ದಿನ ಭವಿಷ್ಯ: ಏಪ್ರಿಲ್ 07ರ ಈ ದಿನ ನಿಮ್ಮ ರಾಶಿಯಲ್ಲಿ ಏನಿದೆ?

ವೈದಿಕ ಶಾಸ್ತ್ರದ ಪ್ರಕಾರ ಏಪ್ರಿಲ್ 07ರ ರಾಶಿಫಲ ಇಲ್ಲಿದೆ ನೋಡಿ

ಮೇಷ ರಾಶಿ

ಇಂದು ನಿಮ್ಮ ಮಾತಿನ ಮೇಲೆ ನಿಮ್ಮ ಗಮನವಿರಲಿ ನೀವು ಯಾವುದೇ ಕೆಲಸವನ್ನು ಕೈಗೊಂಡರೂ, ಅದರಲ್ಲಿ ನಿಮಗೆ ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ. ಅದೃಷ್ಟವು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಸರ್ಕಾರಿ ಉದ್ಯೋಗಿಗಳು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಕಾನೂನು ವಿಷಯಗಳಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಯಾರಾದರೂ ನಿಮಗೆ ಕೆಲಸದ ಬಗ್ಗೆ ತಪ್ಪು ಮಾಹಿತಿ ನೀಡಬಹುದು. ನೀವು ಈಗ ಹೊಸ ಆದಾಯದ ಮೂಲವನ್ನು ಹುಡುಕುತ್ತಿದ್ದರೆ ಈ ದಿನ ಒಳ್ಳೆಯ ಸುದ್ದಿ ಸಿಗಲಿದೆ. ಆರೋಗ್ಯದ ಕಡೆಗೆ ಗಮನವಿರಲಿ.

ವೃಷಭ ರಾಶಿ

ಇಂದು ನಿಮಗೆ ಲಾಭದಾಯಕ ದಿನವಾಗಿರುತ್ತದೆ. ನಿಮ್ಮ ಕೆಲಸದ ಜೊತೆಗೆ ನಿಮ್ಮ ಕುಟುಂಬ ಸದಸ್ಯರಿಗೂ ಸಮಯ ನೀಡುತ್ತೀರಿ. ಸಂಗಾತಿಯೊಂದಿಗೆ ಈ ದಿನ ಕೆಲ ಮನಸ್ತಾಪ ಉಂಟಾಗಬಹುದು. ಹೀಗಾಗಿ ನೀವು ನಿಮ್ಮ ವೈವಾಹಿಕ ಜೀವನದ ಬಗ್ಗೆ ಗಮನ ಹರಿಸಬೇಕು. ಇಂದು ನಿಮ್ಮ ಜೀವನ ಸಂಗಾತಿಯೊಂದಿಗೆ ಕೆಲವು ಪ್ರಮುಖ ವಿಷಯಗಳ ಬಗ್ಗೆ ಮಾತನಾಡಬಹುದು. ಕೆಲಸದ ಸ್ಥಳದಲ್ಲಿ ಹೆಚ್ಚಿನ ಕೆಲಸ ಇರುವುದರಿಂದ ಒತ್ತಡಕ್ಕೆ ನೀವು ಒಳಗಾಗಬಹುದು. ಸ್ನೇಹಿತರಿಂದ ಸಂಪೂರ್ಣ ಪ್ರಯೋಜನಗಳ ಪಡೆಯಲಿದ್ದೀರಿ. ವ್ಯಾಪಾರಿಗಳಿಗೆ ಉತ್ತಮ ದಿನ.

