Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ದಿನ ಭವಿಷ್ಯ: ಏಪ್ರಿಲ್ 09ರ ಬುಧವಾರ ನಿಮ್ಮ ರಾಶಿಯಲ್ಲಿ ಏನಿದೆ?
ವೈದಿಕ ಶಾಸ್ತ್ರದ ಪ್ರಕಾರ ಏಪ್ರಿಲ್ 09ರ ರಾಶಿಫಲ ಇಲ್ಲಿದೆ ನೋಡಿ
ಮೇಷ ರಾಶಿ
ಇಂದು ನಿಮಗೆ ಆತ್ಮವಿಶ್ವಾಸದಿಂದ ತುಂಬಿದ ದಿನವಾಗಿರುತ್ತದೆ. ಆದ್ರೆ ಮಾಡಬೇಕಿದ್ದ ಬಹುಮುಖ್ಯ ಕೆಲಸವೊಂದನ್ನು ನೀವು ಮರೆಯಬಹುದು, ಇದು ಇಡೀ ದಿನ ನಿಮ್ಮ ಸಮಯ ಹಾಳು ಮಾಡಬಹುದು. ನೀವು ಆಡಳಿತದ ಸಂಪೂರ್ಣ ಲಾಭವನ್ನು ಪಡೆಯುತ್ತೀರಿ. ಈ ದಿನ ನೀವು ಕೆಲಸದ ಕಾರಣದಿಂದ ಮನೆಯಿಂದ ಹೊರಗೆ ಉಳಿಯುವ ಸಾಧ್ಯತೆಗಳಿವೆ. ಭವಿಷ್ಯದ ದಿನದಲ್ಲಿ ನೀವು ಪ್ರಯಾಣಿಸುಬವ ಪ್ರವಾಸ ಕುರಿತು ಈ ದಿನ ಆಲೋಚನೆ ಮಾಡಬಹುದು, ಅದಕ್ಕೆ ತಯಾರಿಯೂ ಮಾಡಬಹುದು. ನಿಮ್ಮ ಎಲ್ಲಾ ಕೆಲಸಗಳು ಯೋಜನೆಯ ಪ್ರಕಾರ ಪೂರ್ಣಗೊಳ್ಳುತ್ತವೆ. ಹಣದ ವಿಷಯದಲ್ಲಿ ದಿನವು ಉತ್ತಮವಾಗಿರುತ್ತದೆ. ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ಹರಿಸಿದರೆ ಉತ್ತಮವಾಗುತ್ತದೆ.
ವೃಷಭ ರಾಶಿ
ಈ ದಿನವು ನಿಮಗೆ ಅಪಾರ ಧನಾತ್ಮಕ ಅಂಶದಿಂದ ಕೂಡಿರುವ ದಿನವಾಗಿರಲಿದೆ. ನಿಮ್ಮ ವ್ಯವಹಾರ ಪಾಲುದಾರರಿಂದ ನೀವು ಮೋಸ ಹೋಗುವ ಸಾಧ್ಯತೆಗಳಿವೆ. ವಿದೇಶಕ್ಕೆ ಹೋಗಿ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಸಿಗುತ್ತದೆ. ನಿಮ್ಮ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಅನಗತ್ಯ ಖರ್ಚುಗಳಿಂದ ಇಂದು ದೂರ ಇದ್ದಷ್ಟು ಒಳ್ಳೆಯದು. ನೀವು ಶೀಘ್ರದಲ್ಲೇ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ವ್ಯಾಪಾರಿಗಳು ಇಂದು ಕೆಲವು ದೊಡ್ಡ ಸವಾಲುಗಳನ್ನು ಎದುರಿಸಬೇಕಾಗಬಹುದು. ಆರೋಗ್ಯದ ವಿಚಾರವಾಗಿ ನೀವು ಎಚ್ಚರಿಕೆಯಿಂದ ಇರುವುದು ಒಳಿತು.

ಮಿಥುನ ರಾಶಿ
ಇಂದು ನೀವು ಪ್ರಗತಿಗೆ ಹೊಸ ಅವಕಾಶಗಳನ್ನು ಪಡೆಯುತ್ತೀರಿ. ನೀವು ಸ್ನೇಹಿತರು ಮತ್ತು ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ತಡರಾತ್ರಿಯಲ್ಲಿ ವಾಹನ ಚಲಾಯಿಸಬೇಡಿ. ನಿಮ್ಮ ತಂದೆಯ ಆರೋಗ್ಯದಲ್ಲಿನ ಕೆಲವು ಸಮಸ್ಯೆಗಳ ಬಗ್ಗೆ ನೀವು ಚಿಂತಿತರಾಗುತ್ತೀರಿ, ಇದಕ್ಕಾಗಿ ನೀವು ಉತ್ತಮ ವೈದ್ಯರನ್ನು ಸಂಪರ್ಕಿಸಬಹುದು. ಸಣ್ಣ ಉದ್ಯಮಿಗಳು ತಮ್ಮ ಆದಾಯ ಹೆಚ್ಚಿಸಲು ಯೋಜಿಸುತ್ತಿದ್ದರೆ ಇಂದು ಅವರಿಗೆ ಉತ್ತಮ ದಿನವಾಗಿದೆ. ದೇವಾಲಯ ಭೇಟಿಯ ಸಾಧ್ಯತೆ ಇದೆ.
