Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ದಿನ ಭವಿಷ್ಯ: ಏಪ್ರಿಲ್ 10ರ ಗುರುವಾರ ನಿಮಗೆ ಏನೆಲ್ಲಾ ಶುಭವಾಗಲಿದೆ?
ವೈದಿಕ ಶಾಸ್ತ್ರದ ಪ್ರಕಾರ ಏಪ್ರಿಲ್ 10ರ ರಾಶಿ ಫಲ ಯಾವ ರೀತಿ ಇದೆ ನೋಡೋಣ:
ಮೇಷ ರಾಶಿ
ಇಂದು ನಿಮ್ಮ ದಿನವು ಅತ್ಯಂತ ಸಂತೋಷದಿಂದ ಕೂಡಿರಲಿದೆ, ನೀವು ಅಂದುಕೊಂಡಿದ್ದ ಕೆಲಸಗಳ ಮಾಡಿ ಮುಗಿಸುತ್ತೀರಿ. ಬಹಳ ದಿನಗಳ ನಂತರ ನಿಮ್ಮ ಹಣಕಾಸು ವಿಚಾರವಾಗಿ ನಿಮ್ಮಲ್ಲಿ ಧನಾತ್ಮಕ ಫಲಿತಾಂಶ ಸಿಗಲಿದೆ. ವೈವಾಹಿಕ ಜೀವನದಲ್ಲೂ ಕೂಡ ಸ್ಥಿತಿ ಉತ್ತಮವಾಗುತ್ತಿದೆ. ಸಾಲ ಅಥವಾ ಕ್ರೆಡಿಟ್ ವಹಿವಾಟುಗಳನ್ನು ಮಾಡಲು ಹೋಗಬೇಡಿ. ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ಬಹುಶಃ ಶೀಘ್ರದಲ್ಲೇ ನಿಮ್ಮ ಕೆಲವು ಸ್ಥಗಿತಗೊಂಡ ಕೆಲಸಗಳು ಸಹ ಪೂರ್ಣಗೊಳ್ಳುತ್ತವೆ. ಕುಟುಂಬ ಜೀವನದಲ್ಲಿ ಇದಕ್ಕೆ ಪೂರಕವಾದ ವಾತಾವರಣ ಇರಲಿದೆ.
ವೃಷಭ ರಾಶಿ
ಆರ್ಥಿಕವಾಗಿ ಈ ಅವಧಿ ಅಷ್ಟೊಂದು ಅನುಕೂಲಕರವಲ್ಲ, ಈ ದಿನ ಖರ್ಚು ಹೆಚ್ಚಾಗಬಹುದು. ಇಂದು ಅಗತ್ಯವಿರುವ ಯಾರಿಗಾದರೂ ಸಹಾಯ ಮಾಡಲು ನಿಮಗೆ ಅವಕಾಶ ಸಿಕ್ಕರೆ ಅದನ್ನು ಬಳಸಿಕೊಳ್ಳಿ. ನಿಮ್ಮ ಉದ್ಯೋಗದ ಸ್ಥಳದಲ್ಲಿ ಇದ್ದ ಅಡ್ಡಿಗಳು ಬದಲಾಗುತ್ತದೆ. ಹಾಗೆ ನೀವು ಹೊಸ ಉದ್ಯೋಗ ಹುಡುಕುತ್ತಿದ್ದರೆ ಈ ದಿನ ಬಹಳ ಶುಭವಾಗಬಹುದು. ಕುಟುಂಬದಲ್ಲಿ ಕೆಲ ಭಿನ್ನಾಭಿಪ್ರಾಯಗಳಿರಬಹುದು ಈ ದಿನ ನೀವು ತಾಳ್ಮೆಯಿಂದ ವರ್ತಿಸಿ, ಆರೋಗ್ಯದ ಕಡೆಗೆ ಗಮನಹರಿಸಿ. ಅನಗ್ಯತ ವಿಷಯಗಳಿಂದ ದೂರವಿರಿ ಎಂದು ಸಲಹೆ ಮಾಡಲಾಗುವುದು.