April-07-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಇಂದು ನಿಮಗೆ ಕಷ್ಟಗಳಿಂದ ತುಂಬಿದ ದಿನವಾಗಿರುತ್ತದೆ. ನೀವು ಯಾವುದೇ ನಿರ್ಧಾರವನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ. ನಿಮಗೆ ಹಲವು ವಿಚಾರಗಳಲ್ಲಿ ಅಡೆತಡೆ ಎದುರಾಗಬಹುದು. ಅದರಲ್ಲೂ ಕೆಲಸ ಹಾಗೂ ದಾಂಪತ್ಯದಲ್ಲಿ ಹೆಚ್ಚು ಸಮಸ್ಯೆ ಕಾಡಬಹುದು. ವ್ಯವಹಾರ ಸಂಬಂಧ ನೀವು ಪ್ರಭಾವಿ ವ್ಯಕ್ತಿಯೊಬ್ಬರ ಭೇಟಿಯಾಗಬಹುದು. ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚು ಜಾಗರೂಕರಾಗಿರಬೇಕು. ಹಿಂದಿನ ಕೆಲವು ತಪ್ಪಿನಿಂದ ನೀವು ಪಾಠ ಕಲಿಯಬೇಕಾಗುತ್ತದೆ. ನಿಮ್ಮ ಯಾವುದೇ ಹಳೆಯ ವಹಿವಾಟು ನಿಮಗೆ ಸಮಸ್ಯೆಯಾಗಬಹುದು. ದೂರ ಪ್ರಯಾಣಕ್ಕೆ ಮುಂದಾಗುವ ಆಲೋಚನೆ ಇದ್ದರೆ ಮುಂದೂಡುವುದು ಉತ್ತಮ.

ಕರ್ಕ ರಾಶಿ

ಇಂದು ನಿಮಗೆ ಸಂತೋಷದ ದಿನವಾಗಿರುತ್ತದೆ. ನೀವು ಪ್ರವಾಸಕ್ಕೆ ಹೋಗುವ ಸಂಬಂಧ ತಯಾರಿ ಮಾಡಿಕೊಳ್ಳಬಹುದು. ನಿಮ್ಮ ಉದ್ಯೋಗದಲ್ಲಿನ ಬದಲಾವಣೆಗೆ ಸಂಬಂಧಿಸಿದಂತೆ ನೀವು ಕೆಲವು ಪ್ರಮುಖ ಹೆಜ್ಜೆ ಇಡಬಹುದು. ಖರ್ಚುಗಳು ಇದ್ದಕ್ಕಿದ್ದಂತೆ ಹೆಚ್ಚಾಗಬಹುದು . ಇದರಿಂದ ನಿಮ್ಮಲ್ಲಿ ಒತ್ತಡ ಹೆಚ್ಚಾಗುವುದು ಜೊತೆಗೆ ತಾಳ್ಮೆ ಕಳೆದುಕೊಳ್ಳುವಂತಹ ಹಲವು ಸನ್ನಿವೇಶ ನೋಡಬಹುದು. ನಿಮ್ಮ ಸಂಗಾತಿಯೊಂದಿಗೆ ಶಾಪಿಂಗ್ ಇತ್ಯಾದಿಗಳಿಗೆ ಹೋಗಲು ನೀವು ಯೋಜಿಸಬಹುದು ಆದ್ರೆ ಇದು ನೀವು ಅಂದುಕೊಂಡಂತೆ ನಡೆಯದೆ ಇರಬಹುದು.