ಕರ್ಕ ರಾಶಿ
ಇಂದು ನಿಮಗೆ ಸಕಾರಾತ್ಮಕ ಫಲಿತಾಂಶಗಳನ್ನು ತರುವ ಹಲವು ವಿಚಾರಗಳು ಎದುರಾಗುತ್ತವೆ. ನಿಮ್ಮದಲ್ಲದ ಕೆಲಸದಕ್ಕೆ ನೀವು ಹಣ ಹೂಡಿಕೆ ಮಾಡಬೇಕಾಗಬಹುದು. ಆದರೆ ಮುಂದೆ ಇದರಿಂದ ನಿಮಗೆ ಒಳಿತಾಗುವ ನಿರೀಕ್ಷೆ ಇದೆ. ನಿಮ್ಮ ಕೆಲಸದ ನಿಮಿತ್ತ ನೀವು ಹೊರಗೆ ಹೋಗಬಹುದು. ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಏನಾದರೂ ವಾದ ಮಾಡಿದರೆ, ಅವರನ್ನು ಒಪ್ಪಿಸಲು ನೀವು ನಿಮ್ಮ ಕೈಲಾದಷ್ಟು ಪ್ರಯತ್ನಿಸಬೇಕಾಗುತ್ತದೆ. ಈ ದಿನ ಒತ್ತಡ ಹಾಗೂ ಏಕಾಗೃತೆಯ ಕೊರತೆ ನಿಮ್ಮನ್ನು ಕಾಡಬಹುದು. ವ್ಯಾಪಾರಿಗಳು ಈ ದಿನ ಯಾವುದೇ ಹೊಸ ಕೆಲಸಕ್ಕೆ ಕೈ ಹಾಕಬೇಡಿ.
ಸಿಂಹ ರಾಶಿ
ಇಂದು ನಿಮ್ಮ ದಿನಚರಿಯನ್ನು ಉತ್ತಮವಾಗಿ ನಿರ್ವಹಿಸಲು ಉತ್ತಮ ದಿನವಾಗಿರುತ್ತದೆ. ದಿನದ ಬಹುತೇಕ ಸಮಯ ನೀವು ವಿಶ್ರಾಂತಿ ಪಡೆಯುತ್ತೀರಿ. ಹಾಗೆ ನೀವು ಕೆಲಸದಲ್ಲಿ ತೋರುವ ಆಸಕ್ತಿಯ ಕಾರಣದಿಂದಾಗಿ ಪ್ರಶಂಸೆಯ ಮಾತುಗಳ ಕೇಳಬಹುದು. ನಿಮ್ಮ ಯಾವುದೇ ಕೆಲಸವು ದೀರ್ಘಕಾಲದವರೆಗೆ ಬಾಕಿ ಇದ್ದರೆ, ಅದು ಪೂರ್ಣಗೊಳ್ಳುವ ಸಾಧ್ಯತೆಯಿದೆ. ವಿದ್ಯಾರ್ಥಿಗಳಿಗೆ ಬೌದ್ಧಿಕ ಮತ್ತು ಮಾನಸಿಕ ಹೊರೆಯಿಂದ ಪರಿಹಾರ ಸಿಗುತ್ತದೆ. ಇಂದು ನೀವು ಹೆಚ್ಚು ಸಮಯ ದೈಹಿಕ ಕಸರತ್ತಿಗೆ ಮುಂದಾಗದೆ ಇರುವುದು ಉತ್ತಮ. ನಿಮ್ಮ ಆದಾಯ ಹೆಚ್ಚಿಸುವ ಕಾರ್ಯವಾದರು ವ್ಯವಹಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಿ.