ಮಿಥುನ ರಾಶಿ
ಕೆಲಸದಲ್ಲಿ ನೀವು ಇಂದು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಕಚೇರಿಯಲ್ಲಿ ನಿಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ಅವಕಾಶ ಪಡೆಯಬಹುದು. ಹಾಗೆ ಕೆಲಸದ ಉದ್ದೇಶದಿಂದ ನೀವು ದೂರ ಪ್ರಯಾಣಕ್ಕೆ ಮುಂದಾಗಬೇಕಾಗಬಹುದು. ಪ್ರೀತಿ ವಿಚಾರದಲ್ಲಿ ನೀವು ತಪ್ಪು ನಿರ್ಧಾರ ತೆಗೆದುಕೊಳ್ಳಬಹುದು. ಇದ್ದಕ್ಕಿದ್ದಂತೆ ನೀವು ದೊಡ್ಡ ಆರ್ಥಿಕ ಲಾಭ ಮಾಡಬಹುದು. ಕೌಟುಂಬಿಕ ಜೀವನದಲ್ಲಿ ಎಲ್ಲವೂ ಸಾಮಾನ್ಯವಾಗುತ್ತಿರುವಂತೆ ತೋರುತ್ತಿದೆ. ಮನೆಯಲ್ಲಿ ಕೆಲವು ಸಮಸ್ಯೆಗಳ ಕುರಿತಾಗಿ ಚರ್ಚೆ ನಡೆಯಬಹುದು.
ಕರ್ಕ ರಾಶಿ
ಇಂದು ಕುಟುಂಬ ಜೀವನ ಉತ್ತಮವಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಆದಾಯಕ್ಕಿಂತ ಹೆಚ್ಚಿನ ಖರ್ಚು ಇರಲಿದೆ. ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳಿಗೆ ಸಂಬಂಧಿಸಿದ ಕೆಲಸ ಮಾಡುವ ಜನರ ಸಮಸ್ಯೆಗಳು ಹೆಚ್ಚಾಗುತ್ತಿವೆ. ಅವಿವಾಹಿತರು ಕೆಲಸಕ್ಕೆ ಸಂಬಂಧಿಸಿದ ಅಡೆತಡೆ ನೋಡಬಹುದು. ವಾಹನ ಚಾಲಕರು ಇಂದು ಬಹಳ ಎಚ್ಚರಿಕೆ ಇಡುವುದು ಉತ್ತಮ. ಹಾಗೆ ಪಾಲುದಾರಿಗೆಯ ವ್ಯವಹಾರದಲ್ಲಿದ್ದರೆ ಲಾಭಾಂಶ ಹಾಗೂ ಲೆಕ್ಕಾಚಾರದ ಮೇಲೆ ಗಮನವಿಡಿ.
ಸಿಂಹ ರಾಶಿ
ಇಂದು ಅನವಶ್ಯಕ ಖರ್ಚುಗಳು ಉಂಟಾಗಬಹುದು, ಈ ಕಾರಣದಿಂದಾಗಿ ನಿಮ್ಮ ಆರ್ಥಿಕ ಸ್ಥಿತಿಯು ಕುಸಿಯಬಹುದು. ಹೊಸ ವ್ಯವಹಾರ ಸಂಬಂಧಿಸಿದಂತೆ ಹಲವು ವ್ಯಕ್ತಿಗಳನ್ನು ನೀವು ಭೇಟಿಯಾಗಬಹುದು. ಇಂದು ನಿಮ್ಮಲ್ಲಿ ಒತ್ತಡ ಹೆಚ್ಚಾಗಬಹುದು. ಹಣಕಾಸು ವಿಚಾರವಾಗಿ ಚಿಂತೆಯಲ್ಲಿ ಮುಳುಗಬಹುದು. ಬಾಕಿ ಹಣವನ್ನು ಮರಳಿ ಪಡೆಯುವ ನಿಮ್ಮ ಪ್ರಯತ್ನ ಮುಂದುವರೆಯಲಿ. ದಾಂಪತ್ಯದಲ್ಲಿ ಸಣ್ಣಪುಟ್ಟ ಮನಸ್ತಾಪ ಎದುರಾಗಬಹುದು. ಬಹಳ ಕಾಲದ ನಿಮ್ಮ ಬಯಕೆಯೊಂದು ಈಡೇರಿಸಿಕೊಳ್ಳಲು ನೀವು ಮುಂದಾಗಬಹುದು.