ಸಿಂಹ ರಾಶಿ

ಇಂದು ನಿಮಗೆ ಕೆಲಸದ ವಿಚರವಾಗಿ ಪ್ರಮುಖ ದಿನವಾಗಬಹುದು. ನಿಮ್ಮ ಖರ್ಚುಗಳು ಅಧಿಕವಾಗಿರುತ್ತವೆ. ಹಾಗೆ ಈ ದಿನ ಇಂದ್ರೀಯಗಳಿಗೆ ಸಂಬಂಧಿಸಿದ ಯಾವುದಾದರು ಸಣ್ಣ ಸಮಸ್ಯೆಗೆ ನೀವು ಒಳಗಾಗಬಹುದು. ನೀವು ಮನೆಗೆ ಹೊಸ ವಾಹನ ಖರೀದಿಯ ಆಲೋಚನೆಗೆ ಈ ದಿನ ಒಂದು ಹೆಜ್ಜೆ ಮುಂದಿಡಲಿದ್ದೀರಿ. ಬಹಳ ದಿನಗಳಿಂದ ಮನದಲ್ಲಿದ್ದ ವಿಚಾರವೊಂದನ್ನು ಇಂದು ಈಡೇರಿಸಿಕೊಳ್ಳಬಹುದು. ಕೆಲಸದ ಕಾರಣಕ್ಕೆ ನೀವು ದೂರ ಪ್ರಯಾಣಕ್ಕೆ ಮುಂದಾಗಬಹುದು. ವ್ಯಾಪಾರಿಗಳು ಹೊಸ ಆದಾಯದ ಮೂಲ ಹುಡುಕುವತ್ತ ಗಮನಹರಿಸಿ. ಮನೆಯಲ್ಲಿ ಶಾಂತಿ ಇರಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯವರು ಇಂದು ಬಯಸಿದ್ದ ಕೆಲಸವು ಅತ್ಯಂತ ಸುಲಭವಾಗಿ ನಡೆಯಲಿದೆ. ನಿಮ್ಮ ಮನದಲ್ಲಿದ್ದ ಗೊಂದಲವನ್ನು ಇಂದು ಬಗೆಹರಿಸಿಕೊಳ್ಳುವುದು ಉತ್ತಮ. ನೀವು ಕೆಲವು ಕಾನೂನು ವಿಷಯಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇಂದು ಅದರಲ್ಲಿ ನಿಮ್ಮ ಪರವಾದ ಒಲುವು ಹೆಚ್ಚಾಗುತ್ತದೆ. ಪ್ರಮುಖ ಕೆಲಸವೊಂದಕ್ಕೆ ನೀವು ಸಂಬಂಧಿಗಳು ಅಥವಾ ಸ್ನೇಹಿತರಿಂದ ಹಣಕಾಸು ನೆರವಿಗಾಗಿ ಮೊರೆ ಹೋಗಬಹುದು. ಕೆಲಸದ ಸ್ಥಳದಲ್ಲಿ ನಿಮಗೆ ಉತ್ತಮ ಮಾತುಗಳು ಕೇಳಬಹುದು. ಹೂಡಿಕೆಗೆ ಈ ದಿನ ಸೂಕ್ತವಾಗಿದೆ.

