ.
ಮಕರ ರಾಶಿ
ಈ ದಿನ ನಿಮ್ಮ ಕೆಲಸದಲ್ಲಿ ಸಾರ್ಥಕತೆ ಕಾಣುವ ದಿನವಾಗಬಹುದು. ರಾಜಕೀಯದಲ್ಲಿರುವ ಮಂದಿಗೆ ಈ ದಿನ ಶುಭಕರ ಸುದ್ದಿ ಕಾದಿದೆ. ಅವಿವಾಹಿತರಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು, ಅಲ್ಲದೆ ವಾಹನ ಸಂಬಂಧಿ ಖರ್ಚು, ಆರೋಗ್ಯ ಸಂಬಂಧಿಸಿದ ಖರ್ಚುಗಳು ಹೆಚ್ಚಾಗಬಹುದು. ಹೂಡಿಕೆ, ಉಳಿತಾಯದ ಕಡೆಗೂ ಗಮನವಿಡುವುದು ಒಳಿತು. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ನೀವು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದರೆ ಮನೆಯ ಸದಸ್ಯರಲ್ಲಿ ಪ್ರೀತಿ ಮತ್ತು ಒಗ್ಗಟ್ಟು ಕಂಡುಬರುತ್ತದೆ. ಪಂಚೇಂದ್ರಿಯ ಸಂಬಂಧಿ ಸಮಸ್ಯೆ ಇದ್ದರೆ ನಿರ್ಲಕ್ಷಿಸಬೇಡಿ.
ಕುಂಭ ರಾಶಿ
ಇಂದು ನಿಮಗೆ ಅನಿರೀಕ್ಷಿತ ಲಾಭದ ದಿನವಾಗಿರುತ್ತದೆ. ಯಾವುದೇ ಕಾರಣವಿಲ್ಲದೆ ಕೋಪಗೊಳ್ಳಬೇಡಿ ಶಾಂತವಾಗಿರುವುದು ನಿಮಗೆ ಒಳಿತು ಮಾಡಲಿದೆ. ಈ ದಿನ ಪ್ರವಾಸ, ಪ್ರಯಾಣ ಸಂಬಂಧಿತ ಚರ್ಚೆಗೆ ಭಾಗಿಯಾಗಬಹುದು. ನಿಮ್ಮ ನಿತ್ಯದ ಕೆಲಸದಲ್ಲಿ ಉಂಟಾಗುತ್ತಿದ್ದ ಅಡೆತಡೆಗಳು ಈ ದಿನ ನಿವಾರಣೆಯಾಗಬಹುದು. ಸಂಬಂಧದಲ್ಲಿ ಭಿನ್ನಾಭಿಪ್ರಾಯ ಉಂಟಾಗದಂತೆ ಜಾಗ್ರತೆವಹಿಸಿ. ನಿಮ್ಮದಲ್ಲದ ವಸ್ತುವೊಂದಕ್ಕೆ ಹಣ ಖರ್ಚು ಮಾಡಬೇಕಾಗಿ ಬರಬಹುದು.
ಮೀನ ರಾಶಿ
ಇಂದು ನಿಮ್ಮ ದೊಡ್ಡ ಕನಸಿಕ ಕಡೆಗೆ ಮತ್ತೊಂದು ಹೆಜ್ಜೆ ಹತ್ತಿರವಾಗುತ್ತೀರಿ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ. ಸಣ್ಣ ವ್ಯಾಪಾರಸ್ಥರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಸಾಲ ತೆಗೆದುಕೊಳ್ಳಲು ಯೋಚಿಸುತ್ತಿದ್ದರೆ ಇದನ್ನು ತಪ್ಪಿಸಿ. ಯಾರೊಬ್ಬರ ನಿರ್ಧಾರದ ಕುರಿತು ಟೀಕೆ ಮಾಡಲು ಹೋಗಬೇಡಿ. ಬ್ಯಾಂಕಿಂಗ್ ಕೆಲಸಗಳು, ಸರ್ಕಾರಿ ಕೆಲಸಗಳು ವೇಗ ಪಡೆಯಲಿವೆ. ಮನೆಯಲ್ಲಿನ ಕಷ್ಟವೊಂದು ಬಗೆಹರಿಯಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