ಕನ್ಯಾ ರಾಶಿ
ನೀವು ಕನ್ಯಾ ರಾಶಿಯಲ್ಲಿ ಜನಿಸಿದ್ದರೆ ನಿಮ್ಮ ಅನುಕೂಲಕರ ದಿನವಾಗಬಹುದು. ಚಿಲ್ಲರೆ ವ್ಯಾಪಾರಿಗಳು ಈ ದಿನದಂದು ಅತ್ಯಧಿಕ ಲಾಭ ನೋಡಬಹುದು. ಹಾಗೆ ತಮ್ಮ ವ್ಯಾಪಾರ ವೃದ್ಧಿಗೆ ಬಯಸಿದ್ದರೆ ಹೊಸ ಬದಲಾವಣೆಗೆ ಮುಂದಾಗಲು ಇದು ಸೂಕ್ತ ಸಮಯ. ಉದ್ಯೋಗ ಹುಡುಕುತ್ತಿರುವವರು ಎಲ್ಲಾ ಕಡೆಗಳಿಂದ ಅವಕಾಶಗಳ ಪಡೆದರು ಅದನ್ನು ಬಳಸಿಕೊಳ್ಳುವುದು ಕಷ್ಟವಾಗಬಹುದು. ಅನಿರೀಕ್ಷಿತ ದೂರವಾಣಿ ಕರೆಯೊಂದು ನಿಮ್ಮಲ್ಲಿ ಸಂತಸ ತರುವ ಸೂಚನೆ ಇದೆ. ಆರೋಗ್ಯದ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸಬೇಡಿ.
ತುಲಾ ರಾಶಿ
ಇಂದು ಸಮಾಜದಲ್ಲಿ ನಿಮ್ಮ ಗೌರವ ಹಾಗೂ ಘನತೆ ಹೆಚ್ಚಾಗುತ್ತದೆ ಮತ್ತು ಸಾಕಷ್ಟು ಪ್ರಶಂಸೆಗೆ ಒಳಗಾಗುತ್ತೀರಿ. ವ್ಯವಹಾರಕ್ಕೆ ಸಂಬಂಧಿಸಿದ ಜನರು ಲಾಭ ಪಡೆಯಬಹುದು. ನಿಮ್ಮ ಆಸ್ತಿ ಸಂಬಂಧಿತ ಸಮಸ್ಯೆಗಳು ಪರಿಹಾರವಾಗಬಹುದು. ಅಲ್ಲದೆ ಬಹಳ ವಿಶೇಷ ಕಾರ್ಯದಲ್ಲಿ ನೀವು ಭಾಗಿಯಾಗಬಹುದು. ಪ್ರವಾಸ ಸಂಬಂಧ ಮಾತುಕತೆಯಲ್ಲೂ ನೀವು ಭಾಗಿಯಾಗಬಹುದು. ವಿದ್ಯಾರ್ಥಿಗಳು ದೊಡ್ಡ ಚಿಂತೆಯಿಂದ ಹೊರಬರಲಿದ್ದಾರೆ. ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಎದುರಾಗಬಹುದು. ದೊಡ್ಡ ಹೂಡಿಕೆ ಕುರಿತು ನೀವು ಆಲೋಚಿಸಿದ್ದರೆ ಒಂದಿಷ್ಟು ದಿನ ಮುಂದೂಡಿ. ಕಾರಣವಿಲ್ಲದೆ ಖರ್ಚು ಮಾಡಲು ಹೋಗಬೇಡಿ.