ತುಲಾ ರಾಶಿ

ಈ ದಿನ ತುಲಾ ರಾಶಿಯವರು ಮಿಶ್ರಫಲ ನೋಡಲಿದ್ದಾರೆ. ಆರ್ಥಿಕ ಪರಿಸ್ಥಿತಿಯಲ್ಲಿ ಕುಸಿತದ ಸಾಧ್ಯತೆ ಇದೆ. ಖರ್ಚುಗಳು ಇದ್ದಕ್ಕಿದ್ದಂತೆ ಹೆಚ್ಚಾಗಬಹುದು. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ನೀವು ಸ್ವಲ್ಪ ಚಿಂತೆ ಮಾಡುತ್ತೀರಿ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಪ್ರೇಮ ಜೀವನದಲ್ಲಿ ಮಾಧುರ್ಯತೆ ನೋಡಬಹುದು. ಇಂದು ಯಾವುದೇ ಕೆಲಸವನ್ನು ತರಾತುರಿಯಲ್ಲಿ ಮುಗಿಸಲು ಮುಂದಾಗಬೇಡಿ, ಹಣಕಾಸು ವಿಚಾರವಾಗಿ ಸಾಲ ಮಾಡಬೇಕಾದ ಅನಿವಾರ್ಯತೆ ಬರಬಹುದು. ಅನಗತ್ಯ ಖರ್ಚುಗಳ ಕಡೆ ಗಮನವಿರಲಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ ಮಂದಿಗೆ ಈ ದಿನವು ಬಹಳ ಲಾಭದಾಯಕವಾಗಬಹುದು. ನಿಮ್ಮ ಬಿಡುವಿನ ಸಮಯವನ್ನು ವ್ಯರ್ಥ ಮಾಡಬೇಡಿ. ನೀವು ಬೇರೆಯವರ ವಿಷಯಗಳಲ್ಲಿ ಅನಗತ್ಯವಾಗಿ ಸಲಹೆ ನೀಡಲು ಮುಂದಾಗಬೇಡಿ. ಮನೆಗಾಗಿ ಹೊಸ ವಸ್ತುವೊಂದನ್ನು ಖರೀದಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಶುಭ ದಿನವಾಗಲಿದೆ. ನೀವು ಕುಟುಂಬದ ಶುಭ ಕಾರ್ಯ ಸಂಬಂಧ ಓಡಾಟ ಹೆಚ್ಚು ಮಾಡಬೇಕಾಗುತ್ತದೆ. ನಿಮ್ಮ ಕೋಪದ ಸ್ವಾಭಾವದಿಂದ ಇಂದು ಅಶಾಂತಿಗೆ ಕಾರಣವಾಗಬಹುದು. ನಿಮ್ಮ ದೊಡ್ಡ ಕೆಲಸವೊಂದಕ್ಕೆ ಆಪ್ತರಿಂದ ಸಹಕಾರ ಸಿಗಲಿದೆ. ಸ್ವಂತ ಉದ್ಯೋಗ ಮಾಡುವವರಿಗೆ ಶುಭ ದಿನವಾಗಲಿದೆ. ನಿಮ್ಮ ವ್ಯವಹಾರದ ಕುರಿತಾಗಿ ಗೌಪ್ಯತೆ ಕಾಪಾಡಿಕೊಳ್ಳುವುದು ಉತ್ತಮ.

ಧನು ರಾಶಿ

ಇಂದು ನಿಮಗೆ ವೃತ್ತಿ ಜೀವನದಲ್ಲಿ ಉತ್ತಮ ದಿನವಾಗಲಿದೆ. ಆದರೆ ನೀವು ಉದ್ಯೋಗ ಬದಲಿಸುವ ಆಲೋಚನೆಯಲ್ಲಿದ್ದರೆ ಅವಕಾಶ ಮುಂದೂಡಬೇಕಾಗಬಹುದು. ಬಹಳ ದಿನಗಳಿಂದ ಖರೀದಿಸಲು ನೀವು ಮುಂದಾದ ವಸ್ತುವಿನ ಖರೀದಿಗೆ ಹೆಚ್ಚು ಶ್ರಮದ ಅಗತ್ಯ ಬೀಳಲಿದೆ. ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಹೆಚ್ಚಾಗಬಹುದು. ನಿಮ್ಮ ಅತಿಯಾದ ಕೋಪ ಮನೆಯ ಶಾಂತಿಯನ್ನು ಕದಡಬಹುದು. ನಿಮ್ಮ ಖರ್ಚು ಹೆಚ್ಚಾಗಬಹುದು. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಕುಟುಂಬದ ಜೊತೆ ಸಮಯ ಕಳೆಯುತ್ತೀರಿ.