ಕನ್ಯಾ ರಾಶಿ
ರಾಜಕೀಯದಲ್ಲಿ ಕೆಲಸ ಮಾಡುವ ಜನರಿಗೆ ಇಂದು ಒಳ್ಳೆಯ ದಿನವಾಗಲಿದೆ. ಕುಟುಂಬಕ್ಕೆ ಹೊಸ ಸದಸ್ಯರ ಆಗಮನವಾಗಬಹುದು. ನಿಮ್ಮ ಮನೆಗಾಗಿ ಹೊಸ ವಸ್ತುವೊಂದನ್ನು ನೀವು ತರಬಹುದು. ಬಹಳ ಸಮಯದಿಂದ ಬಯಸಿದ್ದ ನಿಮ್ಮ ಕೆಲಸದ ಸ್ಥಳದಲ್ಲಿನ ಯಶಸ್ಸು ಇಂದು ಪಡೆಯಬಹುದು. ವ್ಯವಹಾರಗಳಲ್ಲಿನ ಪ್ರಗತಿಯು ನಿಮ್ಮಲ್ಲಿ ಶಾಂತಿ ಉಂಟು ಮಾಡಲಿದೆ. ಶುಭ ಕಾರ್ಯಗಳಲ್ಲಿ ಭಾಗಿಯಾಗಲು ನಿಮಗೆ ಅವಕಾಶ ಸಿಗಬಹುದು. ದೂರದ ಸಂಬಂಧಿಕರ ಭೇಟಿ ಹೊಸ ವಿಚಾರಕ್ಕೆ ನಾಂದಿಯಾಗಬಹುದು. ಅನಗತ್ಯ ಚರ್ಚೆ ಅಥವಾ ಮಾತುಕತೆಗೆ ಇಳಿಯುವ ಮುನ್ನ ಎಚ್ಚರ ಇರಲಿ.
ತುಲಾ ರಾಶಿ
ಈ ದಿನವು ನಿಮಗೆ ಸಂತೋಷದ ದಿನವಾಗಿ ಮಾರ್ಪಡಬಹುದು. ದಾಂಪತ್ಯದಲ್ಲಿ ಸುಖ ಹಾಗೂ ಪ್ರೇಮ ಸಂಬಂಧಲ್ಲೂ ನಿಮ್ಮ ಪರವಾದ ಒಲವು ಹೆಚ್ಚಾಗಬಹುದು. ಹಲವು ದಿನಗಳಿಂದ ನಿಮ್ಮ ಎಲ್ಲಾ ಕೆಲಸಕ್ಕೂ ಅಡ್ಡಿಯಾಗುತ್ತಿದ್ದ ದೊಡ್ಡ ಸಮಸ್ಯೆಯೊಂದು ಈ ದಿನ ನಿವಾರಣೆಯಾಗಬಹುದು. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ನಿಮ್ಮ ಆದಾಯವನ್ನು ಗಮನದಲ್ಲಿಟ್ಟುಕೊಂಡು ಖರ್ಚು ಮಾಡಿ. ಇತ್ತೀಚೆಗೆ ನೀವು ಯಾವುದೇ ಹೂಡಿಕೆ ಮಾಡಿದ್ದರೆ ಅದರಿಂದ ದುಪ್ಪಟ್ಟು ಲಾಭ ಪಡೆಯಬಹುದು.
ವೃಶ್ಚಿಕ ರಾಶಿ
ಇಂದು ನೀವು ಸುದೀರ್ಘ ಪ್ರಯಾಣದಲ್ಲಿ ಕಳೆಯಬಹುದು. ನಿಮ್ಮ ಯಾವುದೇ ಕೆಲಸವು ಹಣದ ಕಾರಣದಿಂದಾಗಿ ಸಿಲುಕಿಕೊಂಡಿದ್ದರೆ, ಅದು ಕೂಡ ಪೂರ್ಣಗೊಳ್ಳುತ್ತದೆ. ನಿಮ್ಮ ಸ್ಥಾನ ಮತ್ತು ಪ್ರತಿಷ್ಠೆ ಹೆಚ್ಚಾಗಬಹುದು. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಖರ್ಚು ಮಾಡುವುದು ನಿಮಗೆ ಉತ್ತಮವಾಗಿರುತ್ತದೆ. ಹಣದ ವಿಷಯದಲ್ಲಿ ದಿನವು ಉತ್ತಮವಾಗಿರುತ್ತದೆ. ನೀವು ದೊಡ್ಡ ಖರ್ಚು ಮಾಡಲು ಹೋಗದಿದ್ದರೆ ಒಳ್ಳೆಯದು. ಈ ದಿನ ಆಹಾರಕ್ರಮದ ಬಗ್ಗೆ ಗಮನಹರಿಸಿ. ನಿಮ್ಮ ಶತ್ರುಗಳ ಕುರಿತು ಚೆನ್ನಾಗಿ ಅರಿತುಕೊಳ್ಳುವ ದಿನವಾಗಲಿದೆ, ಹಾಗೆ ಆತುರದಿಂದ ನೀವು ತೆಗೆದುಕೊಂಡ ನಿರ್ಧಾರಗಳು ನಿಮಗೆ ಸಮಸ್ಯೆಯಾಗಿ ಕಾಡಬಹುದು.