ವೃಶ್ಚಿಕ ರಾಶಿ
ನಿಮ್ಮ ಪತಿ ಅಥವಾ ಪತ್ನಿಯೊಂದಿಗಿನ ಸಂಬಂಧದಲ್ಲಿ ಬಹಳ ದೊಡ್ಡ ವಿಚಾರಗಳ ಕುರಿತ ಮಾತುಕತೆಯಲ್ಲಿ ಒಮ್ಮತ ಮೂಡದೆ ಇರಬಹುದು. ಅನಗತ್ಯ ವಿಷಯಗಳ ಬಗ್ಗೆ ನಿಮ್ಮ ಸಂಗಾತಿಯನ್ನು ಅನುಮಾನಿಸುವುದನ್ನು ತಪ್ಪಿಸಿ. ದೊಡ್ಡ ಹೂಡಿಕೆ ಮಾಡುವುದನ್ನು ತಪ್ಪಿಸಲು ವ್ಯಾಪಾರಸ್ಥರಿಗೆ ಸಲಹೆ ನೀಡಲಾಗುತ್ತದೆ. ನೀವು ವ್ಯವಹಾರದಲ್ಲಿ ಯಾವುದೇ ಅಪಾಯವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಅತಿಯಾದ ಖರ್ಚು ಆರ್ಥಿಕ ಸಮಸ್ಯೆ ಉಂಟು ಮಾಡಬಹುದು. ಕುಟುಂಬದ ಬೆಂಬಲ ನಿಮಗೆ ಸಿಗಲಿದೆ. ಚಿಕ್ಕ ನಿರ್ಲಕ್ಷ್ಯ ದೊಡ್ಡ ನಷ್ಟ ಉಂಟು ಮಾಡಬಹುದು.
ಧನು ರಾಶಿ
ನಿಮ್ಮ ನಡುವೆ ಪ್ರೀತಿ ಹೆಚ್ಚಾಗುತ್ತದೆ ಮತ್ತು ಪರಸ್ಪರರ ಮೇಲಿನ ನಿಮ್ಮ ನಂಬಿಕೆಯೂ ಬಲಗೊಳ್ಳುತ್ತದೆ. ನಿಮ್ಮ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದರೆ ಹೆಚ್ಚು ಪ್ರಯತ್ನಿಸಬೇಕು. ನೀವು ಶೀಘ್ರದಲ್ಲೇ ಯಶಸ್ಸನ್ನು ಪಡೆಯಬಹುದು. ಶೀಘ್ರದಲ್ಲೇ ವಿಷಯಗಳು ನಿಮ್ಮ ಪರವಾಗಿ ತಿರುಗಲಿದೆ. ಹಣದ ಸ್ಥಿತಿ ಸಾಮಾನ್ಯವಾಗಿರುತ್ತದೆ. ಈ ದಿನ ಆರೋಗ್ಯ ಸಮಸ್ಯೆಗಳಿರಬಹುದು. ಆದರೆ ನಿಮ್ಮ ಕೆಲಸ ಕಾರ್ಯಕ್ಕೆ ಅಡ್ಡಿ ತರುವುದಿಲ್ಲ. ಇತರರ ಕೆಲಸದಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಬೇಡಿ. ಖಾಸಗಿ ಸಂಸ್ಥೆಯ ಕೆಸಲಗಾರರಿಗೆ ಉತ್ತಮ ದಿನವಾಗಬಹುದು.