ಮಕರ ರಾಶಿ

ಇಂದು ನಿಮಗೆ ಸಾಮಾನ್ಯ ದಿನವಾಗಿರುತ್ತದೆ. ನಿಮ್ಮ ಸ್ನೇಹಿತರೊಬ್ಬರೊಂದಿಗೆ ನೀವು ವಾದ ಮಾಡುವ ಸಾಧ್ಯತೆಯಿದೆ. ನಿಮ್ಮ ಪ್ರಮುಖ ನಿರ್ಧಾರಗಳಿಗೆ ಸಂಗಾತಿಯ ಬೆಂಬಲ ಸಿಗಲಿದೆ. ಈ ರಾಶಿಯ ಅವಿವಾಹಿತರಿಗೆ ಇಂದು ಮದುವೆಯ ಪ್ರಸ್ತಾಪ ಬರಬಹುದು. ರಾಜಕೀಯವಾಗಿ ಗುರುತಿಸಿಕೊಂಡಿರುವ ವ್ಯಕ್ತಿಗಳಿಗೆ ಈ ದಿನ ಸವಾಲು ತರಬಹುದು. ನಿಮ್ಮ ಆದಾಯದಲ್ಲಿ ಏರಿಕೆ ಕಂಡರು ಖರ್ಚು ಕೂಡ ಹೆಚ್ಚಾಗಬಹುದು. ಕೆಲಸದ ಸ್ಥಲದಲ್ಲಿ ನಿಮಗೆ ಅಡ್ಡಿಯಾಗುತ್ತಿದ್ದ ವಿಚಾರವಿಂದು ನಿವಾರಣೆಯಾಗಬಹುದು. ಮೇಲಾಧಿಕಾರಿಗಳಿಂದ ನಿಮಗೆ ಪ್ರಶಂಸೆಯ ಮಾತು ಕೇಳಿಬರಬಹುದು. ಯಾರೊಂದಿಗೂ ಅನಗತ್ಯ ಚರ್ಚೆಗೆ ಮುಂದಾಗಬೇಡಿ.

ಕುಂಭ ರಾಶಿ

ಇಂದು ನೀವು ಹೊಸ ಯೋಜನೆಯತ್ತ ಗಮನಹರಿಸುವ ದಿನವಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಆಹಾರ ಪದ್ಧತಿಯ ಬಗ್ಗೆ ನೀವು ಸಂಪೂರ್ಣ ಗಮನ ಹರಿಸಬೇಕು. ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ನೀವು ನಿಮ್ಮ ಸೌಕರ್ಯಕ್ಕಾಗಿ ದುಬಾರಿ ವಸ್ತು ಖರೀದಿಸಬಹುದು. ಉದ್ಯೋಗ ಹುಡುಕುತ್ತಿದ್ದವರಿಗೆ ಈ ದಿನದಂದು ಅವಕಾಶ ನಿಮ್ಮನ್ನು ಹುಡುಕಿ ಬರಬಹುದು.

ಮೀನ ರಾಶಿ

ಇಂದು ನಿಮಗೆ ಒತ್ತಡಗಳಿಂದ ತುಂಬಿದ ದಿನವಾಗಿರುತ್ತದೆ. ಆದರೆ ಇಂದು ನಿಮ್ಮ ಹಣ, ಆಸ್ತಿ, ಐಶ್ವರ್ಯದ ವಿಚಾರದಲ್ಲಿ ನೀವು ಅದೃಷ್ಟವಂತರಾಗುತ್ತೀರಿ. ಸಂಗಾತಿಯೊಂದಿಗಿನ ಮಾತುಕತೆಯು ನಿಮ್ಮ ಸಮಸ್ಯೆಯೊಂದಕ್ಕೆ ಪರಿಹಾರ ತರಲಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಚೆನ್ನಾಗಿರಲಿದೆ. ಮನೆಯ ಇತರ ಸದಸ್ಯರ ಅಗತ್ಯತೆಗಳನ್ನು ಸಹ ನೀವು ನೋಡಿಕೊಳ್ಳಬೇಕು. ಆರೋಗ್ಯದ ಕಡೆಗೆ ಗಮನ ಹರಿಸಿ. ಹಣಕಾಸು ವ್ಯವಹಾರ ಮಾಡುವಾಗ ಎಚ್ಚರಿಕೆ ಇಡಿ. ಮನಸ್ಸಿನಲ್ಲಿರುವ ನೋವನ್ನು ಇಂದು ಮನೆಯವರಲ್ಲಿ ಹಂಚಿಕೊಳ್ಳಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

April-07-daily-horoscope-prediction-for-12-zodiac-signs-in-kannada

Here is April 07 daily horoscope prediction for 12 zodiac signs read on... ಏಪ್ರಿಲ್ 07ರ ದಿನ ಭವಿಷ್ಯ
Story first published: Monday, April 7, 2025, 6:09 [IST]
X
Desktop Bottom Promotion