ಧನು ರಾಶಿ
ಆರ್ಥಿಕವಾಗಿ ಇಂದು ನಿಮಗೆ ಉತ್ತಮ ದಿನವಾಗಲಿದೆ. ನಿಮ್ಮೊಳಗಿನ ಹೆಚ್ಚುವರಿ ಶಕ್ತಿಯ ಕಾರಣ ನಿಮ್ಮ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸಲು ಪ್ರಯತ್ನಿಸುತ್ತೀರಿ. ನಿಮ್ಮ ಮಕ್ಕಳ ಶಿಕ್ಷಣದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚಿಂತೆ ಕಾಡಬಹುದು. ವ್ಯಾಪಾರಿಗಳು ಹಣದ ವಿಷಯಗಳಲ್ಲಿ ಆತುರಪಡದಂತೆ ಸಲಹೆ ನೀಡಲಾಗುವುದು, ಇಲ್ಲದಿದ್ದರೆ ನೀವು ದೊಡ್ಡ ನಷ್ಟವನ್ನು ಅನುಭವಿಸಬಹುದು. ಮನೆಯ ವಾತಾವರಣ ಶಾಂತವಾಗಿರುತ್ತದೆ. ಹಲವು ದಿನಗಳ ನಿಮ್ಮ ಬಯಕೆ ಇಂದು ಈಡೇರಬಹುದು. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಬಹುದು.
ಮಕರ ರಾಶಿ
ಇಂದು ನಿಮಗೆ ಹಣಕಾಸು ವಿಚಾರವಾಗಿ ಶುಭ ದಿನವಾಗುತ್ತಿದೆ. ನಿಮ್ಮ ಹಲವು ದಿನಗಳ ಅಡ್ಡಿ ಆತಂಕ ದೂರಾಗುವ ದಿನ ಇದು. ಉದ್ಯಮಿಗಳು ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಇಂದು ನಿಮಗೆ ಉತ್ತಮ ಅವಕಾಶ ಸಿಗಬಹುದು. ವೈಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಅದರಲ್ಲೂ ದೀರ್ಘಕಾಲದಿಂದ ನೀವು ಅನಾರೋಗ್ಯಕ್ಕೆ ತುತ್ತಾಗಿದ್ದರೆ ಈ ದಿನ ಸೂಕ್ತ ಚಿಕಿತ್ಸೆಯತ್ತ ಗಮನ ಹರಿಸುವುದು ಬಹಳ ಉತ್ತಮ.
ಕುಂಭ ರಾಶಿ
ವ್ಯಾಪಾರ ಮಾಡುವ ಜನರಿಗೆ ಇಂದು ಒಳ್ಳೆಯ ದಿನವಾಗಲಿದೆ. ನಿಮಗೆ ಒಂದರ ನಂತರ ಒಂದರಂತೆ ಒಳ್ಳೆಯ ಸುದ್ದಿಗಳು ಸಿಗುತ್ತವೆ. ನಿಮ್ಮ ಆದಾಯದ ಮೂಲಗಳು ಹೆಚ್ಚಾಗುತ್ತವೆ. ನಿಮ್ಮ ವೈವಾಹಿಕ ಜೀವನದ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು. ಕೆಲಸದಲ್ಲಿ ಈ ದಿನ ನಿಮಗೆ ಉತ್ತಮವಾಗಿದೆ. ಅಲ್ಲಿನ ಒತ್ತಡಗಳು ನಿವಾರಣೆಯಾಗುವ ದಿನ. ಮನೆ ಖರ್ಚುಗಳ ನಿಭಾಯಿಸುವುದು ಒಳಿತು.
ಮೀನ ರಾಶಿ
ಇಂದು ನಿಮಗೆ ಹೂಡಿಕೆ ಮಾಡಲು ಉತ್ತಮ ದಿನವಲ್ಲ. ಯಾವುದೇ ಕಾರಣಕ್ಕೂ ಬಡ್ಡಿಗಾಗಿ ಹಣ ನೀಡುವುದು ಅಥವಾ ಹಣದ ವಿಚಾರವಾಗಿ ದೊಡ್ಡ ವ್ಯವಹಾರದಲ್ಲಿ ತೊಡಗದೆ ಇರುವುದು ಉತ್ತಮ. ವ್ಯಾಪಾರಿಗಳಿಗೆ ಈ ದಿನ ಅನುಕೂಲಕರವಾಗಿದೆ. ಆರ್ಥಿಕ ಸ್ಥಿತಿ ಸುಧಾರಿಸಲು ನಿಮ್ಮ ಶ್ರಮ ಅಗತ್ಯ, ನಿಮ್ಮ ಮನೆಯಲ್ಲಿ ಶುಭ ಕಾರ್ಯದ ಕುರಿತಂತೆ ಮಾತುಕತೆ ಇರಬಹುದು. ಯಾವ ಸಮಯದಲ್ಲು ತಾಳ್ಮೆ ಕಳೆದುಕೊಳ್ಳಬೇಡಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