ಮಕರ ರಾಶಿ
ಇಂದು ನೀವು ಹಲವು ರೀತಿಯ ನಕಾರಾತ್ಮಕ ವಿಚಾರಗಳಿಂದ ಸುತ್ತುವರೆಯಬಹುದು. ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳುವುದು ಮತ್ತು ನಿಮ್ಮ ಅಮೂಲ್ಯ ಸಮಯವನ್ನು ಅನಗತ್ಯವಾಗಿ ಯೋಚಿಸುವುದು ಉತ್ತಮ. ಇಂದು ನೀವು ಹಿರಿಯ ಸಂಬಂಧಿಕರ ಜೊತೆಗೆ ಉತ್ತಮ ಸಮಯ ಕಳೆಯಲಿದ್ದೀರಿ. ಅನಗತ್ಯ ವಿಷಯಗಳಿಗಾಗಿ ಕೋಪಗೊಳ್ಳುವುದನ್ನು ತಪ್ಪಿಸುವುದು ಉತ್ತಮ. ಆಧ್ಯಾತ್ಮಿಕವಾಗಿ ನೀವು ಬಲಗೊಳ್ಳುವ ವಿಚಾರವೊಂದು ನಡೆಯಬಹುದು. ನಿಮ್ಮ ಸ್ಥಗಿತಗೊಂಡಿರುವ ಕೆಲವು ಕೆಲಸಗಳನ್ನು ಪೂರ್ಣಗೊಳಿಸಬಹುದು. ನಿಮ್ಮ ನಿರ್ಧಾರಗಳನ್ನು ಹಲವು ಆಯಾಮದಲ್ಲಿ ಯೋಚಿಸಿ ತೆಗೆದುಕೊಳ್ಳಿ.
ಕುಂಭ ರಾಶಿ
ಇಂದಿನ ದಿನವು ಉತ್ತಮ ಆರಂಭವಾಗಿರುತ್ತದೆ. ಲವಲವಿಕೆಯಿಂದ ಈ ದಿನ ಆರಂಭಿಸುತ್ತೀರಿ. ನಿಮ್ಮ ಆದಾಯದಲ್ಲಿ ಹೆಚ್ಚಳದ ಲಕ್ಷಣಗಳೂ ಇವೆ. ಈ ಸಮಯದಲ್ಲಿ ದೊಡ್ಡ ಹೂಡಿಕೆ ಮಾಡುವುದನ್ನು ತಪ್ಪಿಸುವುದು ಬಹಳ ಉತ್ತಮ. ಕುಟುಂಬದಲ್ಲಿ ವಿವಾದ ಹೆಚ್ಚಾಗುವ ವಿಚಾರಗಳು ನಡೆಯಬಹುದು. ಕಚೇರಿಯಲ್ಲಿ ನಿಮ್ಮ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಿ. ಹಲವು ವಿಚಾರದಲ್ಲಿ ನೀವು ಶಾಂತವಾಗಿರುವುದು ನಿಮಗೆ ಲಾಭ ತರಲಿದೆ. ಬಹಳ ಕಾಲದಿಂದ ನಿಮಗೆ ಕಾಡುತ್ತಿದ್ದ ಒತ್ತಡವೊಂದು ನಿವಾರಣೆ ಆಗುವ ಮೂಲಕ ಶಾಂತಿ ಲಭಿಸಲಿದೆ.
ಮೀನ ರಾಶಿ
ಮೀನ ರಾಶಿಯವರು ಇಂದು ಬಹಳ ಸಮಯದ ಕನಸೊಂದನ್ನು ನೀವು ನನಸು ಮಾಡಿಕೊಳ್ಳಲಿದ್ದೀರಿ. ಯಾವುದೇ ಹಳೆಯ ಸಾಲವನ್ನು ಮರುಪಾವತಿ ಮಾಡುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಹಣಕಾಸಿನ ದೃಷ್ಟಿಕೋನದಿಂದ ಇಂದು ಮಿಶ್ರ ದಿನ. ನಿಮ್ಮ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದರೆ ಹೆಚ್ಚು ಪ್ರಯತ್ನಿಸಬೇಕು. ಕುಟುಂಬದಲ್ಲಿ ಶುಭ ಕಾರ್ಯ ಸಂಬಂಧ ಮಾತುಕತೆ ಇರಲಿದೆ. ಮಕ್ಕಳ ಭವಿಷ್ಯದ ದೃಷ್ಟಿಯಲ್ಲಿ ಈ ದಿನ ಮುಖ್ಯ ನಿರ್ಧಾರ ತೆಗೆದುಕೊಳ್ಳುವ ಕುರಿತಾದ ಆಲೋಚನೆ ಬರಲಿದೆ. ಸ್ವಂತ ಉದ್ಯೋಗ ಮಾಡುವವರಿಗೆ ಇಂದು ಲಾಭದಾಯಕ ದಿನ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










